CRECT Education

Lesson 1: ಕನ್ನಡಮ್ಮನ ಹರಕೆ

Description

Learn the poem Kannadamma's Vow (ಕನ್ನಡಮ್ಮನ ಹರಕೆ) by Kuvempu, line by line. Practice vocabulary and comprehension questions from the Savi Kannada Class 4 textbook.

ಪದ್ಯ (poem) · ಕುವೆಂಪು (Kuvempu)

ಪಠ್ಯFull text

ಕನ್ನಡಕೆ ಹೋರಾಡು ಕನ್ನಡದ ಕಂದ; ಕನ್ನಡವ ಕಾಪಾಡು ನನ್ನ ಆನಂದಾ । ಜೋಗುಳದ ಹರಕೆಯಿದು ಮರೆಯದಿರು, ಚಿನ್ನಾ; ಮರೆತೆಯಾದರೆ ಅಯ್ಯೊ ಮರೆತಂತೆ ನನ್ನ । ಮೊಲೆಯ ಹಾಲಂತಂತೆ ಸವಿಜೇನು ಬಾಯ್ಗೆ; ತಾಯಿಯಪ್ಪುಗೆಯಂತೆ ಬಲುಸೊಗಸು ಮೈಗೆ । ಗುರುವಿನೊಡುಡಿಯಂತೆ ಶ್ರೇಯಸ್ಸು ಬಾಳ್ಗೆ; ತಾಯ್ನುಡಿಗೆ ದುಡಿದು ಮಡಿ ಇಹಪರಗಳೀಗೆ । ದಮ್ಮಯ್ಯ ಕಂದಯ್ಯ ಬೇಡುವೆನು ನಿನ್ನ; ಕನ್ನಡಮ್ಮನ ಹರಕೆ, ಮರೆಯದಿರು, ಚಿನ್ನಾ । ಮರೆತೆಯಾದರೆ ಅಯ್ಯೊ; ಮರೆತಂತೆ ನನ್ನ; ಹೋರಾಡು ಕನ್ನಡಕೆ ಕಲಿಯಾಗಿ, ರನ್ನಾ । – ಕುವೆಂಪು

"ಕಂದ ಕಲಿತರೆ ಕನ್ನಡವ, ಎಂದೆಂದಿಗೂ ಮುನ್ನಡೆವ" — "A child who learns Kannada always moves forward."

ಪದಗಳ ಅರ್ಥword meanings

KannadaPronunciationMeaning
ಕಾಪಾಡುkaa-paa-duprotect, take care of
ದುಡಿdu-diwork, labor
ಬೇಡುbay-duask, request
ಮಡಿma-di(here) to die/pass away
ಶ್ರೇಯಸ್ಸುshray-as-suprosperity, growth
ಹೋರಾಡುho-raa-dufight, strive

ಟಿಪ್ಪಣಿnotes

  • ಇಹಪರ — this world and the next
  • ಜೋಗುಳ — a lullaby
  • ತಾಯ್ನುಡಿ — mother tongue
  • ದಮ್ಮಯ್ಯ — an earnest, pleading request

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ

  1. 1. ಕನ್ನಡದ ಕಂದ ಯಾವುದಕ್ಕಾಗಿ ಹೋರಾಡಬೇಕು?

    Answer

    ಕನ್ನಡದ ಕಂದ ಕನ್ನಡಕ್ಕಾಗಿ ಹೋರಾಡಬೇಕು.

  2. 2. ಕನ್ನಡವನ್ನು ಮರೆತರೆ ಯಾರನ್ನು ಮರೆತಂತೆ?

    Answer

    ಕನ್ನಡವನ್ನು ಮರೆತರೆ ನನ್ನನ್ನು ಮರೆತಂತೆ.

  3. 3. ಕನ್ನಡದ ಕಂದ ಯಾವುದನ್ನು ಮರೆಯಬಾರದು?

    Answer

    ಕನ್ನಡದ ಕಂದ ಕನ್ನಡಮ್ಮನ ಹರಕೆಯನ್ನು ಮರೆಯಬಾರದು.

  4. 4. ಕನ್ನಡ ನುಡಿಯ ಸೊಗಸನ್ನು ಯಾವುದಕ್ಕೆ ಹೋಲಿಸಲಾಗಿದೆ?

    Answer

    ಕನ್ನಡ ನುಡಿಯ ಸೊಗಸನ್ನು ಮೊಲೆಯ ಹಾಲು, ಸವಿಜೇನು ಮತ್ತು ತಾಯಿಯ ಅಪ್ಪುಗೆಗೆ ಹೋಲಿಸಲಾಗಿದೆ.

ಆ. ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಖಾಲಿ ಸ್ಥಳದಲ್ಲಿ ಬರೆಯಿರಿ

  1. 1. ಕನ್ನಡಕೆ ಹೋರಾಡು ಕನ್ನಡದ _____. (ಅ. ವೀರ ಆ. ಶೂರ ಇ. ಧೀರ ಈ. ಕಂದಾ)

  2. 2. ಮರೆತೆಯಾದರೆ _____ ಮರೆತಂತೆ ನನ್ನ. (ಅ. ದಮ್ಮಯ್ಯ ಆ. ಅಯ್ಯೊ ಇ. ಕಂದಯ್ಯ ಈ. ನನ್ನ)

  3. 3. ಮೊಲೆಯ ಹಾಲಂತಂತೆ _____ ಬಾಯ್ಗೆ. (ಅ. ಹೆಜ್ಜೇನು ಆ. ಕಿರುಜೇನು ಇ. ಸವಿಜೇನು ಈ. ಹಾಲ್ಜೇನು)

  4. 4. ಹೋರಾಡು ಕನ್ನಡಕೆ _____ ರನ್ನಾ. (ಅ. ವೀರನಾಗಿ ಆ. ಶೂರನಾಗಿ ಇ. ಕಲಿಯಾಗಿ ಈ. ಧೀರನಾಗಿ)

  5. **ಇ. ಪದ್ಯದಲ್ಲಿ ಬಿಟ್ಟಿರುವ ಮುಂದಿನ ಸಾಲುಗಳನ್ನು ಬರೆಯಿರಿ** (fill in the missing lines after

    Answer

    ಬೇಡುವೆನು ನಿನ್ನ;

  6. "ದಮ್ಮಯ್ಯ ಕಂದಯ್ಯ" and after "ಮರೆತೆಯಾದರೆ ಅಯ್ಯೊ" — the missing lines are printed above, in the

    Answer

    ಮರೆತಂತೆ ನನ್ನ;

  7. full text).

    Answer

    ಕಲಿಯಾಗಿ, ರನ್ನಾ ।

ಭಾಷಾ ಚಟುವಟಿಕೆ (Language activity)

  1. ಅ. ಮಾದರಿಯಂತೆ ಕೊಟ್ಟಿರುವ ಪದಗಳಿಗೆ ಪ್ರಾಸ ಪದ ಬರೆಯಿರಿ — ಮಾದರಿ: ದಮ್ಮಯ್ಯ : ಕಂದಯ್ಯ.

  2. ಹೋರಾಡು, ಬಾಯ್ಗೆ, ಬಾಳ್ಗೆ, ಚಿನ್ನಾ — ಗೆ ಪ್ರಾಸ ಪದ ಬರೆಯಿರಿ.

    Answer

    ಹೋರಾಡು: ಕಾಪಾಡು ಬಾಯ್ಗೆ: ಮೈಗೆ ಬಾಳ್ಗೆ: ಈಗೆ ಚಿನ್ನಾ: ನನ್ನ

  3. ಆ. ಕೊಟ್ಟಿರುವ ಪದಗಳಲ್ಲಿ ಬರೆಹದ ಸರಿಯಾದ ರೂಪವನ್ನು ಆರಿಸಿ ಬರೆಯಿರಿ:

  4. ಒರಾಡು–ಹೋರಾಡು; ಹರಕೆ–ಅರಕೆ; ಆನಂದ–ಹಾನಂದ; ಹಯ್ಯೊ–ಅಯ್ಯೊ; ಹಾಲು–ಆಲು; ಅಪ್ಪುಗೆ–ಹಪ್ಪುಗೆ.

    Answer

    ಒರಾಡು–ಹೋರಾಡು: ಹೋರಾಡು ಹರಕೆ–ಅರಕೆ: ಹರಕೆ ಆನಂದ–ಹಾನಂದ: ಆನಂದ ಹಯ್ಯೊ–ಅಯ್ಯೊ: ಅಯ್ಯೊ ಹಾಲು–ಆಲು: ಹಾಲು ಅಪ್ಪುಗೆ–ಹಪ್ಪುಗೆ: ಅಪ್ಪುಗೆ

  5. ಇ. ಕೊಟ್ಟಿರುವ ಒತ್ತಕ್ಷರಗಳನ್ನು ಗಮನಿಸಿ. ವೃತ್ತದೊಳಗೆ ಸಜಾತಿ ಒತ್ತಕ್ಷರ ಹಾಗೂ ಚೌಕದಲ್ಲಿ ವಿಜಾತಿ

  6. ಒತ್ತಕ್ಷರಗಳನ್ನು ಬರೆಯಿರಿ (sort each conjunct consonant below as same-family/different-family

    Answer

    ನ್ನ: circle ಸ್ಸೊ: circle ಷ್ಟ: square ಪ್ರ: square ಬ್ಬ: circle ಯ್ಯ: circle ಸ್ತ: square

  7. into a circle or a square): ನ್ನ, ಸ್ಸೊ, ಷ್ಟ, ಪ್ರ, ಬ್ಬ, ಯ್ಯ, ಸ್ತ, ಟ್ಟ, ತ್ರ, ಮ್ಯ, ಶ್ರೀ, ಕ್ಷ, ಪ್ರ, ಶ್ಯೆ.

    Answer

    ಟ್ಟ: circle ತ್ರ: square ಮ್ಯ: square ಶ್ರೀ: square ಕ್ಷ: square ಪ್ರ: square ಶ್ಯೆ: square

ಬಳಕೆ ಚಟುವಟಿಕೆ (Application activity)

  1. ಅ. ಹಿರಿಯರಿಂದ ಜೋಗುಳದ ಪದಗಳನ್ನು ಸಂಗ್ರಹಿಸಿ ಅಭ್ಯಾಸ ಮಾಡಿ.

  2. ಆ. ಕನ್ನಡದ ಕವಿಗಳ ಭಾವಚಿತ್ರ ಸಂಗ್ರಹಿಸಿ 'ಭಾವಚಿತ್ರ ಕೋಶ' ತಯಾರಿಸಿ.

  3. ಇ. ಕೊಟ್ಟಿರುವ ಸಾಲುಗಳನ್ನು ವೇಗವಾಗಿ ಉಚ್ಚರಿಸಿ (tongue twisters):

  4. 1. ಟಗರಿಗೆ ತರಗು ತಂದು ಹಾಕು.

  5. 2. ತರಿಕೆರೆ ಎರಿ ಮೇಲೆ ಮೂರು ಕರಿ ಕುರಿಮರಿ.

  6. 3. ಕಪ್ಪು ಕುಂಕುಮ ಕೆಂಪು ಕುಂಕುಮ.

  7. 4. ಕಾಗೆ ಪುಕ್ಕ ಗೂಬೆ ಪುಕ್ಕ.

  8. ಈ. ಪದ್ಯದಲ್ಲಿ ನೀವು ಇಷ್ಟಪಡುವ ನಾಲ್ಕು ಸಾಲುಗಳನ್ನು ಬರೆಯಿರಿ.

  9. ಉ. ಈ ಪದ್ಯದ ಸಾಲುಗಳನ್ನು ಕಂಠಪಾಠ ಮಾಡಿ ನಿಮ್ಮದೇ ರಾಗದಲ್ಲಿ ಹಾಡಿರಿ.

Interactive Lab

ಕಾಪಾಡುkaa-paa-duprotect, take care of
ದುಡಿdu-diwork, labor
ಬೇಡುbay-duask, request
ಮಡಿma-di(here) to die/pass away
ಶ್ರೇಯಸ್ಸುshray-as-suprosperity, growth
ಹೋರಾಡುho-raa-dufight, strive