CRECT Education

Class 4 Kannada Lesson 14: Dr. Salim Ali – Practice & Quiz | KTBS Second Language

Description

Practice what you learned from the life of Dr. Salim Ali, the Bird Man of India. Comprehension questions and language games from the textbook.

ಗದ್ಯ (prose) · ಸಮಿತಿ ರಚನೆ (Committee-authored)

ಪಠ್ಯFull text

ಒಂದು ದಿನ ಹುಡುಗನೊಬ್ಬ ಸತ್ತು ಬಿದ್ದಿದ್ದ ಹಕ್ಕಿಯೊಂದನ್ನು ನೋಡಿ ಕುತೂಹಲಗೊಂಡ. ಆ ಹಕ್ಕಿಯ ಕುತ್ತಿಗೆಯ ಕೆಳಗೆ ಇದ್ದ ಹಳದಿ ಬಣ್ಣ ಅವನ ಗಮನ ಸೆಳೆಯಿತು. ಹಕ್ಕಿಯ ಹೆಸರೇನೆಂದು ಸೋದರಮಾವನನ್ನು ಕೇಳಿದಾಗ ಅವರಿಗೆ ಅದರ ಬಗ್ಗೆ ಹೆಚ್ಚಿನ ವಿವರ ಗೊತ್ತಿರಲಿಲ್ಲ. ಅದರ ಬಗ್ಗೆ ತಿಳಿದುಕೊಳ್ಳಲು ಆತನನ್ನು ಮುಂಬಯಿಯ ಪ್ರಕೃತಿ ವಿಜ್ಞಾನ ಸಂಘದ ಪಕ್ಷಿತಜ್ಞರ ಬಳಿ ಕರೆದೊಯ್ದರು. ಅಲ್ಲಿಯ ಪಕ್ಷಿತಜ್ಞ ಡಬ್ಲ್ಯೂ. ಎಸ್. ಮಿಲ್ಲರ್ಡ್ ಬಾಲಕನ ಕೈಯಲ್ಲಿ ಸತ್ತು ತೂಗಾಡುತ್ತಿದ್ದ ಹಕ್ಕಿಯನ್ನು ಗಮನಿಸಿ ಇದು 'ಕಾಡುಗುಬ್ಬಚ್ಚಿ' ಎಂದು ತಿಳಿಸಿದರು. ಅಲ್ಲದೆ ಬಾಲಕನ ಕುತೂಹಲವನ್ನು ಗಮನಿಸಿದ ಅವರು ಅವನನ್ನು ಸಂಘದ ಕಚೇರಿಯ ಎಲ್ಲ ಭಾಗಗಳಿಗೂ ಕರೆದೊಯ್ದರು. ಎಲ್ಲಾ ಕಡೆ ಸತ್ತ ಪಕ್ಷಿಗಳನ್ನು ಸಂರಕ್ಷಿಸಿ ಒಪ್ಪವಾಗಿ ಜೋಡಿಸಿಟ್ಟಿದ್ದರು. ಬಾಲಕ ಈ ವಿಸ್ಮಯದ ಪಕ್ಷಿಲೋಕವನ್ನು ಕಂಡು ನಿಬ್ಬೆರಗಾದ. ಈ ಪ್ರಪಂಚದಲ್ಲಿ ಅಷ್ಟು ದೊಡ್ಡ ಪಕ್ಷಿ ಪ್ರಪಂಚ ಇದೆ ಎನ್ನುವುದನ್ನು ಕನಸಿನಲ್ಲಿಯೂ ಊಹಿಸಿರಲಿಲ್ಲ. ಅಂದಿನಿಂದ ಆತ 'ನನ್ನ ಬದುಕು ಇನ್ನು ಮುಂದೆ ಪಕ್ಷಿ ಅಧ್ಯಯನಕ್ಕೆ ಮೀಸಲು' ಎಂದು ನಿರ್ಧರಿಸಿದ. ಮುಂದೆ ಖ್ಯಾತ ಪಕ್ಷಿತಜ್ಞ ಎನಿಸಿದ. ಆತನೇ ಪಕ್ಷಿಪ್ರೇಮಿ ಸಲೀಂ ಅಲಿ. ಡಾ. ಸಲೀಂ ಮೊಯಿಜುದ್ದೀನ್ ಅಬ್ದುಲ್ ಅಲಿ ಅವರು ನವೆಂಬರ್ ೧೨, ೧೮೯೬ರಂದು ಮುಂಬಯಿಯ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಹತ್ತು ಮಕ್ಕಳಲ್ಲಿ ಸಲೀಂರವರು ಕೊನೆಯವರು. ಇವರು ಜನಿಸಿದ ಮೂರು ವರ್ಷದಲ್ಲಿ ತನ್ನ ತಂದೆತಾಯಿಯವರನ್ನು ಕಳೆದುಕೊಂಡು ಅನಾಥರಾದರು. ಬಳಿಕ ಅವರ ಸೋದರ ಮಾವ ಅಮೀರುದ್ದೀನ್ ತಯಾಬ್ಜಿಯವರ ಆಶ್ರಯದಲ್ಲಿ ಬೆಳೆದರು. ಅಮೀರುದ್ದೀನ್ ತಯಾಬ್ಜಿಯವರು ಶ್ರೀಮಂತರಾಗಿದ್ದು ಸಲೀಂರನ್ನು ತುಂಬ ಚೆನ್ನಾಗಿ ಸಾಕಿದರು. ಹೈಸ್ಕೂಲ್ ಮುಗಿಸಿದ ಅಲಿಯವರಿಗೆ ಕಾಲೇಜು ಶಿಕ್ಷಣ ಕಷ್ಟವಾಗಿ ಅದನ್ನು ಬಿಟ್ಟು ತನ್ನ ಸಹೋದರನ ಜೊತೆ ಕೆಲಸ ಮಾಡಲು ಬರ್ಮಾಕ್ಕೆ ಹಡಗಿನಲ್ಲಿ ಪ್ರಯಾಣಿಸಿದರು. ಅಲ್ಲಿ ಅದಿರಿನ ಗಣಿಯಲ್ಲಿ ದುಡಿಯುತ್ತಾ ಪಕ್ಷಿವೀಕ್ಷಣೆ ಮತ್ತು ಅದರ ಅಧ್ಯಯನವನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ಅವರಿಗೆ 'ತೆಹ್ಮಿನಾ'ರ ಜೊತೆಗೆ ಮದುವೆಯಾಯಿತು. ಬರ್ಮಾದಲ್ಲಿ ಹತ್ತು ವರ್ಷಗಳ ಕಾಲ ದುಡಿದ ಅಲಿಯವರು ಪತ್ನಿ ತೆಹ್ಮಿನಾರ ಜೊತೆಯಲ್ಲಿ ಮುಂಬಯಿಗೆ ಹಿಂದಿರುಗಿದರು. ಬಂದವರೇ ಪ್ರಾಣಿಶಾಸ್ತ್ರದಲ್ಲಿ ತರಬೇತಿ ಪಡೆದುಕೊಂಡರು. ಮತ್ತು ಜರ್ಮನಿಗೆ ತೆರಳಿ ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಪಕ್ಷಿವಿಜ್ಞಾನದ ಬಗ್ಗೆ ತರಬೇತಿ ಪಡೆದು ಭಾರತಕ್ಕೆ ಹಿಂತಿರುಗಿದರು. ಆದರೆ ಅವರಿಗೆ ಇಲ್ಲಿ ಜೀವನ ನಿರ್ವಹಣೆಗೆ ಅಗತ್ಯ ಕೆಲಸ ಸಿಗಲಿಲ್ಲ. ಧೃತಿಗೆಡದ ಅಲಿಯವರು ಭಾರತದ ತುಂಬೆಲ್ಲಾ ಸಂಚರಿಸಿ ಪಕ್ಷಿ ಪ್ರಭೇದದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯತೊಡಗಿದರು. ಇದಕ್ಕೆ ಅವರ ಪತ್ನಿ ತೆಹ್ಮಿನಾರ ಸಹಕಾರವೂ ಇತ್ತು. ಇದರಿಂದ ಸಲೀಂ ಅಲಿಯವರು ಕೆಲವೇ ದಿನಗಳಲ್ಲಿ ಪಕ್ಷಿಪ್ರೇಮಿ ಸಲೀಂ ಅಲಿ ಎಂದು ಪ್ರಖ್ಯಾತರಾದರು. ಅವರಿಗೆ ಅನೇಕ ಪ್ರಶಸ್ತಿ ಮನ್ನಣೆಗಳು ಲಭಿಸಿದವು. ಪಕ್ಷಿಲೋಕದ ಅಧ್ಯಯನಕ್ಕೆ ಭಾರತದಲ್ಲಿ ನಾಂದಿ ಹಾಡಿದ ಡಾ. ಸಲೀಂ ಅಲಿ ಇಂದು ನಮ್ಮೊಡನೆ ಇಲ್ಲ; ಆದರೆ ಅವರು ಪ್ರೀತಿಯಿಂದ ಬೆಳೆಸಿದ ಪಕ್ಷಿವಿಜ್ಞಾನದ ಪರಂಪರೆ ನಮ್ಮಲ್ಲಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. **ಕೌಶಲ :- ಓದುವುದು / ಬರೆಯುವುದು.** **ಸಾಮರ್ಥ್ಯ:- ಒತ್ತಕ್ಷರ ಪದ ಹಾಗೂ ಲೇಖನ ಚಿಹ್ನೆಗಳನ್ನು ಗಮನಿಸಿ ಓದುವುದು ಮತ್ತು ಬರೆಯುವುದು.**

**ಶುಭನುಡಿ** - ಜೀವನ ಬಲು ಚಿಕ್ಕದು. ಅದನ್ನು ಚೊಕ್ಕವಾಗಿ ಕಳೆಯೋಣ. - ದೇಶಕ್ಕಾಗಿ ನೀನು ಯಾವುದೇ ತ್ಯಾಗಕ್ಕಾದರೂ ಸಿದ್ಧನಾಗು. - ಪಕ್ಷಿ, ಪ್ರಾಣಿಗಳೂ ನಮ್ಮಂತೆಯೆ ಜೀವಿಗಳು. "ಜೀವನ ಬಲು ಚಿಕ್ಕದು. ಅದನ್ನು ಚೊಕ್ಕವಾಗಿ ಕಳೆಯೋಣ." — "Life is very short. Let us spend it purely/cleanly."

ಪದಗಳ ಅರ್ಥword meanings

KannadaPronunciationMeaning
ಕುತೂಹಲku-too-ha-laಅಚ್ಚರಿ, ವಿಸ್ಮಯ (wonder, surprise)
ಪಕ್ಷಿ ತಜ್ಞpak-shi taj-naಪಕ್ಷಿಗಳ ಬಗ್ಗೆ ತಿಳಿದವನು (ornithologist)
ನಿರ್ಧರಿಸುnir-dha-ri-suತೀರ್ಮಾನಿಸು, ನಿಶ್ಚಯಿಸು (decide, resolve)
ಖ್ಯಾತkhyaa-taಪ್ರಸಿದ್ಧವಾದ, ಹೆಸರುವಾಸಿಯಾದ (famous, well-known)
ಜೀವನ ನಿರ್ವಹಣೆjee-va-na nir-va-ha-neಬದುಕು ಸಾಗಿಸುವುದು (making a living)
ಧೃತಿಗೆಡುdhru-ti-ge-duಧೈರ್ಯವನ್ನು ಕಳೆದುಕೊಳ್ಳು, ಎದೆಗುಂದು (lose courage)
ಪ್ರಭೇದpra-bhay-daವಿಭಾಗ, ಪ್ರಕಾರ (variety, type)
ಪ್ರಶಸ್ತಿpra-shas-tiಹೊಗಳಿಕೆಯನ್ನೊಳಗೊಂಡ ಶಾಸನ, ಗೌರವ ಸೂಚಕವಾದ ಪದವಿ, ಬಿರುದು (award, honor)
ಕರ್ತವ್ಯkar-tav-yaಮಾಡಬೇಕಾದುದು, ಮಾಡಬೇಕಾದ ಕೆಲಸ, ಜವಾಬ್ದಾರಿ (duty, responsibility)

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ) ಎರಡು ಪಟ್ಟಿಯಲ್ಲಿರುವ ಮಾಹಿತಿಯನ್ನು ಹೊಂದಿಸಿ ಬರೆಯಿರಿ.

  1. ೧) ಡಬ್ಲ್ಯೂ. ಎಸ್. ಮಿಲ್ಲರ್ಡ್ — ೧) ಸಲೀಂರವರ ಪತ್ನಿ

  2. ೨) ಅಮೀರುದ್ದೀನ್ ತಯಾಬ್ಜಿ — ೨) ಬರ್ಮಾ

  3. ೩) ತೆಹ್ಮಿನಾ — ೩) ಜರ್ಮನಿ

  4. ೪) ಅದಿರಿನ ಗಣಿ — ೪) ಪ್ರಕೃತಿ ವಿಜ್ಞಾನ ಸಂಘದ ಪಕ್ಷಿತಜ್ಞ

  5. ೫) ಬರ್ಲಿನ್ ವಿಶ್ವವಿದ್ಯಾನಿಲಯ — ೫) ಸಲೀಂ ಅಲಿಯವರ ಸೋದರ ಮಾವ

  6. ೧) ..........................................................................................

    Answer

    ೧) ಡಬ್ಲ್ಯೂ. ಎಸ್. ಮಿಲ್ಲರ್ಡ್ — ೪) ಪ್ರಕೃತಿ ವಿಜ್ಞಾನ ಸಂಘದ ಪಕ್ಷಿತಜ್ಞ

  7. ೨) ..........................................................................................

    Answer

    ೨) ಅಮೀರುದ್ದೀನ್ ತಯಾಬ್ಜಿ — ೫) ಸಲೀಂ ಅಲಿಯವರ ಸೋದರ ಮಾವ

  8. ೩) ..........................................................................................

    Answer

    ೩) ತೆಹ್ಮಿನಾ — ೧) ಸಲೀಂರವರ ಪತ್ನಿ

  9. ೪) ..........................................................................................

    Answer

    ೪) ಅದಿರಿನ ಗಣಿ — ೨) ಬರ್ಮಾ

  10. ೫) ..........................................................................................

    Answer

    ೫) ಬರ್ಲಿನ್ ವಿಶ್ವವಿದ್ಯಾನಿಲಯ — ೩) ಜರ್ಮನಿ

ಆ) ತಪ್ಪಾಗಿರುವುದನ್ನು ಸರಿಪಡಿಸಿ ಬರೆಯಿರಿ.

  1. ೧. ಸಲೀಂ ಅಲಿ ಹತ್ತು ಮಕ್ಕಳಲ್ಲಿ ಮೊದಲನೆಯವರು

  2. .................................................................................................................................

    Answer

    ಸಲೀಂ ಅಲಿ ಹತ್ತು ಮಕ್ಕಳಲ್ಲಿ ಕೊನೆಯವರು.

  3. ೨. ಪ್ರಕೃತಿ ವಿಜ್ಞಾನ ಸಂಸ್ಥೆಯ ಪಕ್ಷಿತಜ್ಞ ಡಬ್ಲ್ಯೂ. ಎಸ್. ಮಿಲ್ಲರ್ಡ್

  4. .................................................................................................................................

    Answer

    ಪ್ರಕೃತಿ ವಿಜ್ಞಾನ ಸಂಘದ ಪಕ್ಷಿತಜ್ಞ ಡಬ್ಲ್ಯೂ. ಎಸ್. ಮಿಲ್ಲರ್ಡ್.

  5. ೩. ಅಮೀರುದ್ದೀನ್ ತಯಾಬ್ಜಿಯವರು ತುಂಬಾ ಬಡವರಾಗಿದ್ದರು.

  6. .................................................................................................................................

    Answer

    ಅಮೀರುದ್ದೀನ್ ತಯಾಬ್ಜಿಯವರು ತುಂಬಾ ಶ್ರೀಮಂತರಾಗಿದ್ದರು.

ಇ) ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಕಾಡುಗುಬ್ಬಚ್ಚಿಯ ಕುತ್ತಿಗೆಯ ಕೆಳಗೆ ಯಾವ ಬಣ್ಣವಿತ್ತು?

  2. .................................................................................................................................

    Answer

    ಕಾಡುಗುಬ್ಬಚ್ಚಿಯ ಕುತ್ತಿಗೆಯ ಕೆಳಗೆ ಹಳದಿ ಬಣ್ಣವಿತ್ತು.

  3. ೨. ಸಲೀಂ ಅಲಿ ಯಾವಾಗ ಮತ್ತು ಎಲ್ಲಿ ಜನಿಸಿದರು?

  4. .................................................................................................................................

    Answer

    ಸಲೀಂ ಅಲಿ ನವೆಂಬರ್ ೧೨, ೧೮೯೬ರಂದು ಮುಂಬಯಿಯಲ್ಲಿ ಜನಿಸಿದರು.

  5. ೩. ತೆಹ್ಮಿನಾ ಯಾರು?

  6. .................................................................................................................................

    Answer

    ತೆಹ್ಮಿನಾ ಸಲೀಂ ಅಲಿಯವರ ಪತ್ನಿ.

  7. ೪. ಸಲೀಂ ಅಲಿಯವರು ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಯಾವುದರ ಬಗ್ಗೆ ತರಬೇತಿ ಪಡೆದರು?

  8. .................................................................................................................................

    Answer

    ಸಲೀಂ ಅಲಿಯವರು ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಪಕ್ಷಿವಿಜ್ಞಾನದ ಬಗ್ಗೆ ತರಬೇತಿ ಪಡೆದರು.

  9. ೫. ಭಾರತದಲ್ಲಿ ಪಕ್ಷಿ ಅಧ್ಯಯನಕ್ಕೆ ನಾಂದಿ ಹಾಡಿದವರು ಯಾರು?

  10. .................................................................................................................................

    Answer

    ಭಾರತದಲ್ಲಿ ಪಕ್ಷಿ ಅಧ್ಯಯನಕ್ಕೆ ನಾಂದಿ ಹಾಡಿದವರು ಡಾ. ಸಲೀಂ ಅಲಿ.

ಈ) ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಸಲೀಂ ಅಲಿಯವರಿಗೆ ಪಕ್ಷಿತಜ್ಞನಾಗಬೇಕೆಂದು ಅನಿಸಿದ್ದೇಕೆ?

  2. .................................................................................................................................

    Answer

    ಸಲೀಂ ಅಲಿಯವರು ಸತ್ತು ಬಿದ್ದಿದ್ದ ಹಕ್ಕಿಯನ್ನು ನೋಡಿ ಕುತೂಹಲಗೊಂಡರು. ಪ್ರಕೃತಿ ವಿಜ್ಞಾನ ಸಂಘದಲ್ಲಿ ಪಕ್ಷಿತಜ್ಞ ಡಬ್ಲ್ಯೂ. ಎಸ್. ಮಿಲ್ಲರ್ಡ್ ಅವರು ಆ ಹಕ್ಕಿ ಕಾಡುಗುಬ್ಬಚ್ಚಿ ಎಂದು ತಿಳಿಸಿದರು ಮತ್ತು ಸಂರಕ್ಷಿಸಿದ ಪಕ್ಷಿಗಳ ಸಂಗ್ರಹವನ್ನು ತೋರಿಸಿದರು. ಈ ವಿಸ್ಮಯದ ಪಕ್ಷಿಲೋಕವನ್ನು ಕಂಡು ಅವರು ತಮ್ಮ ಬದುಕನ್ನು ಪಕ್ಷಿ ಅಧ್ಯಯನಕ್ಕೆ ಮೀಸಲಿಡಲು ನಿರ್ಧರಿಸಿದರು.

  3. .................................................................................................................................

  4. .................................................................................................................................

  5. ೨. ಯಾವ ಪರಂಪರೆಯನ್ನು ಬೆಳೆಸುವುದು ನಮ್ಮ ಕರ್ತವ್ಯ?

  6. .................................................................................................................................

    Answer

    ಡಾ. ಸಲೀಂ ಅಲಿ ಅವರು ಭಾರತದಲ್ಲಿ ಪಕ್ಷಿವಿಜ್ಞಾನದ ಅಧ್ಯಯನಕ್ಕೆ ನಾಂದಿ ಹಾಡಿದರು. ಅವರು ಬೆಳೆಸಿದ ಪಕ್ಷಿವಿಜ್ಞಾನದ ಪರಂಪರೆ ನಮ್ಮಲ್ಲಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ.

  7. .................................................................................................................................

  8. .................................................................................................................................

  9. ೩. ಪ್ರಾಣಿ ಪಕ್ಷಿಗಳ ಬಗ್ಗೆ ನಿಮ್ಮದೇ ಮಾತುಗಳಲ್ಲಿ ಬರೆಯಿರಿ.

  10. .................................................................................................................................

    Answer

    ಪ್ರಾಣಿ ಪಕ್ಷಿಗಳು ನಮ್ಮ ಸ್ನೇಹಿತರು. ನಾವು ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಅವುಗಳಿಗೆ ನೀರು ಮತ್ತು ಆಹಾರವನ್ನು ನೀಡಬೇಕು.

  11. .................................................................................................................................

  12. .................................................................................................................................

Interactive Lab