ಗದ್ಯ (prose) · Committee-authored
ಪಠ್ಯFull text
"ರೈತ ನಮ್ಮೆಲ್ಲರ ಅನ್ನದಾತ" — "The farmer is the food-giver for all of us." (a subheading in the book, right after the vocabulary section)
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಧನ್ಯವಾದ | dhan-ya-vaa-da | thanks |
| ಚರ್ಚಿಸು | char-chi-su | discuss |
| ವಿಶಾಲ | vi-shaa-la | vast |
| ಪ್ರಕೃತಿ | pra-kru-ti | nature |
| ಹಕ್ಕು | hak-ku | right |
| ಬಹುಶಃ | ba-hu-shah | perhaps |
ಟಿಪ್ಪಣಿnotes
- ಮಲೆನಾಡು — the Malnad, the Western-Ghats-adjacent region of Karnataka
- ನೇಗಿಲು — plough
- ಅಂತರ್ಜಲ — groundwater
- ಹೊಂಡ — a pit/pond that fills with water
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ
1. ಮಕ್ಕಳು ಎಲ್ಲಿಗೆ ಹೊರ ಸಂಚಾರ ಹೊರಟರು?
Answerಮಕ್ಕಳು ಕಿಶೋರನ ಅಜ್ಜಿಯ ತೋಟಕ್ಕೆ ಹೊರ ಸಂಚಾರ ಹೊರಟರು.
2. ಸಾಮಾನ್ಯವಾಗಿ ಹೊಲವನ್ನು ಯಾವುದರಿಂದ ಉಳುತ್ತಾರೆ?
Answerಈಗ ಹೊಲವನ್ನು ಹೊಸ ಸಾಧನಗಳಿಂದ ಉಳುತ್ತಾರೆ.
3. ಎರೆಗೊಬ್ಬರವನ್ನು ಯಾವುದರಿಂದ ತಯಾರಿಸುತ್ತಾರೆ?
Answerಎರೆಹುಳುವಿನ ಸಹಾಯದಿಂದ ಎರೆಗೊಬ್ಬರವನ್ನು ತಯಾರಿಸುತ್ತಾರೆ.
4. ತೋಟದಲ್ಲಿ ಹೆಚ್ಚಾಗಿ ಯಾವ ಗೊಬ್ಬರವನ್ನು ಬಳಸುತ್ತಿದ್ದರು?
Answerಅಜ್ಜಿಯ ತೋಟದಲ್ಲಿ ಹೆಚ್ಚಾಗಿ ಸಾವಯವ ಗೊಬ್ಬರವನ್ನು ಬಳಸುತ್ತಿದ್ದರು.
5. ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಯಾವ ಯಂತ್ರವನ್ನು ನೋಡಿದಳು?
Answerಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಗದ್ದೆ ಉಳುವ ಯಂತ್ರವನ್ನು ನೋಡಿದಳು.
ಆ. ಎರಡು–ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ
1. ಅಜ್ಜಿಯ ತೋಟದಲ್ಲಿ ಯಾವ ಯಾವ ಗಿಡಗಳಿದ್ದವು?
Answerಅಜ್ಜಿಯ ತೋಟದಲ್ಲಿ ಬಾಳೆ, ಅಡಿಕೆ, ತೆಂಗು, ಕಾಫುಮೇಣಸು, ಕಾಫಿ, ಏಲಕ್ಕಿ ಮೊದಲಾದ ಗಿಡಗಳಿದ್ದವು. ಜೊತೆಗೆ ಗೇರು ಮರಗಳು ಮತ್ತು ಅಡಿಕೆ ತೋಟವೂ ಇತ್ತು.
2. ಉಳುಮೆಯ ಬಗ್ಗೆ ಗುರುಗಳು ನೀಡಿದ ವಿವರಣೆ ಏನು?
Answerಗುರುಗಳು ತಿಳಿಸಿದರು: ಹಿಂದೆ ರೈತರು ನೇಗಿಲು, ನೊಗ, ಎತ್ತು, ಕೋಣಗಳಿಂದ ಹೊಲ ಉಳುತ್ತಿದ್ದರು. ಆದರೆ ಈಗ ಹೊಸ ಸಾಧನಗಳು ಬಂದಿವೆ.
3. ಇಂಗು ಗುಂಡಿಯ ಪ್ರಯೋಜನಗಳೇನು?
Answerಇಂಗು ಗುಂಡಿಗಳ ಮೂಲಕ ಮಳೆಯ ನೀರನ್ನು ಇಂಗಿಸುತ್ತೇವೆ. ಇದು ಅಂತರ್ಜಲವನ್ನು ಹೆಚ್ಚಿಸುತ್ತದೆ ಮತ್ತು ಬಾವಿಯಲ್ಲಿ ನೀರು ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.
ಇ. ವಾಕ್ಯದಲ್ಲಿ ಬಿಟ್ಟಿರುವ ಸ್ಥಳಕ್ಕೆ ಸರಿಯಾದ ಪದ ತುಂಬಿ
1. ಕಿಶೋರನ ಅಜ್ಜಿಯ ಮನೆ _____ ತಪ್ಪಲಿನಲ್ಲಿದೆ.
Answerಕಿಶೋರನ ಅಜ್ಜಿಯ ಮನೆ ಬೆಟ್ಟದ ತಪ್ಪಲಿನಲ್ಲಿದೆ.
2. ಮನೆಯ ಹಿಂದಿನ ಗುಡ್ಡದಲ್ಲಿ _____ ತೋಟಗಳಿವೆ.
Answerಮನೆಯ ಹಿಂದಿನ ಗುಡ್ಡದಲ್ಲಿ ಗೇರು ತೋಟಗಳಿವೆ.
3. ಮಳೆಯ ನೀರನ್ನು _____ ಮೂಲಕ ಇಂಗಿಸುತ್ತೇವೆ.
Answerಮಳೆಯ ನೀರನ್ನು ಇಂಗು ಗುಂಡಿಗಳ ಮೂಲಕ ಇಂಗಿಸುತ್ತೇವೆ.
4. ಅಜ್ಜಿ ಎಲ್ಲರಿಗೂ _____ ಹಂಚಿದರು.
Answerಅಜ್ಜಿ ಎಲ್ಲರಿಗೂ ಗೋಡಂಬಿ ಹಂಚಿದರು.
**ಈ. ಹೊಂದಿಸಿ ಬರೆಯಿರಿ** (ಅ / ಆ)
1. ಎರೆಹುಳ — ಹೀರೇಕಾಯಿ
Answer1. ಎರೆಹುಳ — ರೈತನಮಿತ್ರ
2. ಕೊಕೊ — ಭತ್ತ
Answer2. ಕೊಕೊ — ಚಾಕಲೇಟು
3. ತೆನೆ — ಚಾಕಲೇಟು
Answer3. ತೆನೆ — ಭತ್ತ
4. ಮಳೆಕೊಯ್ಲು — ರೈತನಮಿತ್ರ
Answer4. ಮಳೆಕೊಯ್ಲು — ಅಂತರ್ಜಲ
5. ಹಟ್ಟಿಗೊಬ್ಬರ — ಅಂತರ್ಜಲ
Answer5. ಹಟ್ಟಿಗೊಬ್ಬರ — ಸಾವಯವ ಗೊಬ್ಬರ
— ಸಾವಯವ ಗೊಬ್ಬರ
ಭಾಷಾ ಚಟುವಟಿಕೆ
ಅ. ಕೊಟ್ಟಿರುವ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ: ಕಿರುಚು, ಹೊರಸಂಚಾರ, ಆರ್ಯೆಕೆ, ಹುಲುಸಾಗಿ.
Answerಕಿರುಚು: ನಾನು ಆಟದಲ್ಲಿ ಕಿರುಚಿದೆ. ಹೊರಸಂಚಾರ: ನಮ್ಮ ಶಾಲೆಯ ಮಕ್ಕಳು ಹೊರಸಂಚಾರಕ್ಕೆ ಹೋದರು. ಆರ್ಯೆಕೆ: ಅಮ್ಮ ಮನೆಯ ಆರೈಕೆ ಮಾಡುತ್ತಾಳೆ. ಹುಲುಸಾಗಿ: ತೋಟದಲ್ಲಿ ಹೂವುಗಳು ಹುಲುಸಾಗಿ ಬೆಳೆದಿವೆ.
ಆ. ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ:
1. ತೆಂಗು, ಅಡಿಕೆ, ಬಾಳೆ, ಭತ್ತ
Answerತೆಂಗು: ನಮ್ಮ ಮನೆ ಹಿಂದೆ ತೆಂಗಿನ ಮರವಿದೆ. ಅಡಿಕೆ: ಅಡಿಕೆ ತಿನ್ನುವುದು ಒಳ್ಳೆಯದಲ್ಲ. ಬಾಳೆ: ನಾನು ಬಾಳೆ ಹಣ್ಣು ತಿನ್ನುತ್ತೇನೆ. ಭತ್ತ: ರೈತರು ಭತ್ತ ಬೆಳೆಯುತ್ತಾರೆ.
2. ಮೊಲ, ಹಂದಿ, ಮುಂಗುಸಿ, ಚಿಟ್ಟೆ
Answerಮೊಲ: ಮೊಲವು ಚೆನ್ನಾಗಿ ಓಡುತ್ತದೆ. ಹಂದಿ: ಹಂದಿ ಮಣ್ಣಿನಲ್ಲಿ ಆಡುತ್ತದೆ. ಮುಂಗುಸಿ: ಮುಂಗುಸಿ ಹಾವನ್ನು ಹಿಡಿಯುತ್ತದೆ. ಚಿಟ್ಟೆ: ಚಿಟ್ಟೆ ಹೂವಿನ ಮೇಲೆ ಕುಳಿತಿತ್ತು.
3. ಸೀಬೇಕಾಯಿ, ಸಪೋಟ, ಅನಾನಸು, ಕೊಕೊ
Answerಸೀಬೇಕಾಯಿ: ಸೀಬೇಕಾಯಿ ತಿನ್ನಲು ರುಚಿಯಾಗಿದೆ. ಸಪೋಟ: ಸಪೋಟ ಹಣ್ಣು ಸಿಹಿಯಾಗಿದೆ. ಅನಾನಸು: ಅನಾನಸು ಹಣ್ಣು ಹುಳಿಯಾಗಿದೆ. ಕೊಕೊ: ನಮ್ಮೂರಲ್ಲಿ ಕೊಕೊ ಮರಗಳಿವೆ.
ಇ. ಕೆಳಗಿನವುಗಳನ್ನು ಕೂಡಿಸಿ ಬರೆಯಿರಿ — ಉದಾ: ಒಂದು + ಆದ = ಒಂದಾದ.
ಇಲ್ಲಿ + ಒಂದು; ಹೇರಳ + ಆಗಿ; ಹದ + ಆಗಿತ್ತು
Answerಇಲ್ಲಿ + ಒಂದು = ಇಲ್ಲೊಂದು ಹೇರಳ + ಆಗಿ = ಹೇರಳವಾಗಿ ಹದ + ಆಗಿತ್ತು = ಹದವಾಗಿತ್ತು
ಬಳಕೆ ಚಟುವಟಿಕೆ
ಅ. ಕೆಳಗಿನ ಮನೆಗಳಿಂದ ಅಕ್ಷರಗಳನ್ನು ಆರಿಸಿ ನೀರಿನ ಮೂಲಗಳನ್ನು ಕಂಡುಹಿಡಿದು ಬರೆಯಿರಿ (letter-grid
word-search puzzle for water sources).
ಆ. ನಿಮ್ಮ ಶಾಲಾ ಕೈತೋಟದಲ್ಲಿ ಏನೇನು ಬೆಳೆಯಬೇಕು? ಹೇಗೆ ಬೆಳೆಸಬೇಕು? ಎಂದು ತರಗತಿಯಲ್ಲಿ ಚರ್ಚಿಸಿ.
ನಿಮ್ಮ ತೀರ್ಮಾನವನ್ನು ಕೆಳಗೆ ಬರೆಯಿರಿ.
ಇ. ನಿಮ್ಮ ಶಾಲೆಯಲ್ಲಿ ರೈತನೊಬ್ಬನ್ನು ಸನ್ಮಾನಿಸುವ ಸಮಾರಂಭದ ಮುಖ್ಯ ಅತಿಥಿಯಾಗಿ ನೀನು ಮಾಡುವ
ಭಾಷಣವನ್ನು ಇಲ್ಲಿ ಬರೆ. ಅನಂತರ ತರಗತಿಯಲ್ಲಿ ಶಿಕ್ಷಕರೆದುರು ಭಾಷಣ ಮಾಡು.
ಈ. ಗೆಳೆಯರೊಂದಿಗೆ ಚರ್ಚಿಸಿ ಉತ್ತರಿಸಿರಿ:
1. ನಿನ್ನ ಶಾಲೆಗೆ ಜಮೀನು ಕೊಟ್ಟರೆ ನೀನೇನು ಮಾಡುವಿ?
2. ರೈತರು ಕೈ ಕೆಸರಾಗುತ್ತದೆ ಎಂದು ಸುಮ್ಮನೆ ಕುಳಿತರೆ ಏನಾಗಬಹುದು?
ಉ. ಆಟ ಆಡೋಣ ಬಾ (ಅನುಕರಣೆ ಆಟ) — a teacher-led animal-sound imitation game: crow ("ಕಾ! ಕಾ!"
flapping and jumping like scared birds), frog croaking ("ಕರಕರ ವಟವಟ"), and an owl-call guessing
round.
ಊ. ಒಗಟು ಓದಿ ಆನಂದಿಸಿ (four riddles):
1. ಅಕ್ಕ ಅಕ್ಕ ಗಿಡ ನೋಡು, ಗಿಡದ ಮೇಲೆ ಕಾಯಿ ನೋಡು. ಕಾಯಿ ತಿಂದೋರ ಬಾಯಿ ನೋಡು.
2. ಅಡ್ಡ ಮರದಲ್ಲಿ ಬೂದ ಕುಳಿತಿದ್ದಾನೆ.
3. ಹಸಿರು ಗಿಡದಲ್ಲಿ ಮೊಸರು ಚಿಲ್ಲಿದೆ.
4. ಮಣ್ಣು ಕೊರೆದೆ ಕಲ್ಲು ಸಿಕ್ಕಿತು, ಕಲ್ಲು ಕೊರೆದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಕೊರೆದೆ ನೀರು ಸಿಕ್ಕಿತು.
(ಉತ್ತರಗಳು: ಹಲಸಿನ ಹಣ್ಣು, ತೆಂಗಿನಕಾಯಿ, ಮಲ್ಲಿಗೆ, ಏಲಕ್ಕಿ)
ಋ. ಈ ಹಾಡನ್ನು ರಾಗವಾಗಿ ಹಾಡಲು ಪ್ರಯತ್ನಿಸಿ (bonus poem, printed as an extension activity at
the end of this lesson):
```
ಬೀಜವನ್ನು ಬಿತ್ತುವ
ಗಿಡಗಳನ್ನು ಬೆಳೆಸುವ ।
ಸುಜಲಭರಿತ ದೇಶವನ್ನು
ಸುಫಲವಾಗಿ ಮಾಡುವ ॥
ತೆಂಗು ಕಂಗು ಸಸಿಗಳ
ತಾಳೆ ಬಾಳೆ ಮರಗಳ ।
ಭಂಗವಿಲ್ಲದಂತೆ ಬೆಳೆಸಿ
ಅಧಿಕ ಫಲವ ಪಡೆಯುವ ॥
ಮಾವು ಹಲಸು ನೇರಳೆ
ಲಿಂಬೆ ದ್ರಾಕ್ಷಿ ಪೇರಳೆ ।
ಸೇಬು ಚಿಕ್ಕು ಕಿತ್ತಳೆಗಳ
ನಾವು ನಾವೇ ಬೆಳೆಸುವ ॥
ಬದನೆ ಸೌತೆ ಕುಂಬಳ
ಹೀರೆಕಾಯಿ ಪಡುವಲ ।
ಮುದದಿ ನಾವು ಗೇಣಸು ಮೇಣಸು
ಹರಿವೆಗಳನು ಬೆಳೆಸುವ ॥
ವಿವಿಧ ಧಾನ್ಯ ಬೀಜಗಳ
ಕಾಯಿ ಪಲ್ಲೆ ಸಸಿಗಳ ।
ವಿವಿಧ ರೀತಿಯಲ್ಲಿ ಬೆಳೆಸಿ
ಅಧಿಕ ಫಲವ ಪಡೆಯುವ ॥
ಅಧಿಕವಾಗಿ ಬಿತ್ತುವ
ಅಧಿಕವಾಗಿ ಬೆಳೆಸುವ ।
ಅಧಿಕ ಫಲವ ಪಡೆಯುತೆಲ್ಲ
ತೃಪ್ತಿಯಿಂದ ಬಾಳುವ ॥
– ಅಮ್ಮೆಂಬಳ ಅನಂತಯ್ಯ ನಾವಡ
```