CRECT Education

Learn the Story: Dreamer Kalam (ಕನಸುಗಾರ ಕಲಾಂ) - Part 1

Description

A beat-by-beat retelling of the inspiring story of APJ Abdul Kalam, from a scientist's lab to the Rashtrapati Bhavan, with key Kannada vocabulary.

ಗದ್ಯ (prose) · ಸಮಿತಿ ರಚನೆ (Committee-authored)

ಪಠ್ಯFull text

ಪ್ರಸಿದ್ಧ ಮೂಳೆ ತಜ್ಞರೊಬ್ಬರು ವಿಜ್ಞಾನಿಯೊಬ್ಬರ ಪ್ರಯೋಗಾಲಯಕ್ಕೆ ಭೇಟಿ ಕೊಟ್ಟರು. ವಿಜ್ಞಾನಿ ತನ್ನ ಪ್ರಯೋಗಾಲಯದಲ್ಲಿದ್ದ ವಸ್ತುಗಳನ್ನು ಒಂದೊಂದಾಗಿ ತೋರಿಸುತ್ತಾ ವಿವರಿಸಿದರು. ಕ್ಷಿಪಣಿಯಲ್ಲಿ ಬಳಸುವುದಕ್ಕಾಗಿ ತಾನು ತಯಾರಿಸಿದ ಹಗುರವಾದ ವಸ್ತುವೊಂದನ್ನು ಹೆಮ್ಮೆಯಿಂದ ತೋರಿಸಿದರು. ಅದನ್ನು ಮೂಳೆ ತಜ್ಞರು ಕೈಯಿಂದ ಎತ್ತಿ 'ಬಲು ಹಗುರ!' ಎಂದು ಉದ್ಗರಿಸಿದರು. ಒಡನೆಯೆ ವಿಜ್ಞಾನಿಯನ್ನು ಹೈದರಾಬಾದಿನಲ್ಲಿರುವ ತಮ್ಮ 'ನಿಜಾಮ್' ಆಸ್ಪತ್ರೆಗೆ ಬರುವಂತೆ ಕೇಳಿಕೊಂಡರು. ಅಂದೆ ಜೊತೆಯಲ್ಲಿ ಕರೆದುಕೊಂಡು ಹೋದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ತೋರಿಸಿದರು. ಅಲ್ಲಿದ್ದವರಲ್ಲಿ ಹೆಚ್ಚಿನವರು ಮಕ್ಕಳು. ಅವರಲ್ಲಿ ಕೆಲವರು ಬೇರೆ ಬೇರೆ ಕಾರಣಗಳಿಂದ ಕಾಲಿನ ನ್ಯೂನತೆಗೆ ಒಳಗಾಗಿದ್ದರು. ಅವರ ಕಾಲಿಗೆ ಸುಮಾರು ಮೂರು ಕಿಲೋ ಗ್ರಾಂ ತೂಕದ ಲೋಹದ ಕ್ಯಾಲಿಪರ್ ಅಳವಡಿಸಿದ್ದರು. ಆ ಭಾರವಾದ ಕಾಲನ್ನು ಎತ್ತಿ ಇಟ್ಟು ನಡೆಯಲು ಅವರು ಬಲು ಕಷ್ಟಪಡುತ್ತಿದ್ದರು. “ಇವರ ಕಷ್ಟವನ್ನು ನಿವಾರಿಸಲು ನಿಮ್ಮಿಂದ ಸಾಧ್ಯವಿಲ್ಲವೆ?” ಎಂದು ವೈದ್ಯರು ವಿಜ್ಞಾನಿಯನ್ನು ಪ್ರಶ್ನಿಸಿದರು. ರೋಗಿಗಳ ವೇದನೆ, ವೈದ್ಯನ ಕಳಕಳಿ ವಿಜ್ಞಾನಿಯ ಮನ ಕಲಕಿತು. 'ಜನರ ನೆರವಿಗೆ ಬಾರದ ವಿಜ್ಞಾನ, ತಂತ್ರಜ್ಞಾನಕ್ಕೆ ಏನು ಅರ್ಥವಿದೆ?' ಎನ್ನಿಸಿತು. ಆ ಕ್ಷಣದಿಂದಲೇ ಅದರ ಬಗ್ಗೆ ಚಿಂತಿಸುತ್ತಾ ಹಿಂದಿರುಗಿದರು. ಸತತ ಮೂರು ವಾರಗಳ ಕಾಲ ಇದಕ್ಕಾಗಿ ಶ್ರಮಿಸಿದರು. ಹೊಸ ಕ್ಯಾಲಿಪರ್ ತಯಾರಿಸಿದರು. ಇದು ಕೇವಲ ೨೦೦ ಗ್ರಾಂ ತೂಕವಿತ್ತು. ತಯಾರಾದ ತಕ್ಷಣ ಲಗುಬಗೆಯಿಂದ ನಿಜಾಮ್ ಆಸ್ಪತ್ರೆಗೆ ಒಯ್ದರು. ವೈದ್ಯರು ಅದನ್ನು ಪರೀಕ್ಷಿಸಿ ಒಬ್ಬ ಹುಡುಗನಿಗೆ ಅಳವಡಿಸಿದರು. ಅವನು ಹೆಜ್ಜೆ ಇಟ್ಟು ನಡೆದನು. ಅವನ ಕಣ್ಣಲ್ಲಿನ ಆನಂದ ಕಂಡು ವೈದ್ಯರ ಹೃದಯ ತುಂಬಿ ಬಂದಿತು. ವಿಜ್ಞಾನಿಯ ಆನಂದಕ್ಕೆ ಪಾರವೇ ಇರಲಿಲ್ಲ. ಇಂತಹ ಮಾನವೀಯತೆ ಮೆರೆದ ವಿಜ್ಞಾನಿ ಯಾರು ಗೊತ್ತೇ? ಅವರೇ ನಮ್ಮ ಹೆಮ್ಮೆಯ ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ. ಅಬ್ದುಲ್ ಕಲಾಂ ತಮಿಳುನಾಡಿನ ರಾಮೇಶ್ವರಂ ಎಂಬ ಹಳ್ಳಿಯಲ್ಲಿ ಜನಿಸಿದ ಕನಸುಗಾರ. ಬಾಲಕರಿದ್ದಾಗ ಕಡಲ ತೀರದಲ್ಲಿ ಕುಳಿತು ಪರಿಸರವನ್ನು ವೀಕ್ಷಿಸುತ್ತಿದ್ದರು. ದಡದಲ್ಲಿದ್ದ ಹಕ್ಕಿಗಳು ನೆಲದಿಂದ ಮೇಲಕ್ಕೆ ಹಾರುತ್ತಿದ್ದವು. ಪಟಪಟನೆ ರೆಕ್ಕೆ ಬಡಿದು ಒಂದು ಕ್ಷಣ ಹಾಗೆಯೇ ತೇಲುತ್ತಿದ್ದವು. ಮತ್ತೆ ಹಾರುತ್ತಿದ್ದವು. ಇದನ್ನು ಕಂಡು 'ಮುಂದೊಂದು ದಿನ ನಾನು ಆಕಾಶದಲ್ಲಿ ಇವುಗಳಂತೆ ಹಾರಾಡುತ್ತೇನೆ' ಎಂದು ಕನಸು ಕಾಣುತ್ತಿದ್ದರು. ಈ ಕನಸುಗಾರನೇ ಮುಂದೆ ಶ್ರೇಷ್ಠ ವಿಜ್ಞಾನಿಯಾದರು. ರಾಕೆಟ್ ಹಾಗೂ ಕ್ಷಿಪಣಿ ಉಡಾವಣೆಯಲ್ಲಿ ಮಹತ್ವದ ಸಾಧನೆ ಮಾಡಿದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಗಗನದೆತ್ತರಕ್ಕೆ ಏರಿಸಿದರು. ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದರು. ಕಲಾಂರವರ ತಂದೆ ಜೈನುಲಾಬ್ದೀನ್ ಮರಕಯಾರ್. ತಾಯಿ ಆಶಿಯಮ್ಮ. ಕಲಾಂರವರು ತಮ್ಮ ಜೀವನದ ಅನುಭವಗಳನ್ನು 'ಅಗ್ನಿಯ ರೆಕ್ಕೆಗಳು' ಎಂಬ ಆತ್ಮಕಥನದಲ್ಲಿ ದಾಖಲಿಸಿದ್ದಾರೆ. ಗುರುಹಿರಿಯರು ಇವರಲ್ಲಿ ಕನಸುಗಳನ್ನು ಹಾಗೂ ಆತ್ಮವಿಶ್ವಾಸವನ್ನು ಬಾಲ್ಯದಲ್ಲಿ ತುಂಬುತ್ತಿದ್ದರು. ಆದುದರಿಂದ ಕಲಾಂ ಇಂದಿನ ಮಕ್ಕಳಿಗೆ 'ಕನಸು ಕಾಣಿರಿ' ಎಂದು ಪ್ರೋತ್ಸಾಹಿಸುತ್ತಿದ್ದರು. ಇವರ ಸಾಧನೆಯನ್ನು ಗಮನಿಸಿ ಜಗತ್ತಿನ ಸುಮಾರು ೪೦ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿವೆ. ಭಾರತ ಸರ್ಕಾರ 'ಪದ್ಮಭೂಷಣ', 'ಪದ್ಮವಿಭೂಷಣ' ಹಾಗೂ 'ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ದಿನಾಂಕ: ೨೭-೦೭-೨೦೧೫ರಂದು ವಿಧಿವಶರಾದರು. ಕನಸುಗಳೇ ಆಲೋಚನೆಗಳು. ಕೃತಿ ಆಲೋಚನೆಗಳ ಫಲ.

"ಕನಸುಗಳೇ ಆಲೋಚನೆಗಳು. ಕೃತಿ ಆಲೋಚನೆಗಳ ಫಲ." — "Dreams are thoughts. Action is the fruit of thoughts."

ಪದಗಳ ಅರ್ಥword meanings

KannadaPronunciationMeaning
ಹೆಮ್ಮೆhem-mepride
ಹಿರಿಮೆhi-ri-megreatness
ಅಭಿಮಾನa-bhi-maa-napride, affection
ವೇದನೆvay-da-nepain, agony
ನೋವುno-vupain
ಯಾತನೆyaa-ta-nesuffering
ಶ್ರಮಿಸುshra-mi-suto work hard, strive
ದುಡಿdu-dito toil, work
ಕಷ್ಟಪಡುkash-ta-pa-duto struggle
ವೀಕ್ಷಿಸುveek-shi-suto observe
ನೋಡುno-duto see
ಅವಲೋಕಿಸುa-va-lo-ki-suto observe, examine
ಗಗನga-ga-nasky
ಆಕಾಶaa-kaa-shasky
ಆಗಸaa-ga-sasky
ಬಾನುbaa-nusky
ತೀರtee-rashore
ದಡda-dabank, shore
ಉಡಾವಣೆu-daa-va-nelaunch
ಹಾರಿಸುhaa-ri-suto fly, launch
ಪ್ರೋತ್ಸಾಹಿಸುpro-tsaa-hi-suto encourage
ಹುರಿದುಂಬಿಸುhu-ri-dum-bi-suto cheer up, encourage
ಉತ್ತೇಜಿಸುut-tay-ji-suto stimulate, encourage

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ

  1. ೧. ಪ್ರಯೋಗಾಲಯಕ್ಕೆ ಭೇಟಿ ಕೊಟ್ಟವರು ಯಾರು?

    Answer

    ಪ್ರಯೋಗಾಲಯಕ್ಕೆ ಭೇಟಿ ಕೊಟ್ಟವರು ಪ್ರಸಿದ್ಧ ಮೂಳೆ ತಜ್ಞರು.

  2. ೨. ವಿಜ್ಞಾನಿಯನ್ನು ವೈದ್ಯರು ಯಾವ ಆಸ್ಪತ್ರೆಗೆ ಕರೆದುಕೊಂಡು ಹೋದರು?

    Answer

    ವಿಜ್ಞಾನಿಯನ್ನು ವೈದ್ಯರು ಹೈದರಾಬಾದಿನಲ್ಲಿರುವ 'ನಿಜಾಮ್' ಆಸ್ಪತ್ರೆಗೆ ಕರೆದುಕೊಂಡು ಹೋದರು.

  3. ೩. ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಏನಾಗಿತ್ತು?

    Answer

    ಆಸ್ಪತ್ರೆಯಲ್ಲಿದ್ದ ರೋಗಿಗಳು ಕಾಲಿನ ನ್ಯೂನತೆಗೆ ಒಳಗಾಗಿದ್ದರು.

  4. ೪. ರೋಗಿಗಳ ಕಾಲಿಗೆ ಏನನ್ನು ಅಳವಡಿಸಲಾಗಿತ್ತು?

    Answer

    ರೋಗಿಗಳ ಕಾಲಿಗೆ ಲೋಹದ ಕ್ಯಾಲಿಪರ್ ಅಳವಡಿಸಲಾಗಿತ್ತು.

  5. ೫. ಅಬ್ದುಲ್ ಕಲಾಂರವರ ತಂದೆ - ತಾಯಿಯ ಹೆಸರೇನು?

    Answer

    ಅಬ್ದುಲ್ ಕಲಾಂರವರ ತಂದೆಯ ಹೆಸರು ಜೈನುಲಾಬ್ದೀನ್ ಮರಕಯಾರ್ ಹಾಗೂ ತಾಯಿಯ ಹೆಸರು ಆಶಿಯಮ್ಮ.

  6. ೬. ಕಲಾಂರವರ ಆತ್ಮಕಥನದ ಹೆಸರೇನು?

    Answer

    ಕಲಾಂರವರ ಆತ್ಮಕಥನದ ಹೆಸರು 'ಅಗ್ನಿಯ ರೆಕ್ಕೆಗಳು'.

ಆ. ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1. ೧. ವೈದ್ಯರ ಹೃದಯ ತುಂಬಿ ಬಂದಿತು, ಏಕೆ?

    Answer

    ವಿಜ್ಞಾನಿ ತಯಾರಿಸಿದ ಹೊಸ ಹಗುರವಾದ ಕ್ಯಾಲಿಪರ್ ಅಳವಡಿಸಿದ ಹುಡುಗನು ನಡೆದಾಗ ಅವನ ಕಣ್ಣಲ್ಲಿನ ಆನಂದವನ್ನು ಕಂಡು ವೈದ್ಯರ ಹೃದಯ ತುಂಬಿ ಬಂದಿತು.

  2. ೨. ಕಲಾಂ ಬಾಲ್ಯದಲ್ಲಿ ಯಾವ ಕನಸನ್ನು ಕಾಣುತ್ತಿದ್ದರು?

    Answer

    ಕಲಾಂ ಬಾಲ್ಯದಲ್ಲಿ ಕಡಲ ತೀರದಲ್ಲಿ ಹಕ್ಕಿಗಳು ಹಾರುವುದನ್ನು ನೋಡಿ, ಮುಂದೊಂದು ದಿನ ತಾನೂ ಆಕಾಶದಲ್ಲಿ ಹಕ್ಕಿಗಳಂತೆ ಹಾರಾಡುತ್ತೇನೆ ಎಂಬ ಕನಸನ್ನು ಕಾಣುತ್ತಿದ್ದರು.

  3. ೩. ಕಲಾಂ ಅವರಿಗೆ ಬಂದ ಪ್ರಮುಖ ಪ್ರಶಸ್ತಿಗಳು ಯಾವುವು?

    Answer

    ಕಲಾಂ ಅವರಿಗೆ ಬಂದ ಪ್ರಮುಖ ಪ್ರಶಸ್ತಿಗಳು 'ಪದ್ಮಭೂಷಣ', 'ಪದ್ಮವಿಭೂಷಣ' ಮತ್ತು 'ಭಾರತ ರತ್ನ'.

ಇ. ಈ ಮಾತನ್ನು ಯಾರು? ಯಾರಿಗೆ ಹೇಳಿದರು?

  1. ೧. “ಇವರ ಕಷ್ಟವನ್ನು ನಿವಾರಿಸಲು ನಿಮ್ಮಿಂದ ಸಾಧ್ಯವಿಲ್ಲವೆ?”

  2. ಯಾರು?

    Answer

    ವೈದ್ಯರು

  3. ಯಾರಿಗೆ?

    Answer

    ವಿಜ್ಞಾನಿಗೆ

  4. ೨. “ಕನಸು ಕಾಣಿರಿ”

  5. ಯಾರು?

    Answer

    ಕಲಾಂ

  6. ಯಾರಿಗೆ?

    Answer

    ಇಂದಿನ ಮಕ್ಕಳಿಗೆ

ಭಾಷಾ ಚಟುವಟಿಕೆ

ಅ. ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ

  1. ಹಗುರ × .....................................................

    Answer

    ಭಾರ

  2. ಕಷ್ಟ × .....................................................

    Answer

    ಸುಖ

  3. ಮೇಲೆ × .....................................................

    Answer

    ಕೆಳಗೆ

ಆ. ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ರಚಿಸಿ ಬರೆಯಿರಿ.

  1. ಚಿಕಿತ್ಸೆ : ........................................................................................................

    Model sentence

    ಚಿಕಿತ್ಸೆ: ಅಜ್ಜನಿಗೆ ಕಾಲು ನೋವಾದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದೆವು.

  2. ಗಗನ : ........................................................................................................

    Model sentence

    ಗಗನ: ರಾತ್ರಿ ಗಗನದಲ್ಲಿ ಚಂದ್ರ ಮತ್ತು ನಕ್ಷತ್ರಗಳು ಹೊಳೆಯುತ್ತಿದ್ದವು.

  3. ಸಾಧನೆ : ........................................................................................................

    Model sentence

    ಸಾಧನೆ: ನನ್ನ ಸ್ನೇಹಿತ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ.

  4. ಕನಸು : ........................................................................................................

    Model sentence

    ಕನಸು: ನನಗೆ ಕಳೆದ ರಾತ್ರಿ ಬಣ್ಣಬಣ್ಣದ ಹೂವಿನ ತೋಟದ ಕನಸು ಬಿತ್ತು.

ಇ. ಮಾದರಿಯಂತೆ ಕೂಡಿಸಿ ಪದ ರಚಿಸಿ.

  1. ೧. ಮಾದರಿ : ಮಾಡು + ಇಸು = ಮಾಡಿಸು.

  2. ತಿನ್ನು + ಇಸು ..........................................................................

    Answer

    ತಿನ್ನಿಸು

  3. ಓಡು + ಇಸು ..........................................................................

    Answer

    ಓಡಿಸು

  4. ಬಿಡು + ಇಸು ..........................................................................

    Answer

    ಬಿಡಿಸು

  5. ಆಡು + ಇಸು ..........................................................................

    Answer

    ಆಡಿಸು

ಈ. ಅಬ್ದುಲ್ ಕಲಾಂರವರಿಗೆ ಸಂಬಂಧಿಸಿದ ಪದಗಳನ್ನು ಆಯ್ದು ಚೌಕದಲ್ಲಿ ಬರೆಯಿರಿ.

  1. (ಭಾರತ ರತ್ನ, ಜ್ಞಾನಪೀಠ, ರಾಷ್ಟ್ರಪತಿ, ಮುಖ್ಯಮಂತ್ರಿ, ಆಶಿಯಮ್ಮ, ಕ್ಷಿಪಣಿ, ಹಡಗು, ಕ್ಯಾಲಿಪರ್)

  2. (A hierarchy chart with "ಕಲಾಂ" at the top and 5 empty boxes below it to fill with relevant words from the list).

    Answer

    ಭಾರತ ರತ್ನ ರಾಷ್ಟ್ರಪತಿ ಆಶಿಯಮ್ಮ ಕ್ಷಿಪಣಿ ಕ್ಯಾಲಿಪರ್

ಉ. ಈ ಪಾಠದಲ್ಲಿ ಬರುವ ಹೆಸರುಗಳನ್ನು ಆಯ್ದು ಬರೆಯಿರಿ.

  1. ವ್ಯಕ್ತಿ ಹೆಸರುಗಳು : .................................... ....................................

    Answer

    ವ್ಯಕ್ತಿ ಹೆಸರುಗಳು : ಅಬ್ದುಲ್ ಕಲಾಂ, ಜೈನುಲಾಬ್ದೀನ್‌ ಮರಕಯಾರ್

  2. ವೃತ್ತಿಯ ಹೆಸರುಗಳು : .................................... ....................................

    Answer

    ವೃತ್ತಿಯ ಹೆಸರುಗಳು : ವಿಜ್ಞಾನಿ, ವೈದ್ಯರು

  3. ವಸ್ತುವಿನ ಹೆಸರುಗಳು : .................................... ....................................

    Answer

    ವಸ್ತುವಿನ ಹೆಸರುಗಳು : ಕ್ಯಾಲಿಪರ್, ಕ್ಷಿಪಣಿ

ಊ. ಮಾದರಿಯಂತೆ ಸೂಕ್ತ ಪದ ರಚಿಸಿ.

  1. ಮಾದರಿ : ಪಡೆದನು – ಪಡೆಯುತ್ತಾನೆ – ಪಡೆಯುವನು

  2. ನಡೆದನು ............................ ............................

    Answer

    ನಡೆಯುತ್ತಾನೆ – ನಡೆಯುವನು

  3. ಹಾರಿದನು ............................ ............................

    Answer

    ಹಾರುತ್ತಾನೆ – ಹಾರುವನು

  4. ಬರೆದನು ............................ ............................

    Answer

    ಬರೆಯುತ್ತಾನೆ – ಬರೆಯುವನು

  5. ಓಡಿದನು ............................ ............................

    Answer

    ಓಡುತ್ತಾನೆ – ಓಡುವನು

  6. ಆಡಿದನು ............................ ............................

    Answer

    ಆಡುತ್ತಾನೆ – ಆಡುವನು

ಋ. ಕೊಟ್ಟಿರುವ ಪದಗಳನ್ನು ಸರಿಯಾಗಿ ಜೋಡಿಸಿ ವಾಕ್ಯ ರಚಿಸಿ ಬರೆಯಿರಿ.

  1. ರೈತರು – ಪುಸ್ತಕವನ್ನು – ಅಳೆದರು

    Answer

    ರೈತರು ಹೊಲವನ್ನು ಉತ್ತುರು.

  2. ಮಕ್ಕಳು – ರಾಜ್ಯವನ್ನು – ಕೆತ್ತಿದರು

    Answer

    ಮಕ್ಕಳು ಪುಸ್ತಕವನ್ನು ಓದಿದರು.

  3. ಗುರುಗಳು – ಹೊಲವನ್ನು – ಹಾಡಿದರು

    Answer

    ಗುರುಗಳು ಹಾಡನ್ನು ಹಾಡಿದರು.

  4. ಶಿಲ್ಪಿಗಳು – ಹಾಡನ್ನು – ಓದಿದರು

    Answer

    ಶಿಲ್ಪಿಗಳು ವಿಗ್ರಹಗಳನ್ನು ಕೆತ್ತಿದರು.

  5. ರಾಜರು – ವಿಗ್ರಹಗಳನ್ನು – ಉತ್ತುರು

    Answer

    ರಾಜರು ರಾಜ್ಯವನ್ನು ಅಳೆದರು.

ಎ. ಪದಬಂಧ ಪೂರ್ಣಗೊಳಿಸಿ.

  1. (A 10-clue crossword puzzle grid is shown with Kannada letters to be filled in).

  2. ಎಡದಿಂದ ಬಲಕ್ಕೆ

  3. ೧. ಆರರಿಂದ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಇದು ಕಡ್ಡಾಯ (೪)

    Answer

    ವಿದ್ಯಾಲಯ

  4. ೪. ಹೊಸದಾಗಿರುವ ನಮ್ಮ ದೇಶ (೫)

    Answer

    ಭಾರತವರ್ಷ

  5. ೭. ಸ್ನೇಹಿತ ಇಲ್ಲಿದ್ದಾನೆ (೨)

    Answer

    ಮಿತ್ರ

  6. ೮. ಗಣಿಯಲ್ಲಿ ಸಿಕ್ಕಿದ ಪುಸ್ತಕ (೩)

  7. ೧೦. ಮತ್ತೆ ಮತ್ತೆ ಯತ್ನಿಸು (೩)

    Answer

    ಪ್ರಯತ್ನ

  8. ಮೇಲಿನಿಂದ ಕೆಳಕ್ಕೆ

  9. ೧. ಆಕಾಶದಲ್ಲಿ ಹಕ್ಕಿಯಂತೆ ಹಾರುವ ವಾಹನ (೩)

    Answer

    ವಿಮಾನ

  10. ೨. ಮರದ ಹತ್ತಿರ ನಡೆದ ಯುದ್ಧ (೩)

    Answer

    ಸಮರ

  11. ೩. ಉಪಗ್ರಹ ಉಡಾಯಿಸುವ ಸಾಧನ (೩)

    Answer

    ರಾಕೆಟ್

  12. ೫. ಭಾರತ ಸರ್ಕಾರ ಕೊಡುವ ಅತ್ಯುನ್ನತ ಪ್ರಶಸ್ತಿ (೫)

    Answer

    ಭಾರತರತ್ನ

  13. ೬. ಕರ್ನಾಟಕ ರಾಜ್ಯದ ನೆರೆನಾಡು (೫)

    Answer

    ತಮಿಳುನಾಡು

  14. ೯. ನಸುಕಿನಲ್ಲಿ ಕಂಡ ಸ್ವಪ್ನ (೩)

    Answer

    ಕನಸು

ಬಳಕೆ ಚಟುವಟಿಕೆ

ಅ. ಊಹಿಸಿ ಬರೆಯಿರಿ.

  1. ೧. ನೀನು ಶಾಲಾ ಮಂತ್ರಿಮಂಡಲದಲ್ಲಿ ಸ್ವಚ್ಛತಾ ಮಂತ್ರಿಯಾದರೆ ಏನು ಮಾಡುವೆ?

    Answer

    ನಾನು ಸ್ವಚ್ಛತಾ ಮಂತ್ರಿಯಾದರೆ ಶಾಲೆಯ ಆವರಣವನ್ನು ಪ್ರತಿದಿನವೂ ಗುಡಿಸಿ ಸ್ವಚ್ಛವಾಗಿಡುತ್ತೇನೆ. ಎಲ್ಲಾ ಮಕ್ಕಳಿಗೂ ಕಸವನ್ನು ಕಸದ ಬುಟ್ಟಿಗೆ ಹಾಕಲು ಹೇಳಿಕೊಡುತ್ತೇನೆ.

ಆ. ಯೋಚಿಸಿ ಉತ್ತರಿಸಿ.

  1. ೧. ಕೇಸರಿ, ಬಿಳಿ, ಹಸಿರು ಬಣ್ಣ ನಡುವೆ ಚಕ್ರ. ಹಾಗಾದರೆ ನಾನು ಯಾರು?

    Answer

    ನಾನು ಭಾರತದ ರಾಷ್ಟ್ರಧ್ವಜ.

  2. ೨. ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು?

    Answer

    ನಾನು ಕನ್ಯಾಕುಮಾರಿ.

  3. ೩. ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ ಹಿಡಿದಿದ್ದೆ ಹಾಗಾದರೆ ನಾನು ಯಾರು?

    Answer

    ನಾನು ಮಹಾತ್ಮ ಗಾಂಧಿ.

ಇ. ಕೆಳಗಿನ ಪದಗಳನ್ನು ಬಳಸಿ ರಾಷ್ಟ್ರನಾಯಕ ಗಾಂಧೀಜಿಯವರ ಬಗ್ಗೆ ಕುರಿತು ಬರೆಯಿರಿ.

  1. ಗಾಂಧೀಜಿ, ರಾಷ್ಟ್ರಪಿತ, ಸ್ವಾತಂತ್ರ್ಯ ಹೋರಾಟ, ಭಾರತ, ಹಳ್ಳಿ ಉದ್ದಾರ, ಬಡತನ, ಸ್ವಚ್ಛತೆ, ಸ್ವ ಉದ್ಯೋಗ, ಸರಳ ಜೀವನ.

    Answer

    ಗಾಂಧೀಜಿಯವರು ಭಾರತದ ರಾಷ್ಟ್ರಪಿತ. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಅವರು ಹಳ್ಳಿಗಳ ಉದ್ದಾರಕ್ಕಾಗಿ ಮತ್ತು ಬಡತನ ನಿರ್ಮೂಲನೆಗಾಗಿ ಶ್ರಮಿಸಿದರು. ಸ್ವಚ್ಛತೆ, ಸ್ವ ಉದ್ಯೋಗ ಮತ್ತು ಸರಳ ಜೀವನದ ಮಹತ್ವವನ್ನು ಎಲ್ಲರಿಗೂ ಕಲಿಸಿದರು.

ಆಟ ಆಡೋಣ

  1. ರೈತ-ನರಿ ಆಟ.

  2. ಇದು ಐದಕ್ಕಿಂತ ಹೆಚ್ಚು ಮಂದಿ ಆಡುವ ಆಟ. ಎಲ್ಲರೂ ವೃತ್ತಾಕಾರದಲ್ಲಿ ನಿಲ್ಲಬೇಕು. ಒಬ್ಬನು ವೃತ್ತದ ಹೊರಗೆ ಹೋಗಬೇಕು. ಅವನು 'ನರಿ' ವೃತ್ತದ ಮಧ್ಯದಲ್ಲಿ ಒಂದು ವಸ್ತುವನ್ನು ಇರಿಸಬೇಕು. ಅದು 'ತರಕಾರಿ' ಎಂದು ಕಲ್ಪಿಸಿಕೊಳ್ಳಬೇಕು. ನರಿಗೆ ತಿಳಿಯದಂತೆ ವೃತ್ತದಲ್ಲಿ ನಿಂತವರಲ್ಲಿ ಯಾರಾದರೊಬ್ಬ ರೈತನಾಗಬೇಕು. ನರಿ ವೃತ್ತದೊಳಗೆ ಬಂದು ವಸ್ತುವನ್ನು ಒಯ್ಯುವಾಗ ರೈತ ಓಡಿ ಮುಟ್ಟಬೇಕು. ಮುಟ್ಟಲು ಆಗದಿದ್ದರೆ ಅವನು ನರಿಯಾಗುತ್ತಾನೆ. ನರಿಯಾಗಿದ್ದವನು ಒಬ್ಬ ವ್ಯಕ್ತಿಯ ಹೆಸರು ಹೇಳಬೇಕು. ಹೀಗೆ ಆಟ ಮುಂದುವರಿಯುತ್ತದೆ.

  3. ಜಾಣ ಮರಿ

  4. ನೀನೀಗ ಸರಳ ಕ್ರಿಯಾತ್ಮಕ ನಿಯಮಗಳನ್ನು ಅರ್ಥ ಮಾಡಿಕೊಂಡು ವಾಕ್ಯಗಳನ್ನು ರಚಿಸುವ ಸಾಮರ್ಥ್ಯವನ್ನು ಪಡೆದುಕೊಂಡಿರುವೆ ಅಲ್ಲವೇ?

    Answer

    ಹೌದು, ನಾನು ನಿಯಮಗಳನ್ನು ಅರ್ಥಮಾಡಿಕೊಂಡು ವಾಕ್ಯಗಳನ್ನು ರಚಿಸಬಲ್ಲೆ.

Interactive Lab

ಹೆಮ್ಮೆhem-mepride
ಹಿರಿಮೆhi-ri-megreatness
ಅಭಿಮಾನa-bhi-maa-napride, affection
ವೇದನೆvay-da-nepain, agony
ನೋವುno-vupain
ಯಾತನೆyaa-ta-nesuffering
ಶ್ರಮಿಸುshra-mi-suto work hard, strive
ದುಡಿdu-dito toil, work
ಕಷ್ಟಪಡುkash-ta-pa-duto struggle
ವೀಕ್ಷಿಸುveek-shi-suto observe
ನೋಡುno-duto see
ಅವಲೋಕಿಸುa-va-lo-ki-suto observe, examine
ಗಗನga-ga-nasky
ಆಕಾಶaa-kaa-shasky
ಆಗಸaa-ga-sasky
ಬಾನುbaa-nusky
ತೀರtee-rashore
ದಡda-dabank, shore
ಉಡಾವಣೆu-daa-va-nelaunch
ಹಾರಿಸುhaa-ri-suto fly, launch
ಪ್ರೋತ್ಸಾಹಿಸುpro-tsaa-hi-suto encourage
ಹುರಿದುಂಬಿಸುhu-ri-dum-bi-suto cheer up, encourage
ಉತ್ತೇಜಿಸುut-tay-ji-suto stimulate, encourage