CRECT Education

Lesson 15: Dignity of Labor (ದುಡಿಮೆಯ ಗರಿಮೆ)

Description

A poem by V.B. Kulamarva celebrating all kinds of work. Learn key Kannada words like ದುಡಿಮೆ, ಗರಿಮೆ, and more.

ಪದ್ಯ (poem) · ವಿ.ಬಿ. ಕುಳಮರ್ವ (V.B. Kulamarva)

ಪಠ್ಯFull text

ಕಬ್ಬಿಣ ಕುಟ್ಟುವ ಹಾರೆಯ ಮಾಡುತ ಮುದದಿಂದ ಕೊಡುವನು ರೈತನಿಗೆ । ಬೆಳೆಯನು ಬೆಳೆಯಲು ನೆರವನು ನೀಡುವ ಜನರನು ಸಲಹುವ ದಾತನಿಗೆ ।। ಕಾಡನು ಸೇರುತ ಒಣಮರ ಹುಡುಕುತ ನೇಗಿಲ ಅಳತೆಗೆ ಕೊಯ್ಯುವನು । ಉತ್ತಮ 'ಹಲ'ವನು ಮಾಡುತ ನೊಗವನು ಕೆತ್ತನೆಯೊಂದಿಗೆ ನೀಡುವನು ।। ಬಟ್ಟೆಯ ಗಂಟನು ಒಟ್ಟಿಗೆ ಸೇರಿಸಿ ಕತ್ತೆಯ ಬೆನ್ನಲಿ ಇರಿಸುವನು । ಹರಿಯುವ ನೀರನು ಕಲುಷಿತಗೊಳಿಸದೆ ಒಗೆಯುವನೆಲ್ಲರ ವಸನವನು ।। ಕಡಲಲಿ ಬಲೆಯನ್ನು ಬೀಸುತ ಮೀನನು ಸಡಗರದಿಂದಲಿ ಹಿಡಿಯುವನು । ಸಂತೆಗೆ ಸಾಗಿಸಿ ಮಾರಲು ಕುಳಿತರೆ ಸಂಜೆಗೆ ಹಣವನು ಎಣಿಸುವನು ।। ಹೊಸ ಹೊಸ ಬಗೆಯಲಿ ಉಡುಗೆಯ ಹೊಲಿಯುತ ಮೈಯನು ಮನವನು ಬೆಳಗಿಸುವೆ । ಅಪ್ಪನ ಅಮ್ಮನ ಮಕ್ಕಳ ಬಳಗದ ಮೆಚ್ಚುಗೆ ಗಳಿಸಲು ತವಕಿಸುವೆ ।। -ವಿ.ಬಿ. ಕುಳಮರ್ವ.

"ವೃತ್ತಿ ನಿರತ ವ್ಯಕ್ತಿ, ನಾಡಿಗವನೆ ಶಕ್ತಿ" — "A person engaged in a profession is the strength of the nation." A great affirmation about the dignity and value of all labor.

ಪದಗಳ ಅರ್ಥword meanings

KannadaPronunciationMeaning
ದುಡಿಮೆdu-di-meಕೆಲಸ, ಸಂಪಾದನೆ (work, earning)
ಗರಿಮೆga-ri-meಹೆಮ್ಮೆ, ಹಿರಿಮೆ (pride, greatness)
ಕಸುಬುka-su-buಕೆಲಸ, ಉದ್ಯೋಗ (profession, job)
ರೈತrai-taಬೇಸಾಯ ಮಾಡುವವನು (farmer)
ನೆರವುne-ra-vuಸಹಾಯ, ಬೆಂಬಲ, ಆಧಾರ (help, support)
ಸಲಹುsa-la-huಕಾಪಾಡು, ರಕ್ಷಿಸು (protect, look after)
ಹಣha-naದುಡ್ಡು, ಧನ (money, wealth)
ದಾತdaa-taದಾನಿ, ಒಡೆಯ (donor, provider)
ಸಂಜೆsan-jeಸಾಯಂಕಾಲ, ಸೂರ್ಯ ಮುಳುಗುವ ಸಮಯ (evening, sunset time)
ಕೊಯ್ಯುkoy-yuಕತ್ತರಿಸು, ಸೀಳು (cut, chop)
ಹುಡುಕುhu-du-kuಶೋಧಿಸು, ಅರಸು (search, look for)
ತವಕಿಸುta-va-ki-suಆತುರಪಡು (to be eager, anxious)
ಹಲha-laನೇಗಿಲು (plough)
ಮೆಚ್ಚುಗೆmec-chu-geಒಪ್ಪಿಗೆ, ಸಂತೋಷ (appreciation, approval)
ಇರಿಸುi-ri-suಇಡು, ಹೇರು (place, put)
ಕಲುಷಿತka-lu-shi-taಕದಡಿದ, ಮಲಿನ (polluted, dirty)
ವಸನva-sa-naಬಟ್ಟೆ, ಉಡುಗೆ - ಉಡುಪು (cloth, dress)

ಟಿಪ್ಪಣಿnotes

  • ಹಾರೆ - ಒಂದು ಬಗೆಯ ಕಬ್ಬಿಣದ ಉಪಕರಣ. (A type of iron tool/crowbar.)
  • ಸಂತೆ - ನಿಯಮಿತ ಕಾಲಾವಧಿಗೆ ಕೊಂಡುಕೊಳ್ಳುವುದಕ್ಕಾಗಿ ಸೇರುವ ಜನರ ಗುಂಪು, ಜನಗಳ ಕೂಟ, ವಿನಿಮಯ ಸ್ಥಳ, ಕೊಂಡುಕೊಳ್ಳು ನಡೆಯುವ ಪೇಟೆ. (A regular market/fair where people gather to buy and sell goods.)
  • ನೇಗಿಲು - ಭೂಮಿಯನ್ನು ಉಳುವ ಸಾಧನ. (A tool used for ploughing land.)

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ

  1. ೧. ಕಬ್ಬಿಣದಿಂದ ತಯಾರಿಸುವ ಸಲಕರಣೆಗಳು ಯಾವುವು?

    Answer

    ಕಬ್ಬಿಣದಿಂದ ಹಾರೆಯನ್ನು ತಯಾರಿಸುತ್ತಾರೆ.

  2. ೨. ಜನರನ್ನು ಸಲಹುವ ದಾತ ಯಾರು?

    Answer

    ಜನರನ್ನು ಸಲಹುವ ದಾತ ರೈತ.

  3. ೩. ನೊಗವನ್ನು ಯಾವುದರಿಂದ ಮಾಡುವರು?

    Answer

    ನೊಗವನ್ನು ಒಣ ಮರದಿಂದ ಮಾಡುತ್ತಾರೆ.

  4. ೪. ಮೀನನ್ನು ಹೇಗೆ ಹಿಡಿಯುವರು?

    Answer

    ಕಡಲಲ್ಲಿ ಬಲೆಯನ್ನು ಬೀಸಿ ಸಡಗರದಿಂದ ಮೀನನ್ನು ಹಿಡಿಯುತ್ತಾರೆ.

ಆ. ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ

  1. ೧. ಬಳಗದ ಮೆಚ್ಚುಗೆಯನ್ನು ಬಟ್ಟೆ ಹೊಲಿಯುವವರು ಹೇಗೆ ಗಳಿಸಬಹುದು?

    Answer

    ಬಟ್ಟೆ ಹೊಲಿಯುವವರು ಹೊಸ ಹೊಸ ಬಗೆಯಲ್ಲಿ ಉಡುಗೆಯನ್ನು ಹೊಲಿಯಬೇಕು. ಹಾಗೆ ಮೈಯನ್ನು ಮನವನ್ನು ಬೆಳಗಿಸಿದರೆ ಅಪ್ಪ-ಅಮ್ಮ ಮತ್ತು ಮಕ್ಕಳ ಬಳಗದ ಮೆಚ್ಚುಗೆಯನ್ನು ಗಳಿಸಬಹುದು.

  2. ೨. 'ನೇಗಿಲನ್ನು' ಹೇಗೆ ಮಾಡುವರು?

    Answer

    ನೇಗಿಲನ್ನು ಮಾಡಲು ಕಾಡಿಗೆ ಹೋಗಿ ಒಣಮರವನ್ನು ಹುಡುಕುತ್ತಾರೆ. ನೇಗಿಲಿನ ಅಳತೆಗೆ ಮರವನ್ನು ಕೊಯ್ದು, ಉತ್ತಮ ಹಲವನ್ನು ಕೆತ್ತನೆಯೊಂದಿಗೆ ಮಾಡಿ ಕೊಡುತ್ತಾರೆ.

ಇ. ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ

  1. (ಕಾರ್ಮಿಕ, ಕತ್ತೆ, ರೈತ, ಬಲೆ, ಮರ)

  2. ೧. ಜನರನ್ನು ಸಲಹುವವನು ....................................

    Answer

    ಜನರನ್ನು ಸಲಹುವವನು ರೈತ.

  3. ೨. ನೊಗವನ್ನು .................................... ದಿಂದ ಮಾಡುತ್ತಾರೆ.

    Answer

    ನೊಗವನ್ನು ಮರದಿಂದ ಮಾಡುತ್ತಾರೆ.

  4. ೩. ಬಟ್ಟೆಯ ಗಂಟನ್ನು .................................... ಹೊರುತ್ತದೆ.

    Answer

    ಬಟ್ಟೆಯ ಗಂಟನ್ನು ಕತ್ತೆ ಹೊರುತ್ತದೆ.

  5. ೪. ಮೀನನ್ನು ಹಿಡಿಯಲು .................................... ಬಳಸುತ್ತಾರೆ.

    Answer

    ಮೀನನ್ನು ಹಿಡಿಯಲು ಬಲೆ ಬಳಸುತ್ತಾರೆ.

ಈ. ಖಾಲಿ ಜಾಗದಲ್ಲಿ ಪದ್ಯದ ಮುಂದಿನ ಸಾಲುಗಳನ್ನು ಬರೆದು ಪೂರ್ಣಗೊಳಿಸಿ.

  1. ಹೊಸ ಹೊಸ ಬಗೆಯಲಿ ....................................

    Answer

    ಹೊಸ ಹೊಸ ಬಗೆಯಲಿ ಉಡುಗೆಯ ಹೊಲಿಯುತ

  2. ........................................................................ ಬೆಳಗಿಸುವೆ

    Answer

    ಮೈಯನು ಮನವನು

  3. ಅಪ್ಪನ ಅಮ್ಮನ ....................................

    Answer

    ಅಪ್ಪನ ಅಮ್ಮನ ಮಕ್ಕಳ ಬಳಗದ

  4. ........................................................................ ತವಕಿಸುವೆ

    Answer

    ಮೆಚ್ಚುಗೆ ಗಳಿಸಲು

ಭಾಷಾ ಚಟುವಟಿಕೆ

ಅ. ಕೊಟ್ಟಿರುವ ವಿರುದ್ಧಾರ್ಥಕ ಪದಗಳನ್ನು ಮಾದರಿಯಂತೆ ವಾಕ್ಯಗಳಲ್ಲಿ ಬಳಕೆ ಮಾಡಿ.

  1. ಮಾದರಿ : ದೂರ x ಹತ್ತಿರ = ನಾನು ಎಸೆದ ಕಲ್ಲು ದೂರ ಬಿದ್ದಿತು.

  2. ನಮ್ಮ ಮನೆ ಶಾಲೆಯ ಹತ್ತಿರವಿದೆ.

  3. ೧. ರಾತ್ರಿ x ಹಗಲು

    Answer

    ರಾತ್ರಿ: ನಾನು ರಾತ್ರಿ ಬೇಗ ಮಲಗುತ್ತೇನೆ. ಹಗಲು: ಹಗಲಿನಲ್ಲಿ ನಾವು ಶಾಲೆಗೆ ಹೋಗುತ್ತೇವೆ.

  4. ೨. ಹಿಗ್ಗು x ಕುಗ್ಗು

    Answer

    ಹಿಗ್ಗು: ಗಾಳಿ ತುಂಬಿದ ಬಲೂನು ಹಿಗ್ಗುತ್ತದೆ. ಕುಗ್ಗು: ಗಾಳಿ ಹೋದಾಗ ಬಲೂನು ಕುಗ್ಗುತ್ತದೆ.

  5. ೩. ಸುಳ್ಳು x ನಿಜ

    Answer

    ಸುಳ್ಳು: ನಾವು ಸುಳ್ಳು ಹೇಳಬಾರದು. ನಿಜ: ನಾವು ಯಾವಾಗಲೂ ನಿಜ ಹೇಳಬೇಕು.

  6. ೪. ಚಿಕ್ಕ x ದೊಡ್ಡ

    Answer

    ಚಿಕ್ಕ: ನನ್ನ ತಂಗಿ ಚಿಕ್ಕವಳು. ದೊಡ್ಡ: ನಮ್ಮ ಮನೆ ದೊಡ್ಡದು.

ಆ. ಪ್ರಾಸ ಪದಗಳನ್ನು ಪದ್ಯದಿಂದ ಆರಿಸಿ ಮಾದರಿಯಂತೆ ಬರೆಯಿರಿ.

  1. ಮಾದರಿ : ರೈತನಿಗೆ - ದಾತನಿಗೆ

  2. ಕೊಯ್ಯುವನು - ....................................

    Answer

    ನೀಡುವನು

  3. ಹಿಡಿಯುವೆನು - ....................................

    Answer

    ಎಣಿಸುವನು

  4. ಬೆಳಗಿಸುವೆ - ....................................

    Answer

    ತವಕಿಸುವೆ

ಇ. ಕೊಟ್ಟಿರುವ ವಾಕ್ಯದಲ್ಲಿ ಕೆಲಸವನ್ನು ಸೂಚಿಸುವ ಪದವನ್ನು ಗುರುತಿಸಿ ಬರೆಯಿರಿ.

  1. ೧. ನೇಗಿಲ ಅಳತೆಗೆ ಕೊಯ್ಯುವನು ....................................

  2. ೨. ಕತ್ತೆಯ ಬೆನ್ನಲಿ ಇರಿಸುವೆನು ....................................

  3. ೩. ಸಂಜೆಗೆ ಹಣವನು ಎಣಿಸುವೆನು ....................................

ಬಳಕೆ ಚಟುವಟಿಕೆ

  1. ೧. ನಿಮ್ಮ ಊರಿನಲ್ಲಿರುವ ಕಸುಬುದಾರರನ್ನು ಪಟ್ಟಿಮಾಡಿ. ಅವರು ಯಾವ ಕೆಲಸವನ್ನು ಮಾಡುತ್ತಾರೆ ಎಂಬುದನ್ನು ಕೊಟ್ಟಿರುವ ಜಾಗದಲ್ಲಿ ಬರೆಯಿರಿ.

  2. ಕಸುಬುದಾರರು / ಮಾಡುವ ಕೆಲಸ

  3. (Four blank lines provided)

  4. ೨. ಊರಿನಲ್ಲಿ ವಿವಿಧ ಕಸುಬುಗಳನ್ನು ಮಾಡುವವರು ಇರಬೇಕು. ಏಕೆ?

  5. ೩. ಕೊಟ್ಟಿರುವ ಚೌಕದಲ್ಲಿ ರೈತನಿಗೆ ಸಂಬಂಧಿಸಿದ ಅನೇಕ ಪದಗಳು ಅಡಗಿ ಕುಳಿತಿವೆ. ಅಂತಹ ಪದಗಳನ್ನು ಪತ್ತೆ ಹಚ್ಚಿ ವೃತ್ತ ಹಾಕಿ.

  6. (A 4x8 letter grid puzzle containing words related to farming:

  7. ನೇ ಗಿ ಲು ಬಾ ತೋ ಟ ಗೂ ರು

  8. ಕು ಡು ಗೋ ಲು ರ ವ ಕ ಬಾ

  9. ಗಾ ಡಿ ಸ ಮೈ ಣ ವಿ ಣ ಳಿ

  10. ಪ ನೊ ಗ ರ ಹ ಸು ಜ ಲ)

  11. ೪. ಈ ಕವಿತೆಯಲ್ಲಿ ಬರುವ ಕಸುಬುದಾರರಲ್ಲಿ ನಿಮಗೆ ಇಷ್ಟವಾದವರು ಯಾರು? ಏಕೆ?

  12. ೫. ಚಿತ್ರ ಬಿಡಿಸೋಣ.

  13. ನಿನಗಿಷ್ಟವಾದ ಯಾವುದಾದರೂ ಒಂದು ವೃತ್ತಿಯ ಚಿತ್ರವನ್ನು ರಚಿಸಿ ಬಣ್ಣ ಹಚ್ಚು. ಅನಂತರ ಎಲ್ಲ ಸ್ನೇಹಿತರು ರಚಿಸಿದ ಚಿತ್ರಗಳನ್ನು ಒಟ್ಟು ಸೇರಿಸಿ ಶಿಕ್ಷಕರ ಸಹಾಯದಿಂದ ಚಿತ್ರಗಳ ಸಂಪುಟ (ಆಲ್ಬಂ) ತಯಾರಿಸಿ.

  14. ೬. ಮೂಕಾಭಿನಯ.

  15. ವಿವಿಧ ಕಸುಬುದಾರರ ಕೆಲಸಗಳನ್ನು ಮೂಕಾಭಿನಯದ ಮೂಲಕ ಶಿಕ್ಷಕರ ಸಹಾಯದಲ್ಲಿ ಗೆಳೆಯರೆಲ್ಲರೂ ಸೇರಿ ತರಗತಿಯಲ್ಲಿ ಪ್ರದರ್ಶಿಸಿ.

ಜಾಣ ಮರಿ (Smart kid/Did you know?)

  1. ನೀನೀಗ ಪಠ್ಯವನ್ನು ಆಲಿಸಿದ ಅನಂತರ ಏಕೆ? ಹೇಗೆ? ಪ್ರಶ್ನೆಗಳಿಗೆ ಉತ್ತರಿಸುವ ಕೌಶಲವನ್ನು ಪಡೆದಿರುವೆಯಲ್ಲವೇ?

    Answer

    ಹೌದು, ಪಠ್ಯವನ್ನು ಆಲಿಸಿದ ನಂತರ 'ಏಕೆ' ಮತ್ತು 'ಹೇಗೆ' ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲವನ್ನು ಪಡೆದಿದ್ದೇನೆ.

Interactive Lab

ದುಡಿಮೆdu-di-meಕೆಲಸ, ಸಂಪಾದನೆ (work, earning)
ಗರಿಮೆga-ri-meಹೆಮ್ಮೆ, ಹಿರಿಮೆ (pride, greatness)
ಕಸುಬುka-su-buಕೆಲಸ, ಉದ್ಯೋಗ (profession, job)
ರೈತrai-taಬೇಸಾಯ ಮಾಡುವವನು (farmer)
ನೆರವುne-ra-vuಸಹಾಯ, ಬೆಂಬಲ, ಆಧಾರ (help, support)
ಸಲಹುsa-la-huಕಾಪಾಡು, ರಕ್ಷಿಸು (protect, look after)
ಹಣha-naದುಡ್ಡು, ಧನ (money, wealth)
ದಾತdaa-taದಾನಿ, ಒಡೆಯ (donor, provider)
ಸಂಜೆsan-jeಸಾಯಂಕಾಲ, ಸೂರ್ಯ ಮುಳುಗುವ ಸಮಯ (evening, sunset time)
ಕೊಯ್ಯುkoy-yuಕತ್ತರಿಸು, ಸೀಳು (cut, chop)
ಹುಡುಕುhu-du-kuಶೋಧಿಸು, ಅರಸು (search, look for)
ತವಕಿಸುta-va-ki-suಆತುರಪಡು (to be eager, anxious)
ಹಲha-laನೇಗಿಲು (plough)
ಮೆಚ್ಚುಗೆmec-chu-geಒಪ್ಪಿಗೆ, ಸಂತೋಷ (appreciation, approval)
ಇರಿಸುi-ri-suಇಡು, ಹೇರು (place, put)
ಕಲುಷಿತka-lu-shi-taಕದಡಿದ, ಮಲಿನ (polluted, dirty)
ವಸನva-sa-naಬಟ್ಟೆ, ಉಡುಗೆ - ಉಡುಪು (cloth, dress)