ಗದ್ಯ (prose) · ಸಮಿತಿ ರಚನೆ (Committee-authored)
ಪಠ್ಯFull text
"ಐದು ಬೆರಳು ಬೇರೆಬೇರೆಯಾದರೆ ದುರ್ಬಲ; ಒಟ್ಟು ಸೇರಿದರೆ ಪ್ರಬಲ." — "Five fingers separated are weak; united, they are strong."
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಉದ್ಯಾನವನ | ud-yaa-na-va-na | ಕೈತೋಟ, ಉಪವನ (garden, park) |
| ಆಕರ್ಷಣೆ | aa-kar-sha-ne | ಸೆಳೆಯುವಂತಹದು, ಗಮನವನ್ನು ತನ್ನತ್ತ ಎಳೆಯುವಿಕೆ (attraction) |
| ಬೀಗು | bee-gu | ಉಬ್ಬು, ಲೊಡಿಕೊಳ್ಳು, ಉತ್ಸಾಹಗೊಳ್ಳು (boast, swell with pride) |
| ಕೊಬ್ಬರಿ | kob-ba-ri | ಒಣಗಿದ ಕಾಯಿ, ಗೋಟುಕಾಯಿ (dry coconut) |
| ಜಂಬ | jam-ba | ಗರ್ವ, ಹೆಮ್ಮೆ (pride, arrogance) |
| ರೆಂಬೆಕೊಂಬೆ | rem-be-kom-be | ಮರದ ಶಾಖೆಗಳು, ಟಿಸಿಲುಗಳು (branches) |
| ಉತ್ಪಾದಿಸು | ut-paa-di-su | ತಯಾರಿಸು, ಸಿದ್ಧಗೊಳಿಸು (produce, manufacture) |
| ಬಡಾಯಿಕೊಚ್ಚು | ba-daa-yi-koch-chu | ಜಂಬಪಡು, ಜಂಬದ ಮಾತನಾಡು (boast) |
| ಶ್ರೇಷ್ಠ | shresh-tha | ಉತ್ತಮವಾದುದು, ಪ್ರಧಾನ, ಮುಖ್ಯವಾದುದು (superior, great) |
| ಸಾಮರ್ಥ್ಯ | saa-mar-thya | ದಕ್ಷತೆ, ಯೋಗ್ಯತೆ (capability, ability) |
| ಉಪಯೋಗ | u-pa-yo-ga | ಪ್ರಯೋಜನ, ಬಳಕೆ (use, benefit) |
| ಸಮ್ಮತಿ | sam-ma-ti | ಒಪ್ಪಿಗೆ (agreement) |
| ಕೃತಜ್ಞ | kru-tag-na | ಮಾಡಿದ ಉಪಕಾರವನ್ನು ನೆನೆಯುವವನು (grateful) |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ) ಆವರಣದಲ್ಲಿ ಕೊಟ್ಟಿರುವ ಪದಗಳಲ್ಲಿ ಸರಿಯಾದುದನ್ನು ಆರಿಸಿ ಬಿಟ್ಟ ಸ್ಥಳ ತುಂಬಿರಿ.
೧. ನಾನು ನಿಮ್ಮೆಲ್ಲರ ................................ (ಕಿರಿಮಾವ, ಅಳಿಯ, ಹಿರಿಮಾವ)
೨. ನಾನು ಮಾನವರಿಗೆ ................................ (ಕಾಮಧೇನು, ಕಲ್ಪವೃಕ್ಷ, ಐರಾವತ)
೩. ನಾನು ನನ್ನ ರೆಂಬೆಕೊಂಬೆಗಳನ್ನು ಚಾಚಿ ಹೆಚ್ಚು ................................ ಕೊಡುತ್ತೇನೆ. (ಬೆಳಕು, ಕತ್ತಲು, ನೆರಳು)
೪. ನಾನು ವರ್ಷದ ................................ ತಿಂಗಳೂ ಹಣ್ಣು ಬಿಡುತ್ತೇನೆ. (ಮೂರು, ಹನ್ನೆರಡು, ಆರು)
ಆ) ಈ ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು?
೧. "ಎಲ್ಲರೂ ನನ್ನ ಹಣ್ಣಿಗಾಗಿ ಮುಗಿ ಬೀಳುತ್ತಾರೆ."
ಯಾರು ಹೇಳಿದರು? ........................................................................
Answerಮಾವಿನ ಮರ
ಯಾರಿಗೆ ಹೇಳಿದರು? ........................................................................
Answerಎಲ್ಲಾ ಗಿಡ-ಮರಗಳಿಗೆ
೨. "ನಾನು ಕೊಡುವ ಹಣ್ಣು ನಾಲ್ಕಾರು ಜನರಿಗೆ ಸಾಕು."
ಯಾರು ಹೇಳಿದರು? ........................................................................
Answerಹಲಸಿನ ಮರ
ಯಾರಿಗೆ ಹೇಳಿದರು? ........................................................................
Answerಮಾವಿನ ಮರಕ್ಕೆ
೩. "ಛೀ ಬಿಡು! ನಿನ್ನ ಹಣ್ಣೋ ಮುಟ್ಟಿದರೆ ಮುಳ್ಳು."
ಯಾರು ಹೇಳಿದರು? ........................................................................
Answerತೆಂಗಿನ ಮರ
ಯಾರಿಗೆ ಹೇಳಿದರು? ........................................................................
Answerಹಲಸಿನ ಮರಕ್ಕೆ
ಇ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
೧. ಉದ್ಯಾನವನದಲ್ಲಿನ ಗಿಡ-ಮರಗಳು ಏನೆಂದು ಮಾತಾಡಿಕೊಂಡವು?
Answerಉದ್ಯಾನವನದಲ್ಲಿನ ಗಿಡ-ಮರಗಳು ತಮ್ಮಿಂದಲೇ ಉದ್ಯಾನವನದ ಆಕರ್ಷಣೆ ಹೆಚ್ಚಿದೆ ಎಂದು ಮಾತಾಡಿಕೊಂಡವು.
೨. ಯಾವ ಹಣ್ಣನ್ನು ತಿಂದರೆ ಒಬ್ಬರ ಹೊಟ್ಟೆಯೂ ತುಂಬೊಲ್ಲ?
Answerಮಾವಿನ ಹಣ್ಣನ್ನು ತಿಂದರೆ ಒಬ್ಬರ ಹೊಟ್ಟೆಯೂ ತುಂಬೊಲ್ಲ.
೩. ಕೊಬ್ಬರಿ ಎಣ್ಣೆ ಯಾವುದರಿಂದ ಮಾಡುತ್ತಾರೆ?
Answerಕೊಬ್ಬರಿ ಎಣ್ಣೆಯನ್ನು ಕೊಬ್ಬರಿಯಿಂದ ಮಾಡುತ್ತಾರೆ.
೪. ಬಾಳೆಯ ಎಲೆ ಯಾವುದಕ್ಕೆ ಉಪಯೋಗ?
Answerಬಾಳೆಯ ಎಲೆಯನ್ನು ಊಟ ಮಾಡಲು ಉಪಯೋಗಿಸುತ್ತಾರೆ.
ಈ) ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ತೆಂಗಿನಮರ ಕಲ್ಪವೃಕ್ಷ ಹೇಗೆ?
Answerತೆಂಗಿನ ಮರವು ಎಳನೀರು, ಸಾಂಬಾರು, ಪೂಜೆ, ಕೊಬ್ಬರಿ, ಎಣ್ಣೆ, ಗರಿಗಳು, ಕಡ್ಡಿಗಳು, ಮರ ಮುಂತಾದವುಗಳನ್ನು ನೀಡುತ್ತದೆ. ಆದ್ದರಿಂದ ಅದು ಮಾನವರಿಗೆ ಕಲ್ಪವೃಕ್ಷವಾಗಿದೆ.
೨. ಬಾಳೆಯ ಉಪಯೋಗಗಳನ್ನು ಪಟ್ಟಿ ಮಾಡಿರಿ.
Answerಬಾಳೆಯ ಹಣ್ಣು ತಿನ್ನಲು, ಎಲೆಯಲ್ಲಿ ಊಟ ಮಾಡಲು, ಮೋತೆಯಿಂದ ಚಟ್ನಿ ಮಾಡಲು ಮತ್ತು ದಿಂಡನ್ನು ಉಪಯೋಗಿಸಲು ಬಳಸುತ್ತಾರೆ.
೩. ದಾಸವಾಳ, ಗಿಡ-ಮರಗಳಿಗೆ ಏನೆಂದು ಬುದ್ಧಿವಾದ ಹೇಳಿತು?
Answerದಾಸವಾಳವು, ನಮ್ಮಲ್ಲಿ ಯಾರೂ ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ, ಎಲ್ಲರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉಪಯೋಗಕಾರಿಗಳಾಗಿದ್ದೇವೆ ಎಂದು ಬುದ್ಧಿವಾದ ಹೇಳಿತು. ಜೊತೆಗೆ ಮನುಷ್ಯರಿಗೆ ಕೃತಜ್ಞರಾಗಿರಬೇಕೆಂದು ಹೇಳಿತು.
ಭಾಷಾಭ್ಯಾಸ
ಅ) ಕೊಟ್ಟಿರುವ ವಾಕ್ಯದಲ್ಲಿ ಗೆರೆ ಎಳೆದ ಪದದ ಸರಿಯಾದ ರೂಪ ಬರೆಯಿರಿ.
ಮಾದರಿ: ನಾನು ನಿಮ್ಮೆಲ್ಲರ <u>ಇರಿಮಾವ</u>.
ನಾನು ನಿಮ್ಮೆಲ್ಲರ ಹಿರಿಮಾವ.
೧. ಹಲಸಿನ ಹಣ್ಣು ತಿನ್ನಲು <u>ರುಛಿ</u>ಯಾಗಿರುತ್ತದೆ.
Answerರುಚಿ
೨. ನಾನು ಮನುಷ್ಯರಿಗೆ <u>ಕಲ್ಪವ್ರುಕ್ಷ</u>
Answerಕಲ್ಪವೃಕ್ಷ
೩. ಪ್ರಾಣಿಗಳ <u>ಹುಸಿರಾಟಕ್ಕೆ</u> <u>ಅಮ್ಲಜನಕ</u> ಬೇಕು.
Answerಉಸಿರಾಟಕ್ಕೆ, ಆಮ್ಲಜನಕ
೪. ನಾವು ಮನುಷ್ಯರಿಗೆ <u>ಕೃತಘ್ನ</u>ರಾಗಿರೋಣ.
Answerಕೃತಜ್ಞ
ಆ) ಕೊಟ್ಟಿರುವ ಸೂಚನೆಯನ್ನು ಅನುಸರಿಸಿ ಪದಗಳಲ್ಲಿರುವ ಮಧ್ಯದ ಅಕ್ಷರವನ್ನು ಬದಲಾಯಿಸಿ ಹೊಸ ಪದಗಳನ್ನು ಮಾಡಿರಿ.
ಮಾದರಿ: ಕಪಿಲ (ನೀರಲ್ಲಿ ಬೆಳೆಯುವ ಒಂದು ಹೂವು) <u>ಕಮಲ</u>
೧. ಹವಳ (ತಿನ್ನಲು ಕರಂ.... ಕರಂ) ........................................
Answerಹಪ್ಪಳ
೨. ಸತ್ತರೆ (ಸಿಹಿಯನ್ನು ಕೊಡುವುದು) ........................................
Answerಸಕ್ಕರೆ
೩. ಕರಡಿ (ಮುಖವನ್ನು ನೋಡಿಕೊಳ್ಳುತ್ತೇವೆ) ........................................
Answerಕನ್ನಡಿ
೪. ಕಟ್ಟಡ (ಕರ್ನಾಟಕದ ಭಾಷೆ) ........................................
Answerಕನ್ನಡ
ಭಾಷಾ ಚಟುವಟಿಕೆ
೧) ಹೂವುಗಳೆಲ್ಲ ಕಳೆದು ಹೋಗಿವೆ. ಕಳೆದು ಹೋದ ಹೂವುಗಳನ್ನು ಹುಡುಕಿ ಕೆಳಗೆ ಕೊಟ್ಟಿರುವ ಆಯತಗಳಲ್ಲಿ ಅವುಗಳ ಹೆಸರುಗಳನ್ನು ಬರೆಯುವಿರಾ?
(A letter grid to build flower names from:
ಸು ಎ ಕ ಣಿ ಗ ಲೆ ನಂ ಗು
ಗಂ ಕ್ಣ ಬಿ ಸೇ ಸ್ಟಿ ನಿ ದಿ ಲಾ
ಧ ಶ್ರೀ ರಿ ವಂ ಟಿ ಮ ಬ ಬಿ
ರಾ ತುಂ ಬೆ ತಿ ಕ ಲ್ಲಿ ಟ್ಟ ರಿ
ಜ ಗೆ ಕಾಂ ಗೆ ಯಾ ಗೆ ಲು ಡಾ
ವ ರ್ಯ ಪಿ ಪಾ ರಿ ಜಾ ತ ಸ
ಸೂ ಸಂ ಹೂ ಮೊ ಗ್ಗೆ ವು ಮ
ಕ ನಿ ಕಾಂ ಬ ರ ಷ್ಟೆ ಳ)
ಹುಡುಕಿದ ಹೂವುಗಳ ಹೆಸರನ್ನು ಇಲ್ಲಿ ಬರೆಯಿರಿ.
Answerಕಣಿಗಲೆ ತುಂಬೆ ಪಾರಿಜಾತ ಸೇವಂತಿಗೆ ಸಂಪಿಗೆ ಗುಲಾಬಿ ನಿದಿಲಾ
(A 6x2 grid with empty space to write the found words)
೧) ವಿವಿಧ ಮರಗಳ ಚಿತ್ರಗಳನ್ನು ಹೆಸರು ಸಹಿತ ಸಂಗ್ರಹಿಸಿ ಆಲ್ಬಂ ತಯಾರಿಸಿರಿ.
೨) ಈ ಪಾಠದ ಸಂಭಾಷಣೆಯನ್ನು ಶಿಕ್ಷಕರ ಸಹಾಯ ಪಡೆದು ಅಭಿನಯಿಸಿರಿ.
೩) ಕೆಳಗಿನ ಚಿತ್ರವನ್ನು ಗಮನಿಸಿ ಈ ಸಸ್ಯದಲ್ಲಿರುವ ಐದು ಎಲೆಗಳನ್ನು ಗುರುತಿಸಿ ಅವುಗಳ ಹೆಸರು ಬರೆಯಿರಿ.
(An illustration of a tree trunk with different types of leaves attached to it, with five empty lines to write their names).
ಓದಿಗೆ ಮನ್ನಣೆ
* ಒಗ್ಗಟ್ಟಿನಿಂದ ಸಾಧಿಸಿದ ಕೆಲಸಗಳ ಬಗ್ಗೆ ಕೇಳಿ ತಿಳಿಯಿರಿ.
* ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರ ಬಗ್ಗೆ ತಿಳಿಯಿರಿ.
* ಮಕ್ಕಳ ಸಾಹಸದ ಕಥೆಗಳ ಬಗ್ಗೆ ನಿಮ್ಮ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದಿರಿ.
ಶುಭನುಡಿ
* ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ.
* ಐದು ಬೆರಳು ಬೇರೆಬೇರೆಯಾದರೆ ದುರ್ಬಲ; ಒಟ್ಟು ಸೇರಿದರೆ ಪ್ರಬಲ.
* ನಾನು ಎನ್ನುವ ಅಹಂಕಾರ ಅಪಾಯಕಾರಿ.