CRECT Education

Class 4 Kannada Lesson 13: Game of Words – Practice & Play | KTBS Kannada Second Language

Description

Practice comprehension and vocabulary from the story 'ಪದಗಳ ಆಟ' with exercises from the textbook.

ಗದ್ಯ (prose) · ಸಮಿತಿ ರಚನೆ (Committee-authored)

ಪಠ್ಯFull text

ಶಿಕ್ಷಕರು ತರಗತಿಗೆ ಪ್ರವೇಶಿಸಿದ ತಕ್ಷಣ ಮಕ್ಕಳಿಗೆ ಶುಭೋದಯ ಹೇಳಿದರು. ಹಾಜರಿ ತೆಗೆದುಕೊಂಡರು. “ಮಕ್ಕಳೇ, ನಾನು ನಿಮಗೆ ಈ ದಿನ 'ಪದಗಳ ಆಟ' ಆಡಿಸುತ್ತೇನೆ. ನಿಮ್ಮನ್ನು 'ಅ', 'ಬ' ಎಂಬ ಎರಡು ತಂಡಗಳಾಗಿ ವಿಭಜಿಸಿ, ಒಂದು ವಿಷಯವನ್ನು ಕೊಡುತ್ತೇನೆ. ಆ ವಿಷಯದ ಕುರಿತು ಐದು ನಿಮಿಷ ನಿಮ್ಮನಿಮ್ಮಲ್ಲೇ ಚರ್ಚೆ ಮಾಡಬೇಕು. ತಂಡದ ಸದಸ್ಯರ ಸಹಾಯದಿಂದ ರಚಿಸಿದ ಅರ್ಥಪೂರ್ಣ ವಾಕ್ಯಗಳನ್ನು ಒಬ್ಬರ ಅನಂತರ ಒಬ್ಬರಂತೆ ಹೇಳಬೇಕು. ಪ್ರತಿ ವಾಕ್ಯದಲ್ಲಿ ಐದಕ್ಕಿಂತ ಹೆಚ್ಚು ಪದಗಳಿರಕೂಡದು. ಇದ್ದರೆ ಆ ವಾಕ್ಯ ರದ್ದಾಗುವುದು. ವಾಕ್ಯ ರಚನೆಯಲ್ಲಿ ತಪ್ಪುಗಳು ಬಂದರೂ ಅದೇ ಗತಿ. 'ಅ' ಗುಂಪು ವಾಕ್ಯ ಹೇಳುತ್ತಿರುವಾಗ 'ಬ' ಗುಂಪು ಆ ವಾಕ್ಯಗಳನ್ನು ಎಣಿಸುತ್ತಿರಬೇಕು. ವಾಕ್ಯಗಳು ಪುನರಾವರ್ತನೆ ಆಗಕೂಡದು. ಪ್ರತಿ ಗುಂಪಿಗೆ ಹತ್ತು ನಿಮಿಷ ಕಾಲಾವಕಾಶ ಇರುತ್ತದೆ. ಯಾವ ಗುಂಪು ಅತಿ ಹೆಚ್ಚು ವಾಕ್ಯಗಳನ್ನು ರಚನೆ ಮಾಡುತ್ತದೆಯೋ ಆ ಗುಂಪು ಜಯಶಾಲಿಯಾಗುತ್ತದೆ” ಎಂದರು. ಬಳಿಕ ಮಕ್ಕಳನ್ನು 'ಅ', 'ಬ' ಎಂಬ ಎರಡು ಗುಂಪು ಮಾಡಿದರು. ಶಿಕ್ಷಕರು: ಆಡಲು ಸಿದ್ಧರಿದ್ದೀರಾ? ಮಕ್ಕಳು: ಸಿದ್ಧರಿದ್ದೇವೆ. ಶಿಕ್ಷಕರು: 'ಊಟದ ಬಿಡುವಿನ ವೇಳೆ'– ಇವತ್ತಿನ ವಿಷಯ. ಮೊದಲಿಗೆ 'ಅ' ತಂಡದವರು. (ಎರಡೂ ತಂಡದವರು ಐದು ನಿಮಿಷ ಪರಸ್ಪರ ಚರ್ಚಿಸುವರು. 'ಅ' ಗುಂಪಿನವರು ಒಬ್ಬೊಬ್ಬರಾಗಿಯೇ ಎದ್ದು ನಿಂತು ವಾಕ್ಯ ರಚಿಸಿ ಹೇಳುವರು.) 'ಅ'-೧: ಎಲ್ಲ ತರಗತಿಯವರೂ ಹರಟೆ ಹೊಡೆಯುವ ಸಮಯ. ಬ-೧: ಐದು ಪದಗಳು, ಒಂದನೇ ವಾಕ್ಯ. 'ಅ'-೨: ಆ ಹೊತ್ತಿಗೆ ಹೊಟ್ಟೆ ತಾಳ ಹಾಕುತ್ತಿರುತ್ತದೆ. 'ಬ'-೧: ಐದು ಪದಗಳು ಎರಡನೇ ವಾಕ್ಯ. 'ಅ'-೩: ತಟ್ಟೆಗೆ ಬಿಸಿಬಿಸಿ ಅನ್ನ ಸಾಂಬಾರು ಬಿದ್ದರೆ ನಾಲಗೆಯಲ್ಲಿ ನೀರೂರುತ್ತದೆ. 'ಬ'-ಗುಂಪು: (ಒಟ್ಟಿಗೆ) ಏಳು ಪದಗಳಾದುವು ಸಾರ್, ರದ್ದು ಮಾಡಿರಿ. ಶಿಕ್ಷಕರು: ಈ ವಾಕ್ಯ ರದ್ದಾಗಿದೆ. ಮುಂದೆ..... 'ಅ'-೪: ಸ್ವಲ್ಪ ತಿಂದು ಉಳಿದುದನ್ನು ತೊಟ್ಟಿಗೆ ಎಸೆಯುವುದು ತಪ್ಪು. 'ಬ'-ಗುಂಪು: (ಒಟ್ಟಿಗೆ) ಆರು ಪದಗಳಿವೆ ಸಾರ್, ರದ್ದು ಮಾಡಿರಿ. ಶಿಕ್ಷಕರು: ಈ ವಾಕ್ಯವೂ ರದ್ದಾಗಿದೆ. ಮುಂದೆ........ 'ಅ'-೫: ಉಣ್ಣುವ ಜಾಗವನ್ನು ಚೆನ್ನಾಗಿ ಶುಚಿಗೊಳಿಸಬೇಕು. 'ಬ'-೧: ನಾಲ್ಕು ಪದಗಳು, ಮೂರನೇ ವಾಕ್ಯ. ಶಿಕ್ಷಕರು: ಸಮಯ ಮುಗಿಯಿತು. ಇದೀಗ 'ಬ' ತಂಡದ ಸರದಿ. ಪ್ರಾರಂಭಿಸಿರಿ. 'ಬ'-೧: (ಎದ್ದು ನಿಂತು) ಉಣ್ಣುವ ಜಾಗದಲ್ಲಿ ಚೆಲ್ಲಿದ ಕಸಕಡ್ಡಿಗಳನ್ನು ಹೆಕ್ಕಿ–(ಮಾತು ನಿಲ್ಲುವುದು) 'ಅ'-೧: ಐದು ಪದಗಳು ಆಗೇ ಹೋದವು ಸರ್. 'ಬ'-೧: ಹೆಕ್ಕೀ..... ಹೆಕ್ಕೀ..... ಶಿಕ್ಷಕರು: ಎಷ್ಟು ಹೊತ್ತು ಹೆಕ್ಕುವುದು? ಸಾಕುಮಾಡು. ಮುಂದೆ– 'ಬ'-೨: ಊಟದ ತಟ್ಟೆ ಚೆನ್ನಾಗಿ ತೊಳೆಯಬೇಕು. 'ಅ'-೧: ನಾಲ್ಕು ಪದಗಳು, ಒಂದು ವಾಕ್ಯ. 'ಬ'-೩: ಮೆಲ್ಲಗೆ ಊಟಕ್ಕೆ ಅಮ್ಮ ಹೇಳಿದೆ. (ಎಲ್ಲರೂ ನಗುವರು) 'ಅ'-೧: ವಾಕ್ಯ ರಚನೆ ತಪ್ಪು ಸಾರ್, ರದ್ದು ಮಾಡಿರಿ. ಶಿಕ್ಷಕರು: ಈ ವಾಕ್ಯವನ್ನು ಯಾರು ಸರಿಪಡಿಸುತ್ತೀರಿ? 'ಬ'-೪: ಮೆಲ್ಲಗೆ ಊಟಮಾಡುವಂತೆ ಅಮ್ಮ ಹೇಳಿದ್ದಾರೆ. 'ಅ'-೧: ನಾಲ್ಕು ಪದಗಳು, ಎರಡನೇ ವಾಕ್ಯ. 'ಬ'-೫: ಮೆಲ್ಲಗೆ ಊಟ ಮಾಡಲು ಊಟ ಬರಬೇಕಲ್ಲ! (ಎಲ್ಲರೂ ನಗುವರು) 'ಅ'-೧: ಐದು ಪದಗಳು, ಮೂರನೇ ವಾಕ್ಯ. ಶಿಕ್ಷಕರು: ಅವಧಿ ಮುಗಿಯಿತು ಮಕ್ಕಳೇ, ಈಗ 'ಅ' ಗುಂಪು ಹೇಳಿರುವ ವಾಕ್ಯಗಳಲ್ಲಿ ಮೂರು ಸರಿ. 'ಬ'ಗುಂಪು ಹೇಳಿದ ವಾಕ್ಯಗಳಲ್ಲೂ ಮೂರು ಸರಿ. ಹಾಗಾಗಿ ಇತ್ತಂಡಗಳು ಜಯಶಾಲಿಯಾಗಿವೆ. (ಎಲ್ಲರೂ ಖುಷಿಯಿಂದ ಚಪ್ಪಾಳೆ ತಟ್ಟುವರು.) ಶಿಕ್ಷಕರು:ಮಕ್ಕಳೇ, ಖುಷಿ ಆಯಿತೇ? ನೀವು ಹೀಗೆ ಬಿಡುವಿನ ವೇಳೆಯಲ್ಲಿ ಯಾವುದಾದರೊಂದು ವಿಷಯ ತೆಗೆದುಕೊಂಡು ಅತಿ ಹೆಚ್ಚು ವಾಕ್ಯ ರಚಿಸಿರಿ. 'ಪದಗಳ ಆಟ' ಆಡಿ ಪದ ಸಂಪತ್ತನ್ನು ಹೆಚ್ಚಿಸಿಕೊಳ್ಳಿರಿ. (ಮಕ್ಕಳು 'ಆಗಬಹುದು ಸಾರ್' ಎನ್ನುತ್ತ ಊಟಕ್ಕೆ ತೆರಳಿದರು.) **ಕೌಶಲ :–** ಆಲಿಸುವುದು. **ಸಾಮರ್ಥ್ಯ:–** ಭಾಷಾ ಆಟಗಳ ಸರಳ ಸೂಚನೆಗಳನ್ನು ಅರ್ಥಮಾಡಿಕೊಳ್ಳುವುದು.

ಪದಗಳ ಅರ್ಥword meanings

KannadaPronunciationMeaning
ತರಗತಿta-ra-ga-ticlass, grade, standard
ಪ್ರವೇಶಿಸುpra-vay-shi-suenter, come in
ಹಾಜರಿhaa-ja-riattendance, presence
ತಂಡtan-dateam, group
ವಿಭಜಿಸುvi-bha-ji-sudivide, separate
ಚರ್ಚೆchar-chediscussion, debate
ಪುನರಾವರ್ತನೆpu-na-raa-var-ta-nerepetition, come again
ಜಯಶಾಲಿja-ya-shaa-liwinner, victorious
ಹರಟೆha-ra-techat, light conversation
ರದ್ದುrad-ducancel, strike off
ಹೆಕ್ಕುhek-kupick up, select
ರಚಿಸುra-chi-sucreate, make

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ) ಬಿಟ್ಟಿರುವ ಸ್ಥಳಗಳನ್ನು ಸರಿಯಾದ ಪದಗಳಿಂದ ತುಂಬಿರಿ.

  1. ೧. ಶಿಕ್ಷಕರು ತರಗತಿ ಪ್ರವೇಶಿಸಿದ ತಕ್ಷಣ ಮಕ್ಕಳಿಗೆ .................... ಹೇಳಿದರು.

    Answer

    ಶಿಕ್ಷಕರು ತರಗತಿ ಪ್ರವೇಶಿಸಿದ ತಕ್ಷಣ ಮಕ್ಕಳಿಗೆ ಶುಭೋದಯ ಹೇಳಿದರು.

  2. ೨. ಪ್ರತಿ ವಾಕ್ಯದಲ್ಲಿ ಐದಕ್ಕಿಂತ ಹೆಚ್ಚು ಪದಗಳಿದ್ದರೆ ಆ ವಾಕ್ಯ ....................

    Answer

    ಪ್ರತಿ ವಾಕ್ಯದಲ್ಲಿ ಐದಕ್ಕಿಂತ ಹೆಚ್ಚು ಪದಗಳಿದ್ದರೆ ಆ ವಾಕ್ಯ ರದ್ದಾಗುವುದು.

  3. ೩. ವಾಕ್ಯಗಳು .................... ಆಗಕೂಡದು.

    Answer

    ವಾಕ್ಯಗಳು ಪುನರಾವರ್ತನೆ ಆಗಕೂಡದು.

  4. ೪. ತಟ್ಟೆಯಲ್ಲಿ ಬಿಸಿಬಿಸಿ .................... ಬಿದ್ದರೆ ನಾಲಗೆಯಲ್ಲಿ ನೀರೂರುತ್ತದೆ.

    Answer

    ತಟ್ಟೆಯಲ್ಲಿ ಬಿಸಿಬಿಸಿ ಅನ್ನ ಸಾಂಬಾರು ಬಿದ್ದರೆ ನಾಲಗೆಯಲ್ಲಿ ನೀರೂರುತ್ತದೆ.

  5. ೫. ಊಟದ ತಟ್ಟೆ .................... ತೊಳೆಯಬೇಕು.

    Answer

    ಊಟದ ತಟ್ಟೆ ಚೆನ್ನಾಗಿ ತೊಳೆಯಬೇಕು.

ಆ) ತಪ್ಪಾಗಿರುವುದನ್ನು ಸರಿಪಡಿಸಿ ಬರೆಯಿರಿ.

  1. ೧. ವಾಕ್ಯಗಳು ಪುನರಾವರ್ತನೆ ಆಗಬೇಕು.

    Answer

    ವಾಕ್ಯಗಳು ಪುನರಾವರ್ತನೆ ಆಗಕೂಡದು.

  2. ೨. ಪ್ರತಿ ಗುಂಪಿಗೆ ಒಂದು ಗಂಟೆ ಕಾಲಾವಕಾಶ ಇರುತ್ತದೆ.

    Answer

    ಪ್ರತಿ ಗುಂಪಿಗೆ ಹತ್ತು ನಿಮಿಷ ಕಾಲಾವಕಾಶ ಇರುತ್ತದೆ.

  3. ೩. ಎಲ್ಲ ತರಗತಿಯವರೂ ಊಟ ಮಾಡುವ ಸಮಯ.

    Answer

    ಎಲ್ಲ ತರಗತಿಯವರೂ ಹರಟೆ ಹೊಡೆಯುವ ಸಮಯ.

  4. ೪. ಮೆಲ್ಲಗೆ ನಿದ್ದೆ ಮಾಡುವಂತೆ ಅಮ್ಮ ಹೇಳಿದ್ದಾರೆ.

    Answer

    ಮೆಲ್ಲಗೆ ಊಟಮಾಡುವಂತೆ ಅಮ್ಮ ಹೇಳಿದ್ದಾರೆ.

ಇ) ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಶಿಕ್ಷಕರು ಮಕ್ಕಳಿಗೆ ಯಾವ ಆಟ ಆಡಿಸುವುದಾಗಿ ಹೇಳಿದರು?

    Answer

    ಶಿಕ್ಷಕರು ಮಕ್ಕಳಿಗೆ 'ಪದಗಳ ಆಟ' ಆಡಿಸುವುದಾಗಿ ಹೇಳಿದರು.

  2. ೨. 'ಅ' ಗುಂಪು ವಾಕ್ಯ ಹೇಳುತ್ತಿರುವಾಗ 'ಬ' ಗುಂಪು ಏನು ಮಾಡಬೇಕು?

    Answer

    'ಅ' ಗುಂಪು ವಾಕ್ಯ ಹೇಳುತ್ತಿರುವಾಗ 'ಬ' ಗುಂಪು ಆ ವಾಕ್ಯಗಳನ್ನು ಎಣಿಸುತ್ತಿರಬೇಕು.

  3. ೩. ಯಾವ ಗುಂಪು ಜಯಶಾಲಿಯಾಗಿದೆ ಎಂದು ಶಿಕ್ಷಕರು ಹೇಳಿದರು?

    Answer

    ಶಿಕ್ಷಕರು ಇತ್ತಂಡಗಳು ಜಯಶಾಲಿಯಾಗಿವೆ ಎಂದು ಹೇಳಿದರು.

  4. ೪. ಗುಂಪುಗಳಿಗೆ ಯಾವ ವಿಷಯದ ಕುರಿತು ವಾಕ್ಯ ರಚಿಸಲು ತಿಳಿಸಿದರು?

    Answer

    ಶಿಕ್ಷಕರು ಗುಂಪುಗಳಿಗೆ 'ಊಟದ ಬಿಡುವಿನ ವೇಳೆ' ವಿಷಯದ ಕುರಿತು ವಾಕ್ಯ ರಚಿಸಲು ತಿಳಿಸಿದರು.

ಈ) ಯಾರು ಯಾರಿಗೆ ಹೇಳಿದರು?

  1. ೧. “ಮಕ್ಕಳೇ, ನಾನು ನಿಮಗೆ ಈ ದಿನ ಪದಗಳ ಆಟ ಆಡಿಸುತ್ತೇನೆ.”

  2. ಯಾರು ಹೇಳಿದರು?

    Answer

    ಶಿಕ್ಷಕರು ಹೇಳಿದರು.

  3. ಯಾರಿಗೆ ಹೇಳಿದರು?

    Answer

    ಮಕ್ಕಳಿಗೆ ಹೇಳಿದರು.

  4. ೨. “ಆ ಹೊತ್ತಿಗೆ ಹೊಟ್ಟೆ ತಾಳ ಹಾಕುತ್ತಿರುತ್ತದೆ,”

  5. ಯಾರು ಹೇಳಿದರು?

    Answer

    'ಅ'-೨ (ಅ ಗುಂಪಿನ ಎರಡನೇ ವಿದ್ಯಾರ್ಥಿ) ಹೇಳಿದರು.

  6. ಯಾರಿಗೆ ಹೇಳಿದರು?

    Answer

    ತರಗತಿಗೆ ಹೇಳಿದರು.

  7. ೩. “ಉಣ್ಣುವ ಜಾಗವನ್ನು ಚೆನ್ನಾಗಿ ಶುಚಿಗೊಳಿಸಬೇಕು.”

  8. ಯಾರು ಹೇಳಿದರು?

    Answer

    'ಅ'-೫ (ಅ ಗುಂಪಿನ ಐದನೇ ವಿದ್ಯಾರ್ಥಿ) ಹೇಳಿದರು.

  9. ಯಾರಿಗೆ ಹೇಳಿದರು?

    Answer

    ತರಗತಿಗೆ ಹೇಳಿದರು.

Interactive Lab

ತರಗತಿta-ra-ga-ticlass, grade, standard
ಪ್ರವೇಶಿಸುpra-vay-shi-suenter, come in
ಹಾಜರಿhaa-ja-riattendance, presence
ತಂಡtan-dateam, group
ವಿಭಜಿಸುvi-bha-ji-sudivide, separate
ಚರ್ಚೆchar-chediscussion, debate
ಪುನರಾವರ್ತನೆpu-na-raa-var-ta-nerepetition, come again
ಜಯಶಾಲಿja-ya-shaa-liwinner, victorious
ಹರಟೆha-ra-techat, light conversation
ರದ್ದುrad-ducancel, strike off
ಹೆಕ್ಕುhek-kupick up, select
ರಚಿಸುra-chi-sucreate, make