ಗದ್ಯ (prose, told through picture panels) · Committee-authored
ಪಠ್ಯFull text
"ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ಅಲೆದಂತೆ." — the idiom the story itself ends on, roughly "like wandering the whole town searching for ghee while already holding butter in your own palm." A good line for the growth-mindset close: what you need is often already within you.
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಸಂಸಾರ | sam-saa-ra | family |
| ವರ | va-ra | groom |
| ಜಗತ್ತು | ja-gat-tu | world |
| ತಕ್ಕ | tak-ka | suitable |
| ಸೂರ್ಯ | soor-ya | sun |
| ಬೆಟ್ಟ | bet-ta | mountain |
| ಸಂಭ್ರಮ | sam-bhra-ma | excitement |
| ಮದುವೆ | ma-du-ve | wedding |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆ
1. ಇಲಿಗಳ ಸಂಸಾರ ಎಲ್ಲಿ ವಾಸವಾಗಿತ್ತು?
Answerಇಲಿಗಳ ಸಂಸಾರ ಒಂದು ಊರಿನಲ್ಲಿ ವಾಸವಾಗಿತ್ತು.
2. ತಂದೆ-ತಾಯಿ ಇಲಿಗಳು ಏನೆಂದು ಯೋಚಿಸಿದವು?
Answerತಂದೆ-ತಾಯಿ ಇಲಿಗಳು ಮಗಳಿಗೆ ತಕ್ಕ ವರನನ್ನು ಹುಡುಕಬೇಕೆಂದು ಯೋಚಿಸಿದವು.
3. ತಾಯಿ ಇಲಿ ಏನೆಂದು ಹೇಳಿತು?
Answerತಾಯಿ ಇಲಿ, ಜಗತ್ತನ್ನೇ ಬೆಳಗುವ ಸೂರ್ಯ ಬಹಳ ದೊಡ್ಡವನು ಮತ್ತು ಅವನೇ ನಮ್ಮ ಮಗಳಿಗೆ ತಕ್ಕ ವರ ಎಂದು ಹೇಳಿತು.
4. ಜಗತ್ತನ್ನು ಬೆಳಗುವವರು ಯಾರು?
Answerಜಗತ್ತನ್ನು ಬೆಳಗುವವರು ಸೂರ್ಯ.
5. ಸೂರ್ಯನಿಗೆ ಇಲಿಗಳು ಯಾವ ವಿಚಾರ ತಿಳಿಸಿದವು?
Answerಸೂರ್ಯನಿಗೆ ಇಲಿಗಳು ಮದುವೆ ವಿಚಾರ ತಿಳಿಸಿದವು.
6. ಯಾರ ಜೊತೆಯಲ್ಲಿ ಇಲಿಯ ಮದುವೆಯಾಯಿತು?
Answerಇಲಿಯ ಮದುವೆ ಇಲಿರಾಯನ ಜೊತೆಯಲ್ಲಿ ಆಯಿತು.
ಆ. ಕೊಟ್ಟಿರುವ ಮಾತನ್ನು ಯಾರು? ಯಾರಿಗೆ ಹೇಳಿದರು?
1. "ಜಗತ್ತನ್ನೇ ಬೆಳಗುವ ಸೂರ್ಯ ಬಹಳ ದೊಡ್ಡವನು." — ಯಾರು? / ಯಾರಿಗೆ?
Answerತಾಯಿ ಇಲಿಯು ತಂದೆ ಇಲಿಗೆ ಹೇಳಿದಳು.
2. "ಇಲ್ಲಾ! ಇಲ್ಲಾ! ನನಗಿಂತಲೂ ದೊಡ್ಡವನು ಬೆಟ್ಟದ ರಾಜನಿದ್ದಾನೆ." — ಯಾರು? / ಯಾರಿಗೆ?
Answerಮೋಡವು ಇಲಿಗಳಿಗೆ ಹೇಳಿತು.
3. "ನಮ್ಮ ಮಗಳಿಗೆ ಇಲಿರಾಯನೇ ತಕ್ಕ ವರ." — ಯಾರು? / ಯಾರಿಗೆ?
Answerತಂದೆ ಇಲಿಯು ತಾಯಿ ಇಲಿಗೆ (ಅಥವಾ ಎಲ್ಲರಿಗೂ) ಹೇಳಿತು.
ಇ. ವಾಕ್ಯಗಳನ್ನು ಗಮನಿಸಿ. ಸರಿ/ತಪ್ಪುಗಳನ್ನು ಗುರುತಿಸಿ, ತಪ್ಪಿದ್ದರೆ ಸರಿಪಡಿಸಿ ಬರೆಯಿರಿ
1. ಒಂದು ಊರು, ಅಲ್ಲೊಂದು ಹುಲಿಗಳ ಸಂಸಾರ ಇತ್ತು.
Answerತಪ್ಪು. ಒಂದು ಊರು, ಅಲ್ಲೊಂದು ಇಲಿಗಳ ಸಂಸಾರ ಇತ್ತು.
2. ಮಗನಿಗೆ ಸರಿಯಾದ ವರ ಬೇಕೆಂದು ಇಲಿಗಳು ಯೋಚಿಸಿದವು.
Answerತಪ್ಪು. ಮಗಳಿಗೆ ಸರಿಯಾದ ವರ ಬೇಕೆಂದು ಇಲಿಗಳು ಯೋಚಿಸಿದವು.
3. ಬೆಟ್ಟದ ರಾಜನ ಬಳಿಗೆ ಇರುವೆಗಳು ಹೋದವು.
Answerತಪ್ಪು. ಬೆಟ್ಟದ ರಾಜನ ಬಳಿಗೆ ಇಲಿಗಳು ಹೋದವು.
ಈ. ಕೊಟ್ಟಿರುವ ಪದಗಳನ್ನು ಸರಿಯಾಗಿ ಜೋಡಿಸಿ ವಾಕ್ಯ ರಚಿಸಿ
1. ತಂದೆ ಇಲಿಗಳು ಯೋಚಿಸಿದವು ತಾಯಿ.
Answerತಂದೆ ತಾಯಿ ಇಲಿಗಳು ಯೋಚಿಸಿದವು.
2. ಬೆಳಗುವ ಬಹಳ ಸೂರ್ಯ ದೊಡ್ಡವನು ಜಗತ್ತನ್ನೇ.
Answerಜಗತ್ತನ್ನೇ ಬೆಳಗುವ ಸೂರ್ಯ ಬಹಳ ದೊಡ್ಡವನು.
3. ಇಲಿಗಳು ಬೆಟ್ಟದ ಹೋದವು ಬಳಿಗೆ ರಾಜನ.
Answerಇಲಿಗಳು ಬೆಟ್ಟದ ರಾಜನ ಬಳಿಗೆ ಹೋದವು.
ಉ. ಈ ಕೆಳಗಿನ ಪದಗಳನ್ನು ಬಳಸಿ ಸ್ವಂತವಾಕ್ಯ ರಚಿಸಿ
ಯೋಚಿಸು, ತೀರ್ಮಾನಿಸು, ಸಮರ್ಥ, ಮದುವೆ
Answerಯೋಚಿಸು: ನಾನು ನಾಳೆ ಶಾಲೆಗೆ ಏನು ತರಬೇಕೆಂದು ಯೋಚಿಸುತ್ತಿದ್ದೇನೆ. ತೀರ್ಮಾನಿಸು: ನಮ್ಮ ತಂಡದ ಹೆಸರನ್ನು ನಾವು ತೀರ್ಮಾನಿಸಿದೆವು. ಸಮರ್ಥ: ನನ್ನ ಅಣ್ಣ ಓಟದಲ್ಲಿ ತುಂಬಾ ಸಮರ್ಥ. ಮದುವೆ: ನನ್ನ ದೊಡ್ಡಮ್ಮನ ಮದುವೆಗೆ ನಾನು ಹೋಗಿದ್ದೆ.
ಭಾಷಾ ಚಟುವಟಿಕೆ
ಅ. ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ
(ಬುದ್ಧಿವಂತ, ಸುಂದರವಾದ, ಇಂಪಾಗಿ, ಚೆನ್ನಾಗಿ)
1. ನವಿಲು _____ ಪಕ್ಷಿ.
Answerನವಿಲು ಸುಂದರವಾದ ಪಕ್ಷಿ.
2. ಪಲ್ಲವಿ ಬಹಳ _____ ವಿದ್ಯಾರ್ಥಿನಿ.
Answerಪಲ್ಲವಿ ಬಹಳ ಬುದ್ಧಿವಂತ ವಿದ್ಯಾರ್ಥಿನಿ.
3. ಕೋಗಿಲೆ _____ ಹಾಡುತ್ತದೆ.
Answerಕೋಗಿಲೆ ಇಂಪಾಗಿ ಹಾಡುತ್ತದೆ.
4. ಮೋಹನ _____ ನೃತ್ಯ ಮಾಡುತ್ತಾನೆ.
Answerಮೋಹನ ಚೆನ್ನಾಗಿ ನೃತ್ಯ ಮಾಡುತ್ತಾನೆ.
ಆ. ಕೊಟ್ಟಿರುವ ಅಕ್ಷರಗಳನ್ನು ಬಳಸಿ, ಪ್ರಾಣಿಗಳ ಹೆಸರು ಪಟ್ಟಿ ಮಾಡಿ — ಮಾದರಿ: ಹಸು
(a letter grid to build animal names from, e.g. ಬ ಹ ಸು ರ ಮ / ಡ ಇ ರ ಕ ತ್ತೆ / ಹು ಲಿ ಬ ರ
ಎ / ತೋ ಕ ನ ಡಿ ಮೈ / ಬ ಳ ನ ರಿ ಡ — animal names hidden across rows/columns, e.g. ಹಸು, ಕರಡಿ,
ಒಂಟೆ, ಹುಲಿ, ಆನೆ, ನರಿ, ಕುದುರೆ).
ಇ. ಪ್ರಾಣಿ-ಪಕ್ಷಿಗಳ ಕೂಗನ್ನು ಅನುಸರಿಸಿ ಸೂಕ್ತವಾದದಕ್ಕೆ ಗೆರೆ ಎಳೆದು ಹೊಂದಿಸಿ:
ಅ (ಕೋಳಿ, ಕಾಗೆ, ಬೆಕ್ಕು, ನಾಯಿ, ಕೋಗಿಲೆ) — ಬ (ಮಿಯಾಂವ್ ಮಿಯಾಂವ್, ಬೌ ಬೌ, ಕಾ ಕಾ, ಕುಹೂ ಕುಹೂ,
ಕೊಕ್ಕೊ ಕ್ಕೋ)
ಈ. ಕೊಟ್ಟಿರುವ ಪದಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ ಬರೆ:
ಹೆಣ್ಣು–ಎಣ್ಣು; ತಾಇ–ತಾಯಿ; ಮೋಡ–ಮೋಢ; ಸೂರ್ಯ–ಸೂರಿಯ; ವರ–ಒರ; ಬೆಟ್ಟ–ಬೆಟ್ಟ್ಯ.
ಉ. ಈ ಕೆಳಗಿನ ಪದಗಳನ್ನು ಓದಿ ಬರೆ (word-web diagram branching out from the root letter ಸ,
e.g. ಸಲಿಗೆ and other ಸ-words built from surrounding syllables).
ಬಳಕೆ ಚಟುವಟಿಕೆ
ಅ. ಈ ಕೆಳಗಿನ ವಾಕ್ಯಗಳ ಮಾದರಿಗಳನ್ನು ನಕಲುಮಾಡಿ:
"ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ." (ಮತ್ತು ಅದೇ ಅರ್ಥದ ಮೂರು ಬೇರೆ ರೂಪಗಳು: "ಪ್ಲಾಸ್ಟಿಕ್ ಬಳಕೆ
ಸರಿಲಾರಕ್ಕೆ ಹಾನಿಕರ", "ಪ್ಲಾಸ್ಟಿಕ್ ಬಳಕೆ ಪರಿಷರಕ್ಕೆ ಹಾನಿಕರ", "ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ")
ಆ. "ದೊಡ್ಡವರು ಯಾರು?" ಪಾಠದಲ್ಲಿ ಬರುವ ಪಾತ್ರಗಳ ಸಂಭಾಷಣೆಯನ್ನು ಶಾಲೆಯಲ್ಲಿ ಗೆಳೆಯರೊಂದಿಗೆ ಸೇರಿ
ಅಭಿನಯಿಸಿ.
ಇ. ಪತ್ರಿಕೆಗಳಲ್ಲಿ ಬರುವ ವಿವಿಧ ಚಿತ್ರಕಥೆಗಳನ್ನು ಸಂಗ್ರಹಿಸಿ, ಚಿತ್ರಕಥಾ ಕೋಶ ತಯಾರಿಸು.
ಈ. ನಿಮ್ಮ ಶಾಲೆಯಲ್ಲಿ ನಡೆಸುವ 'ಗಣರಾಜ್ಯೋತ್ಸವ' ಕಾರ್ಯಕ್ರಮದ ಪ್ರಚಾರಕ್ಕಾಗಿ ಒಂದು ಭಿತ್ತಿಪತ್ರವನ್ನು
ಶಿಕ್ಷಕರ ಸಹಾಯದಿಂದ ಸಿದ್ಧಪಡಿಸು.