CRECT Education

ಬಾವಿಯಲ್ಲಿ ಚಂದ್ರ - Moon in the Well | Class 4 Kannada Poem

Description

A moonlit poem about two children who mistake a reflection for the real moon. Learn new words and answer questions from the lesson.

ಪದ್ಯ (poem) · ಬಿ. ಎಂ. ಶರ್ಮ (B. M. Sharma)

ಪಠ್ಯFull text

ತಿಂಗಳು ಬೆಳಕಿನ ಇರುಳಿನಲಂದು ಅಮ್ಮನು ಕೆಲಸದೊಳಿರುತಿರೆ ಕಂಡು ಗೋಪಿಯು ಪುಟ್ಟನು ಹೊರಗಡೆ ಬಂದು ಬಾವಿಗೆ ಇಣುಕಿದರು. ಬಾವಿಲಿ ಚಂದ್ರನ ಬಿಂಬವ ಕಂಡು ಚಂದ್ರನು ಬಾವಿಗೆ ಬಿದ್ದನು ಎಂದು ಅಯ್ಯೋ! ಪಾಪವೆ! ಎನ್ನುತಲೊಂದು ಕೊಕ್ಕೆಯ ಹುಡುಕಿದರು. ಚಂದ್ರನ ಮೇಲಕೆ ಎತ್ತಲಿಕೆಂದು ಬಾವಿಯ ಹಗ್ಗಕೆ ಕೊಕ್ಕೆಯ ಬಿಗಿದು ದೂರದಿ ಗೋಪಿಯ ನಿಲ್ಲಿಸಿ ಪುಟ್ಟು ಹಗ್ಗವನಿಳಿಸಿದನು. ಹಗ್ಗದ ಕೊಕ್ಕೆಯು ಕಲ್ಲಿಗೆ ಸಿಕ್ಕಿ ಪುಟ್ಟನು ಚಂದ್ರನು ಸಿಕ್ಕೇ ಸಿಕ್ಕ ಎನ್ನುತ ತುಂಬಾ ಬಲದಿಂದೆಳೆಯೆ ಹಗ್ಗವು ತುಂಡಾಯ್ತು. ಎಳೆತದ ರಭಸಕೆ ಪುಟ್ಟನು ಬಿದ್ದ ಮೆಲ್ಲನೆ ಮನೆ ಕಡೆ ನೋಡುತಲೆದ್ದ ತಂಗಿಗೆ ಆಗಸ ತೋರುತಲೆಂದ "ಗೋಪಿ ನೋಡಲ್ಲಿ!" ಚಂದ್ರನ ಮೇಲಕೆ ಏರಿಸಿಬಿಟ್ಟೆ ನಮ್ಮಯ ದೇವರ ಬದುಕಿಸಿಕೊಟ್ಟೆ ಅಮ್ಮಗೆ ಗೊತ್ತಾದರೆ ನಾ ಕೆಟ್ಟೆ ಎಂದೋಡಿದ ಪುಟ್ಟು. – ಬಿ. ಎಂ. ಶರ್ಮ

"ಸರಿಯಾಗಿ ಯೋಚಿಸಿ ಕೆಲಸ ಮಾಡಬೇಕು" — "One must think properly before doing a task." A great reminder that deliberate thought should precede action, unlike the children in the poem who rushed to fish out a mere reflection.

ಪದಗಳ ಅರ್ಥword meanings

KannadaPronunciationMeaning
ತಿಂಗಳುtin-ga-lumoon
ತಿಂಗಳು ಬೆಳಕುtin-ga-lu be-la-kumoonlight (full moon's light)
ಬಿಂಬbim-bareflection, image seen in water or mirror
ಕೊಕ್ಕೆkok-kehook (a metal or wooden tool used to catch and pull)
ರಭಸra-bha-saforce, speed
ಆಗಸaa-ga-sasky
ಮೆಲ್ಲನೆmel-la-neslowly, gently

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

  1. ೧. ಗೋಪಿ, ಪುಟ್ಟು ಬಾವಿಯಲ್ಲಿ ಏನು ನೋಡಿದರು?

    Answer

    ಗೋಪಿ ಮತ್ತು ಪುಟ್ಟು ಬಾವಿಯಲ್ಲಿ ಚಂದ್ರನ ಬಿಂಬವನ್ನು ನೋಡಿದರು.

  2. ೨. ಕೊಕ್ಕೆಯನ್ನು ಏಕೆ ತಂದರು?

    Answer

    ಬಾವಿಯಲ್ಲಿ ಬಿದ್ದ ಚಂದ್ರನನ್ನು ಮೇಲಕ್ಕೆ ಎತ್ತಲು ಅವರು ಕೊಕ್ಕೆಯನ್ನು ತಂದರು.

  3. ೩. ಪುಟ್ಟು ಏಕೆ ಬಿದ್ದನು?

    Answer

    ಹಗ್ಗ ತುಂಡಾದ ಎಳೆತದ ರಭಸಕ್ಕೆ ಪುಟ್ಟು ಬಿದ್ದನು.

  4. ೪. ಚಂದ್ರನು ಎಲ್ಲಿದ್ದನು?

    Answer

    ಚಂದ್ರನು ಆಗಸದಲ್ಲಿ ಇದ್ದನು.

  5. ೫. ತಾಯಿಗೆ ಪುಟ್ಟು ಏಕೆ ಅಂಜಿದನು?

    Answer

    ಚಂದ್ರನನ್ನು ಮೇಲಕ್ಕೆತ್ತುವ ಪ್ರಯತ್ನದಲ್ಲಿ ಕೊಕ್ಕೆ ಹಗ್ಗ ತುಂಡಾಗಿ, ತಾನು ಬಿದ್ದು, ತಾಯಿಗೆ ಗೊತ್ತಾದರೆ ಬೈಯುತ್ತಾಳೆಂದು ಪುಟ್ಟು ಅಂಜಿದನು.

ಆ. ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ

  1. ೧. ಬಾವಿಯಲ್ಲಿ ಚಂದ್ರನ ಬಿಂಬ ನೋಡಿದಾಗ ಪುಟ್ಟು ಏನು ಮಾಡಿದನು?

    Answer

    ಬಾವಿಯಲ್ಲಿ ಚಂದ್ರನ ಬಿಂಬವನ್ನು ನೋಡಿ, ಚಂದ್ರನು ಬಾವಿಗೆ ಬಿದ್ದನೆಂದು ತಿಳಿದು, "ಅಯ್ಯೋ! ಪಾಪವೆ!" ಎಂದು ಕೊಕ್ಕೆಯನ್ನು ಹುಡುಕಿದನು. ನಂತರ ಹಗ್ಗಕ್ಕೆ ಕೊಕ್ಕೆ ಕಟ್ಟಿ ಬಾವಿಗೆ ಇಳಿಸಿದನು.

  2. ೨. ಬಾವಿಗೆ ಕೊಕ್ಕೆ ಇಳಿಸಿ ಎಳೆದಾಗ ಏನಾಯಿತು?

    Answer

    ಬಾವಿಗೆ ಕೊಕ್ಕೆಯನ್ನು ಇಳಿಸಿ ಎಳೆದಾಗ, ಕೊಕ್ಕೆ ಕಲ್ಲಿಗೆ ಸಿಕ್ಕಿಕೊಂಡಿತು. ಪುಟ್ಟನು ಚಂದ್ರನು ಸಿಕ್ಕಿದನೆಂದು ತುಂಬಾ ಬಲದಿಂದ ಎಳೆದಾಗ ಹಗ್ಗ ತುಂಡಾಯಿತು. ಆ ರಭಸಕ್ಕೆ ಪುಟ್ಟನು ಬಿದ್ದನು.

ಇ. ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ

  1. ೧. ಪುಟ್ಟನು ಎಳೆತದ ಬಿದ್ದ ರಭಸಕೆ.

    Answer

    ಎಳೆತದ ರಭಸಕೆ ಪುಟ್ಟನು ಬಿದ್ದ.

  2. ೨. ಗೊತ್ತಾದರೆ ಕೆಟ್ಟೆ ಅಮ್ಮಗೆ ನಾ.

    Answer

    ಅಮ್ಮಗೆ ಗೊತ್ತಾದರೆ ನಾ ಕೆಟ್ಟೆ.

  3. ೩. ಮನೆ ಮೆಲ್ಲನೆ ನೋಡುತಲೆದ್ದ ಕಡೆ.

    Answer

    ಮೆಲ್ಲನೆ ಮನೆ ಕಡೆ ನೋಡುತಲೆದ್ದ.

  4. ೪. ಬಾವಿಗೆ ಎಂದು ಚಂದ್ರನು ಬಿದ್ದನು.

    Answer

    ಚಂದ್ರನು ಬಾವಿಗೆ ಬಿದ್ದನು ಎಂದು.

ಈ. ಈ ಪದ್ಯವನ್ನು ಪೂರ್ಣಗೊಳಿಸಿ.

  1. ಹಗ್ಗದ ಕೊಕ್ಕೆಯು ........................

    Answer

    ಹಗ್ಗದ ಕೊಕ್ಕೆಯು ಕಲ್ಲಿಗೆ ಸಿಕ್ಕಿ

  2. ........................ ಸಿಕ್ಕೇ ಸಿಕ್ಕ

    Answer

    ಪುಟ್ಟನು ಚಂದ್ರನು ಸಿಕ್ಕೇ ಸಿಕ್ಕ

  3. ಎನ್ನುತ ........................

    Answer

    ಎನ್ನುತ ತುಂಬಾ ಬಲದಿಂದೆಳೆಯೆ

  4. ........................ ತುಂಡಾಯ್ತು

    Answer

    ಹಗ್ಗವು ತುಂಡಾಯ್ತು

ಉ. ಈ ಪದ್ಯದಲ್ಲಿ ಬರುವ ಮೂರು ಅಕ್ಷರದ ಪದಗಳನ್ನು ಹುಡುಕಿ ಬರೆಯಿರಿ

  1. (Blank lines are provided to write words).

    Answer

    ತಿಂಗಳು ಬಿಂಬವ ಕೊಕ್ಕೆಯ ಪುಟ್ಟನು ಗೋಪಿಯು

ಊ. "ಚ" ಅಕ್ಷರದಿಂದ ಪ್ರಾರಂಭವಾಗುವ ಪದಗಳನ್ನು ಬರೆಯಿರಿ

  1. ಮಾದರಿ : ಬಟ್ಟೆ ನೇಯ್ಗೆ ಮಾಡಲು ಬಳಸುವ ಸಾಧನ [ ಚ ] [ ರ ] [ ಕ ]

    Answer

    ಚರಕ

  2. (A visual fill-in-the-blank grid exercise where students deduce words starting with "ಚ" based on the given clues and the exact number of square boxes provided):

  3. ೧. ಸುರುಳಿಯಾಕಾರದಂತಿರುವ ಎಣ್ಣೆಯಲ್ಲಿ ಕರೆದ ತಿಂಡಿ (3 empty boxes)

    Answer

    ಚಕ್ಕುಲಿ

  4. ೨. ಅನ್ನ ತಿನ್ನಲು ನೀನಿದನ್ನು ಬಳಸುತ್ತೀಯ (4 empty boxes)

    Answer

    ಚಮಚ

  5. ೩. ನಾಲ್ಕು ಸೈನ್ಯಬಲದೊಂದಿಗೆ ಆಡುವ ಒಳಾಂಗಣ ಆಟ (5 empty boxes)

    Answer

    ಚದುರಂಗ

  6. ೪. ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಮಾಡಿದ ಮುಷ್ಕರ (5 empty boxes)

    Answer

    ಚಳುವಳಿ

ಭಾಷಾ ಚಟುವಟಿಕೆ

ಅ. ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತಪದ ರಚಿಸಿ ಬರೆದು ಸ್ಪಷ್ಟವಾಗಿ ಓದಿ.

  1. ಮಾದರಿ : ಮರ + ಗಳು = ಮರಗಳು

  2. ೧. ಮನೆ + ಗಳು = ........................

    Answer

    ಮನೆಗಳು

  3. ೨. ಚಿತ್ರ + ಗಳು = ........................

    Answer

    ಚಿತ್ರಗಳು

  4. ೩. ಹಕ್ಕಿ + ಗಳು = ........................

    Answer

    ಹಕ್ಕಿಗಳು

  5. ೪. ಪುಸ್ತಕ + ಗಳು = ........................

    Answer

    ಪುಸ್ತಕಗಳು

  6. ೫. ನದಿ + ಗಳು = ........................

    Answer

    ನದಿಗಳು

ಆ. ಈ ಪದ್ಯದಲ್ಲಿ ಬರುವ ಒತ್ತಕ್ಷರ ಪದಗಳನ್ನು ಪಟ್ಟಿಮಾಡಿ.

  1. (Blank lines are provided to list words with conjunct consonants).

    Answer

    ಕೊಕ್ಕೆಯ ಪುಟ್ಟನು ಬಿದ್ದ ಹಗ್ಗವ ಕಲ್ಲಿಗೆ ಸಿಕ್ಕಿ ಮೆಲ್ಲನೆ ತೋರುತಲೆಂದ ಬದುಕಿಸಿಕೊಟ್ಟೆ

ಬಳಕೆ ಚಟುವಟಿಕೆ

ಅ. 'ಅ' ಮತ್ತು 'ಆ' ಪಟ್ಟಿಯಲ್ಲಿರುವ ಶಬ್ದಗಳನ್ನು ಜೋಡಿಸಿ ಕವಿತೆಯ ಸಾಲುಗಳನ್ನು ಪೂರ್ತಿಗೊಳಿಸಿ.

  1. (Match the first half of the line in Column ಅ with its correct second half in Column ಆ):

  1. ತಿಂಗಳು ಬೆಳಕಿನ

  2. ಚಂದ್ರನ ಮೇಲಕೆ

  3. ಪುಟ್ಟನು ಚಂದ್ರನು

  4. ತಂಗಿಗೆ ಆಗಸ

  5. ನಮ್ಮಯ ದೇವರ

  1. ಬದುಕಿಸಿಕೊಟ್ಟೆ

  2. ತೋರುತಲೆಂದ

  3. ಎತ್ತಲಿಕೆಂದು

  4. ಸಿಕ್ಕೇ ಸಿಕ್ಕ

  5. ಇರುಳಿನಲಂದು

ಆ. "ದುಡುಕಿದರೆ ಫಲವಿಲ್ಲ" - ಇದು ಒಂದು ಗಾದೆ ಮಾತು. ಇದೇ ಅರ್ಥದ ಇನ್ನಷ್ಟು ಗಾದೆ ಮಾತುಗಳನ್ನು ಸಂಗ್ರಹಿಸಿ ಬರೆಯಿರಿ.

  1. (Blank lines are provided to write similar proverbs).

ಯೋಚಿಸಿ ಉತ್ತರಿಸಿ:

ಅ. ರಾತ್ರಿಯ ಆಗಸದಲ್ಲಿ ಮೂಡಿಬರುವ ಚಂದ್ರ, ತಾರೆಗಳು, ತಿಂಗಳು ಬೆಳಕಿನಲ್ಲಿ ಕಾಣುವ ಗಿಡಮರಬಳ್ಳಿಗಳು - ಇವೆಲ್ಲವನ್ನು ಬಳಸಿ ನಿಮಗಿಷ್ಟವಾದ ಚಿತ್ರವನ್ನು ಬರೆಯಿರಿ.

  1. (A large empty rectangular box is provided on the page for the student to draw the requested night scene).

ಜಾಣ ಮರಿ (Smart kid box at the end of the lesson)

  1. ನೀನೀಗ ಪದ್ಯದಲ್ಲಿನ ವಿಚಾರ ಸರಣಿ ಮತ್ತು ಘಟನಾವಳಿಗಳಲ್ಲಿರುವ ಸರಳ ಕಾರ್ಯಕಾರಣ ಸಂಬಂಧಗಳನ್ನು ಗುರುತಿಸುವುದರ ಜೊತೆಗೆ ಓದುವ ಮತ್ತು ಆಲಿಸುವ ಸಾಮರ್ಥ್ಯವನ್ನು ಗಳಿಸಿಕೊಂಡಿರುವೆ ಅಲ್ಲವೆ?

Interactive Lab

ತಿಂಗಳುtin-ga-lumoon
ತಿಂಗಳು ಬೆಳಕುtin-ga-lu be-la-kumoonlight (full moon's light)
ಬಿಂಬbim-bareflection, image seen in water or mirror
ಕೊಕ್ಕೆkok-kehook (a metal or wooden tool used to catch and pull)
ರಭಸra-bha-saforce, speed
ಆಗಸaa-ga-sasky
ಮೆಲ್ಲನೆmel-la-neslowly, gently