CRECT Education

Class 4 Kannada Lesson 1: Land of Kannada | KTBS Kannada Second Language – Poem

Description

Learn the beautiful poem 'ಕನ್ನಡ ನಾಡು' (Land of Kannada) from the KTBS Class 4 Second Language textbook. Walk through each stanza, learn key words, and test your understanding!

ಪದ್ಯ (poem) · ಡಾ. ಎಚ್.ಜೆ. ಲಕ್ಕಪ್ಪಗೌಡ (Dr. H.J. Lakkappa Gowda)

ಪಠ್ಯFull text

ನೋಡಿದು ನಮ್ಮಯ ಕನ್ನಡ ನಾಡು ಅಂದದ ಚಂದದ ಗಂಧದ ಗೂಡು ಒಲವು ಬಲವು ಉಕ್ಕುವ ನಾಡು ಗೆಲುವು ನಲಿವು ಚಿಮ್ಮುವ ನಾಡು ಥಳಥಳ ಹೊಳೆಯುವ ಗಣಿಗಳ ನಾಡು ಜುಳುಜುಳು ಹರಿಯುವ ತೊರೆಗಳ ನಾಡು ಮುಗಿಲನು ಮುಟ್ಟುವ ಗಿರಿಗಳ ನಾಡು ಹಚ್ಚನೆ ಹಸುರಿನ ವನಗಳ ಬೀಡು ತ್ಯಾಗದ ಭೋಗದ ವೀರರ ನಾಡು ರಸಿಕರ ಕೃಷಿಕರ ಶ್ರಮಿಕರ ನಾಡು ತೆಂಗಿನ ಕಂಗಿನ ರಂಗಿನ ನಾಡು ಸುಂದರ ಹವೆಯ ಬಂಧುರ ಬೀಡು ಹೂವಿನ ಜೇನಿನ ಹೊನ್ನಿನ ನಾಡು ಕವಿಗಳ ಋಷಿಗಳ ಸಂತರ ನಾಡು ವಿಧವಿಧ ಧರ್ಮದ ದೇವರ ಬೀಡು ಬೆಚ್ಚನೆ ಬದುಕಿನ ತೌರಿದು ನೋಡು ಬೇಲೂರು ಬೆಳ್ಳೊಳ ಹಂಪೆಯ ಶಿಲ್ಪದ ಕಾವೇರಿ ತುಂಗೆಯ ಭದ್ರೆಯ ತಲ್ಪದ ಶಾಂತಿಯ ಸಮತೆಯ ಮಮತೆಯ ನಾಡು ದೇವರು ರಚಿಸಿದ ಸುಂದರ ಹಾಡು – ಡಾ. ಎಚ್.ಜೆ. ಲಕ್ಕಪ್ಪಗೌಡ