CRECT Education

Class 5 Kannada Lesson 7: Festivals | KTBS Kannada Second Language – Learn the Story

Description

Learn the story of four friends and the festivals they celebrate — Deepavali, Ramzan, Christmas, Rakhi and more — from the Class 5 KTBS Kannada Second Language textbook.

ಗದ್ಯ (prose/dialogue) · ಸಂಪಾದಿತ (Edited/Compiled)

ಪಠ್ಯFull text

ಗೋಪಿ, ಗಂಗಾ, ಜಾಫರ್ ಮತ್ತು ಜಾನ್ ನಾಲ್ಕು ಜನ ಗೆಳೆಯರು. ಅವರದು ಒಂದೇ ವಠಾರದಲ್ಲಿ ವಾಸ. ಒಂದೇ ಶಾಲೆಯಲ್ಲಿ ಕಲಿಕೆ. ಅವರಿಗೆ ವಠಾರದ ದಾಸಪ್ಪ ತಾತನಿಂದ ಕಥೆ ಕೇಳುವುದೆಂದರೆ ಎಲ್ಲಿಲ್ಲದ ಪ್ರೀತಿ. ಅಂದು ಊರಿನ ಮನೆ ಮನೆಗಳಲ್ಲಿ ದೀಪಗಳ ಹಬ್ಬ. ಪಟಾಕಿ ಸಿಡಿತ, ಹೂಬಾಣದ ಚಿಕ್ಕೆಗಳು, ಸಂತೋಷವೇ ಬೀದಿಗೆ ಬಂದಿತ್ತು. ಅಂದು ಗೋಪಿ ತನ್ನ ಮನೆಯಲ್ಲಿ ತಾತ ಹಾಗೂ ತನ್ನ ಗೆಳೆಯರನ್ನು ಸ್ವಾಗತಿಸಿ ಉಪಚರಿಸಿದನು. ಎಲ್ಲರೂ ಊಟ ಮುಗಿಸಿ ವರಾಂಡದಲ್ಲಿ ಹೋಗಿ ಕುಳಿತರು. ಜಾನ್, ಜಾಫರ್, ಗಂಗಾ ಎಲ್ಲರೂ ತಾತನನ್ನು ಕಥೆ ಹೇಳುವಂತೆ ದುಂಬಾಲು ಬಿದ್ದರು. **ತಾತ** : ಇಂದು ಕಥೆ ಬೇಡ, ಹಬ್ಬಗಳ ಆಚರಣೆಯ ಹಿನ್ನೆಲೆ ತಿಳಿಯೋಣ (ಎಲ್ಲರೂ ಹೋ ಎಂದು ಕೂಗಿದರು) ಗೋಪಿ, ನಿಮ್ಮ ಮನೆಯಲ್ಲಿ ಬಹಳ ಸಡಗರವಿದೆ. ಕಾರಣ ಹೇಳುವೆಯಾ? **ಗೋಪಿ** : ಓ! ಆಗಲಿ ತಾತ, ಇಂದು ದೀಪಾವಳಿ ಹಬ್ಬ, ಮನೆ ಸಿಂಗಾರ ಮಾಡುತ್ತಾರೆ. ತಳಿರು ತೋರಣ ಕಟ್ಟುತ್ತಾರೆ. ಮನೆಯಲ್ಲಿ ಬಗೆ ಬಗೆಯ ಆಕಾರದ ದೀಪಗಳನ್ನೆಲ್ಲಾ ಹಚ್ಚುತ್ತಾರೆ. ಹೊಸ ಬಟ್ಟೆ ತೊಡುತ್ತಾರೆ. ಲಕ್ಷ್ಮೀ ಪೂಜೆ ಮಾಡಿ ಪಟಾಕಿಗಳನ್ನು ಸಿಡಿಸುತ್ತಾರೆ. ಗೋವಿನ ಪೂಜೆಯನ್ನು ಮಾಡಿ ಸಂತೋಷಪಡುತ್ತಾರೆ. ಈ ಹಬ್ಬಕ್ಕೆ ಬಂಧುಬಳಗದವರನ್ನು ಕರೆಯುತ್ತಾರೆ. **ತಾತ** : ದೀಪ ಏಕೆ ಹಚ್ಚುತ್ತಾರೆ? ವಿಚಾರಮಾಡಿ ಯಾರಾದರೂ ಹೇಳುವಿರಾ? **ಜಾನ್** : ದೀಪ ಅಂದರೆ ಬೆಳಕು, ಅದು ಜ್ಞಾನದ ಸಂಕೇತ. **ತಾತ** : ಬಹಳ ಚೆನ್ನಾಗಿ ತಿಳಿದುಕೊಂಡಿರುವೆ. ಜಾಫರ್ ನಿಮ್ಮ ಮನೆಯಲ್ಲಿ ಯಾವ ಹಬ್ಬ ಆಚರಿಸುತ್ತೀರಾ? **ಜಾಫರ್** : ನಮ್ಮ ಮನೆಯಲ್ಲಿ ರಮ್ಜಾನ್ ಅದ್ದೂರಿಯಾಗಿ ಆಚರಿಸುತ್ತಾರೆ. **ಗಂಗಾ** : ರಮ್ಜಾನ್ ಹೇಗೆ ಆಚರಿಸುತ್ತಾರೆ? **ಜಾಫರ್** : ರಮ್ಜಾನ್ ತಿಂಗಳು ಪವಿತ್ರ ತಿಂಗಳು. ಹಗಲು ಉಪವಾಸ ಮಾಡಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಸೂರ್ಯಾಸ್ತದ ನಂತರ ಊಟ ಮಾಡುತ್ತಾರೆ, ತಿಂಗಳ ನಂತರ ಚಂದ್ರ ಕಾಣಿಸಿದ ಮೇಲೆ ಈದ್_ಉಲ್_ಫಿತರ್ ಆಚರಿಸುತ್ತಾರೆ. ಅಂದು ಹೊಸ ಬಟ್ಟೆ, ಹೊಸ ಚಪ್ಪಲಿ ಕೊಂಡುಕೊಳ್ಳುತ್ತಾರೆ. ಸಿರ್‌ಕುರ್ಮಾ ಮಾಡುತ್ತಾರೆ. ಬಡವರಿಗೆ ದವಸ, ಧಾನ್ಯ, ಬಟ್ಟೆ, ಹಣ ದಾನ ಮಾಡುತ್ತಾರೆ. ಇದು ರಮ್ಜಾನ್ ಹಬ್ಬದ ವಿಶೇಷ. **ಗೋಪಿ** : ಬಹಳ ಚೆನ್ನಾಗಿದೆ. **ಜಾನ್** : ತಾತ, ನಾವೂ ಸಹ ಇಂತಹದೇ ಕ್ರಿಸ್‌ಮಸ್ ಹಬ್ಬ ಆಚರಿಸುತ್ತೇವೆ. ಕ್ರಿಸ್‌ಮಸ್ ಹಬ್ಬಕ್ಕೆ ಮನೆ ಸಿಂಗರಿಸುತ್ತೇವೆ. ಮರಗಳಿಗೆ ದೀಪಗಳನ್ನೆಲ್ಲಾ ಹಾಕಿ ಸಿಂಗಾರ ಮಾಡುತ್ತೇವೆ. ಅದು ಏಸುಕ್ರಿಸ್ತನ ಹುಟ್ಟುಹಬ್ಬ. ಕ್ರಿಸ್‌ಮಸ್‌ಗಾಗಿ ಸಾಂತಾಕ್ಲಾಜ್ ತಾತ ಬರುತ್ತಾನೆ. ಮಕ್ಕಳಿಗೆ ಸಿಹಿ ತಿನಿಸು ಕೊಡುತ್ತಾನೆ, ಹಾಡುತ್ತಾನೆ, ನಗಿಸುತ್ತಾನೆ, ಆಟ ಆಡಿಸುತ್ತಾನೆ. ಆತನು ಬಂದರೆ ಖುಷಿಯೋ ಖುಷಿ. **ತಾತ** : ಇನ್ನೊಂದು ಮಕ್ಕಳ ಹಬ್ಬವಿದೆ. ನೆನಪಿದೆಯಾ? **ಗಂಗಾ** : ಅದೇ ರಾಖಿ ಹಬ್ಬ, ಹುಡುಗಿಯರು ಅಣ್ಣ ತಮ್ಮಂದಿರುಗಳಿಗೆ ರಾಖಿಯನ್ನು ಕಟ್ಟುತ್ತಾರೆ. ಸಿಹಿ ತಿನಿಸುತ್ತಾರೆ. ಕಾಣಿಕೆಗಳನ್ನು ಪಡೆಯುತ್ತಾರೆ. ಎಲ್ಲೆಡೆ ಹುಡುಗ ಹುಡುಗಿಯರದ್ದೇ ಗದ್ದಲ, ಸಂಭ್ರಮ! **ಜಾಫರ್** : ರಾಖಿ ಏಕೆ ಕಟ್ಟುತ್ತಾರೆ ತಾತ? **ತಾತ** : ಅಣ್ಣ ತಂಗಿಯ ಬಾಂಧವ್ಯ ಗಟ್ಟಿಯಾಗಲಿ, ಅವರ ರಕ್ಷಣೆ ಮಾಡಲಿ ಎಂದು ಕಟ್ಟುತ್ತಾರೆ. ಮಕ್ಕಳೇ ನಾವು ಆಚರಿಸುವ ಇತರೆ ಹಬ್ಬಗಳು ಯಾವುವು? **ಗೋಪಿ** : ದಸರಾ, ಯುಗಾದಿ, ಸಂಕ್ರಾಂತಿ, ಗುಡ್‌ಫ್ರೈಡೆ, ಈದ್-ಮಿಲಾದ್ ಮುಂತಾದವು. **ತಾತ** : ಗೋಪಿ, ಭಾರತ ದೇಶದಲ್ಲಿ ಆಚರಿಸುವ ರಾಷ್ಟ್ರೀಯ ಹಬ್ಬಗಳು ಯಾವುವು? **ಗೋಪಿ** : ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಹಾಗೂ ಗಾಂಧೀಜಯಂತಿ. **ತಾತ** : ಜಾನ್, ನೀನು ಮಕ್ಕಳ ದಿನಾಚರಣೆ ಬಗ್ಗೆ ಹೇಳು. **ಜಾನ್** : .......................................................................................(ಹೇಳುವನು) **ತಾತ** : ಜಾಫರ್, ನೀನು ಗಣರಾಜ್ಯೋತ್ಸವದ ಬಗ್ಗೆ ಹೇಳು. **ಜಾಫರ್** : .......................................................................................(ಹೇಳುವನು). **ತಾತ** : ಗಂಗಾ, ನೀನು ಶಿಕ್ಷಕರ ದಿನದ ಮಹತ್ತ್ವದ ಬಗ್ಗೆ ಹೇಳು? **ಗಂಗಾ** : .......................................................................................(ಹೇಳುವಳು). **ತಾತ** : ಈ ದೇಶದ ಮುಖ್ಯ ಹಬ್ಬವಾದ ಸ್ವಾತಂತ್ರ್ಯ ದಿನೋತ್ಸವದ ಬಗ್ಗೆ ಎಲ್ಲರೂ ಒಂದೊಂದು ವಾಕ್ಯ ಹೇಳಿರಿ. **ಜಾನ್** : .......................................................................................(ಹೇಳುವನು). **ಜಾಫರ್** : .......................................................................................(ಹೇಳುವನು). **ಗೋಪಿ** : .......................................................................................(ಹೇಳುವನು). **ಗಂಗಾ** : .......................................................................................(ಹೇಳುವಳು). (ಅಧ್ಯಾಪಕರಿಗೆ ಸೂಚನೆ : ಖಾಲಿಬಿಟ್ಟ ಸ್ಥಳಗಳಲ್ಲಿ ಮಕ್ಕಳು ಹೇಳುವ ಉತ್ತರಗಳನ್ನು ಕೇಳಿ ಪಡೆಯಿರಿ. ಮಕ್ಕಳು ಉತ್ತರಿಸಲು ಉತ್ತೇಜಿಸಿರಿ.)

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. ಅದ್ದೂರಿ - ವೈಭವ

  2. ವಠಾರ - ಸಣ್ಣ ಮನೆಗಳಿರುವ ಆವರಣ.

  3. ಸಂಕೇತ - ಸೂಚಕ; ಗುರುತು.

  4. ಹಿನ್ನೆಲೆ - ಪೂರ್ವಾಪರ

  5. ದುಂಬಾಲು - ಬೆನ್ನುಹತ್ತು; ಹಿಂದೆ ಬೀಳು.

  6. ವರಾಂಡ - ಪಡಸಾಲೆ; ನಡುಮನೆ.

  7. ಸೂರ್ಯಾಸ್ತ - ಸೂರ್ಯ ಮುಳುಗುವುದು.

ಗಮನಿಸಿ-ತಿಳಿಯಿರಿ

  1. ತಳಿರು ತೋರಣ - ಮಾವಿನ ಎಲೆಗಳಿಂದ ಬಾಗಿಲಿಗೆ ಕಟ್ಟಲು ಮಾಡಿದ ಹಾರ.

  2. ಸಿರ್ ಕುರ್ಮಾ - ಶ್ಯಾವಿಗೆಯಿಂದ ಮಾಡಿದ ಸಿಹಿ ಪಾಯಸ.

  3. ರಾಷ್ಟ್ರೀಯ ಹಬ್ಬಗಳು - ರಾಷ್ಟ್ರದಾದ್ಯಂತ ಆಚರಿಸುವ ಹಬ್ಬಗಳು.

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಗೋಪಿ ಮನೆಯಲ್ಲಿ ಯಾರು ಯಾರು ಸೇರಿದ್ದರು?

    Answer

    ಗೋಪಿಯ ಮನೆಯಲ್ಲಿ ತಾತ, ಗೋಪಿ, ಗಂಗಾ, ಜಾಫರ್ ಮತ್ತು ಜಾನ್ ಸೇರಿದ್ದರು.

  2. ೨. ಮಕ್ಕಳಿಗೆ ದಾಸಪ್ಪ ತಾತನನ್ನು ಕಂಡರೆ ಬಲು ಪ್ರೀತಿ ಏಕೆ?

    Answer

    ಮಕ್ಕಳಿಗೆ ದಾಸಪ್ಪ ತಾತನಿಂದ ಕಥೆ ಕೇಳುವುದೆಂದರೆ ಎಲ್ಲಿಲ್ಲದ ಪ್ರೀತಿ.

  3. ೩. ದೀಪ ಯಾವುದರ ಸಂಕೇತ?

    Answer

    ದೀಪವು ಜ್ಞಾನದ ಸಂಕೇತವಾಗಿದೆ.

  4. ೪. ಸಾಂತಾಕ್ಲಾಜ್ ಮಕ್ಕಳಿಗೆ ಯಾವ ರೀತಿಯ ಖುಷಿ ನೀಡುತ್ತಾನೆ?

    Answer

    ಸಾಂತಾಕ್ಲಾಜ್ ಮಕ್ಕಳಿಗೆ ಸಿಹಿ ತಿನಿಸು ಕೊಟ್ಟು, ಹಾಡಿ, ನಗಿಸಿ, ಆಟ ಆಡಿಸಿ ಖುಷಿ ನೀಡುತ್ತಾನೆ.

  5. ೫. ಭಾರತದ ರಾಷ್ಟ್ರೀಯ ಹಬ್ಬಗಳು ಯಾವುವು?

    Answer

    ಭಾರತದ ರಾಷ್ಟ್ರೀಯ ಹಬ್ಬಗಳು ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಹಾಗೂ ಗಾಂಧೀಜಯಂತಿ.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ದೀಪಾವಳಿ ಹಬ್ಬವನ್ನು ಹೇಗೆ ಆಚರಿಸುತ್ತಾರೆ?

    Answer

    ದೀಪಾವಳಿ ಹಬ್ಬದಲ್ಲಿ ಮನೆಯನ್ನು ಸಿಂಗಾರ ಮಾಡಿ, ತಳಿರು ತೋರಣ ಕಟ್ಟುತ್ತಾರೆ. ಬಗೆ ಬಗೆಯ ದೀಪಗಳನ್ನು ಹಚ್ಚಿ, ಹೊಸ ಬಟ್ಟೆ ತೊಟ್ಟು ಲಕ್ಷ್ಮೀ ಪೂಜೆ ಮಾಡುತ್ತಾರೆ. ನಂತರ ಪಟಾಕಿ ಸಿಡಿಸಿ, ಗೋವಿನ ಪೂಜೆ ಮಾಡಿ ಸಂತೋಷಪಡುತ್ತಾರೆ.

  2. ೨. ರಮ್ಜಾನ್ ಹಬ್ಬದ ವಿಶೇಷತೆಗಳೇನು?

    Answer

    ರಮ್ಜಾನ್ ತಿಂಗಳಲ್ಲಿ ಹಗಲು ಉಪವಾಸ ಮಾಡಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ತಿಂಗಳ ನಂತರ ಚಂದ್ರ ಕಾಣಿಸಿದ ಮೇಲೆ ಈದ್-ಉಲ್-ಫಿತರ್ ಆಚರಿಸುತ್ತಾರೆ. ಅಂದು ಹೊಸ ಬಟ್ಟೆ ತೊಟ್ಟು, ಸಿರ್ಕುರ್ಮಾ ಮಾಡಿ, ಬಡವರಿಗೆ ದಾನ ಮಾಡುವುದು ಈ ಹಬ್ಬದ ವಿಶೇಷ.

  3. ೩. ಕ್ರಿಸ್‌ಮಸ್ ಹಬ್ಬದ ವಿಶೇಷತೆಗಳೇನು?

    Answer

    ಕ್ರಿಸ್ಮಸ್ ಹಬ್ಬವು ಏಸುಕ್ರಿಸ್ತನ ಹುಟ್ಟುಹಬ್ಬ. ಈ ಹಬ್ಬಕ್ಕೆ ಮನೆಯನ್ನು ಸಿಂಗರಿಸಿ, ಮರಗಳಿಗೆ ದೀಪ ಹಾಕಿ ಅಲಂಕರಿಸುತ್ತಾರೆ. ಸಾಂತಾಕ್ಲಾಜ್ ತಾತ ಬಂದು ಮಕ್ಕಳಿಗೆ ಸಿಹಿ ತಿನಿಸು ಕೊಟ್ಟು ಖುಷಿಪಡಿಸುತ್ತಾನೆ.

  4. ೪. ರಾಖಿ ಹಬ್ಬವನ್ನು ಹೇಗೆ ಆಚರಿಸಲಾಗುತ್ತದೆ?

    Answer

    ರಾಖಿ ಹಬ್ಬದಲ್ಲಿ ಹುಡುಗಿಯರು ತಮ್ಮ ಅಣ್ಣ ತಮ್ಮಂದಿರಿಗೆ ರಾಖಿಯನ್ನು ಕಟ್ಟುತ್ತಾರೆ. ನಂತರ ಸಿಹಿ ತಿನಿಸಿ, ಕಾಣಿಕೆಗಳನ್ನು ಪಡೆಯುತ್ತಾರೆ. ಅಣ್ಣ ತಂಗಿಯ ಬಾಂಧವ್ಯ ಗಟ್ಟಿಯಾಗಲಿ ಎಂಬುದು ಈ ಹಬ್ಬದ ಉದ್ದೇಶ.

ಇ) 'ಅ' ಪಟ್ಟಿಗೆ 'ಬ' ಪಟ್ಟಿಯನ್ನು ಹೊಂದಿಸಿ ಬರೆಯಿರಿ.

  1. 'ಅ' ಪಟ್ಟಿ — 'ಬ' ಪಟ್ಟಿ

  2. ಅ) ಯುಗಾದಿ ಆಚರಣೆ — ೧) ಆಗಸ್ಟ್ ೧೫ ...................................................

    Answer

    ಅ) ಯುಗಾದಿ ಆಚರಣೆ — ೫) ಚೈತ್ರ ಶುದ್ಧ ಪಾಡ್ಯ

  3. ಆ) ಗಣರಾಜ್ಯ ದಿನಾಚರಣೆ — ೨) ನವೆಂಬರ್ ೧೪ ...................................................

    Answer

    ಆ) ಗಣರಾಜ್ಯ ದಿನಾಚರಣೆ — ೪) ಜನವರಿ ೨೬

  4. ಇ) ಸ್ವಾತಂತ್ರ್ಯ ದಿನಾಚರಣೆ — ೩) ಡಿಸೆಂಬರ್ ೨೫ ...................................................

    Answer

    ಇ) ಸ್ವಾತಂತ್ರ್ಯ ದಿನಾಚರಣೆ — ೧) ಆಗಸ್ಟ್ ೧೫

  5. ಈ) ಮಕ್ಕಳ ದಿನಾಚರಣೆ — ೪) ಜನವರಿ ೨೬ ...................................................

    Answer

    ಈ) ಮಕ್ಕಳ ದಿನಾಚರಣೆ — ೨) ನವೆಂಬರ್ ೧೪

  6. ಉ) ಕ್ರಿಸ್‌ಮಸ್ ಆಚರಣೆ — ೫) ಚೈತ್ರ ಶುದ್ಧ ಪಾಡ್ಯ ...................................................

    Answer

    ಉ) ಕ್ರಿಸ್ಮಸ್ ಆಚರಣೆ — ೩) ಡಿಸೆಂಬರ್ ೨೫

ಈ) ಬಿಟ್ಟ ಸ್ಥಳಗಳನ್ನು ನೀಡಿರುವ ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.

  1. ೧. ದೀಪಾವಳಿ ಹಬ್ಬದಲ್ಲಿ ..........................................ಪೂಜೆ ಮಾಡುತ್ತಾರೆ.

    Answer

    ೧. ದೀಪಾವಳಿ ಹಬ್ಬದಲ್ಲಿ ಲಕ್ಷ್ಮೀ ಪೂಜೆ ಮಾಡುತ್ತಾರೆ.

  2. ಅ) ಗಂಗೆ ಆ) ಗೌರಿ ಇ) ಲಕ್ಷ್ಮೀ ಈ) ಸರಸ್ವತಿ

  3. ೨. ರಾಖಿ ಹಬ್ಬದ ಉದ್ದೇಶ .......................................... ಬಾಂಧವ್ಯ ಗಟ್ಟಿಗೊಳಿಸುವುದು.

    Answer

    ೨. ರಾಖಿ ಹಬ್ಬದ ಉದ್ದೇಶ ಅಣ್ಣ ತಂಗಿ ಬಾಂಧವ್ಯ ಗಟ್ಟಿಗೊಳಿಸುವುದು.

  4. ಅ) ಅಣ್ಣ ತಮ್ಮ ಆ) ಅಕ್ಕ ತಂಗಿ ಇ) ಹುಡುಗ ಹುಡುಗಿ ಈ) ಅಣ್ಣ ತಂಗಿ

  5. ೩. ಸಾಂತಾಕ್ಲಾಜ್ ತಾತ ಬರುವ ಹಬ್ಬ ..........................................

    Answer

    ೩. ಸಾಂತಾಕ್ಲಾಜ್ ತಾತ ಬರುವ ಹಬ್ಬ ಕ್ರಿಸ್ಮಸ್.

  6. ಅ) ಸಂಕ್ರಾಂತಿ ಆ) ಕ್ರಿಸ್‌ಮಸ್ ಇ) ಯುಗಾದಿ ಈ) ರಮ್ಜಾನ್

    Answer

    ಆ) ಕ್ರಿಸ್ಮಸ್

  7. ೪. ಈದ್-ಉಲ್-ಫಿತರ್ ಅನ್ನು ......................... ಕಾಣಿಸಿದ ನಂತರ ಆಚರಿಸುತ್ತಾರೆ.

    Answer

    ೪. ಈದ್-ಉಲ್-ಫಿತರ್ ಅನ್ನು ಚಂದ್ರ ಕಾಣಿಸಿದ ನಂತರ ಆಚರಿಸುತ್ತಾರೆ.

  8. ಅ) ಚಂದ್ರ ಆ) ಸೂರ್ಯ ಇ) ಮೋಡ ಈ) ನಕ್ಷತ್ರ

  9. ೫. ಶಿಕ್ಷಕರ ದಿನವನ್ನು .......................................... ಆಚರಿಸುತ್ತೇವೆ.

    Answer

    ೫. ಶಿಕ್ಷಕರ ದಿನವನ್ನು ಸೆಪ್ಟೆಂಬರ್ ೫ ರಂದು ಆಚರಿಸುತ್ತೇವೆ.

  10. ಅ) ಜನವರಿ ೨೬ ಆ) ಆಗಸ್ಟ್ ೧೫ ಇ) ನವೆಂಬರ್ ೧೪ ಈ) ಸೆಪ್ಟೆಂಬರ್ ೫

ಉ) ಈ ಕೆಳಗಿನ ಖಾಲಿ ಅಂಕಣಗಳನ್ನು ತುಂಬಿರಿ.

  1. (A table with three columns: 'ರಾಷ್ಟ್ರೀಯ ಹಬ್ಬಗಳು', 'ಆಚರಿಸುವ ದಿನ', 'ಅದರ ಮಹತ್ತ್ವ', and five rows to fill in for: 'ಗಣರಾಜ್ಯದ ಹಬ್ಬ', 'ಸ್ವಾತಂತ್ರ್ಯದ ಹಬ್ಬ', 'ಶಿಕ್ಷಕರ ದಿನಾಚರಣೆ', 'ಮಕ್ಕಳ ದಿನಾಚರಣೆ', 'ಗಾಂಧೀ ಜಯಂತಿ', 'ಡಾ|| ಅಂಬೇಡ್ಕರ ಜಯಂತಿ'.)

III. ಭಾಷಾಭ್ಯಾಸ :

ಅ) ಕೆಳಗೆ ಕೊಟ್ಟಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಉಪಯೋಗಿಸಿ ಬರೆಯಿರಿ.

  1. ೧. ತಳಿರು ತೋರಣ :....................................................................................

    Model sentence

    ತಳಿರು ತೋರಣ: ನಮ್ಮ ಮನೆಯ ಬಾಗಿಲಿಗೆ ಅಮ್ಮ ಸುಂದರವಾದ ತಳಿರು ತೋರಣ ಕಟ್ಟಿದಳು.

  2. ೨. ಸಂತೋಷ :....................................................................................

    Model sentence

    ಸಂತೋಷ: ಶಾಲೆಗೆ ರಜೆ ಸಿಕ್ಕಿದ್ದರಿಂದ ನನಗೆ ತುಂಬಾ ಸಂತೋಷವಾಯಿತು.

  3. ೩. ಸಿಂಗಾರ :....................................................................................

    Model sentence

    ಸಿಂಗಾರ: ನನ್ನ ತಂಗಿ ತನ್ನ ಗೊಂಬೆಯನ್ನು ಹೂವಿನಿಂದ ಸಿಂಗಾರ ಮಾಡಿದಳು.

  4. ೪. ದುಂಬಾಲು :....................................................................................

    Model sentence

    ದುಂಬಾಲು: ನಾನು ಅಪ್ಪನ ಹಿಂದೆ ಆಟಿಕೆ ಕೊಡಿಸಲು ದುಂಬಾಲು ಬಿದ್ದೆ.

  5. ೫. ಖುಷಿಯೋ ಖುಷಿ :....................................................................................

    Model sentence

    ಖುಷಿಯೋ ಖುಷಿ: ನನ್ನ ಹುಟ್ಟುಹಬ್ಬಕ್ಕೆ ಗೆಳೆಯರು ಬಂದಾಗ ನನಗೆ ಖುಷಿಯೋ ಖುಷಿಯಾಯಿತು.

ಆ) ಕೆಳಗೆ ಕೊಟ್ಟಿರುವ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ಸಂತೋಷ x ............... ೨. ಸೂರ್ಯಾಸ್ತ x ...............

    Answer

    ೧. ಸಂತೋಷ x ದುಃಖ ೨. ಸೂರ್ಯಾಸ್ತ x ಸೂರ್ಯೋದಯ

  2. ೩. ಹಗಲು x ............... ೪. ಸ್ವಾತಂತ್ರ್ಯ x ...............

    Answer

    ೩. ಹಗಲು x ರಾತ್ರಿ ೪. ಸ್ವಾತಂತ್ರ್ಯ x ಪರಾಧೀನತೆ

ಇ) ಕೆಳಗಿನ ವಾಕ್ಯಗಳಲ್ಲಿನ ಪದಗಳನ್ನು ಹಿಂದೆ ಮುಂದೆ ಮಾಡಲಾಗಿದೆ. ನೀವು ಅವುಗಳನ್ನು ಸರಿಯಾಗಿ ಜೋಡಿಸಿ ಅರ್ಥಪೂರ್ಣ ವಾಕ್ಯಗಳಾಗಿ ರಚಿಸಿರಿ.

  1. ೧. ದೀಪಗಳ ಊರಿನ ಅಂದು ಹಬ್ಬ ಮನೆಗಳಲ್ಲಿ ಮನೆ.

    Answer

    ಅಂದು ಊರಿನ ಮನೆ ಮನೆಗಳಲ್ಲಿ ದೀಪಗಳ ಹಬ್ಬ.

  2. ೨. ಹಗಲು ರಮ್ಜಾನ್ ಮಾಡಿ ದೇವರಿಗೆ ಉಪವಾಸ ಸಲ್ಲಿಸುತ್ತಾರೆ ತಿಂಗಳಲ್ಲಿ ಪ್ರಾರ್ಥನೆ.

    Answer

    ರಮ್ಜಾನ್ ತಿಂಗಳಲ್ಲಿ ಹಗಲು ಉಪವಾಸ ಮಾಡಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

  3. ೩. ಮನೆಯನ್ನು ಕ್ರಿಸ್‌ಮಸ್ ಸಿಂಗರಿಸುತ್ತಾರೆ ಹಬ್ಬಕ್ಕೆ.

    Answer

    ಕ್ರಿಸ್ಮಸ್ ಹಬ್ಬಕ್ಕೆ ಮನೆಯನ್ನು ಸಿಂಗರಿಸುತ್ತಾರೆ.

  4. ೪. ಕಟ್ಟುತ್ತಾರೆ ರಾಖಿಯನ್ನು ಅಣ್ಣ ಹುಡುಗಿಯರು ತಮ್ಮಂದಿರುಗಳಿಗೆ.

    Answer

    ಹುಡುಗಿಯರು ಅಣ್ಣ ತಮ್ಮಂದಿರುಗಳಿಗೆ ರಾಖಿಯನ್ನು ಕಟ್ಟುತ್ತಾರೆ.

ಪೂರಕ ಓದು :

  1. (ಈ ಹಾಡನ್ನು ಎಲ್ಲರೂ ಕೂಡಿ ಹಾಡಿ ನಲಿಯಿರಿ ಹಾಗೂ ಪ್ರಸ್ತುತ ಗದ್ಯದಲ್ಲಿನ ವಿಚಾರಗಳೊಂದಿಗೆ ಇರುವ ಸಾಮ್ಯತೆಯನ್ನು ಗಮನಿಸಿರಿ.)

ಹಬ್ಬಗಳು

  1. ವೈವಿಧ್ಯತೆಯಲಿ, ಏಕತೆಯ ಪ್ರತೀಕ ಭಾರತವು

  2. ಋತುಮಾನದ ಬದಲಾವಣೆಗಳು ವೈವಿಧ್ಯತೆಯು,

  3. ಪುರಾಣದ ಘಟನೆಗಳು ಹಬ್ಬಗಳ ಆಚರಣೆಯ ಸಂಕೇತ

  4. ಎಲ್ಲರೂ ಬೆರೆತು ಆಚರಿಸುವೆವು ಹಾರೈಸುತ.

  5. ಸುಗ್ಗಿಯ ಹಬ್ಬ ಸಂಕ್ರಾಂತಿ ಹಿಗ್ಗನು ತರುತಲಿ

  6. ರೈತರ ಪ್ರಗತಿಗೆ ಹಾದಿ ಮೂಡಿಸಲಿ

  7. ಉತ್ತಮ ಮಳೆಬೆಳೆಯಿಂದ ನಾಡು ಹಸಿರಾಗಲಿ

  8. ದವಸ ಧಾನ್ಯಗಳು ಸುಭಿಕ್ಷವಾಗಲಿ, ಮನೆಗಳಲಿ.

  9. ವಿಜಯವಾಗಲಿ ಎಲ್ಲರ ಕಾರ್ಯದಲಿ

  10. ವಿಜಯಲಕ್ಷ್ಮಿಯು ಒಲಿಯಲಿ ಎಲ್ಲರ ಬಾಳಿನಲಿ

  11. ವಿಜಯೋತ್ಸಾಹ ತುಂಬಲಿ ಎಲ್ಲರ ಹೃದಯದಲಿ

  12. ಸಂತೋಷಭರಿತ ನವರಾತ್ರಿಯ ಶುಭ ದಶಮಿಯಲಿ.

  13. ದೀಪಾವಳಿಯ ಜ್ಞಾನದ ಬೆಳಕಲಿ, ಅಜ್ಞಾನದ ಕತ್ತಲು ಮಾಯವಾಗಲಿ,

  14. ಎಲ್ಲರ ಮನ ಮನೆಯಲಿ ಸುಖ, ಶಾಂತಿ, ಸಂತೋಷ ತುಳುಕಲಿ

  15. ಮಿತಿಯಿಂ ಪಟಾಕಿ ಸಿಡಿಸಿ, ಶಬ್ದ, ವಾಯು ಮಾಲಿನ್ಯ ತಡೆದು, ಪರಿಸರ ಉಳಿಸಿ,

  16. ಭಾರತೀಯ ಹಬ್ಬಗಳೆಲ್ಲವೂ ಸಕಲರಿಗೂ ಶುಭ ತರಲಿ.

  17. – ಎನ್. ಶಂಕರರಾವ್

IV. ಚಟುವಟಿಕೆಗಳು :

  1. ೧. ನಿಮ್ಮ ಶಾಲೆಯಲ್ಲಿ ಆಚರಿಸಿದ ಶಿಕ್ಷಕರ ದಿನದ ಮಹತ್ತ್ವವನ್ನು ಬರೆಯಿರಿ.

  2. (Blank lines for the student to write.)

  3. ೨. ನಿಮ್ಮ ಮನೆಯಲ್ಲಿ ಆಚರಿಸುವ ಯಾವುದಾದರೊಂದು ಹಬ್ಬದ ವಿಶೇಷತೆಗಳನ್ನು ಬರೆಯಿರಿ.

  4. (Blank lines for the student to write.)

Interactive Lab