CRECT Education

Lesson 4: ಮಳೆ (Rain) - A Kannada Poem

Description

Learn the beautiful Kannada poem 'ಮಳೆ' by ಬಳಕಳ ಸೀತಾರಾಮ ಭಟ್ಟ, line by line, with vocabulary and comprehension.

ಪದ್ಯ (poem) · ಬಳಕಳ ಸೀತಾರಾಮ ಭಟ್ಟ

ಪಠ್ಯFull text

ಬಿಸಿಲ ಝುಳಕೆ ಕಡಲ ನೀರು ಆವಿಯಾಯಿತು । ಆವಿಯಾಗಿ ನೆಲದ ಕಡೆಗೆ ಬೀಸಿ ಬಂದಿತು ॥೧॥ ನೆಲದ ಮೇಲೆ ಗುಡ್ಡಬೆಟ್ಟ ಅಡ್ಡವಾಯಿತು । ತಡೆದು ನಿಂತ ಮೋಡವೆಲ್ಲ ಮೇಲಕೇರಿತು ॥೨॥ ಫಳಿಗೆಯೊಳಗೆ ಬಾನು ತುಂಬ ಮೋಡ ಕವಿಯಿತು । ಮಿಂಚು ಮಿಂಚಿ ಜಗವ ಬೆಳಗಿ ಗುಡುಗು ಗುಡುಗಿತು ॥೩॥ ಮೋಡ ಮೇಲಕೇರಿದಾಗ ತಂಪು ತಗುಲಿತು । ಆವಿ ತಣಿದು ಭಾರವಾಗಿ ಕುಸಿಯತೊಡಗಿತು ॥೪॥ ಮುತ್ತಿನಂಥ ಮಳೆಯ ನೀರು ಕೆಳಗೆ ಸುರಿಯಿತು । ಕೆರೆಯು ತೊರೆಯು ಹಳ್ಳ ಹೊಳೆಯು ತುಂಬಿ ಹರಿಯಿತು ॥೫॥ – ಬಳಕಳ ಸೀತಾರಾಮ ಭಟ್ಟ

"ಅಂತರ್ಜಲ ಸಂರಕ್ಷಿಸು – ಜೀವಕುಲ ಉಳಿಸು" — "Protect groundwater — save life on earth." (printed under the poem; a nice tie-in if the affirmation beat leans environmental)

ಪದಗಳ ಅರ್ಥword meanings

KannadaPronunciationMeaning
ಕಡಲುka-da-luocean, sea
ಅಡ್ಡad-dahorizontal, across
ಬೆಳಗುbe-la-gushine
ಕವಿಯುತ್ತುka-vi-yut-tuenvelops, spreads over
ನೆಲne-laground, land
ಜಗja-gaworld
ಸುರಿsu-ripour
ತಣಿದುta-ni-ducooled

ಟಿಪ್ಪಣಿnotes

  • ಮಿಂಚು — lightning, brighter even than a bird's flight across the sky
  • ಫಳಿಗೆ — a fleeting moment (a few seconds)

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ

  1. 1. ಬಿಸಿಲ ಝುಳಕೆ ನೀರು ಏನಾಯಿತು?

    Answer

    ಬಿಸಿಲ ಝುಳಕೆ ನೀರು ಆವಿಯಾಯಿತು.

  2. 2. ಮಳೆ ಸುರಿದದ್ದರಿಂದ ಏನೇನು ತುಂಬಿ ಹರಿಯಿತು?

    Answer

    ಮಳೆ ಸುರಿದದ್ದರಿಂದ ಕೆರೆ, ತೊರೆ, ಹಳ್ಳ, ಹೊಳೆ ತುಂಬಿ ಹರಿಯಿತು.

  3. 3. ಮೋಡ ಯಾವಾಗ ಭಾರವಾಯಿತು?

    Answer

    ಮೋಡ ಮೇಲಕೇರಿದಾಗ ತಂಪು ತಗುಲಿ ಆವಿ ತಣಿದು ಭಾರವಾಯಿತು.

ಆ. ಕೊಟ್ಟಿರುವ ಪದಗಳಲ್ಲಿ ಸರಿಯಾದದ್ದನ್ನು ಆಯ್ದು ಬಿಟ್ಟ ಸ್ಥಳದಲ್ಲಿ ಬರೆಯಿರಿ

  1. (ತಂಪು, ಮಳೆಯ, ಗುಡ್ಡಬೆಟ್ಟ, ಮೋಡ, ಗುಡುಗು)

  2. 1. ಮುತ್ತಿನಂಥ _____ ನೀರು ಕೆಳಗೆ ಸುರಿಯಿತು.

    Answer

    ಮುತ್ತಿನಂಥ ಮಳೆಯ ನೀರು ಕೆಳಗೆ ಸುರಿಯಿತು.

  3. 2. ನೆಲದ ಮೇಲೆ _____ ಅಡ್ಡವಾಯಿತು.

    Answer

    ನೆಲದ ಮೇಲೆ ಗುಡ್ಡಬೆಟ್ಟ ಅಡ್ಡವಾಯಿತು.

  4. 3. ಫಳಿಗೆಯೊಳಗೆ ಬಾನು ತುಂಬ _____ ಕವಿಯಿತು.

    Answer

    ಫಳಿಗೆಯೊಳಗೆ ಬಾನು ತುಂಬ ಮೋಡ ಕವಿಯಿತು.

  5. 4. ಮೋಡ ಮೇಲಕೇರಿದಾಗ _____ ತಗುಲಿತು.

    Answer

    ಮೋಡ ಮೇಲಕೇರಿದಾಗ ತಂಪು ತಗುಲಿತು.

  6. **ಇ. ಪದ್ಯದಲ್ಲಿ ಬಿಟ್ಟಿರುವ ಸಾಲುಗಳನ್ನು ಬರೆಯಿರಿ** — "ನೆಲದ ಮೇಲೆ ಗುಡ್ಡ ಬೆಟ್ಟ / ..... / .....

    Answer

    ಅಡ್ಡವಾಯಿತು ತಡೆದು ನಿಂತ

  7. ಮೋಡವೆಲ್ಲ / ಮೇಲಕೇರಿತು." (fill from the full text above)

ಈ. ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ

  1. 1. ಕೆರೆ, ಕಟ್ಟೆ, ಸಮುದ್ರ, ಸೂರ್ಯ

  2. 2. ಮಿಂಚು, ಭೂಮಿ, ಮಳೆ, ಗುಡುಗು

  3. 3. ಸರೋವರ, ಪರ್ವತ, ಬೆಟ್ಟ, ಗುಡ್ಡ

  4. 4. ನೊಗ, ಕುಂಟೆ, ನೇಗಿಲು, ಮಂಚ

  5. **ಉ. ಕೊಟ್ಟಿರುವ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ** (ಮೂರು ಮೂರು ಪದ)

  6. 1. ಕಾಡು 2. ಸೂರ್ಯ 3. ಭೂಮಿ

ಭಾಷಾ ಚಟುವಟಿಕೆ

  1. ಅ. ಅಕ್ಷರ ಬಳಸಿ ಪದ ರಚಿಸು, ತಿರುಗಿಸಿ ಓದಿ ಆನಂದಿಸಿ — ಮಾದರಿ: ವಿ ಕ ಕ ಟ ವಿ = ವಿಕಟ ಕವಿ.

  2. 1. ಕಕನ 2. ಮನನ 3. ರಸುರಸುರ 4. ಜೀವವನನ 5. ದ್ರಾಮನಸಿಮಸಿದ್ರಾ

  3. ಆ. ಸೂಚನೆಗಳನ್ನು ಅನುಸರಿಸಿಕೊಂಡು ಪದಬಂಧ ಪೂರ್ಣಗೊಳಿಸಿ (crossword). Clues include: time,

  4. life/living-things, a coastal word-pair, where a boat rests, the sun's-heat effect, cloud

  5. turning into rain, what appears when you look up during rain, "this moment/close by."

  6. Down clues include: a solid substance, another word for water, salty water inside the sea,

  7. another name for earth, jasmine's color, what's needed to live, found in a peacock's tail.

  8. ಇ. ಮಾದರಿಯಂತೆ ಪ್ರಾಸ ಪದಗಳನ್ನು ಬರೆಯಿರಿ — ಮಾದರಿ: ಸುರಿಯಿತು – ಹರಿಯಿತು.

  9. ತಗುಲಿತು / ಕವಿಯಿತು / ಅಡ್ಡವಾಯಿತು — ಗೆ ಪ್ರಾಸ ಪದ ಬರೆಯಿರಿ.

    Answer

    ತಗುಲಿತು: ತೊಡಗಿತು ಕವಿಯಿತು: ಗುಡುಗಿತು ಅಡ್ಡವಾಯಿತು: ಮೇಲಕೇರಿತು

  10. ಈ. ಮಾದರಿಯಂತೆ ಜೋಡುನುಡಿಗಳನ್ನು ಬರೆಯಿರಿ — ಮಾದರಿ: ಬೆಟ್ಟ – ಬೆಟ್ಟಗುಡ್ಡ.

  11. ಕೆರೆ / ಗುಡುಗು / ಕಸ / ಮುತ್ತು

ಬಳಕೆ ಚಟುವಟಿಕೆ

  1. ಅ. ಚಿತ್ರ ಗಮನಿಸಿ, ಕೊಟ್ಟಿರುವ ಪದ ಬಳಸಿ ಕವನ ರಚಿಸಿ: (ಕವಿಯಿತು, ಮಳೆ, ಇಳಿಗೆ, ಹೊಳೆ, ಬೆಳೆಯು, ಮೋಡ,

  2. ಬೆಳೆಯಿತು, ಬಂದಿತು, ಇಳಿಯಿತು, ತುಂಬಿತು)

Interactive Lab

ಕಡಲುka-da-luocean, sea
ಅಡ್ಡad-dahorizontal, across
ಬೆಳಗುbe-la-gushine
ಕವಿಯುತ್ತುka-vi-yut-tuenvelops, spreads over
ನೆಲne-laground, land
ಜಗja-gaworld
ಸುರಿsu-ripour
ತಣಿದುta-ni-ducooled