ಗದ್ಯ (prose/play) · ಸಮಿತಿ ರಚನೆ (Committee-authored)
ಪಠ್ಯFull text
"ಬೆಳೆಯುವ ಸಿರಿ ಮೊಳಕೆಯಲ್ಲಿ" — A Kannada proverb roughly meaning "The richness of the future crop is seen in the sprouting seed," indicating that greatness shows early.
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಭೇದಿಸು | bhe-di-su | ಹೊಡೆ, ಮುರಿ, ಸೀಳು; ಆಶೀರ್ವದಿಸು - ಹರಸು; |
| ಶಂಕೆ | shan-ke | ಸಂದೇಹ, ಸಂಶಯ; |
| ವಿಖ್ಯಾತ | vi-khya-ta | ಪ್ರಸಿದ್ಧವಾದ; |
| ಯುದ್ಧ | yud-dha | ಕದನ, ಸಮರ, ಸಂಗ್ರಾಮ; |
| ಎರಗು | e-ra-gu | ನಮಸ್ಕಾರ ಮಾಡು, ನಮಸ್ಕರಿಸು; |
| ದಿಗ್ಭಾಂತ | dig-bhran-ta | ಗಾಬರಿಗೊಳ್ಳು, ಕಸಿವಿಸಿಯಾಗು; |
| ಸೂರ್ಯ | soor-ya | ನೇಸರ, ರವಿ; |
| ಸೇನೆ | se-ne | ದಂಡು, ಸೈನ್ಯ; |
| ಯಮಪುರ | ya-ma-pu-ra | ಯಮನಲೋಕ, ಮೃತ್ಯುಲೋಕ; |
| ಮರಣ | ma-ra-na | ಜೀವ ಹೋಗುವಿಕೆ, ಸಾವು; |
| ಘನಘೋರ | gha-na-gho-ra | ಉಗ್ರವಾದ; ಭಯಂಕರವಾದ; |
| ಚಿಂತಾಕ್ರಾಂತ | chin-ta-kran-ta | ಚಿಂತೆಗೊಳಗಾದ; |
| ಸಂಹರಿಸು | sam-ha-ri-su | ನಾಶಗೊಳಿಸು, ಕೊಲ್ಲು, ನಿರ್ನಾಮ ಮಾಡು; |
| ಪ್ರಶಂಸೆ | pra-sham-se | ಹೊಗಳಿಕೆ, ಸ್ತುತಿ; |
| ಪರಾಕ್ರಮ | pa-ra-kra-ma | ಕಲಿತನ, ಶೌರ್ಯ; |
| ಸಹಮತ | sa-ha-ma-ta | ಒಮ್ಮತ, ಏಕಾಭಿಪ್ರಾಯ; |
| ನಂದನ | nan-da-na | ಮಗ, ಪುತ್ರ, ಕಂದ; |
| ದಯೆ | da-ye | ಕರುಣೆ, ಅನುಕಂಪ, ಕೃಪೆ; |
| ಮಂಗಳ | man-ga-la | ಶುಭ; |
| ವದನ | va-da-na | ಮುಖ, ಮೋರೆ; |
| ಖಿನ್ನ | khin-na | ದುಃಖಿತನಾದ, ನೊಂದ; |
| ಪರಿಣಿತ | pa-ri-ni-ta | ಚತುರ, ನಿಪುಣ; |
| ಹೇಡಿ | he-di | ಅಂಜುಬುರುಕ ಹೆದರುಪುಕ್ಕ; |
| ತಂತ್ರ | tan-tra | ಉಪಾಯ; |
| ರಾಜೋಚಿತ | ra-jo-chi-ta | ಅರಸನಿಗೆ ಉಚಿತವಾದ, ರಾಜಯೋಗ್ಯವಾದ; |
| ಧಿಕ್ಕಾರ | dhik-kaa-ra | ನಿಂದೆ, ತಿರಸ್ಕಾರ; |
| ಸಾಮರ್ಥ್ಯ | saa-mar-thya | ದಕ್ಷತೆ, ಯೋಗ್ಯತೆ, ಬಲ. ಶಕ್ತಿ; |
| ಅಪ್ರತಿಮ | a-pra-ti-ma | ಅಸಾಮಾನ್ಯವಾದ; |
| ಗರ್ಭ | gar-bha | ಬಸಿರು; |
| ಹಿಂಬಾಲಿಸು | him-baa-li-su | ಹಿಂದೆಬರು, ಅನುಸರಿಸು |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ
೧. ಚಕ್ರವ್ಯೂಹವನ್ನು ರಚಿಸಿದವರು ಯಾರು?
Answerಚಕ್ರವ್ಯೂಹವನ್ನು ದ್ರೋಣಾಚಾರ್ಯರು ರಚಿಸಿದರು.
೨. ಕೌರವರು-ಪಾಂಡವರು ಯಾರಿಂದ ಬಿಲ್ವಿದ್ಯೆ ಕಲಿತರು?
Answerಕೌರವರು ಮತ್ತು ಪಾಂಡವರು ದ್ರೋಣಾಚಾರ್ಯರಿಂದ ಬಿಲ್ವಿದ್ಯೆ ಕಲಿತರು.
೩. ಅಭಿಮನ್ಯುವಿನ ತಂದೆಯ ಹೆಸರೇನು?
Answerಅಭಿಮನ್ಯುವಿನ ತಂದೆಯ ಹೆಸರು ಅರ್ಜುನ.
೪. ಕೌರವರಿಗೂ-ಪಾಂಡವರಿಗೂ ಯುದ್ಧ ಎಲ್ಲಿ ನಡೆಯಿತು?
Answerಕೌರವರಿಗೂ ಪಾಂಡವರಿಗೂ ಕುರುಕ್ಷೇತ್ರದಲ್ಲಿ ಯುದ್ಧ ನಡೆಯಿತು.
ಆ. ಕೊಟ್ಟಿರುವ ಮಾತುಗಳನ್ನು ಯಾರು? ಯಾರಿಗೆ ಹೇಳಿದರು?
೧. "ದೊಡ್ಡಪ್ಪ, ನೀವೇಕೆ ಇಂದು ಬಹಳ ಚಿಂತಾಕ್ರಾಂತರಾಗಿರುವಿರಿ"?
ಯಾರು?
Answerಅಭಿಮನ್ಯು
ಯಾರಿಗೆ?
Answerಧರ್ಮರಾಯನಿಗೆ
೨. "ನಿನ್ನನ್ನು ಪಡೆದ ನಾವೇ ಧನ್ಯರು"
ಯಾರು?
Answerಧರ್ಮರಾಯ
ಯಾರಿಗೆ?
Answerಅಭಿಮನ್ಯುವಿಗೆ
೩. "ಏನು ಕಂದಾ! ನೀನು ಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸುವೆಯಾ?
Answer"ಏನು ಕಂದಾ! ನೀನು ಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸುವೆಯಾ?"
ಯಾರು?
Answerಸುಭದ್ರೆ
ಯಾರಿಗೆ?
Answerಅಭಿಮನ್ಯುವಿಗೆ
ಇ. ಹೊಂದಿಸಿ ಬರೆಯಿರಿ.
ಅ (೧. ಸುಭದ್ರೆ ೨. ಉತ್ತರೆ ೩. ಸುಮಿತ್ರ ೪. ಧರ್ಮರಾಯ) — ಬ (ಅಭಿಮನ್ಯುವಿನ ಹೆಂಡತಿ, ಅಭಿಮನ್ಯುವಿನ ಗುರು, ಅಭಿಮನ್ಯುವಿನ ದೊಡ್ಡಪ್ಪ, ಅಭಿಮನ್ಯುವಿನ ತಾಯಿ, ಅಭಿಮನ್ಯುವಿನ ಸಾರಥಿ)
Answer1-ಅಭಿಮನ್ಯುವಿನ ತಾಯಿ, 2-ಅಭಿಮನ್ಯುವಿನ ಹೆಂಡತಿ, 3-ಅಭಿಮನ್ಯುವಿನ ಸಾರಥಿ, 4-ಅಭಿಮನ್ಯುವಿನ ದೊಡ್ಡಪ್ಪ
ಈ. ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ.
೧. ಧರ್ಮರಾಯ, ಜಯದ್ರಥ, ಭೀಮಸೇನ, ಅರ್ಜುನ
೨. ವಿಖ್ಯಾತ, ಕುಖ್ಯಾತ, ಹೆಸರುವಾಸಿ, ಪ್ರಸಿದ್ಧಿ
೩. ಸೂರ್ಯ, ರವಿ, ಆರ್ಯ, ದಿನಕರ
೪. ಅಭಿಮನ್ಯು, ಉತ್ತರೆ, ಸುಭದ್ರೆ, ಶಕುನಿ
ಉ. ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ಬರೆಯಿರಿ.
೧. ಸಂದೇಹ :
೨. ಜಯಶಾಲಿ :
೩. ನಮಸ್ಕರಿಸು :
೪. ವೀರಾವೇಶ :
ಊ. ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
೧. ಧರ್ಮರಾಯನು ಚಿಂತಾಕ್ರಾಂತನಾಗಲು ಕಾರಣವೇನು?
Answerದ್ರೋಣಾಚಾರ್ಯರು ಚಕ್ರವ್ಯೂಹ ರಚಿಸಿದ್ದರು. ಅದನ್ನು ಭೇದಿಸುವ ವಿದ್ಯೆ ಅರ್ಜುನ, ಕೃಷ್ಣ, ಬಲರಾಮರಿಗೆ ಮಾತ್ರ ಗೊತ್ತಿತ್ತು. ಆದರೆ ಅವರು ಸಂಶಪ್ತಕರನ್ನು ಎದುರಿಸಲು ಹೋಗಿದ್ದರಿಂದ ಧರ್ಮರಾಯನು ಚಿಂತಾಕ್ರಾಂತನಾದನು.
೨. ಸುಭದ್ರೆ ಅಭಿಮನ್ಯುವನ್ನು ಏನೆಂದು ಹರಸಿದಳು?
Answerಸುಭದ್ರೆಯು ಅಭಿಮನ್ಯುವಿಗೆ ಶ್ರೀಕೃಷ್ಣನ ಕೃಪೆ ಮತ್ತು ತಂದೆಯ ಶೌರ್ಯ ನಿನ್ನಲ್ಲಿದೆ, ಜಯಶಾಲಿಯಾಗಿ ಬಾ, ಮಂಗಳವಾಗಲಿ ಎಂದು ಹರಸಿದಳು.
೩. ಅಭಿಮನ್ಯು ಉತ್ತರೆಯನ್ನು ಹೇಗೆ ಸಮಾಧಾನಪಡಿಸಿದನು?
Answerಅಭಿಮನ್ಯು ಉತ್ತರೆಗೆ ಚಿಂತಿಸಬೇಡ, ನಾನು ಯುದ್ಧದಲ್ಲಿ ಜಯಶಾಲಿಯಾಗಿ ಹಿಂದಿರುಗುತ್ತೇನೆ, ಧೈರ್ಯಗೆಡದೆ ನಗುಮುಖದಿಂದ ಕಳಿಸಿಕೊಡು ಎಂದು ಸಮಾಧಾನಪಡಿಸಿದನು.
೪. ಅಭಿಮನ್ಯು ಸಾರಥಿಯನ್ನು ಕುರಿತು ಏನು ಹೇಳಿದನು?
Answerಅಭಿಮನ್ಯು ಸಾರಥಿ ಸುಮಿತ್ರನನ್ನು ಕುರಿತು, ಆದಷ್ಟು ಬೇಗ ತನ್ನನ್ನು ದ್ರೋಣಾಚಾರ್ಯರು ರಚಿಸಿರುವ ಚಕ್ರವ್ಯೂಹದ ಕಡೆಗೆ ಕರೆದುಕೊಂಡು ಹೋಗು ಎಂದು ಹೇಳಿದನು.
ಭಾಷಾ ಚಟುವಟಿಕೆ
ಅ. ಕೊಟ್ಟಿರುವ ವಿವರಣೆಯನ್ನು ಓದಿ, ಸೂಕ್ತ ಸ್ಥಳದಲ್ಲಿ ಲೇಖನ ಚಿಹ್ನೆ ಹಾಕಿ.
ಹೂದೋಟದಲ್ಲಿ ಎಷ್ಟೊಂದು ಹೂಗಳು ಅರಳಿವೆ ಕೆಂಪು ಗುಲಾಬಿ ಕಣ್ಣನ ಸೆಳೆಯುತ್ತಿದೆ ಏನಿದು ಶಬ್ದ ಓಹೋ ಸಂಪಿಗೆಯ ಕಂಪಿಗೆ ದುಂಬಿಗಳು ಝೇಂಕರಿಸುತ್ತಿವೆ ಮಲ್ಲಿಗೆ ಜಾಜಿ ಸುಗಂಧರಾಜ ಸೂರ್ಯಕಾಂತಿ ಚೆಂಡು ಹೂ ಅಬ್ಬಾ ಬಗೆ ಬಗೆಯ ಹೂಗಳ ಲೋಕವೇ ಇಲ್ಲಿದೆ
Answerಹೂದೋಟದಲ್ಲಿ ಎಷ್ಟೊಂದು ಹೂಗಳು ಅರಳಿವೆ! ಕೆಂಪು ಗುಲಾಬಿ ಕಣ್ಣನ ಸೆಳೆಯುತ್ತಿದೆ. ಏನಿದು ಶಬ್ದ? ಓಹೋ! ಸಂಪಿಗೆಯ ಕಂಪಿಗೆ ದುಂಬಿಗಳು ಝೇಂಕರಿಸುತ್ತಿವೆ. ಮಲ್ಲಿಗೆ, ಜಾಜಿ, ಸುಗಂಧರಾಜ, ಸೂರ್ಯಕಾಂತಿ, ಚೆಂಡು ಹೂ... ಅಬ್ಬಾ! ಬಗೆ ಬಗೆಯ ಹೂಗಳ ಲೋಕವೇ ಇಲ್ಲಿದೆ!
ಆ. ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ.
ಮಾದರಿ : ನೀವು + ಏಕೆ = ನೀವೇಕೆ
೧. ನಾವು + ಏಕೆ = ........................
Answerನಾವು + ಏಕೆ = ನಾವೇಕೆ
೨. ಅವರು + ಏಕೆ = ........................
Answerಅವರು + ಏಕೆ = ಅವರೇಕೆ
೩. ಅವಳು + ಏಕೆ = ........................
Answerಅವಳು + ಏಕೆ = ಅವಳೇಕೆ
೪. ಅದು + ಏಕೆ = ........................
Answerಅದು + ಏಕೆ = ಅದೇಕೆ
ಇ. ಒಗಟು ಬಿಡಿಸಿ ಉತ್ತರ ಬರೆಯಿರಿ.
೧. ಚೋಟುದ್ದ ಹುಡುಗಿಗೆ, ಮಾರುದ್ದ ಜಡೆ ........................
೨. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ ........................
೩. ಒಂಟಿ ಕಾಲು ಕೊಕ್ಕರೆ ಒಂಭೈನೂರು ತತ್ತಿ ........................
ಈ. ಕೊಟ್ಟಿರುವ ಅಕ್ಷರ ಚೌಕದಲ್ಲಿ ಮಹಾಭಾರತದಲ್ಲಿ ಬರುವ ಪಾತ್ರಗಳ ಹೆಸರುಗಳಿವೆ. ಅವುಗಳನ್ನು ಕಂಡುಹಿಡಿದು ನಿಮ್ಮ ಅಭ್ಯಾಸ ಪುಸ್ತಕದಲ್ಲಿ ಪಟ್ಟಿ ಮಾಡಿ.
Answerಅಭಿಮನ್ಯು, ಅರ್ಜುನ, ಭೀಮ, ದುರ್ಯೋಧನ, ಶಕುನಿ
(A 6x6 grid of letters:
ಕ ಜ ಯ ದ್ರ ಧ ತ
ಬ ನ ನ ರ್ಜ ಅ ಅ
ದು ಡ ಕಿ ರ್ಣ ಭಿ ರ್ಜು
ರ್ಯೋ ಸು ಷ್ಣ ರ ಮ ನ
ಧ ರ್ಮಾ ಲ ಯ ನ್ಯು ನು
ನ ಬ ಶ ಕು ನಿ ಕ
— Words hidden include ಶಕುನಿ circled as an example.)
ಬಳಕೆ ಚಟುವಟಿಕೆ
ಅ. ಈ ನಾಟಕದ ಪಾತ್ರಗಳನ್ನು ಹಂಚಿಕೊಂಡು ಶಿಕ್ಷಕರ ಮಾರ್ಗದರ್ಶನ ಪಡೆದು ತರಗತಿಯಲ್ಲಿ ಸ್ನೇಹಿತರ ಜೊತೆ ಸೇರಿ ಅಭಿನಯಿಸಿ.
ಆ. ಶಿಕ್ಷಕರ ಸಹಾಯದಿಂದ ಮಾದರಿಯಂತೆ ಪೌರಾಣಿಕ ವೀರ ಬಾಲಕರ ಪರಿಚಯವನ್ನು ಮಾಡಿ ಕೊಡಿ.
ಮಾದರಿ : ಲವ-ಕುಶ: ರಾಮ - ಸೀತೆಯರ ಅವಳಿ ಮಕ್ಕಳು. ರಾಮ-ಲಕ್ಷ್ಮಣರನ್ನು ಸೋಲಿಸಿದ ವೀರ ಬಾಲಕರು.
೧. ಏಕಲವ್ಯ -
೨. ಪ್ರಹ್ಲಾದ -
೩. ಬಬ್ರುವಾಹನ -
ಇ. ಯೋಚಿಸಿ ಬರೆಯಿರಿ.
೧. ಈ ನಾಟಕದಲ್ಲಿ ನಿನಗೆ ಇಷ್ಟವಾದ ಪಾತ್ರ ಯಾವುದು? ಏಕೆ?
೨. ಅಭಿಮನ್ಯು ಯುದ್ಧಕ್ಕೆ ಹೋಗುತ್ತೇನೆ ಎಂದಾಗ ನೀನು ಧರ್ಮರಾಯನಾಗಿದ್ದರೆ ಏನು ಮಾಡುತ್ತಿದ್ದೆ?