CRECT Education

Class 4 Kannada Lesson 4: Compassion For Life | KTBS Kannada Second Language – Learn the Story

Description

Walk through the story of Ranga, Sadhik, and a snake bite, then learn five key vocabulary words.

ಗದ್ಯ (prose) · ಪ್ರೇಮಾ ಶಿವಾನಂದ (Prema Shivananda)

ಪಠ್ಯFull text

ರಂಗ ಮತ್ತು ಸಾಧಿಕ್ ಇಬ್ಬರೂ ಜೀವದ ಗೆಳೆಯರು. ಅವರಿಬ್ಬರ ಆಸಕ್ತಿ ಅಭಿರುಚಿಗಳು ಒಂದೇ ಆಗಿದ್ದವು. ಪ್ರತಿದಿನವೂ ಸೈಕಲ್ ಸವಾರಿ ಮಾಡುತ್ತಾ ಶಾಲೆಗೆ ಹೋಗುವುದೆಂದರೆ ಅವರಿಗೆ ಎಲ್ಲಿಲ್ಲದ ಖುಷಿ. ಅವರು ಶಾಲೆಗೆ ಹೋಗುವ ದಾರಿಯಲ್ಲಿ ಒಂದು ಚಿಕ್ಕ ಕಾಡು. ಆ ಕಾಡಿನಲ್ಲಿ ಒಂದು ನೇರಳೆ ಮರವಿತ್ತು. ನೇರಳೆ ಮರದ ಹಣ್ಣು ತಿನ್ನುವುದೆಂದರೆ ರಂಗ ಮತ್ತು ಸಾಧಿಕ್ ಇಬ್ಬರಿಗೂ ತುಂಬ ಸಂತಸ. ಒಂದು ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ, ರಂಗ ಮತ್ತು ಸಾಧಿಕ್ ಇಬ್ಬರು ನೇರಳೆ ಮರದ ಬುಡಕ್ಕೆ ತಲುಪಿದರು. ಆಗ ಅಲ್ಲಿಯೇ ಒಣ ಕಟ್ಟಿಗೆಗಳನ್ನು ಆರಿಸುತ್ತಿದ್ದ ಅಜ್ಜಿಯೊಬ್ಬರು, “ಹುಷಾರು ಮಕ್ಕಳೇ, ಮರ ಜಾರುತ್ತೆ, ಜೋಪಾನ” ಎಂದು ಹೇಳಿದರು. ಅದಕ್ಕೆ ರಂಗ, ಸಾಧಿಕ್ “ಆಯ್ತಜ್ಜಿ, ನೀವೇನೂ ಚಿಂತೆ ಮಾಡಬೇಡಿ” ಎಂದರು. ರಂಗ ಮರ ಹತ್ತಲು ಪ್ರಾರಂಭಿಸಿದನು. ಸಾಧಿಕ್ ನೇರಳೆ ಹಣ್ಣನ್ನು ಕೈಯಲ್ಲಿ ಹಿಡಿಯಲು ಸಿದ್ಧವಾಗಿ ನಿಂತನು. ಅಷ್ಟರಲ್ಲಿ ‘ಅಯ್ಯೋ, ಅಪ್ಪಾ... ಯಾರಾದ್ರೂ ನನ್ನ ಬದುಕಿಸ್ರೋ’ ಎಂದು ಅಜ್ಜಿ ಕೂಗಿದ ಸದ್ದು ಕೇಳಿಸಿತು. ಸಾಧಿಕ್ ಕೂಡಲೆ ಅತ್ತ ಕಡೆ ಓಡಿದ. ರಂಗ ಗಾಬರಿಯಿಂದ ಮರ ಇಳಿದು ಬಂದ. “ಏನಾಯ್ತಜ್ಜಿ ಯಾಕೆ ಕೂಗಿಕೊಂಡೆ?” ಎಂದು ಆತುರದಿಂದ ಕೇಳಿದ. ಅಜ್ಜಿ ತಮ್ಮ ಕಾಲಿನ ಕಡೆಗೊಮ್ಮೆ, ಪೊದೆಯ ಕಡೆಗೊಮ್ಮೆ ಕೈತೋರಿಸುತ್ತ ‘ಹಾವು...! ಹಾವು...!’ ಎಂದು ಕೂಗಿಕೊಂಡರು. ತಕ್ಷಣ ಸಾಧಿಕ್, ಅಜ್ಜಿ ಕೈ ತೋರಿಸಿದ ಕಡೆಗೆ ಹೋಗಿ ಹಾವನ್ನು ಹುಡುಕತೊಡಗಿದ. ರಂಗ ಅಜ್ಜಿಯ ಕಾಲನ್ನು ನೋಡಿ ಅಲ್ಲಿಯೇ ಇದ್ದ ಗಿಡದ ಬಳ್ಳಿಯಿಂದ ಹಾವಿನ ವಿಷ ಅಜ್ಜಿಯ ಮೈಯೆಲ್ಲ ಹರಡದಂತೆ ಗಾಯದ ಮೇಲ್ಭಾಗದಲ್ಲಿ ಗಟ್ಟಿಯಾಗಿ ಕಟ್ಟುಹಾಕಿದ. ಅಷ್ಟರಲ್ಲಿ ಸಾಧಿಕ್ ಪೊದೆಯಲ್ಲಿ ಹರಿದಾಡುತ್ತಿದ್ದ ಹಾವನ್ನು ಕಂಡು “ರಂಗ ಬಾರೋ ಇಲ್ಲಿ, ಹಾವು ಸಿಕ್ಕಿದೆ. ಸಾಯಿಸೋಣ” ಎಂದ. ಅದಕ್ಕೆ ರಂಗ “ಅಜ್ಜಿಯನ್ನು ಆಸ್ಪತ್ರೆಗೆ ಕೊಂಡೊಯ್ಯೋದು ಬಿಟ್ಟು ಹಾವು ಸಾಯಿಸುತ್ತಾನಂತೆ. ತಲೆ ಕೆಟ್ಟಿದೆಯೇನೋ ನಿನಗೆ?” ಎನ್ನುತ್ತಾ ಅಜ್ಜಿಯನ್ನು ಸೈಕಲಿನಲ್ಲಿ ಎತ್ತಿ ಕೂರಿಸಿ ಸರಸರನೆ ಹೊರಟನು. ರಂಗ ಬೈದಿದ್ದಕ್ಕೆ ಬೇಸರಗೊಂಡ ಸಾಧಿಕ್ ಮುಖ ಸಪ್ಪಗೆ ಮಾಡಿಕೊಂಡು ಮನೆಗೆ ಹೋದನು. ರಂಗ ಅಜ್ಜಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದನು. ವೈದ್ಯರು ರಂಗನ ಬಳಿ, “ಅಜ್ಜಿಗೆ ಕಚ್ಚಿರುವ ಹಾವು ವಿಷದ ಹಾವಲ್ಲ, ಹಾಗಾಗಿ ಅಜ್ಜಿಗೆ ಅಪಾಯವೇನಿಲ್ಲ” ಎಂದರು. ರಂಗನಿಗೆ ಸಮಾಧಾನವಾಯಿತು. ಅನಂತರ ಅಜ್ಜಿಯನ್ನು ಅವರ ಮನೆಗೆ ಬಿಟ್ಟು ತನ್ನ ಮನೆಗೆ ತೆರಳಿದನು. ಅಷ್ಟರಲ್ಲಿ ಅಲ್ಲಿಗೆ ಬಂದ ಸಾಧಿಕ್ ಕೋಪದಿಂದ “ಹಾವನ್ನು ಸಾಯಿಸೋಣ ಎಂದಿದ್ದಕ್ಕೆ ನೀನು ನನ್ನನ್ನು ಗದರಿದ್ದೇಕೆ? ಹಾವನ್ನು ಹಾಗೇ ಬಿಟ್ಟರೆ ಅದು ಇನ್ನಷ್ಟು ಜನರಿಗೆ ಕಚ್ಚಿ ತೊಂದರೆ ಮಾಡುವುದಿಲ್ಲವೇ?” ಎಂದ. ರಂಗ ಅವನನ್ನು ಸಮಾಧಾನಪಡಿಸುತ್ತಾ “ನೋಡು ಸಾಧಿಕ್, ಹಾವನ್ನು ಸಾಯಿಸುವುದಕ್ಕಿಂತ ಅಜ್ಜಿಯ ಪ್ರಾಣ ಉಳಿಸುವುದು ಮುಖ್ಯವಾಗಿತ್ತು. ಹಾಗಾಗಿ ನಿನಗೆ ಬೈದೆ. ಮೇಲಾಗಿ ಹಾವನ್ನು ಕೊಲ್ಲುವ ಹಕ್ಕು ನಮಗಿಲ್ಲ ಅಲ್ಲವೇ?” ಎಂದು ರಂಗ ಹೇಳಿದಾಗ ಸಾಧಿಕ್‌ಗೆ ತನ್ನ ತಪ್ಪಿನ ಅರಿವಾಯಿತು. ರಂಗ, “ನಿನ್ನ ಮೇಲೆ ವಿನಾ ಕಾರಣ ಕೋಪಮಾಡಿಕೊಂಡೆ. ಇನ್ನು ಮುಂದೆ ಹೀಗೆ ಮಾಡುವುದಿಲ್ಲ” ಎಂದು ಸಾಧಿಕ್, ರಂಗನನ್ನು ಆಲಂಗಿಸಿಕೊಂಡನು. **ಕೌಶಲ :-** ಮಾತನಾಡುವುದು. **ಸಾಮರ್ಥ್ಯ:** ಭಾವನೆಗೆ ತಕ್ಕಂತೆ ಧ್ವನಿ ವ್ಯತ್ಯಾಸದೊಂದಿಗೆ ಮಾತನಾಡುವುದು. ಸ್ವಂತ ಅನುಭವಗಳ ವಿವರಣೆ, ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಸರಳ ವಾಕ್ಯಗಳ ಉತ್ತರ ಹೇಳುವುದು.

**ಶುಭನುಡಿ** - ಪರೋಪಕಾರವೇ ಪರಮ ಶ್ರೇಷ್ಠ ಗುಣ. (Helping others is the highest virtue.) - ಸದ್ಗುಣಗಳಿರುವಲ್ಲಿ ಸದ್ಗತಿಯಿದೆ. (Where there are good qualities, there is a good path/destiny.) - ಪ್ರಾಣಿ ಹಿಂಸೆ ಪಾಪಕರ. (Violence against animals is a sin.)

ಪದಗಳ ಅರ್ಥword meanings

KannadaPronunciationMeaning
ಆಸಕ್ತಿaa-sak-tiinterest, shraddhe
ಅಭಿರುಚಿa-bhi-ru-chiinterest, fondness, olavu
ಖುಷಿkhu-shijoy, happiness, higgu
ನಿತ್ಯnit-yaeveryday, pratidina
ಹುಷಾರುhu-shaa-rucareful, echcharike
ಜೋಪಾನjo-paa-nacarefulness, jaagarookate
ಗಾಬರಿgaa-ba-rifear, panic, anjike
ಆತುರaa-tu-rahaste, avasara
ಪೊದೆpo-debush, shrub
ವಿಷvi-shapoison, nanju
ಗದರುga-da-ruscold, shout
ಬೈಯುbai-yuscold, rebuke
ಹಕ್ಕುhak-kuright, authority
ಅರಿವುa-ri-vuawareness, knowledge
ಆಲಂಗಿಸುaa-lan-gi-suembrace, hug

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ) ಬಿಟ್ಟಿರುವ ಸ್ಥಳಗಳನ್ನು ಸರಿಯಾದ ಪದಗಳಿಂದ ತುಂಬಿರಿ:

  1. ೧. ರಂಗ ಮತ್ತು ಸಾಧಿಕ್ ಇಬ್ಬರೂ ....................................... ಗೆಳೆಯರು

    Answer

    ೧. ರಂಗ ಮತ್ತು ಸಾಧಿಕ್ ಇಬ್ಬರೂ ಜೀವದ ಗೆಳೆಯರು.

  2. ೨. ಅಜ್ಜಿ ....................................... ಕಟ್ಟಿಗೆಗಳನ್ನು ಆರಿಸುತ್ತಿದ್ದರು.

    Answer

    ೨. ಅಜ್ಜಿ ಒಣ ಕಟ್ಟಿಗೆಗಳನ್ನು ಆರಿಸುತ್ತಿದ್ದರು.

  3. ೩. ರಂಗ ಅಜ್ಜಿಗೆ ಆಸ್ಪತ್ರೆಯಲ್ಲಿ ....................................... ಕೊಡಿಸಿದನು.

    Answer

    ೩. ರಂಗ ಅಜ್ಜಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದನು.

  4. ೪. ಹಾವನ್ನು ಕೊಲ್ಲುವ ....................................... ನಮಗಿಲ್ಲ.

    Answer

    ೪. ಹಾವನ್ನು ಕೊಲ್ಲುವ ಹಕ್ಕು ನಮಗಿಲ್ಲ.

ಆ) ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು?

  1. ೧. “ತಲೆ ಕೆಟ್ಟಿದೆಯೇನೋ ನಿನಗೆ.”

  2. ಯಾರು ಹೇಳಿದರು? .....................................................................................

    Answer

    ಯಾರು ಹೇಳಿದರು? ರಂಗನು ಹೇಳಿದನು.

  3. ಯಾರಿಗೆ ಹೇಳಿದರು? .....................................................................................

    Answer

    ಯಾರಿಗೆ ಹೇಳಿದರು? ಸಾಧಿಕ್‌ಗೆ ಹೇಳಿದನು.

  4. ೨. “ಅಜ್ಜಿಗೆ ಕಚ್ಚಿರುವ ಹಾವು ವಿಷದ ಹಾವಲ್ಲ.”

  5. ಯಾರು ಹೇಳಿದರು? .....................................................................................

    Answer

    ಯಾರು ಹೇಳಿದರು? ವೈದ್ಯರು ಹೇಳಿದರು.

  6. ಯಾರಿಗೆ ಹೇಳಿದರು? .....................................................................................

    Answer

    ಯಾರಿಗೆ ಹೇಳಿದರು? ರಂಗನಿಗೆ ಹೇಳಿದರು.

  7. ೩. “ಇನ್ನು ಮುಂದೆ ಹೀಗೆ ಮಾಡುವುದಿಲ್ಲ.”

  8. ಯಾರು ಹೇಳಿದರು? .....................................................................................

    Answer

    ಯಾರು ಹೇಳಿದರು? ಸಾಧಿಕ್ ಹೇಳಿದನು.

  9. ಯಾರಿಗೆ ಹೇಳಿದರು? .....................................................................................

    Answer

    ಯಾರಿಗೆ ಹೇಳಿದರು? ರಂಗನಿಗೆ ಹೇಳಿದನು.

ಇ) ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ರಂಗ ಮತ್ತು ಸಾಧಿಕ್ ಪ್ರತಿದಿನ ಯಾವುದರಲ್ಲಿ ಶಾಲೆಗೆ ಹೋಗುತ್ತಿದ್ದರು?

    Answer

    ರಂಗ ಮತ್ತು ಸಾಧಿಕ್ ಪ್ರತಿದಿನ ಸೈಕಲ್ ಸವಾರಿ ಮಾಡುತ್ತಾ ಶಾಲೆಗೆ ಹೋಗುತ್ತಿದ್ದರು.

  2. ೨. ನೇರಳೆ ಮರವನ್ನು ಹತ್ತಿದವರು ಯಾರು?

    Answer

    ನೇರಳೆ ಮರವನ್ನು ಹತ್ತಿದವರು ರಂಗ.

  3. ೩. ಅಜ್ಜಿ ಕೂಗಿಕೊಂಡಿದ್ದು ಯಾಕೆ?

    Answer

    ಅಜ್ಜಿ ಕೂಗಿಕೊಂಡಿದ್ದು ಹಾವು ಕಚ್ಚಿದ್ದರಿಂದ.

  4. ೪. ವೈದ್ಯರು ರಂಗನ ಬಳಿ ಏನೆಂದು ಹೇಳಿದರು?

    Answer

    ವೈದ್ಯರು ರಂಗನ ಬಳಿ, ಅಜ್ಜಿಗೆ ಕಚ್ಚಿರುವ ಹಾವು ವಿಷದ ಹಾವಲ್ಲ, ಹಾಗಾಗಿ ಅಜ್ಜಿಗೆ ಅಪಾಯವೇನಿಲ್ಲ ಎಂದು ಹೇಳಿದರು.

  5. ೫. ರಂಗ ಯಾರನ್ನು ಸಮಾಧಾನ ಪಡಿಸಿದನು?

    Answer

    ರಂಗ ಸಾಧಿಕ್‌ನನ್ನು ಸಮಾಧಾನ ಪಡಿಸಿದನು.

ಈ) ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಪೊದೆಯಲ್ಲಿದ್ದ ಹಾವನ್ನು ಕಂಡ ಸಾಧಿಕ್ ರಂಗನಿಗೆ ಏನೆಂದನು?

    Answer

    ಪೊದೆಯಲ್ಲಿದ್ದ ಹಾವನ್ನು ಕಂಡ ಸಾಧಿಕ್, “ರಂಗ ಬಾರೋ ಇಲ್ಲಿ, ಹಾವು ಸಿಕ್ಕಿದೆ. ಸಾಯಿಸೋಣ” ಎಂದನು.

  2. ೨. ಕೋಪಗೊಂಡಿದ್ದ ಸಾಧಿಕ್‌ನನ್ನು ರಂಗ ಹೇಗೆ ಸಮಾಧಾನ ಪಡಿಸಿದನು?

    Answer

    ಕೋಪಗೊಂಡಿದ್ದ ಸಾಧಿಕ್‌ನನ್ನು ರಂಗ ಸಮಾಧಾನಪಡಿಸುತ್ತಾ, ಹಾವನ್ನು ಸಾಯಿಸುವುದಕ್ಕಿಂತ ಅಜ್ಜಿಯ ಪ್ರಾಣ ಉಳಿಸುವುದು ಮುಖ್ಯವಾಗಿತ್ತು ಮತ್ತು ಹಾವನ್ನು ಕೊಲ್ಲುವ ಹಕ್ಕು ನಮಗಿಲ್ಲ ಎಂದು ಹೇಳಿದನು.

  3. ೩. ನೀವು ಮಾಡಿದ ಸಹಾಯದ ಬಗ್ಗೆ ಬರೆಯಿರಿ.

ಭಾಷಾಭ್ಯಾಸ

ಅ) ಸ್ವಂತ ವಾಕ್ಯ ರಚಿಸಿರಿ.

  1. ೧. ಜೋಪಾನ: .........................................................................................

    Model sentence

    ಜೋಪಾನ: ನಾನು ರಸ್ತೆ ದಾಟುವಾಗ ಜೋಪಾನವಾಗಿ ನಡೆಯುತ್ತೇನೆ.

  2. ೨. ಸಮಾಧಾನ: .......................................................................................

    Model sentence

    ಸಮಾಧಾನ: ನನ್ನ ಗೆಳೆಯ ಅಳುತ್ತಿದ್ದಾಗ ನಾನು ಅವನಿಗೆ ಸಮಾಧಾನ ಮಾಡಿದೆ.

  3. ೩. ತಪ್ಪು: .................................................................................................

    Model sentence

    ತಪ್ಪು: ನಾನು ಮನೆಕೆಲಸ ಮಾಡದೆ ಇದ್ದುದು ನನ್ನ ತಪ್ಪು.

ಆ) ಅರ್ಥಕೋಶದ ಸಹಾಯದಿಂದ ಈ ಪದಗಳ ಅರ್ಥ ಹುಡುಕಿ ಬರೆಯಿರಿ.

  1. ೧. ಖುಷಿ: .......................................................................

  2. ೨. ಪೊದೆ: .......................................................................

  3. ೩. ಗದರು: .......................................................................

ಇ) ಈ ಪದಗಳನ್ನು ಹೇಳುತ್ತಾ ನಕಲು ಮಾಡಿರಿ.

  1. ಅಯ್ಯೋ ಪಾಪ

  2. ಪ್ರಾಣ ಉಳಿಸು

  3. ತಪ್ಪಿನ ಅರಿವು

ಭಾಷಾ ಚಟುವಟಿಕೆ

  1. ಅ) ಕೆಳಗೆ ನೀಡಿರುವ ಚಿತ್ರವನ್ನು ಸರಿಯಾಗಿ ಗಮನಿಸಿ ಅದರಲ್ಲಿ ‘ಹ’ ಕಾರದಿಂದ ಪ್ರಾರಂಭವಾಗುವ ಪದಗಳನ್ನು ಗುರುತಿಸಿ.

  2. (An illustration of a landscape with trees, a river, a boat, animals, etc. Below it is written:)

  3. ನೀವು ನೋಡಿದ ‘ಹ’ ಅಕ್ಷರಕ್ಕೆ ಸಂಬಂಧಿಸಿದ ಹೆಸರುಗಳನ್ನು ಇಲ್ಲಿ ಬರೆಯಿರಿ.

  4. ....................................... ....................................... .......................................

  5. ....................................... ....................................... .......................................

  6. ....................................... ....................................... .......................................

  7. ಆ) ಈ ಕಥೆಯನ್ನು ಓದಿ ಮತ್ತು ಅದನ್ನು ನಿಮ್ಮ ಶಿಕ್ಷಕರ ಸಹಾಯ ಪಡೆದು ಅಭಿನಯಿಸಿರಿ.

  8. ಗುಡ್ಡದ ಮೇಲೆ ಒಂದು ಜಿಂಕೆ ಮರಿ ತನ್ನ ತಾಯಿಯೊಂದಿಗೆ ವಾಸವಾಗಿತ್ತು. ಅದು ಬಹಳ ಧೈರ್ಯಶಾಲಿಯಾಗಿತ್ತು. ಆದರೆ ಅದರ ತಾಯಿಗೆ ಯಾವಾಗಲೂ ತನ್ನ ಮರಿಯ ಬಗ್ಗೆಯೇ ಚಿಂತೆ! ಯಾಕೆಂದರೆ ತಾನಿಲ್ಲದ ವೇಳೆಯಲ್ಲಿ ಹುಲಿ ಅಥವಾ ಸಿಂಹ ತನ್ನ ಮರಿಯನ್ನು ತಿಂದರೆ? ಅದಕ್ಕಾಗಿ ಮರಿಗೆ ಬುದ್ಧಿ ಮಾತು ಹೇಳಿತು.

  9. ತಾಯಿ ಜಿಂಕೆ: ಮಗು ಹುಷಾರಾಗಿ ಇರಪ್ಪಾ. ಹುಲಿ ಬಂದೀತು ಜೋಪಾನ.

  10. ಮರಿ ಜಿಂಕೆ: ಚಿಂತೆ ಮಾಡಬೇಡ ಅಮ್ಮ, ನಾನು ಹುಷಾರಾಗಿ ಇರ್ತೀನಿ.

  11. (ತಾಯಿ ಜಿಂಕೆ ಮೇವು ಅರಸುತ್ತಾ ದೂರದ ಕಾಡಿಗೆ ಹೋಯಿತು. ಆ ಸಮಯದಲ್ಲಿ ಮರಿ ಜಿಂಕೆಯ ಬಳಿ ಹುಲಿಯೊಂದು ಬಂದಿತು. ಜಿಂಕೆ ಮರಿ ತಿರುಗಿ ನೋಡಿದಾಗ ಅದಕ್ಕೆ ಹುಲಿ ಕಂಡಿತು.)

  12. ಜಿಂಕೆ ಮರಿ: ಓ! ನೀನಾ ಹುಲಿರಾಯ! ನಾನು ನಿನಗೇನು ಹೆದರೊಲ್ಲ ಬಾ, ನನ್ನ ಶಕ್ತಿ ಇದ್ದಷ್ಟು ಹೊತ್ತು ನಿನ್ನ ಜೊತೆ ಹೋರಾಡುತ್ತೇನೆ.

  13. ಹುಲಿ: ನೀನು ನನ್ನ ಜೊತೆ ಹೋರಾಟ ಮಾಡುತ್ತೀಯಾ ಅಂದ್ರೆ ತಮಾಷೆ ಅಷ್ಟೆ! ಆದರೂ ನಿನ್ನ ಧೈರ್ಯ ಮೆಚ್ಚಿದೆ. ಒಂದು ಕೆಲಸ ಮಾಡೋಣ. ನೀನು ಮೂರು ಸತ್ಯವಾದ ಮಾತುಗಳನ್ನು ಹೇಳಿದರೆ ನಿನ್ನನ್ನು ಬಿಟ್ಟು ಬಿಡುತ್ತೇನೆ.

  14. ಜಿಂಕೆ ಮರಿ: ಹಾಗೇ ಆಗಲಿ, ಮೊದಲನೆಯ ಸತ್ಯವಾದ ಮಾತು ಏನೆಂದರೆ ನೀನು ಒಂದು ವೇಳೆ ಬೇರೆ ಹುಲಿಗಳ ಹತ್ತಿರ ಹೋಗಿ, ‘ಜಿಂಕೆ ಮರಿಯು ನನ್ನ ಹತ್ತಿರ ಮಾತನಾಡುತ್ತಾ ನಿಂತಿತ್ತು’ ಎಂದು ಹೇಳಿದರೆ ನಿನ್ನ ಮಾತನ್ನು ಅವು ನಂಬುವುದಿಲ್ಲ. ಇದು ಸತ್ಯವಾದ ಮಾತಲ್ಲವೇ?

  15. ಹುಲಿ: ಹೌದು, ಹೌದು! ನಿನ್ನ ಮಾತು ಸತ್ಯ.

  16. ಜಿಂಕೆ ಮರಿ: ಎರಡನೆಯ ಸತ್ಯವಾದ ಮಾತು ಏನೆಂದರೆ ಒಂದು ವೇಳೆ ನಾನು ಬೇರೆ ಜಿಂಕೆಗಳ ಹತ್ತಿರ ಹೋಗಿ, ‘ಹುಲಿರಾಯನೊಂದಿಗೆ ನಾನು ಮಾತನಾಡುತ್ತಾ ನಿಂತಿದ್ದೆ, ಆದ್ರೆ ಅದು ನನ್ನನ್ನು ತಿನ್ನಲಿಲ್ಲ’ ಎಂದರೆ ಉಳಿದ ಜಿಂಕೆಗಳು ನಂಬುವುದಿಲ್ಲ. ಇದು ಸತ್ಯವಾದ ಮಾತಲ್ಲವೇ?

  17. ಹುಲಿ: ಹೌದು, ಹೌದು! ನಿನ್ನ ಎರಡನೆಯ ಮಾತು ಸಹ ಸತ್ಯ.

  18. ಜಿಂಕೆ ಮರಿ: ಮೂರನೆಯ ಸತ್ಯವಾದ ಮಾತು ಏನೆಂದರೆ, ‘ನಾನು ಹೇಳುತ್ತಿರುವ ಇಷ್ಟೂ ಮಾತುಗಳನ್ನು ನೀನು ಕೇಳುತ್ತಿದ್ದಿ’ ಎಂದರೆ ಬಹುಶಃ ನಿನಗೆ ಹಸಿವಾಗುತ್ತಿಲ್ಲ ಅನ್ನಿಸುತ್ತಿದೆ. ಇದು ಸತ್ಯವಲ್ಲವೇ?

  19. ಹುಲಿ: ಹೌದು ಮಗೂ, ನಿನ್ನ ಮಾತು ನಿಜ. ನೀನು ಬಹಳ ಜಾಣ. ಮೂರು ಸತ್ಯವಾದ ಮಾತುಗಳನ್ನು ಹೇಳಿ ನನ್ನನ್ನು ತೃಪ್ತಿಪಡಿಸಿದೆ. ಆದ್ದರಿಂದ ಇನ್ನು ನಿನ್ನ ಮನೆಯ ಮುಂದೆ ನಾನು ಬರುವುದಿಲ್ಲ ಮತ್ತು ನಿನ್ನನ್ನು, ನಿನ್ನ ತಾಯಿಯನ್ನು ತಿನ್ನುವುದಿಲ್ಲ ಎಂದು ಮಾತು ನೀಡಿ ಹೊರಟು ಹೋಯಿತು.

ಓದಿಗೆ ಮನ್ನಣೆ

  1. - ಅಮರಚಿತ್ರಕಥಾದ ಚಿತ್ರಕಥೆಗಳನ್ನು ಓದಿರಿ.

  2. - ಸಿ.ಸು. ಸಂಗಮೇಶರ ಮಕ್ಕಳ ಕಥೆ, ಕವನ ಪುಸ್ತಕಗಳನ್ನು ಸಂಪಾದಿಸಿ ಓದಿರಿ.

Interactive Lab

ಆಸಕ್ತಿaa-sak-tiinterest, shraddhe
ಅಭಿರುಚಿa-bhi-ru-chiinterest, fondness, olavu
ಖುಷಿkhu-shijoy, happiness, higgu
ನಿತ್ಯnit-yaeveryday, pratidina
ಹುಷಾರುhu-shaa-rucareful, echcharike
ಜೋಪಾನjo-paa-nacarefulness, jaagarookate
ಗಾಬರಿgaa-ba-rifear, panic, anjike
ಆತುರaa-tu-rahaste, avasara
ಪೊದೆpo-debush, shrub
ವಿಷvi-shapoison, nanju
ಗದರುga-da-ruscold, shout
ಬೈಯುbai-yuscold, rebuke
ಹಕ್ಕುhak-kuright, authority
ಅರಿವುa-ri-vuawareness, knowledge
ಆಲಂಗಿಸುaa-lan-gi-suembrace, hug