CRECT Education

Class 4 Kannada Lesson 15: Putta's Kite | KTBS Second Language

Description

Walkthrough of the poem 'Putta's Kite' (ಪುಟ್ಟನ ಗಾಳಿಪಟ) with line-by-line explanation, vocabulary, and practice.

ಪದ್ಯ (poem) · ಡಾ. ವರದಾ ಶ್ರೀನಿವಾಸ (Dr. Varada Srinivasa)

ಪಠ್ಯFull text

ಹಸುರಿನ ಹಾಳೆಯ ಗಾಳಿಪಟ ಕಾಸಿಗೆ ಕೊಂಡನು ನಮ್ಮಪುಟ್ಟ ನಡೆದನು ಪುಟ್ಟನು ಮನೆಯಾಚೆ ಗೆಳೆಯರ ಬಳಗವ ಕರೆಯಲಿಕೆ ಬಂದಿಹ ಗೆಳೆಯರ ನೋಡುತಲಿ ಹಾಡಿದ ಪುಟ್ಟನು ಜಂಭದಲಿ “ಉದ್ದದ ಬಾಲಂಗೋಚಿಯಿದೆ- ಗಗನಕೆ ತಲುಪುವ ದಾರವಿದೆ ನನ್ನಲ್ಲಿಹುದೂ ನಿಮ್ಮಲ್ಲಿಲ್ಲಾ- ಖಂಡಿತ ನಿಮಗೆ ಕೊಡುವುದೇ ಇಲ್ಲಾ” ಪುಟ್ಟನು ಓಡಿದ ಕುಣಿದಾಡಿ ಗೆಳೆಯರು ಬಂದರು ಓಡೋಡಿ ಪಟವದು ಮರಕೆ ಸಿಲುಕಿತ್ತು ಪುಟ್ಟಗೆ ಅಳುವೂ ಬಂದಿತ್ತು ಪುಟ್ಟನ ಪಟವದು ಹಾಳಾಯ್ತು ಜಂಭದ ಪುಟ್ಟಗೆ ಪೆಚ್ಚಾಯ್ತು ಗೆಳೆಯರು ಪಟವನು ಬಿಡಿಸಿದರು ಪುಟ್ಟಗೆ ಕೊಟ್ಟು ನಗಿಸಿದರು ಪುಟ್ಟನ ಜಂಭವು ಕರಗಿತ್ತು ಪಟವದು ಎಲ್ಲರ ಪಾಲಾಯ್ತು – ಡಾ. ವರದಾ ಶ್ರೀನಿವಾಸ

"ಅತಿ ಆಸೆ ಗತಿಗೇಡಿಸುವುದು." — "Excessive greed leads to ruin." A timeless piece of wisdom reminding us to avoid being overly boastful or greedy, much like Putta learning to share his kite.

ಪದಗಳ ಅರ್ಥword meanings

KannadaPronunciationMeaning
ಸಿಲುಕುsi-lu-kuget caught, get entangled
ಪೆಚ್ಚುpec-chulose face, become dull
ಕರಗುka-ra-gumelt, soften (feeling pity)
ಜಂಭjam-bhapride, vanity, empty boasting
ಬಳಗba-la-gagroup, relatives
ಗಗನga-ga-nasky

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ) ಗುಂಪಿಗೆ ಸೇರದ ಪದವನ್ನು ಗುರುತಿಸಿ ಅಡಿ ಗೆರೆ ಎಳೆಯಿರಿ.

  1. ೧. ಹಸಿರು ಹಳದಿ ಹಸು ಕೆಂಪು

  2. ೨. ದಾಂಡು ಮೈಸೂರು ಚೆಂಡು ಗೋಲಿ

  3. ೩. ರಾಮ ರಹೀಮ ಜೋಸೆಫ್ ಕೋಗಿಲೆ

  4. ೪. ಆನೆ ಮರ ಗಿಡ ಬಳ್ಳಿ

ಆ) ಕೆಳಗಿನ ಪದ್ಯದ ಸಾಲುಗಳನ್ನು ಪೂರ್ಣಗೊಳಿಸಿರಿ.

  1. ಗೆಳೆಯರು ..............................................................

    Answer

    ಗೆಳೆಯರು ಪಟವನು ಬಿಡಿಸಿದರು

  2. .............................................................. ನಗಿಸಿದರು

    Answer

    ಪುಟ್ಟಗೆ ಕೊಟ್ಟು ನಗಿಸಿದರು

  3. ಪುಟ್ಟನ ..............................................................

    Answer

    ಪುಟ್ಟನ ಜಂಭವು ಕರಗಿತ್ತು

  4. .............................................................. ಪಾಲಾಯ್ತು.

    Answer

    ಪಟವದು ಎಲ್ಲರ ಪಾಲಾಯ್ತು.

ಇ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಗಾಳಿಪಟವು ಯಾರ ಕೈಯಲ್ಲಿ ಇತ್ತು?

    Answer

    ಗಾಳಿಪಟವು ಪುಟ್ಟನ ಕೈಯಲ್ಲಿ ಇತ್ತು.

  2. ೨. ಯಾರನ್ನು ಕರೆಯಲು ಪುಟ್ಟ ಮನೆಯಾಚೆ ಹೋದನು?

    Answer

    ಗೆಳೆಯರ ಬಳಗವನ್ನು ಕರೆಯಲು ಪುಟ್ಟ ಮನೆಯಾಚೆ ಹೋದನು.

  3. ೩. ಗಾಳಿಪಟ ಯಾವುದಕ್ಕೆ ಸಿಕ್ಕಿಹಾಕಿಕೊಂಡಿತು?

    Answer

    ಗಾಳಿಪಟವು ಮರಕ್ಕೆ ಸಿಕ್ಕಿಹಾಕಿಕೊಂಡಿತು.

  4. ೪. ಪುಟ್ಟನಿಗೆ ಏಕೆ ಪೆಚ್ಚಾಯಿತು?

    Answer

    ಪುಟ್ಟನ ಗಾಳಿಪಟವು ಹಾಳಾದುದರಿಂದ ಅವನಿಗೆ ಪೆಚ್ಚಾಯಿತು.

  5. ೫. ಗಾಳಿಪಟ ಯಾರ ಪಾಲಾಯಿತು?

    Answer

    ಗಾಳಿಪಟವು ಎಲ್ಲರ ಪಾಲಾಯಿತು.

ಈ) ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಪುಟ್ಟನು ಗೆಳೆಯರಿಗೆ ಜಂಭದಿಂದ ಏನನ್ನು ಹೇಳಿದನು?

    Answer

    ಪುಟ್ಟನು ತನ್ನ ಗಾಳಿಪಟಕ್ಕೆ ಉದ್ದದ ಬಾಲಂಗೋಚಿ ಇದೆ ಮತ್ತು ಗಗನಕೆ ತಲುಪುವ ದಾರವಿದೆ ಎಂದು ಜಂಭದಿಂದ ಹೇಳಿದನು. ಅದು ತನ್ನಲ್ಲಿದೆ, ಗೆಳೆಯರಲ್ಲಿ ಇಲ್ಲ; ಖಂಡಿತವಾಗಿಯೂ ಅವರಿಗೆ ಕೊಡುವುದಿಲ್ಲ ಎಂದು ಹೇಳಿದನು.

  2. ೨. ಗಾಳಿಪಟ ಪದ್ಯದಲ್ಲಿ ಕಂಡುಬರುವ ನೀತಿಯೇನು?

    Answer

    ಪುಟ್ಟನು ಜಂಭದಿಂದ ಗೆಳೆಯರಿಗೆ ಗಾಳಿಪಟ ಕೊಡುವುದಿಲ್ಲ ಎಂದನು. ಆದರೆ ಗಾಳಿಪಟ ಹಾಳಾದಾಗ ಗೆಳೆಯರೇ ಸಹಾಯ ಮಾಡಿದರು. ಆಗ ಪುಟ್ಟನ ಜಂಭ ಕರಗಿ ಗಾಳಿಪಟ ಎಲ್ಲರ ಪಾಲಾಯಿತು; ಆದ್ದರಿಂದ ಜಂಭ ಮಾಡದೆ ಹಂಚಿಕೊಳ್ಳಬೇಕು ಎಂಬುದೇ ನೀತಿ.

Interactive Lab

ಸಿಲುಕುsi-lu-kuget caught, get entangled
ಪೆಚ್ಚುpec-chulose face, become dull
ಕರಗುka-ra-gumelt, soften (feeling pity)
ಜಂಭjam-bhapride, vanity, empty boasting
ಬಳಗba-la-gagroup, relatives
ಗಗನga-ga-nasky