ಗದ್ಯ (prose / short play) · ಸಮಿತಿ ರಚನೆ (Committee-authored)
ಪಠ್ಯFull text
"ಕೂಡಿ ಬಾಳು ಹಂಚಿ ತಿನ್ನು." — Live together, share and eat. A simple reminder that cooperation and sharing lead to a happier life.
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ) ಆವರಣದಲ್ಲಿ ಕೊಟ್ಟ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳ ತುಂಬಿರಿ.
(ಲಾಭವಾಯಿತು?, ಮನಸ್ಸಿದೆ, ಶಾಲೆಗೆ, ಜಗಳ, ತಿಂದಿದ್ದರೆ)
೧. ನೀವು ಇಬ್ಬರೂ ............................................ ಹೋಗುವ ಹುಡುಗರು.
Answerಶಾಲೆಗೆ
೨. ಜಗಳ ಮಾಡಿ ಏನು ............................................
Answerಲಾಭವಾಯಿತು
೩. ನಿಮ್ಮಲ್ಲಿ ತಪ್ಪನ್ನು ತಿದ್ದಿಕೊಳ್ಳುವ ............................................ ಅಲ್ಲವೆ?
Answerಮನಸ್ಸಿದೆ
೪. ಆ ಹಣ್ಣನ್ನು ಹಂಚಿ ............................................ ಇಬ್ಬರಿಗೂ ಸಂತೋಷವಾಗುತ್ತಿತ್ತು.
Answerತಿಂದಿದ್ದರೆ
ಆ) ಈ ಕೆಳಗಿನ ವಾಕ್ಯಗಳಲ್ಲಿ ತಪ್ಪಾಗಿರುವುದನ್ನು ಸರಿಪಡಿಸಿ ಬರೆಯಿರಿ.
೧. ಬಾಲು ಮತ್ತು ಸೇತು ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು.
Answerಬಾಲು ಮತ್ತು ಸೇತು ಒಂದೇ ವಠಾರದಲ್ಲಿ ವಾಸ ಮಾಡುತ್ತಿದ್ದರು.
೨. ನಮ್ಮ ಅಂಗಳದಲ್ಲಿ ಬಿದ್ದ ಹಣ್ಣು.
Answerನಮ್ಮ ಹಿತ್ತಿಲಿನಲ್ಲಿ ಬಿದ್ದ ಹಣ್ಣು.
೩. ಬಾಲುವಿನ ಕೈಯಿಂದ ಹಣ್ಣನ್ನು ಕದಿಯಲು ನೋಡಿದನು.
Answerಬಾಲುವಿನ ಕೈಯಿಂದ ಹಣ್ಣನ್ನು ಕಸಿಯಲು ನೋಡಿದನು.
೪. ಹಿರಿಯರು ಕೈಯಲ್ಲಿದ್ದ ಕಲ್ಲು ಬೀಸಿ ಇನ್ನೊಂದು ಹಣ್ಣು ಬೀಳಿಸಿದರು.
Answerಹಿರಿಯರು ಕೈಯಲ್ಲಿದ್ದ ಬೆತ್ತ ಬೀಸಿ ಇನ್ನೊಂದು ಹಣ್ಣು ಬೀಳಿಸಿದರು.
ಇ) ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಮಾವಿನ ಮರ ಎಲ್ಲಿತ್ತು?
Answerಮಾವಿನ ಮರ ಬಾಲುವಿನ ಮನೆಯ ಮುಂದಿನ ರಸ್ತೆಗೆ ತಾಗಿದಂತೆ ಇತ್ತು.
೨. ಹಣ್ಣು ನೋಡಿ ಯಾರಿಗೆ ಆಸೆಯಾಯಿತು?
Answerಹಣ್ಣು ನೋಡಿ ಸೇತುವಿಗೆ ಆಸೆಯಾಯಿತು.
೩. ಸೇತು ಮಾವಿನ ಹಣ್ಣು ನೋಡಿ ಏನು ಮಾಡಿದ?
Answerಸೇತು ಮಾವಿನ ಹಣ್ಣು ನೋಡಿ ಕಲ್ಲು ತೆಗೆದು ಒಗೆದನು.
೪. ಮಕ್ಕಳ ಜಗಳವನ್ನು ಯಾರು ನೋಡಿದರು?
Answerಮಕ್ಕಳ ಜಗಳವನ್ನು ಹಿರಿಯರೊಬ್ಬರು ನೋಡಿದರು.
ಈ) ಈ ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು?
೧. "ಏ ಬಾಲು, ಕೊಡೋ, ಅದು ನನ್ನ ಹಣ್ಣು"
ಯಾರು ಹೇಳಿದರು? .......................................................................................
Answerಸೇತು
ಯಾರಿಗೆ ಹೇಳಿದರು ? .......................................................................................
Answerಬಾಲು
೨. "ಹಣ್ಣು ಎಲ್ಲಿ ಬಿತ್ತು, ಹೇಳು?"
ಯಾರು ಹೇಳಿದರು? .......................................................................................
Answerಬಾಲು
ಯಾರಿಗೆ ಹೇಳಿದರು? .......................................................................................
Answerಸೇತು
೩. "ಕೊಡೋದಿಲ್ಲ, ಏನೋ ಮಾಡ್ತಿಯಾ?"
ಯಾರು ಹೇಳಿದರು? .......................................................................................
Answerಬಾಲು
ಯಾರಿಗೆ ಹೇಳಿದರು? .......................................................................................
Answerಸೇತು
೪. "ಯಾಕೆ ಮಕ್ಕಳೇ ಜಗಳ?"
ಯಾರು ಹೇಳಿದರು? .......................................................................................
Answerಹಿರಿಯರು
ಯಾರಿಗೆ ಹೇಳಿದರು? .......................................................................................
Answerಮಕ್ಕಳಿಗೆ
ಉ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಬಾಲು ಮತ್ತು ಸೇತು ನಡೆಸಿದ ಜಗಳವನ್ನು ವಿವರಿಸಿರಿ?
Answerಸೇತು ಕಲ್ಲಿನಿಂದ ಹಣ್ಣು ಬೀಳಿಸಿದನು. ಆ ಹಣ್ಣು ಬಾಲುವಿನ ಹಿತ್ತಿಲಲ್ಲಿ ಬಿದ್ದಾಗ ಇಬ್ಬರೂ ಅದು ತಮ್ಮದೆಂದು ಜಗಳವಾಡಿದರು. ಅವರು ಕೈಯಿಂದ ಕಸಿಯಲು ಪ್ರಯತ್ನಿಸಿ ನೆಲದ ಮೇಲೆ ಹೊರಳಾಡಿದರು.
೨. ಹಿರಿಯರು ಮಕ್ಕಳಿಗೆ ನೀಡಿದ ಹಿತವಚನವೇನು?
Answerಹಿರಿಯರು ಮಕ್ಕಳಿಗೆ, 'ನೀವು ಶಾಲೆಗೆ ಹೋಗುವ ಹುಡುಗರು. ಜಗಳ ಮಾಡಿ ಲಾಭವಿಲ್ಲ. ಹಣ್ಣನ್ನು ಹಂಚಿ ತಿಂದಿದ್ದರೆ ಸಂತೋಷವಾಗುತ್ತಿತ್ತು' ಎಂದು ಹಿತವಚನ ನೀಡಿದರು.
ಭಾಷಾಭ್ಯಾಸ
ಅ) ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
೧. ಆಸೆ x ................................
೨. ನಂಬಿಕೆ x ................................
೩. ಸಂದೇಹ x ................................
೪. ಅನುಕೂಲ x ................................
ಆ) ಈ ಪದಗಳನ್ನು ಬಳಸಿ ನಿಮ್ಮದೇ ಆದ ಸ್ವಂತ ವಾಕ್ಯ ರಚಿಸಿರಿ.
೧. ರಸ್ತೆ: ........................................................................................................................................
Model sentenceರಸ್ತೆ: ನಮ್ಮ ಮನೆಯ ಮುಂದೆ ಅಗಲವಾದ ರಸ್ತೆ ಇದೆ.
೨. ಹಿತ್ತಿಲು: ........................................................................................................................................
Model sentenceಹಿತ್ತಿಲು: ನಮ್ಮ ಹಿತ್ತಿಲಿನಲ್ಲಿ ಹೂವಿನ ಗಿಡಗಳಿವೆ.
೩. ವಿಪರೀತ: ........................................................................................................................................
Model sentenceವಿಪರೀತ: ಇಂದು ವಿಪರೀತ ಮಳೆ ಬರುತ್ತಿದೆ.
೪. ಬೆತ್ತ: ........................................................................................................................................
Model sentenceಬೆತ್ತ: ನಮ್ಮ ಶಾಲೆಯ ಶಿಕ್ಷಕರ ಕೈಯಲ್ಲಿ ಬೆತ್ತ ಇದೆ.
ಭಾಷಾ ಚಟುವಟಿಕೆ
ಅ) ಈ ಗಾದೆಗಳನ್ನು ಓದಿ ಅರ್ಥ ತಿಳಿಯಿರಿ.
೧. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ.
೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
೩. ತುಂಬಿದ ಕೊಡ ತುಳುಕುವುದಿಲ್ಲ.
೪. ಕೈಕೆಸರಾದರೆ ಬಾಯಿ ಮೊಸರು.
ಆ) ಈ ಗಾದೆಗಳನ್ನು ಪೂರ್ಣಗೊಳಿಸಿರಿ.
೧. ಹಾಸಿಗೆ ಇದ್ದಷ್ಟು ...................................................
೨. ಮೂರ್ತಿ ಚಿಕ್ಕದಾದರೂ ...................................................
೩. ಕೊಟ್ಟದ್ದು ತನಗೆ ...................................................
ಇ) ಈ ಒಗಟುಗಳನ್ನು ಗಮನಿಸಿರಿ.
೧. ಸುತ್ತೆಲ್ಲಾ ಬಿಳಿಗೋಡೆ, ಎತ್ತೆತ್ತ ನೋಡಿದರೂ ಬಾಗಿಲಿಲ್ಲ.
೨. ಅಪ್ಪನ ಹೊಳೆಯುವ ದುಡ್ಡು ಎಣಿಸೋಕಾಗಲ್ಲ, ಅಮ್ಮನ ನೀಲಿ ಸೀರೆ ಮಡಿಸೋಕಾಗಲ್ಲ.
೩. ಸುತ್ತ ಹಸಿರು ಕೋಟೆ, ಅದರೊಳಗೆ ಬಿಳಿ ಕೋಟೆ, ಅದರೊಳಗೆ ಕೆಂಪು ಕೋಟೆ, ಅದರೊಳಗೆ ಕಪ್ಪು ಸೈನಿಕರು.
(ಉತ್ತರ: ಮೊಟ್ಟೆ, ನಕ್ಷತ್ರ ಮತ್ತು ಆಕಾಶ, ಕಲ್ಲಂಗಡಿ ಹಣ್ಣು — answers printed upside down in the book)
ಈ) 'ಹಂಚಿ ತಿನ್ನೋಣ' ನಾಟಕವನ್ನು ಅಭಿನಯಿಸಿರಿ.
ಓದಿಗೆ ಮನ್ನಣೆ
* ನಿಮ್ಮ ಶಾಲಾ ಗ್ರಂಥಾಲಯದಲ್ಲಿರುವ ಮಕ್ಕಳ ನಾಟಕ ಪುಸ್ತಕ ಓದಿರಿ.
* ಗಾದೆ, ನುಡಿಮುತ್ತು, ಚುಟುಕು ಸಂಗ್ರಹಗಳನ್ನು ಓದಿ ತಿಳಿಯಿರಿ.
ಶುಭನುಡಿ
* ಸರಸವೇ ಜನನ ವಿರಸವೇ ಮರಣ ಸಮರಸವೇ ಜೀವನ.
* ತಪ್ಪನ್ನು ತಿದ್ದಿಕೊಳ್ಳುವುದು ಬುದ್ಧಿವಂತರಲ್ಲಿ ಮಾತ್ರ ಇರುವ ದೊಡ್ಡಗುಣ.
* ಕೂಡಿ ಬಾಳು ಹಂಚಿ ತಿನ್ನು.