CRECT Education

Lesson 8: ತಾಯಿಗೊಂದು ಪತ್ರ – Practice & Play

Description

Test your Kannada comprehension with questions from Ullas's letter, then a fun word game!

ಗದ್ಯ (prose, letter format) · Committee-authored

ಪಠ್ಯFull text

ಕ್ಷೇಮ ಶ್ರೀ 4ನೆಯ ಅಕ್ಟೋಬರ್–2013 ಬಳ್ಳಾವನ ಭಾಗೇವಾಡಿ [uncertain] ಪ್ರೀತಿಯ ಅಮ್ಮನಿಗೆ, ನಿಮ್ಮ ಮಗನಾದ ಉಲ್ಲಾಸ ಬೇಡುವ ಆಶೀರ್ವಾದಗಳು. ನಾನು, ಅಜ್ಜ, ಅಜ್ಜಿ, ಮಾವಂದಿರು, ದೊಡ್ಡಜ್ಜಿ ಎಲ್ಲರೂ ಇಲ್ಲಿ ಚೆನ್ನಾಗಿ ಕ್ಷೇಮವಾಗಿದ್ದೇವೆ. ನಿಮ್ಮೆಲ್ಲರ ಕ್ಷೇಮ ಸಮಾಚಾರಕ್ಕಾಗಿ ಈ ಕಾಗದ ತಲುಪಿದ ಕೂಡಲೇ ಕಾಗದ ಬರೆಯುತ್ತೀರೆಂದು ನಂಬಿರುತ್ತೇನೆ. ಅಮ್ಮಾ, ಈ ದಸರೆ ರಜೆಯಲ್ಲಿ ಅಜ್ಜ ನಮ್ಮನ್ನೆಲ್ಲಾ ಮೈಸೂರಿಗೆ ಕರೆದುಕೊಂಡು ಹೋಗಿದ್ದರು. ದಸರೆ ಮೆರವಣಿಗೆಯ ವಿವಿಧ ಸ್ತಬ್ಧಚಿತ್ರಗಳು, ಕಲಾ ತಂಡಗಳ ಪ್ರದರ್ಶನಗಳು ಆಕರ್ಷಕವಾಗಿದ್ದವು. ಆನೆಯ ಮೇಲಿನ ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ದೇವಿಯ ನೋಡಿ ತುಂಬಾ ಸಂತೋಷವಾಯಿತು. [one clause here uncertain — describes the ceremonial gold howdah] ದಸರೆ ಮುಗಿದ ಮರುದಿನ ಚಾಮುಂಡಿಬೆಟ್ಟಕ್ಕೆ ಹೋಗಿದ್ದೆವು. ಅಲ್ಲಿಂದ ಮುಂದೆ ಪ್ರಾಣಿ ಸಂಗ್ರಹಾಲಯಕ್ಕೆ ಬಂದೆವು. ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ವಿವಿಧ ರೀತಿಯ ಪಕ್ಷಿಗಳನ್ನು ನೋಡಿದೆವು. ಬಣ್ಣ ಬಣ್ಣದ ಹಕ್ಕಿಗಳ 'ಚಿಂವ್ ಚಿಂವ್' ಧ್ವನಿ ಕೇಳಲು ಸುಮಧುರವಾಗಿತ್ತು. ಅಲ್ಲಿಂದ ಮುಂದೆ ಕೆಂಪು ಮತ್ತು ಕಪ್ಪು ಮುಖದ ಕೋತಿಗಳನ್ನು ಕಂಡೆವು. ಒಬ್ಬ ಪ್ರಾಣಿಗಳಿಗೆ ತಿಂಬ ಪದಾರ್ಥ ಕೊಡುವುದನ್ನು ನೋಡಿ ಕಾವಲುಗಾರ 'ಹಾಗೆ ಮಾಡಬಾರದು' ಎಂದನು. ಅಲ್ಲಿ 'ಪ್ರಾಣಿಗಳಿಗೆ ಮುಟ್ಟಬೇಡಿ', 'ಪ್ರಾಣಿಗಳಿಗೆ ತಿಂಬ ಪದಾರ್ಥ ಕೊಡಬೇಡಿ' ಎಂಬ ಸೂಚನಾ ಫಲಕಗಳನ್ನು ತೋರಿಸಿದರು. ಅದೇ ಪ್ರಾಂಗಣದಲ್ಲಿ ಸಿಂಹ ಘರ್ಜಿಸುವುದನ್ನೂ ಕೇಳಿ ನಮ್ಮ ಗಮನ ಸೆಳೆಯಿತು. ನಾವು ಶೇಂಗಾ ತಿನ್ನುತ್ತಾ ಒಂದು ಕಡೆಯಿಂದ ಆನೆ, ಜಿಂಕೆ ಹಿಂಡು, ಹುಲಿ, ಚಿರತೆ, ಸಿಂಹ, ಘೇಂಡಾಮೃಗ ನೋಡಿ ಖುಷಿಪಟ್ಟೆವು. ಪಕ್ಕದ ಮರದ ಕೊಂಬೆಯ ಮೇಲೆ ಕೋತಿ ಮನುಷ್ಯರಂತೆ ನಡೆದಾಡುತ್ತಿತ್ತು. ಮುಂದೆ ಸಾಗುತ್ತ ಅಜ್ಜ, ಎತ್ತರದ ಜಿರಾಫೆ ಮುಂತಾದ ಬೇರೆಬೇರೆ ಜಾತಿಯ ಪ್ರಾಣಿಗಳನ್ನ ಕಂಡು ಮೈ ಜುಮ್ ಎಂದಿತು. 'ಈ ಪ್ರಾಣಿಗಳನ್ನ ಎಲ್ಲಿಂದ ತಂದದ್ದು?' ಎಂದಾಗ, ಅಜ್ಜ 'ಬಂಡೀಪುರದ ಕಾಡಿನಿಂದ' ಎಂದನು. ಅಲ್ಲಿಂದ ಮುಂದೆ ಜಿರಾಫೆಯ ಕಟ್ಟು ನೋಡಿ ಆಶ್ಚರ್ಯವಾಯಿತು. ಅದು ತನ್ನ ಮರಿಗೆ ಹಾಲು ಉಣಿಸುತ್ತಿತ್ತು. ಅಲ್ಲಿದ್ದ ವಸ್ತು ಸಂಗ್ರಹಾಲಯಕ್ಕೂ ಭೇಟಿ ನೀಡಿದೆವು. ಅಲ್ಲಿಟ್ಟಿದ್ದ ಪ್ರಾಣಿಗಳ ಮಾದರಿಗಳು ನಿಜವಾದ ಪ್ರಾಣಿಗಳೇ ಎಂಬಷ್ಟು ಆಪ್ತವಾಗಿದ್ದವು. ಇವೆಲ್ಲವನ್ನೂ ನೋಡುವಷ್ಟರಲ್ಲಿ ಸಂಜೆ ಆಯಿತು. ಅಮೃತ ಅರಮನೆಯನ್ನೂ ನೋಡಿಕೊಂಡು ಊರಿಗೆ ಹಿಂದಿರುಗಿದೆವು. ಅಮ್ಮಾ, ಬಹಳ ಸಂತೋಷವಾಯಿತು. ಇನ್ನೊಮ್ಮೆ ನೀನು ಬಂದಾಗ ಎಲ್ಲರೂ ಮತ್ತೊಮ್ಮೆ ಮೈಸೂರಿಗೆ ಹೋಗೋಣ. ತುಂಬಾ ಖುಷಿಯಿಂದ ಈ ಕಾಗದ ಬರೆದಿರುತ್ತೇನೆ. ಎಲ್ಲರಿಗೂ ನನ್ನ ನಮಸ್ಕಾರಗಳನ್ನು ತಿಳಿಸಿ. ಇತಿ ನಿಮ್ಮ ಪ್ರೀತಿಯ ಮಗ ಉಲ್ಲಾಸ ಇವರಿಗೆ, ಶ್ರೀಮತಿ ಶಾಂತಿಗೆ ಕಸ್ತೂರಿ ನಿವಾಸ ಯಲಬುರ್ಗ ತಾಲೂಕ – ಶಿಗ್ಗಾಂವಿ [taluk/village name uncertain]

"ಓದು ಬರಹ ಕಲಿಯಿರಿ, ಜ್ಞಾನ ದೀಪ ಬೆಳಗಿರಿ" — "Learn to read and write, light the lamp of knowledge." (printed under the letter in the book)

ಪದಗಳ ಅರ್ಥword meanings

KannadaPronunciationMeaning
ಸಮಾಚಾರsa-maa-chaa-ranews
ಆಕೃತಿaa-kru-tishape, form
ತಂಡtan-dagroup, team
ಧ್ವನಿdhwa-nivoice, sound
ಸುಮಧುರsu-ma-dhu-ramelodious
ಉದ್ಯಾನವನud-yaa-na-va-nagarden
ಗರ್ಜನೆgar-ja-neroar

ಟಿಪ್ಪಣಿnotes

  • ದಸರೆ — the Dasara festival, from Shukla Paksha through Vijayadashami (ten days)
  • ಅಂಬಾರಿ — the ceremonial gold howdah carried atop the lead elephant
  • ಪಂಜು — a torch lit with camphor or fragrant oil
  • ಪಂಜರ — cage

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ

  1. 1. ಅಜ್ಜ ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದರು?

    Answer

    ಅಜ್ಜ ಮಕ್ಕಳನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದರು.

  2. 2. ಅಮ್ಮನಿಗೆ ಕಾಗದ ಬರೆದವರು ಯಾರು?

    Answer

    ಉಲ್ಲಾಸನು ಅಮ್ಮನಿಗೆ ಕಾಗದ ಬರೆದನು.

ಆ. ಎರಡು–ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ

  1. 1. ಮೈಸೂರು ದಸರೆಯಲ್ಲಿ ಉಲ್ಲಾಸನು ಏನೇನು ನೋಡಿದನು?

    Answer

    ಮೈಸೂರು ದಸರೆಯಲ್ಲಿ ಉಲ್ಲಾಸನು ದಸರೆ ಮೆರವಣಿಗೆಯ ವಿವಿಧ ಸ್ತಬ್ಧಚಿತ್ರಗಳು ಮತ್ತು ಕಲಾ ತಂಡಗಳ ಪ್ರದರ್ಶನಗಳನ್ನು ನೋಡಿದನು. ಆನೆಯ ಮೇಲಿನ ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ದೇವಿಯನ್ನೂ ನೋಡಿ ತುಂಬಾ ಸಂತೋಷಪಟ್ಟನು.

  2. 2. ಪ್ರಾಣಿ ಸಂಗ್ರಹಾಲಯದಲ್ಲಿ ಯಾವ ಯಾವ ಪ್ರಾಣಿಗಳು ಇದ್ದವು?

    Answer

    ಪ್ರಾಣಿ ಸಂಗ್ರಹಾಲಯದಲ್ಲಿ ಬಣ್ಣ ಬಣ್ಣದ ಪಕ್ಷಿಗಳು, ಕೆಂಪು ಮತ್ತು ಕಪ್ಪು ಮುಖದ ಕೋತಿಗಳು ಮತ್ತು ಸಿಂಹ ಇದ್ದವು. ಅಲ್ಲಿ ಆನೆ, ಜಿಂಕೆ ಹಿಂಡು, ಹುಲಿ, ಚಿರತೆ, ಘೇಂಡಾಮೃಗ, ಜಿರಾಫೆ ಮುಂತಾದ ಪ್ರಾಣಿಗಳೂ ಇದ್ದವು.

  3. 3. ಉಲ್ಲಾಸನಿಗೆ ಸಂತೋಷವಾಗಲು ಕಾರಣವೇನು?

    Answer

    ಉಲ್ಲಾಸನಿಗೆ ಸಂತೋಷವಾಗಲು ಕಾರಣ ದಸರೆ ರಜೆಯಲ್ಲಿ ಅಜ್ಜನೊಂದಿಗೆ ಮೈಸೂರಿಗೆ ಹೋದದ್ದು. ಅಲ್ಲಿ ಅವನು ದಸರೆ ಮೆರವಣಿಗೆ, ಚಾಮುಂಡೇಶ್ವರಿ ದೇವಿ, ಪ್ರಾಣಿ ಸಂಗ್ರಹಾಲಯ ಮತ್ತು ಅಮೃತ ಅರಮನೆಯನ್ನು ನೋಡಿದನು.

ಇ. ಖಾಲಿ ಬಿಟ್ಟಿರುವ ಜಾಗದಲ್ಲಿ ಸರಿಯಾದ ಪದ ತುಂಬಿ

  1. 1. ಅಜ್ಜ ನಮ್ಮನ್ನು ಮೈಸೂರು _____ ಗೆ ಕರೆದುಕೊಂಡು ಹೋಗಿದ್ದರು.

    Answer

    ದಸರೆ

  2. 2. ಆನೆಯ ಮೇಲಿನ ಅಂಬಾರಿಯಲ್ಲಿ _____ ಇಟ್ಟಿದ್ದರು.

    Answer

    ಚಾಮುಂಡೇಶ್ವರಿ ದೇವಿಯನ್ನು

  3. 3. ಮೈಸೂರಿನಲ್ಲಿ _____ ಮೃಗಾಲಯವಿದೆ.

    Answer

    ಶ್ರೀ ಜಯಚಾಮರಾಜೇಂದ್ರ

  4. 4. ಸಿಂಹದ _____ ನಮ್ಮ ಗಮನ ಸೆಳೆಯಿತು.

    Answer

    ಗರ್ಜನೆ

  5. 5. ಕೊಂಬೆಯ ಮೇಲೆ _____ ನಮ್ಮ ಹಾಗೆಯೇ ನಡೆಯುತ್ತಿತ್ತು.

    Answer

    ಕೋತಿ

ಈ. ಕೊಟ್ಟಿರುವ ವಾಕ್ಯಗಳು ಸರಿ ಇದ್ದರೆ ✓ ತಪ್ಪು ಇದ್ದರೆ ✗ ಗುರುತು ಹಾಕಿ

  1. 1. ಉಲ್ಲಾಸನು ತನ್ನ ತಂದೆಗೆ ಕಾಗದ ಬರೆದನು.

    Answer

  2. 2. ಕೆಂಪು ಮತ್ತು ಕಪ್ಪು ಬಣ್ಣದ ಕೋತಿಗಳು "ಚಿಂವ್ ಚಿಂವ್" ಎಂದು ಶಬ್ದ ಮಾಡುತ್ತಿದ್ದವು.

    Answer

  3. 3. ದಸರೆ ಮುಗಿದ ಮರುದಿನ ಚಾಮುಂಡಿಬೆಟ್ಟಕ್ಕೆ ಹೋದೆವು.

    Answer

  4. 4. ಜಿರಾಫೆ ತನ್ನ ಮರಿಗೆ ಹಾಲು ಉಣಿಸುತ್ತಿತ್ತು.

    Answer

  5. 5. ಮೃಗಾಲಯದಲ್ಲಿದ್ದ ಹಾವುಗಳನ್ನು ಬಂಡೀಪುರದ ಕಾಡಿನಿಂದ ತರಲಾಗಿದೆ.

    Answer

  6. 6. ದಸರೆ ಹತ್ತು ಆರು ದಿನ ನಡೆಯುತ್ತದೆ.

    Answer

ಭಾಷಾಭ್ಯಾಸ

  1. ಅ. ಮಾದರಿಯಂತೆ ಲಿಂಗ ಬದಲಿಸಿ ಬರೆಯಿರಿ — ಮಾದರಿ: ಅಜ್ಜ – ಅಜ್ಜಿ.

  2. ತಂದೆ, ಮಾವ, ಚಿಕ್ಕಪ್ಪ, ಮಗಳು, ತಮ್ಮ

    Answer

    ತಂದೆ – ತಾಯಿ ಮಾವ – ಅತ್ತೆ ಚಿಕ್ಕಪ್ಪ – ಚಿಕ್ಕಮ್ಮ ಮಗಳು – ಮಗ ತಮ್ಮ – ತಂಗಿ

  3. ಆ. ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ಬರೆಯಿರಿ — ಮಾದರಿ: ನಮ್ಮ–ನಮ್ಮದು–ನಮ್ಮವರು.

  4. ನನ್ನ; ನಿನ್ನ; ನಿಮ್ಮ; ತಮ್ಮ (ಪ್ರತಿಯೊಂದಕ್ಕೂ ಎರಡು ರೂಪ ಬರೆಯಿರಿ)

    Answer

    ನನ್ನ – ನಮ್ಮ ನಿನ್ನ – ನಿಮ್ಮ ನಿಮ್ಮ – ನಿನ್ನ ತಮ್ಮ – ತನ್ನ

  5. ಇ. ಗುಂಪಿಗೆ ಸೇರದ ಪದ ಆರಿಸಿ ಬರೆ:

  6. 1. ಶೇಂಗಾ, ಮಾವು, ಗೇಣಸು, ಆಲೂಗಡ್ಡೆ

  7. 2. ಕಾಗೆ, ಗೂಬೆ, ಕೋಗಿಲೆ, ಘೇಂಡಾಮೃಗ

  8. 3. ಬಾಳೆಹಣ್ಣು, ಇಡ್ಲಿ, ವಡೆ, ದೋಸೆ

  9. 4. ಚಿರತೆ, ಗಿಳಿ, ಸಿಂಹ, ಹುಲಿ

  10. ಈ. ಈ ಪದಗಳನ್ನು ಉಪಯೋಗಿಸಿ ಸ್ವಂತ ವಾಕ್ಯ ರಚಿಸು: ಕ್ಷೇಮ; ಪ್ರಾಣಿ ಸಂಗ್ರಹಾಲಯ; ಉದ್ಯಾನವನ;

    Answer

    ಕ್ಷೇಮ: ನಾನು ಶಾಲೆಯಿಂದ ಚೆನ್ನಾಗಿ ಕ್ಷೇಮವಾಗಿ ಬಂದೆ. ಪ್ರಾಣಿ ಸಂಗ್ರಹಾಲಯ: ನಮ್ಮ ಊರಿನ ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿ ಇದೆ. ಉದ್ಯಾನವನ: ನಾವು ಸಂಜೆ ಉದ್ಯಾನವನದಲ್ಲಿ ಆಟವಾಡಿದೆವು.

  11. ಸೂಚನಾ ಫಲಕ

    Answer

    ಸೂಚನಾ ಫಲಕ: ಶಾಲೆಯ ಆಟದ ಮೈದಾನದ ಹತ್ತಿರ ಸೂಚನಾ ಫಲಕ ಇದೆ.

ಬಳಕೆ ಚಟುವಟಿಕೆ

  1. ಅ. ನಿನಗೆ ಇಷ್ಟವಾದ ಒಂದು ವಿಷಯ ಕುರಿತು ನಿಮ್ಮ ಗೆಳೆಯ/ಗೆಳತಿಗೆ ಪತ್ರವನ್ನು (ನಿನ್ನ ಬರೆಹದ

  2. ಪುಸ್ತಕದಲ್ಲಿ) ಬರೆದು, ನಿನ್ನ ಗೆಳೆಯ/ಗೆಳತಿಗೆ ಓದಲು ಕೊಡು.

  3. ಆ. ನಿನಗೆ ತಿಳಿದಿರುವ ಕವಿಗಳ ಕೈಬರೆಹಗಳನ್ನು ಸಂಗ್ರಹಿಸು.

  4. ಇ. ನಿನಗೆ ಗೊತ್ತಿರುವ ವ್ಯಕ್ತಿಗಳ ಕೈಬರೆಹಗಳನ್ನು ಸಂಗ್ರಹಿಸು.

  5. ಈ. ಶಿಕ್ಷಕರ ಸಹಾಯ ಪಡೆದು ದೊಡ್ಡ/ಸಣ್ಣ ಲಕೋಟೆಗಳನ್ನು ತಯಾರಿಸು.

  6. ಉ. ವಿವಿಧ ಪತ್ರಗಳ ಬಗ್ಗೆ ಶಿಕ್ಷಕರ ಹತ್ತಿರ ಕೇಳಿ ತಿಳಿದುಕೊ.

Interactive Lab

ಸಮಾಚಾರsa-maa-chaa-ranews
ಆಕೃತಿaa-kru-tishape, form
ತಂಡtan-dagroup, team
ಧ್ವನಿdhwa-nivoice, sound
ಸುಮಧುರsu-ma-dhu-ramelodious
ಉದ್ಯಾನವನud-yaa-na-va-nagarden
ಗರ್ಜನೆgar-ja-neroar