CRECT Education

Lesson 14: ಹುತಾತ್ಮ ಬಾಲಕ (The Martyr Boy) – Learn the Story

Description

The inspiring true story of 13-year-old Narayana Mahadeva Doni, who gave his life for India's freedom during the Quit India Movement. Learn key Kannada vocabulary from the lesson.

ಗದ್ಯ (prose) · ಸಮಿತಿ ರಚನೆ (Committee-authored)

ಪಠ್ಯFull text

ಭಾರತಮಾತೆಯ ಬಿಡುಗಡೆಗಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಅನೇಕ ಜನ ಪ್ರಾಣಾರ್ಪಣೆ ಮಾಡಿದ್ದಾರೆ. ಅಂತಹ ಮಹಾನ್ ತ್ಯಾಗ ಮಾಡಿದವರಲ್ಲಿ ಹುಬ್ಬಳ್ಳಿಯ ಲ್ಯಾವಿಂಗ್‌ಟನ್ ಪ್ರೌಢಶಾಲೆಯ ಹದಿಮೂರು ವರ್ಷದ ವಿದ್ಯಾರ್ಥಿ ನಾರಾಯಣ ಮಹಾದೇವ ದೋಣಿಯು ಒಬ್ಬ. ೧೯೪೨ರ ಆಗಸ್ಟ್ ೯ ರಂದು ಗಾಂಧೀಜಿಯವರು ಬ್ರಿಟಿಷರಿಗೆ ಭಾರತವನ್ನು ಬಿಟ್ಟು ತೊಲಗುವಂತೆ ಅಂತಿಮ ಎಚ್ಚರಿಕೆಯನ್ನು ಕೊಟ್ಟಿದ್ದರು. ಇಡೀ ದೇಶವು ಬ್ರಿಟಿಷರ ನಿರಂಕುಶ ಆಡಳಿತದ ವಿರುದ್ಧ ಕುದಿಯುವ ಜ್ವಾಲಾಮುಖಿಯಂತೆ ಸಿಡಿದೆದ್ದಿತ್ತು. ಬ್ರಿಟಿಷರು ಗಾಂಧೀಜಿಯವರ ಅಹಿಂಸೆಯ ತತ್ವವನ್ನು ಹೇಡಿತನವೆಂದು ತಪ್ಪಾಗಿ ತಿಳಿದಿದ್ದರು. ೧೯೪೨ ಆಗಸ್ಟ್ ೧೫ ಹುಬ್ಬಳ್ಳಿಯ ಜನತೆಗೆ ಒಂದು ಅತ್ಯಂತ ಪ್ರಮುಖ ದಿನವಾಗಿತ್ತು. ನಗರದ ಉದ್ದಗಲಕ್ಕೂ ಸ್ವಾತಂತ್ರ್ಯ ಹೋರಾಟಗಾರರ ಮೆರವಣಿಗೆಗೆ ಸಿದ್ಧತೆ ನಡೆದಿತ್ತು. “ಭಾರತವನ್ನು ಬಿಟ್ಟು ತೊಲಗಿ” ಎಂಬ ಘೋಷಣೆಗಳ ಫಲಕಗಳು ಎಲ್ಲರ ಕೈಯಲ್ಲಿದ್ದವು. ಸಾಮರಸ್ಯದ ಮಂತ್ರ ‘ವಂದೇ ಮಾತರಂ’ ಎಲ್ಲರ ಬಾಯಲ್ಲೂ ಹರಿದಾಡುತ್ತಿತ್ತು. ‘ಭಾರತ ಮಾತಾಕಿ ಜೈ’, “ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ”, ‘ಚಲೇಜಾವ್’ ಘೋಷಣೆಗಳೊಂದಿಗೆ ಸಾವಿರಾರು ಜನರು ಹುಬ್ಬಳ್ಳಿಯ ಹೃದಯ ಭಾಗದಂತಿರುವ ದುರ್ಗದ ಬಯಲು ಚೌಕದಲ್ಲಿ ಸೇರಿದ್ದರು. ಬಾಲಕ ನಾರಾಯಣ ಅಂದು ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಿ ಕೈಯಲ್ಲೇ ನೇಯ್ದ ಖಾದಿಚಡ್ಡಿ, ಅಂಗಿ ಮತ್ತು ಗಾಂಧಿ ಟೋಪಿಯನ್ನು ಧರಿಸಿದ. ಮನೆಯ ಬೀರುವಿನಲ್ಲಿದ್ದ ತ್ರಿವರ್ಣಧ್ವಜವನ್ನು ಹೊರತೆಗೆದ. ಬೊಂಬಿಗೆ ಧ್ವಜವನ್ನು ಕಟ್ಟಿ “ಅಮ್ಮಾ” ಎಂದು ಜೋರಾಗಿ ಕೂಗಿದ. ನಿದ್ರೆಯಿಂದ ಎದ್ದ ತಾಯಿ ಮಗನನ್ನು ನೋಡಿ ಆಶ್ಚರ್ಯದಿಂದ “ಎಲ್ಲಿಗೆ ಹೋಗುತ್ತಿರುವೆ ಮಗು?” ಎಂದು ಕೇಳಿದಳು. “ಅಮ್ಮಾ ಬ್ರಿಟಿಷರ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ. ಅದನ್ನು ಕೂಡಿಕೊಳ್ಳಲು ನಾನು ಹೋಗುತ್ತಿದ್ದೇನೆ” ಎಂದ ನಾರಾಯಣ. ಬಾಲಕ ನಾರಾಯಣನ ಕಣ್ಣಿನಲ್ಲಿ ಅಪೂರ್ವ ಕಾಂತಿಯಿತ್ತು. “ಮಗು ನೀನು ಇನ್ನೂ ಕಿರಿಯವ. ದೊಡ್ಡವರ ಮೆರವಣಿಗೆಯಲ್ಲಿ ನೀನು ಹೇಗೆ ಸೇರಲು ಸಾಧ್ಯ?” ಎಂದು ದುಗುಡದಿಂದ ತಾಯಿ ಕೇಳಿದಳು. ಅದಕ್ಕೆ ಅವನು “ಅಮ್ಮ ಹಿರಿಯರು ಮತ್ತು ಕಿರಿಯರು ಎನ್ನುವುದು ಮುಖ್ಯವಲ್ಲ. ಭಾರತ ಮಾತೆಯ ಸೇವೆಯನ್ನು ಹೇಗೆ ಮಾಡುತ್ತೇವೆ ಎನ್ನುವುದೇ ಮುಖ್ಯ ಎಂದನು.” ಮಗನ ಈ ರೀತಿಯ ಮಾತುಗಳನ್ನು ಕೇಳಿ ತಾಯಿ ಅಚ್ಚರಿಗೊಂಡಳು. ಅವನ ಹಣೆಗೆ ಪ್ರೀತಿಯಿಂದ ಮುತ್ತಿಟ್ಟು “ದೇವರು ನಿನಗೆ ಒಳ್ಳೆಯದನ್ನು ಮಾಡಲಿ” ಎಂದು ಹರಸಿ ಕಳುಹಿಸಿಕೊಟ್ಟಳು. ದುರ್ಗದ ಬಯಲಿನಲ್ಲಿ ಸೇರಿದ್ದ ಜನರನ್ನು ನಾರಾಯಣ ಸೇರಿಕೊಂಡನು. ಮಿಂಚಿನ ಕಣ್ಣಿನ ಚತುರ ಹುಡುಗನ ಆಗಮನ ಎಲ್ಲರನ್ನು ಆಕರ್ಷಿಸಿತು. ಮೆರವಣಿಗೆ ಆರಂಭವಾಯಿತು. ನಾರಾಯಣ ತಾರಕ ಸ್ವರದಲ್ಲಿ “ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ” ಘೋಷಣೆ ಕೂಗುತ್ತಿದ್ದನು. ಇತರರು ಅವನ ಕೂಗನ್ನು ಪ್ರತಿಧ್ವನಿಸುತ್ತಿದ್ದರು. ಇದನ್ನು ಕಂಡ ಪೊಲೀಸರು ಸಿಟ್ಟಿನಿಂದ ಕುದಿಯುತ್ತಿದ್ದರು. ಹೋರಾಟಕ್ಕೆ ಪ್ರತಿಯಾಗಿ ಸಿಕ್ಕಸಿಕ್ಕವರನ್ನು ತದುಕುತ್ತಿದ್ದರು. ಇದ್ದಕ್ಕಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸತೊಡಗಿದರು. ಅಪಾಯದ ಸುಳಿವನ್ನು ಕಂಡ ಕೆಲವರು ಜೀವ ಉಳಿಸಿಕೊಳ್ಳಲು ಓಡತೊಡಗಿದರು. ಎಳೆಯ ಬಾಲಕ ನಾರಾಯಣ ಘೋಷಣೆ ಕೂಗುತ್ತಲೇ ಇದ್ದ. ಅವನು ಘೋಷಣೆಯನ್ನು ಪೂರ್ಣಗೊಳಿಸುವ ಮೊದಲೇ ಪೊಲೀಸರ ಒಂದು ಗುಂಡು ಅವನ ಎದೆಯನ್ನು ಭೇದಿಸಿತು. ಗಾಯಗೊಂಡು ರಕ್ತದಲ್ಲಿ ತೊಯ್ದ ನಾರಾಯಣ ನೆಲಕ್ಕುರುಳಿದನು. ತಕ್ಷಣ ಅವನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಮೃತ್ಯುವಿನೊಡನೆ ಬದುಕಿಗಾಗಿ ಹೋರಾಡುತ್ತಿದ್ದ ನಾರಾಯಣನನ್ನು ನೋಡಲು ಕೆಲ ಬ್ರಿಟಿಷ್ ಅಧಿಕಾರಿಗಳು ಆಸ್ಪತ್ರೆಗೆ ಬಂದರು. ಆಂಗ್ಲ ಅಧಿಕಾರಿಯೊಬ್ಬ “ನಿನಗೆ ಏನು ಬೇಕು?” ಎಂದು ಕೇಳಿದ. ಸಾವಿನಂಚಿನಲ್ಲಿದ್ದ ಬಾಲಕ ತನ್ನ ನೋವನ್ನು ಮರೆತು ‘ಸ್ವರಾಜ್ಯ’ ಎಂದುಚ್ಚರಿಸುತ್ತಲೇ ತನ್ನ ಕೊನೆಯುಸಿರೆಳೆದ. ಸಾವಿನ ಸಮ್ಮುಖದಲ್ಲಿ ಎಂಥ ಅಪ್ರತಿಮ ಧೈರ್ಯ! ಹುತಾತ್ಮ ಬಾಲಕ ನಾರಾಯಣ ಹೀಗೆ ಒಂದು ದಂತಕಥೆಯಾದ. ಅವನ ನೆನಪು ದೇಶವಾಸಿಗಳ ಹೃದಯದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ. (Boxed text at the end of the lesson): ಸ್ವಾತಂತ್ರ್ಯ ಜೀವನ ಬದುಕಿಗೆ ಸಾಧನ

"ಸ್ವಾತಂತ್ರ್ಯ ಜೀವನ ಬದುಕಿಗೆ ಸಾಧನ" — "Freedom is the instrument for a life well-lived." (A powerful boxed quote printed at the end of the lesson's main text, reflecting the core theme of the boy's sacrifice).

ಪದಗಳ ಅರ್ಥword meanings

KannadaPronunciationMeaning
ತ್ಯಾಗtyaa-gasacrifice, giving up (ತೊರೆಯುವಿಕೆ, ಬಿಡುವುದು)
ತೊಲಗುto-la-gugo away, leave (ಬಿಟ್ಟುಹೋಗು)
ಘೋಷಣೆgho-sha-neslogan, loud shout (ಗಟ್ಟಿಯಾಗಿ ಕೂಗು)
ಬಯಲುba-ya-luopen field, wide space (ವಿಶಾಲವಾದ ಜಾಗ)
ಪ್ರತಿಭಟನೆpra-ti-bha-ta-neprotest, opposition (ವಿರೋಧ)
ಕಾಂತಿkaan-tiglow, light (ಬೆಳಕು)
ಹರಸುha-ra-subless (ಆಶೀರ್ವದಿಸು)
ಚತುರcha-tu-raclever, smart (ಜಾಣ)
ಆಗಮನaa-ga-ma-naarrival (ಬರುವುದು)
ಸುಳಿವುsu-li-vuclue, hint (ಕುರುಹು, ಗುರುತು)
ತೊಯ್ದtoy-dadrenched, wet (ಒದ್ದೆಯಾದ)
ಮೃತ್ಯುmru-tyudeath (ಸಾವು)
ಅಹಿಂಸೆa-him-senon-violence (ಹಿಂಸೆ ಮಾಡದಿರುವುದು)
ಹೇಡಿhay-dicoward (ಅಂಜುಬುರುಕ, ಕೈಲಾಗದವ)
ನಿರಂಕುಶni-ram-ku-shaabsolute, uncontrolled (ಯಾರ ಅಂಕೇಗೂ ಒಳಪಡದ)
ತಾರಕ ಸ್ವರtaa-ra-ka sva-rahigh pitch, loud voice (ಏರುಧ್ವನಿ, ಗಟ್ಟಿಯಾಗಿ, ಜೋರಾಗಿ)

ಟಿಪ್ಪಣಿnotes

  • ಪ್ರಾಣಾರ್ಪಣೆ – ಒಳ್ಳೆಯ ಕಾರ್ಯಕ್ಕಾಗಿ ಪ್ರಾಣ ತ್ಯಾಗ ಮಾಡುವುದು.
  • ಹುತಾತ್ಮ – ದೇಶದ ಹಿತ, ಜನತೆಯ ಹಿತ ಇತ್ಯಾದಿ ಧ್ಯೇಯ ಸಾಧನೆಗಾಗಿ ಪ್ರಾಣವನ್ನು ಅರ್ಪಿಸುವವ.
  • ಚಿರಸ್ಥಾಯಿ – ಹೆಚ್ಚು ಕಾಲ ಇರುವುದು.
  • ಸ್ವರಾಜ್ಯ – ಸ್ವತಂತ್ರವಾದ ರಾಜ್ಯ, ಯಾರ ಅಧೀನಕ್ಕೂ ಒಳಪಡದ ರಾಜ್ಯ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ

  1. ೧. ಬ್ರಿಟಿಷರಿಗೆ ಭಾರತವನ್ನು ಬಿಟ್ಟು ತೊಲಗಿ ಎಂದು ಎಚ್ಚರಿಕೆ ಕೊಟ್ಟವರು ಯಾರು?

    Answer

    ಬ್ರಿಟಿಷರಿಗೆ ಭಾರತವನ್ನು ಬಿಟ್ಟು ತೊಲಗಿ ಎಂದು ಎಚ್ಚರಿಕೆ ಕೊಟ್ಟವರು ಗಾಂಧೀಜಿಯವರು.

  2. ೨. ಹುಬ್ಬಳ್ಳಿಯ ಜನತೆಗೆ ಪ್ರಮುಖವಾಗಿದ್ದ ದಿನ ಯಾವುದು?

    Answer

    ಹುಬ್ಬಳ್ಳಿಯ ಜನತೆಗೆ ಪ್ರಮುಖವಾಗಿದ್ದ ದಿನ ೧೯೪೨ರ ಆಗಸ್ಟ್ ೧೫.

  3. ೩. ನಾರಾಯಣನ ತಾಯಿ ಏನೆಂದು ಮಗನನ್ನು ಹರಸಿದಳು?

    Answer

    ನಾರಾಯಣನ ತಾಯಿ ‘ದೇವರು ನಿನಗೆ ಒಳ್ಳೆಯದನ್ನು ಮಾಡಲಿ’ ಎಂದು ಹರಸಿದಳು.

  4. ೪. ನಾರಾಯಣನು ಕೂಗಿದ ಘೋಷಣೆ ಯಾವುದು?

    Answer

    ನಾರಾಯಣನು ಕೂಗಿದ ಘೋಷಣೆ ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’.

  5. ೫. ಸಾವಿನ ಅಂಚಿನಲ್ಲಿದ್ದ ಬಾಲಕ ಏನನ್ನು ಕೇಳಿದ?

    Answer

    ಸಾವಿನ ಅಂಚಿನಲ್ಲಿದ್ದ ಬಾಲಕ ‘ಸ್ವರಾಜ್ಯ’ವನ್ನು ಕೇಳಿದನು.

ಆ. ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ

  1. ೧. ಬಾಲಕ ನಾರಾಯಣ ಮುಂಜಾನೆ ಎದ್ದು ಹೇಗೆ ಸಿದ್ಧನಾದನು?

    Answer

    ಬಾಲಕ ನಾರಾಯಣ ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಿ, ಕೈಯಲ್ಲೇ ನೇಯ್ದ ಖಾದಿಚಡ್ಡಿ, ಅಂಗಿ ಮತ್ತು ಗಾಂಧಿ ಟೋಪಿಯನ್ನು ಧರಿಸಿದನು. ನಂತರ ಮನೆಯ ಬೀರುವಿನಲ್ಲಿದ್ದ ತ್ರಿವರ್ಣಧ್ವಜವನ್ನು ತೆಗೆದು, ಅದನ್ನು ಬೊಂಬಿಗೆ ಕಟ್ಟಿ ‘ಅಮ್ಮಾ’ ಎಂದು ಕೂಗಿದನು.

  2. ೨. ನಾರಾಯಣನ ತಾಯಿ ಏಕೆ ಅಚ್ಚರಿಗೊಂಡಳು?

    Answer

    ಚಿಕ್ಕ ವಯಸ್ಸಿನ ನಾರಾಯಣನು ದೊಡ್ಡವರ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಸಿದ್ಧನಾಗಿದ್ದುದನ್ನು ಕಂಡು ತಾಯಿ ಅಚ್ಚರಿಗೊಂಡಳು. ಅಲ್ಲದೆ, ‘ಹಿರಿಯರು-ಕಿರಿಯರು ಮುಖ್ಯವಲ್ಲ, ಭಾರತ ಮಾತೆಯ ಸೇವೆಯೇ ಮುಖ್ಯ’ ಎಂಬ ಅವನ ಮಾತುಗಳನ್ನು ಕೇಳಿ ಆಕೆಗೆ ಇನ್ನಷ್ಟು ಆಶ್ಚರ್ಯವಾಯಿತು.

  3. ೩. ಪೊಲೀಸರು ಸಿಟ್ಟಿನಿಂದ ಏಕೆ ಕುದಿಯುತ್ತಿದ್ದರು?

    Answer

    ಬ್ರಿಟಿಷರ ವಿರುದ್ಧ ಜನರು ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಎಂಬ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸುತ್ತಿದ್ದರು. ಈ ಪ್ರತಿಭಟನೆಯನ್ನು ಕಂಡು ಪೊಲೀಸರು ಸಿಟ್ಟಿನಿಂದ ಕುದಿಯುತ್ತಿದ್ದರು.

ಇ. ಈ ಮಾತನ್ನು ಯಾರು? ಯಾರಿಗೆ ಹೇಳಿದರು?

  1. ೧. “ಎಲ್ಲಿಗೆ ಹೋಗುತ್ತಿರುವೆ ಮಗು?”

    Answer

    ತಾಯಿಯು ನಾರಾಯಣನಿಗೆ ‘ಎಲ್ಲಿಗೆ ಹೋಗುತ್ತಿರುವೆ ಮಗು?’ ಎಂದು ಕೇಳಿದಳು.

  2. ಯಾರು? .......................................................................................................

    Answer

    ತಾಯಿ

  3. ಯಾರಿಗೆ? .......................................................................................................

    Answer

    ನಾರಾಯಣನಿಗೆ

  4. ೨. “ಅಮ್ಮ ಹಿರಿಯರು ಮತ್ತು ಕಿರಿಯರು ಎನ್ನುವುದು ಮುಖ್ಯವಲ್ಲ”

    Answer

    ನಾರಾಯಣನು ತಾಯಿಗೆ ‘ಅಮ್ಮ ಹಿರಿಯರು ಮತ್ತು ಕಿರಿಯರು ಎನ್ನುವುದು ಮುಖ್ಯವಲ್ಲ’ ಎಂದು ಹೇಳಿದನು.

  5. ಯಾರು? .......................................................................................................

    Answer

    ನಾರಾಯಣ

  6. ಯಾರಿಗೆ? .......................................................................................................

    Answer

    ತಾಯಿಗೆ

  7. ೩. “ನಿನಗೆ ಏನು ಬೇಕು?”

    Answer

    ಆಂಗ್ಲ ಅಧಿಕಾರಿಯು ನಾರಾಯಣನಿಗೆ ‘ನಿನಗೆ ಏನು ಬೇಕು?’ ಎಂದು ಕೇಳಿದನು.

  8. ಯಾರು? .......................................................................................................

    Answer

    ಆಂಗ್ಲ ಅಧಿಕಾರಿ

  9. ಯಾರಿಗೆ? .......................................................................................................

    Answer

    ನಾರಾಯಣನಿಗೆ

ಭಾಷಾ ಚಟುವಟಿಕೆ (Language activity)

ಅ. ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ.

  1. ೧. ಅಹಿಂಸೆ × ........................................

  2. ೨. ಕಿರಿಯ × ........................................

    Answer

    ಹಿರಿಯ

  3. ೩. ಸಾಧ್ಯ × ........................................

    Answer

    ಅಸಾಧ್ಯ

  4. ೪. ಬೇಕು × ........................................

    Answer

    ಬೇಡ

ಆ. ಮಾದರಿಯಲ್ಲಿ ಸೂಚಿಸಿರುವಂತೆ ಪದ ಬಿಡಿಸಿ ಬರೆಯಿರಿ.

  1. ಮಾದರಿ : ಧೈರ್ಯವಂತ = ಧೈರ್ಯ + ವಂತ

  2. ೧. ಗುಣವಂತ = ................................ + ................................

    Answer

    ಗುಣ + ವಂತ

  3. ೨. ಶೌರ್ಯವಂತ = ................................ + ................................

    Answer

    ಶೌರ್ಯ + ವಂತ

  4. ೩. ಶಕ್ತಿವಂತ = ................................ + ................................

    Answer

    ಶಕ್ತಿ + ವಂತ

  5. ೪. ಬುದ್ಧಿವಂತ = ................................ + ................................

    Answer

    ಬುದ್ಧಿ + ವಂತ

  6. ೫. ಹಣವಂತ = ................................ + ................................

    Answer

    ಹಣ + ವಂತ

ಇ. ಕೊಟ್ಟಿರುವ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ.

  1. ೧. ಘೋಷಣೆ = .......................................................................................................

    Model sentence

    ಘೋಷಣೆ: ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದಂದು ದೇಶಭಕ್ತಿಯ ಘೋಷಣೆಗಳನ್ನು ಕೂಗಿದೆವು.

  2. ೨. ಅಹಿಂಸೆ = .......................................................................................................

    Model sentence

    ಅಹಿಂಸೆ: ನಮ್ಮ ತಂದೆ ಸಣ್ಣ ಪುಟ್ಟ ಹುಳುಗಳನ್ನು ಸಹ ಕೊಲ್ಲದೆ ಅಹಿಂಸೆ ಪಾಲಿಸುತ್ತಾರೆ.

  3. ೩. ಜೋರಾಗಿ = .......................................................................................................

    Model sentence

    ಜೋರಾಗಿ: ನಮ್ಮ ಶಿಕ್ಷಕರು ಪಾಠವನ್ನು ಜೋರಾಗಿ ಓದಲು ಹೇಳಿದರು.

  4. ೪. ಆಶ್ಚರ್ಯ = .......................................................................................................

    Model sentence

    ಆಶ್ಚರ್ಯ: ನಮ್ಮ ತೋಟದಲ್ಲಿ ಒಂದೇ ದಿನದಲ್ಲಿ ಗುಲಾಬಿ ಹೂವು ಅರಳಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು.

  5. ೫. ಮೆರವಣಿಗೆ = .......................................................................................................

    Model sentence

    ಮೆರವಣಿಗೆ: ಗಣೇಶ ಚತುರ್ಥಿಯಂದು ನಮ್ಮೂರಲ್ಲಿ ವಿಗ್ರಹದ ಮೆರವಣಿಗೆ ಭವ್ಯವಾಗಿ ನಡೆಯಿತು.

ಈ. ಈ ಕೆಳಗಿನ ಪದಗಳಿಗೆ ಶಬ್ದಕೋಶದಿಂದ ಅರ್ಥ ಹುಡುಕಿ ಬರೆಯಿರಿ

  1. ೧. ನೆರವು = .......................................................

  2. ೨. ಹರಸು = .......................................................

    Answer

    ಹರಸು = ಆಶೀರ್ವದಿಸು

  3. ೩. ಅದ್ಭುತ = .......................................................

  4. ೪. ಕಸುಬು = .......................................................

ಬಳಕೆ ಚಟುವಟಿಕೆ (Application activity)

ಅ. ವೃತ್ತದೊಳಗಿನ ಪದವನ್ನು ಅದರ ಸಮಾನಾರ್ಥಕ ಪದಗಳೊಂದಿಗೆ ಗೆರೆ ಎಳೆದು ಜೋಡಿಸಿ

  1. (A matching activity with three sets. Students must draw lines connecting the word in the center circle to its synonyms in the surrounding boxes:

  2. Set 1: Center circle: **ಆಶ್ಚರ್ಯ**. Surrounding boxes: ಉಬ್ಬಸ, ಆನಂದ, ವಿಸ್ಮಯ / ಬೆರಗು, ಅಚ್ಚರಿ, ಸಂತೋಷ.

    Answer

    ಆಶ್ಚರ್ಯ : ವಿಸ್ಮಯ, ಬೆರಗು, ಅಚ್ಚರಿ

  3. Set 2: Center circle: **ಕಾಡು**. Surrounding boxes: ಬಯಲು, ಪಟ್ಟಣ, ಅಡವಿ / ಅರಣ್ಯ, ಪೀಡಿಸು, ಕಾನನ.

    Answer

    ಕಾಡು : ಅಡವಿ, ಅರಣ್ಯ, ಕಾನನ

  4. Set 3: Center circle: **ಸುಳಿವು**. Surrounding boxes: ಚತುರ, ಗುರುತು / ಕುರುಹು, ನೆನಪು.)

    Answer

    ಸುಳಿವು : ಗುರುತು, ಕುರುಹು

ಆ. ಕೊಟ್ಟಿರುವ ಅಕ್ಷರ ಬಳಸಿ ಪದ ರಚಿಸಿ, ಅಕ್ಷರ ಬಂಧ ಪೂರ್ಣಗೊಳಿಸು. ರಚನೆಯಾದ ಪದಗಳನ್ನು ಖಾಲಿ ಜಾಗದಲ್ಲಿ ಬರೆಯಿರಿ (ಡೆ, ಣ, ರ, ನೆ, ವು)

  1. (A crossword-style letter grid puzzle with empty blue boxes and pre-filled red letters: ನೆ, ಸಾ, ರ, ಹ, ಸು, ಪ, ಯ, ತೆ. Students must complete the grid using the letters provided in brackets — ಡೆ, ಣ, ರ, ನೆ, ವು — and write the resulting formed words on the five blank lines provided below the grid.)

  2. (At the very bottom, a box held by a cartoon student character contains the following text):

  3. ನೀನೀಗ ಪಠ್ಯವನ್ನು ಓದಿದ ಅನಂತರ ಹೇಗೆ? ಏಕೆ? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ನಿನ್ನದಾಗಿಸಿಕೊಂಡಿರುವೆ ಅಲ್ಲವೆ?

Interactive Lab

ತ್ಯಾಗtyaa-gasacrifice, giving up (ತೊರೆಯುವಿಕೆ, ಬಿಡುವುದು)
ತೊಲಗುto-la-gugo away, leave (ಬಿಟ್ಟುಹೋಗು)
ಘೋಷಣೆgho-sha-neslogan, loud shout (ಗಟ್ಟಿಯಾಗಿ ಕೂಗು)
ಬಯಲುba-ya-luopen field, wide space (ವಿಶಾಲವಾದ ಜಾಗ)
ಪ್ರತಿಭಟನೆpra-ti-bha-ta-neprotest, opposition (ವಿರೋಧ)
ಕಾಂತಿkaan-tiglow, light (ಬೆಳಕು)
ಹರಸುha-ra-subless (ಆಶೀರ್ವದಿಸು)
ಚತುರcha-tu-raclever, smart (ಜಾಣ)
ಆಗಮನaa-ga-ma-naarrival (ಬರುವುದು)
ಸುಳಿವುsu-li-vuclue, hint (ಕುರುಹು, ಗುರುತು)
ತೊಯ್ದtoy-dadrenched, wet (ಒದ್ದೆಯಾದ)
ಮೃತ್ಯುmru-tyudeath (ಸಾವು)
ಅಹಿಂಸೆa-him-senon-violence (ಹಿಂಸೆ ಮಾಡದಿರುವುದು)
ಹೇಡಿhay-dicoward (ಅಂಜುಬುರುಕ, ಕೈಲಾಗದವ)
ನಿರಂಕುಶni-ram-ku-shaabsolute, uncontrolled (ಯಾರ ಅಂಕೇಗೂ ಒಳಪಡದ)
ತಾರಕ ಸ್ವರtaa-ra-ka sva-rahigh pitch, loud voice (ಏರುಧ್ವನಿ, ಗಟ್ಟಿಯಾಗಿ, ಜೋರಾಗಿ)