ಗದ್ಯ (prose) · ಸಮಿತಿ ರಚನೆ (Committee-authored)
ಪಠ್ಯFull text
"ದೇಶ ಸುತ್ತು ಅನುಭವ ಪಡೆ." — Travel the country and gain experience. (A reminder that real-world experience is the best teacher.)
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಸಂದೇಶ | — | ಸುದ್ದಿ; ವಿನಿಮಯ-ಒಂದಕ್ಕೆ ಬದಲಾಗಿ ಮತ್ತೊಂದನ್ನು ಕೊಡುವಿಕೆ; ಅದಲು ಬದಲು ಮಾಡಿಕೊಳ್ಳು |
| ಚೂಟಿ | — | ಚುರುಕು; ಲವಲವಿಕೆ |
| ವಿಶೇಷ | — | ಪ್ರತ್ಯೇಕವಾದ; ವಿಶಿಷ್ಟವಾದ |
| ಗಗನಚುಂಬಿ | — | ಆಕಾಶವನ್ನು ಮುಟ್ಟುವಂತಹದು; ಬಹಳ ಎತ್ತರವಾದುದು |
| ಹೆಬ್ಬಂಡೆ | — | ದೊಡ್ಡದಾದ ಕಲ್ಲು |
| ಇಕ್ಕಟ್ಟು | — | ಸಂದಿಗ್ಧ; ಕಿರಿದಾದ |
| ಶಿಖರ | — | ಮರ, ಬೆಟ್ಟಗಳ ತುದಿ; ದೇವಾಲಯಗಳ ಗೋಪುರ |
| ಉತ್ಪತ್ತಿ | — | ಸೃಷ್ಟಿ; ಉಂಟಾಗು; ಹುಟ್ಟು |
| ಭೂಗರ್ಭ ಶಾಸ್ತ್ರ : | — | ಭೂಮಿಯ ಪದರಗಳ ಮತ್ತು ಭೂಮಿಯ ಒಳಗಿರುವ ವಸ್ತುಗಳ ವಿಷಯವನ್ನು ಅಧ್ಯಯನ ಮಾಡುವ ಶಾಸ್ತ್ರ |
| ಗುಪ್ತ ಸಂಕೇತ: | — | 'ಇ-ಮೇಲ್' ಬಳಸುವ ಪ್ರತಿಯೊಬ್ಬರಿಗೂ ಅವರದ್ದೇ ಆದ ಗುಪ್ತ ಸಂಕೇತವಿರುತ್ತದೆ |
| ಚಾರಣ : | — | ಬೆಟ್ಟ ಗುಡ್ಡಗಳ ಕಡೆಗೆ ಸಾಹಸದ ನಡಿಗೆ |
| ದಂತಕಥೆ | — | ಬಾಯಿಯಿಂದ ಬಾಯಿಗೆ ಹರಡುವ ಕಲ್ಪಿತ ಕಥೆ |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಇಲ್ಲಿರುವ ಪದಗಳನ್ನು ಬಳಸಿ ಸೂಕ್ತವಾದುದನ್ನು ಬಿಟ್ಟ ಸ್ಥಳದಲ್ಲಿ ತುಂಬಿರಿ.
(ಪದ್ಮಿನಿ, ರಾಗಿಣಿ ಮತ್ತು ಜೆನಿಫರ್, ಗುಪ್ತ, ರಾಜು, ದಂತ.)
೧. ಅದೊಂದು ಭಾನುವಾರ ಎಲ್ಲರೂ ________ ವಿನ ಮನೆಗೆ ಬಂದರು.
Answerರಾಜು
೨. 'ಇ ಮೇಲ್' ತೆರೆಯಲು ________ ಸಂಕೇತದ ಅಗತ್ಯವಿದೆ.
Answerಗುಪ್ತ
೩. ವಿಶೇಷ ಪತ್ರ ತಯಾರಿಸಲು ಹೇಳಿದ್ದು ________ ಮೇಡಂ.
Answerಪದ್ಮಿನಿ
೪. ಯಾಣದ ಕುರಿತಾಗಿ ಒಂದು ________ ಕಥೆಯಿದೆ.
Answerದಂತ
೫. ಯಾಣದ ಚಿತ್ರಗಳನ್ನು ಅದರ ವಿವರಗಳನ್ನು ________________ ಓದಿದರು.
Answerರಾಗಿಣಿ ಮತ್ತು ಜೆನಿಫರ್
ಆ. ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ.
೧. ಕಾಗದ, ಪತ್ರ, ದೂರವಾಣಿ, ಓಲೆ.
೨. ಹೆಬ್ಬಂಡೆ, ಹಿರಿದು ಬಂಡೆ, ಕಿರಿದು ಬಂಡೆ, ದೊಡ್ಡ ಬಂಡೆ.
೩. ಸಂತೋಷ, ದುಃಖ, ಆನಂದ, ಸಂತಸ.
೪. ಸಂಪತ್ತು, ಆಪತ್ತು, ಧನ, ಐಶ್ವರ್ಯ.
ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿರಿ.
೧. ರಾಜುವಿನ ಮನೆಗೆ ಯಾರು ಯಾರು ಬಂದರು?
Answerರಾಜುವಿನ ಮನೆಗೆ ಸಲೀಂ, ರಾಗಿಣಿ, ಜೆನಿಫರ್ ಹಾಗೂ ಶಂಕರ ಬಂದರು.
೨. ಇ-ಅಂಚೆ ಎಂದರೇನು?
Answerಕಂಪ್ಯೂಟರ್ ಮೂಲಕ ಪತ್ರಗಳನ್ನು ಮತ್ತು ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಜನಪ್ರಿಯ ವಿಧಾನವೇ ಇ-ಅಂಚೆ.
೩. ಯಾಣದ ಯಾವ ಶಿಖರ ಉಕ್ಕಿನಕೋಟೆಯಂತಿದೆ?
Answerಭೈರವೇಶ್ವರ ಶಿಖರವು ಕಪ್ಪು ಕಲ್ಲಿನ ಉಕ್ಕಿನ ಕೋಟೆಯಂತಿದೆ.
೪. ಯಾಣದ ಕಲ್ಲು ಯಾವುದರಿಂದ ಉತ್ಪತ್ತಿಯಾಗಿದೆ?
Answerಭೂಗರ್ಭ ಶಾಸ್ತ್ರದ ಪ್ರಕಾರ ಯಾಣದ ಕಲ್ಲು ಅತಿ ಹೆಚ್ಚು ಖನಿಜ ಸಂಪತ್ತು ಮತ್ತು ಸುಣ್ಣದ ಕಲ್ಲಿನಿಂದ ಉತ್ಪತ್ತಿಯಾಗಿದೆ.
೫. ಯಾಣದಲ್ಲಿ ಯಾವ ದೇವರ ಉತ್ಸವ ನಡೆಯುತ್ತದೆ?
Answerಯಾಣದಲ್ಲಿ ಶಿವರಾತ್ರಿಯ ದಿನ ಭೈರವೇಶ್ವರ ಸ್ವಾಮಿಯ ಉತ್ಸವ ನಡೆಯುತ್ತದೆ.
ಈ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಸುಂದರ್ ಗುಪ್ತ ಸಂಕೇತವನ್ನು ರಾಜುವಿಗೆ ಮಾತ್ರ ಏಕೆ ಹೇಳಿದರು?
Answerಒಬ್ಬರ ಗುಪ್ತ ಸಂಕೇತ ಇನ್ನೊಬ್ಬರಿಗೆ ಗೊತ್ತಾಗಬಾರದು. ಗೊತ್ತಾದರೆ ಯಾರು ಬೇಕಾದರೂ ಪತ್ರ ಓದಬಹುದು; ಬೇರೆಯವರ ಪತ್ರವನ್ನು ನಾವು ಓದಬಾರದು. ಆದ್ದರಿಂದ ಸುಂದರ್ ಗುಪ್ತ ಸಂಕೇತವನ್ನು ರಾಜುವಿಗೆ ಮಾತ್ರ ಹೇಳಿದರು.
೨. ಯಾಣದ ಕುರಿತಾಗಿ ಇರುವ ಒಂದು ದಂತಕಥೆಯನ್ನು ಬರೆಯಿರಿ.
Answerಪುರಾಣ ಕಾಲದಲ್ಲಿ ಯಾಣದಲ್ಲಿ ಭಸ್ಮಾಸುರನೆಂಬ ರಾಕ್ಷಸ ವಾಸವಾಗಿದ್ದ. ಈತನ ಉಪಟಳವನ್ನು ಸಹಿಸಲು ಅಸಾಧ್ಯವಾದಾಗ ಶಿವನು ಆತನನ್ನು ಸುಟ್ಟು ಬೂದಿ ಮಾಡಿದ. ಈ ಬೂದಿಯಿಂದ ದೊಡ್ಡದಾದ ಶಿಖರ ಬೆಳೆಯಿತು ಎಂಬುದೇ ಆ ದಂತಕಥೆ.
೩. ಯಾವ ದೃಶ್ಯಗಳು ನೋಡುಗರನ್ನು ಚಕಿತಗೊಳಿಸುತ್ತವೆ?
Answerಯಾಣದ ಮೋಹಿನಿ ಶಿಖರ ಮತ್ತು ಕಪ್ಪು ಕಲ್ಲಿನ ಉಕ್ಕಿನ ಕೋಟೆಯಂತಿರುವ ಭೈರವೇಶ್ವರ ಶಿಖರದ ದೃಶ್ಯಗಳು ನೋಡುಗರನ್ನು ಚಕಿತಗೊಳಿಸುತ್ತವೆ. ಪ್ರಕೃತಿ ಮಾತೆಯೇ ಶಿಲ್ಪಿಯ ರೂಪ ತಾಳಿ ಈ ಆಕೃತಿಗಳನ್ನು ಕೆತ್ತಿದಳೇ ಎಂಬಷ್ಟರ ಮಟ್ಟಿಗೆ ಅವು ಅದ್ಭುತವಾಗಿವೆ.
ಉ. ಸಂಧಿ ಬಿಡಿಸಿ. ಸಂಧಿಯನ್ನು ಹೆಸರಿಸಿರಿ.
ಭಸ್ಮಾಸುರ, ಭೈರವೇಶ್ವರ, ಏಕೈಕ, ಇತ್ಯಾದಿ, ಸೂರ್ಯೋದಯ
Answerಭಸ್ಮ + ಅಸುರ = ಭಸ್ಮಾಸುರ, ಸವರ್ಣದೀರ್ಘ ಸಂಧಿ