CRECT Education

Class 4 Kannada Lesson 16: A Leave Letter | KTBS Kannada Second Language – Learn the Story

Description

Learn the story and key vocabulary from Lesson 16 of the Class 4 Kannada Second Language textbook (KTBS). Part 1 of 2 — covers the beat-by-beat explanation and 5 essential words.

ಗದ್ಯ (prose) · ಸಮಿತಿ ರಚನೆ (Committee-authored)

ಪಠ್ಯFull text

ಮಕ್ಕಳೇ, ಪತ್ರ ಬರೆಯುವ ಕ್ರಮ ಬಹಳ ಹಿಂದಿನಿಂದಲೇ ಬಂದಿದೆ. ಆಗೆಲ್ಲಾ ಒಂದು ಊರಿನಲ್ಲಿರುವವರು ಇನ್ನೊಂದು ಊರಿನಲ್ಲಿರುವ ತಮ್ಮ ಬಂಧುಬಳಗದವರನ್ನು ಸಂಪರ್ಕಿಸಲು ಪತ್ರವೇ ದಾರಿಯಾಗಿತ್ತು. ಕಾಲಕ್ರಮೇಣ ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳು ಬಂದು ಕೈಬರೆಹದ ಪತ್ರ ಕಡಿಮೆಯಾಗತೊಡಗಿತು. ಮನಸ್ಸಿನ ಆಲೋಚನೆಗಳನ್ನು ಪತ್ರದಲ್ಲಿ ಮೂಡಿಸುವಾಗ ನಿಜಕ್ಕೂ ಸಂತೋಷವಾಗುತ್ತದೆ. ಆದರೆ ಇಂದು ಕೈಬರೆಹವೂ, ಪತ್ರಬರೆಹವೂ ಕಡಿಮೆಯಾಗಿದೆ. ಎಲ್ಲವೂ ಯಂತ್ರಮಯವಾಗಿದೆ. ಆದರೆ ರಜಾ ಅರ್ಜಿಯನ್ನು ನಾವು ಕೈಯಲ್ಲೇ ಬರೆಯುತ್ತೇವೆ. ಅಂದ ಹಾಗೆ ರಜಾ ಅರ್ಜಿ ಎಂದರೇನು? ಯಾರು ತಮ್ಮ ಕಛೇರಿಗೆ, ಶಾಲೆಗೆ ಅಥವಾ ಸಂಘ ಸಂಸ್ಥೆಗೆ ಕೆಲಸದ ವೇಳೆಯಲ್ಲಿ ಹಾಜರಾಗುವುದಿಲ್ಲವೋ ಅವರು ತಮ್ಮ ಮೇಲಧಿಕಾರಿಗಳಿಗೆ ಅರ್ಜಿ ಬರೆದು ಗೈರುಹಾಜರಿಯ ಕಾರಣವನ್ನು ತಿಳಿಸಿ ಅನುಮತಿ ಪಡೆದುಕೊಳ್ಳಬೇಕು. ಆ ಅನುಮತಿಗಾಗಿ ಬರೆಯುವ ಅರ್ಜಿಯೇ ರಜಾ ಅರ್ಜಿ. ಇಲ್ಲಿ ನಾವು ವಿದ್ಯಾರ್ಥಿಗಳು ಬರೆಯುವ ರಜಾ ಅರ್ಜಿಯ ಬಗ್ಗೆ ತಿಳಿದುಕೊಳ್ಳುತ್ತೇವೆ. ವಿದ್ಯಾರ್ಥಿಯು ರಜಾ ಅರ್ಜಿಯನ್ನು ತರಗತಿಯ ಶಿಕ್ಷಕರಿಗೆ ಅಥವಾ ಮುಖ್ಯೋಪಾಧ್ಯಾಯರಿಗೆ ಬರೆಯಬೇಕು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಂದ ಅನುಮತಿ ಕೇಳದೆ ಶಾಲೆಗೆ ಗೈರುಹಾಜರಾಗುತ್ತಿರುವುದು ಕಂಡು ಬರುತ್ತಿದೆ. ಇದು ಒಳ್ಳೆಯ ವಿದ್ಯಾರ್ಥಿಗಳ ಲಕ್ಷಣವಲ್ಲ. ಶಾಲೆಗೆ ಬರಲು ಆಗದ ಸಂದರ್ಭದಲ್ಲಿ ಸೂಕ್ತ ಕಾರಣ ನೀಡಿ ಬರೆಯುವ ಪತ್ರವೂ ರಜಾ ಅರ್ಜಿ. ಆ ಪತ್ರಕ್ಕೆ ವಿದ್ಯಾರ್ಥಿಯ ಹೆತ್ತವರು ಅಥವಾ ಪೋಷಕರು ಸಹಿ ಮಾಡಿದರೆ ರಜಾಪತ್ರಕ್ಕೆ ಇನ್ನಷ್ಟು ಗೌರವ ಬರುತ್ತದೆ. ಇಲ್ಲಿ ರಜಾಪತ್ರದ ಮಾದರಿಯೊಂದನ್ನು ನೀಡಲಾಗಿದೆ. ಇಂತೆಯೇ ರಜಾಪತ್ರ ಬರೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿರಿ. **ಮಾದರಿ ರಜಾ ಪತ್ರ** ದಿನಾಂಕ: 15-10-2024 ವೈಕುಂಠಪುರ, ಮೈಸೂರು. ಇವರಿಂದ. ಫರ್ಜಾನಾ ನಾಲ್ಕನೆಯ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಮೈಸೂರು ಇವರಿಗೆ. ಮಾನ್ಯ ತರಗತಿ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಮೈಸೂರು ಮಾನ್ಯರೇ, ವಿಷಯ: ಒಂದು ದಿನ ರಜೆ ಪಡೆಯುವ ಬಗ್ಗೆ ದಿನಾಂಕ 16-10-2024ರಂದು ನಮ್ಮ ಚಿಕ್ಕಪ್ಪನ ವಿವಾಹ ಸಮಾರಂಭವಿದೆ. ಆದ್ದರಿಂದ ಅಂದು ಶಾಲೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಅಂದಿನ ಗೈರು ಹಾಜರಿಯನ್ನು ಮನ್ನಿಸಿ ರಜೆ ನೀಡಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ತಂದೆ/ತಾಯಿ/ಪೋಷಕರ ಸಹಿ ಸಹಿ ಇಂತಿ ತಮ್ಮ ವಿಧೇಯ ವಿದ್ಯಾರ್ಥಿನಿ ಸಹಿ **ಕೌಶಲ :-** ಬರೆಯುವುದು. **ಸಾಮರ್ಥ್ಯ:-** ಕೈ ಬರೆಹಗಳನ್ನು ಓದುವುದು, ರಜಾ ಅರ್ಜಿ ಬರೆಯುವುದು.

"ಹೊತ್ತು ಕಳೆದರೆ ಹೋಯಿತು, ಮುತ್ತು ಒಡೆದರೆ ಹೋಯಿತು." — "Time passed is lost, a pearl broken is lost." A proverb about the preciousness of time.

ಪದಗಳ ಅರ್ಥword meanings

KannadaPronunciationMeaning
ಪತ್ರpat-raletter, paper sent to someone
ಕ್ರಮkra-mamethod, sequence
ಬಂಧುban-dhurelative
ಕಾಲಕ್ರಮೇಣkaa-la-kra-may-naover time, gradually
ಕಂಪ್ಯೂಟರ್kam-pyoo-tarcomputer
ಮೊಬೈಲ್mo-bailmobile
ಯಂತ್ರಮಯyan-tra-ma-yafull of machines, mechanized
ಗೈರುಹಾಜರಿgai-ru-haa-ja-riabsence
ಲಕ್ಷಣlak-sha-nacharacteristic, sign
ಸೂಕ್ತsook-tasuitable, proper
ಸಹಿsa-hisignature
ಮನ್ನಿಸುman-ni-suforgive, excuse
ವಿನಂತಿvi-nan-tirequest
ಮಾದರಿmaa-da-rimodel, format

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಬಿಟ್ಟ ಸ್ಥಳವನ್ನು ಸರಿಯಾದ ಪದಗಳಿಂದ ತುಂಬಿರಿ.

  1. ೧. ಅನುಮತಿಗಾಗಿ ಬರೆಯುವ ಅರ್ಜಿಯೇ .............................

    Answer

    ಅನುಮತಿಗಾಗಿ ಬರೆಯುವ ಅರ್ಜಿಯೇ ರಜಾ ಅರ್ಜಿ.

  2. ೨. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಂದ............................. ಕೇಳದೆ ರಜೆ ಹಾಕುತ್ತಾರೆ.

    Answer

    ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಂದ ಅನುಮತಿ ಕೇಳದೆ ರಜೆ ಹಾಕುತ್ತಾರೆ.

  3. ೩. ಸೂಕ್ತ ............................. ನೀಡಿ ಬರೆಯುವ ಪತ್ರವೇ ರಜಾ ಅರ್ಜಿ.

    Answer

    ಸೂಕ್ತ ಕಾರಣ ನೀಡಿ ಬರೆಯುವ ಪತ್ರವೇ ರಜಾ ಅರ್ಜಿ.

  4. ೪. ಪೋಷಕರ ಸಹಿ ಇದ್ದರೆ ಪತ್ರಕ್ಕೆ ಇನ್ನಷ್ಟು ............................. ಬರುತ್ತದೆ.

    Answer

    ಪೋಷಕರ ಸಹಿ ಇದ್ದರೆ ಪತ್ರಕ್ಕೆ ಇನ್ನಷ್ಟು ಗೌರವ ಬರುತ್ತದೆ.

ಆ) ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

  1. ೧. ಕೈಬರೆಹದ ಪತ್ರ ಏಕೆ ಕಡಿಮೆಯಾಗಿದೆ?

    Answer

    ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳು ಬಂದುದರಿಂದ ಕೈಬರೆಹದ ಪತ್ರ ಕಡಿಮೆಯಾಗಿದೆ.

  2. ೨. ಪತ್ರದಲ್ಲಿ ಏನನ್ನು ಮೂಡಿಸುವಾಗ ಸಂತೋಷವಾಗುತ್ತದೆ?

    Answer

    ಮನಸ್ಸಿನ ಆಲೋಚನೆಗಳನ್ನು ಪತ್ರದಲ್ಲಿ ಮೂಡಿಸುವಾಗ ಸಂತೋಷವಾಗುತ್ತದೆ.

  3. ೩. ವಿದ್ಯಾರ್ಥಿಗಳು ಯಾರಿಗೆ ರಜಾ ಅರ್ಜಿ ಬರೆಯಬೇಕು?

    Answer

    ವಿದ್ಯಾರ್ಥಿಗಳು ತರಗತಿಯ ಶಿಕ್ಷಕರಿಗೆ ಅಥವಾ ಮುಖ್ಯೋಪಾಧ್ಯಾಯರಿಗೆ ರಜಾ ಅರ್ಜಿ ಬರೆಯಬೇಕು.

  4. ೪. ಯಾವುದು ಒಳ್ಳೆಯ ವಿದ್ಯಾರ್ಥಿಗಳ ಲಕ್ಷಣವಲ್ಲ?

    Answer

    ಶಿಕ್ಷಕರಿಂದ ಅನುಮತಿ ಕೇಳದೆ ಶಾಲೆಗೆ ಗೈರುಹಾಜರಾಗುವುದು ಒಳ್ಳೆಯ ವಿದ್ಯಾರ್ಥಿಗಳ ಲಕ್ಷಣವಲ್ಲ.

  5. ೫. ರಜಾ ಪತ್ರಕ್ಕೆ ಯಾರು ಸಹಿ ಮಾಡಿದರೆ ಹೆಚ್ಚು ಗೌರವ ಬರುತ್ತದೆ?

    Answer

    ವಿದ್ಯಾರ್ಥಿಯ ಹೆತ್ತವರು ಅಥವಾ ಪೋಷಕರು ಸಹಿ ಮಾಡಿದರೆ ರಜಾ ಪತ್ರಕ್ಕೆ ಹೆಚ್ಚು ಗೌರವ ಬರುತ್ತದೆ.

ಭಾಷಾಭ್ಯಾಸ

ಅ) ಮಾದರಿಯಂತೆ 'ಕನ್ನಡ' ಪದವನ್ನು ಬಳಸಿ ಐದು ವಾಕ್ಯಗಳನ್ನು ರಚಿಸಿರಿ.

  1. ಮಾದರಿ: ನಮ್ಮ ನಾಡು ಕನ್ನಡ.

  2. ೧. ................................................................................................................

    Answer

    ನಾನು ಕನ್ನಡ ಭಾಷೆಯಲ್ಲಿ ಮಾತನಾಡುತ್ತೇನೆ.

  3. ೨. ................................................................................................................

    Answer

    ನಮ್ಮ ಶಾಲೆಯಲ್ಲಿ ಕನ್ನಡ ಪಾಠ ನಡೆಯುತ್ತದೆ.

  4. ೩. ................................................................................................................

    Answer

    ನನಗೆ ಕನ್ನಡ ಓದಲು ತುಂಬಾ ಇಷ್ಟ.

  5. ೪. ................................................................................................................

    Answer

    ಕನ್ನಡ ನಮ್ಮ ರಾಜ್ಯದ ಭಾಷೆ.

  6. ೫. ................................................................................................................

    Answer

    ನಮ್ಮ ಮನೆಯಲ್ಲಿ ಎಲ್ಲರೂ ಕನ್ನಡ ಮಾತನಾಡುತ್ತಾರೆ.

  7. **ಆ) ಕೆಳಗಿನ ವಾಕ್ಯಗಳನ್ನು ಎರಡು ಗೆರೆಗಳ ನಡುವೆ ಅಂದವಾಗಿ ಬರೆಯಿರಿ.** (Copywriting exercise with double lines provided for each sentence)

  8. ೧. ಆಕಾಶದಲ್ಲಿ ಹಾರುವ ವಿಮಾನ ನೋಡಲು ಚಂದ.

  9. ೨. ಕಸ್ತೂರಬಾ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಪತ್ನಿ.

  10. ೩. ಹುಯ್ಯೋ ಹುಯ್ಯೋ ಮಳೆರಾಯ.

ಭಾಷಾ ಚಟುವಟಿಕೆ

  1. ಅ) ಬ್ಯಾಂಕಿನ ಮ್ಯಾನೇಜರ್‌ಗೆ ನೀವು ಗುಮಾಸ್ತರೆಂದು ಭಾವಿಸಿ ಅರ್ಜಿ ಬರೆದು ರಜೆ ಕೇಳಿರಿ.

    Answer

    ದಿನಾಂಕ: ................ ಊರು: ................ ಇವರಿಂದ, ................, ಗುಮಾಸ್ತ, ................ ಬ್ಯಾಂಕ್, ................ ಇವರಿಗೆ, ಮಾನ್ಯ ಮ್ಯಾನೇಜರ್, ................ ಬ್ಯಾಂಕ್, ................ ಮಾನ್ಯರೇ, ವಿಷಯ: ಒಂದು ದಿನ ರಜೆ ಕೇಳುವ ಬಗ್ಗೆ ................ ದಿನದಂದು ಮನೆಯಲ್ಲಿ ಮುಖ್ಯವಾದ ಕೆಲಸವಿದೆ. ಆದ್ದರಿಂದ ಅಂದು ಕಚೇರಿಗೆ ಹಾಜರಾಗಲು ಸಾಧ್ಯವಿಲ್ಲ. ದಯವಿಟ್ಟು ಒಂದು ದಿನ ರಜೆ ನೀಡಬೇಕೆಂದು ವಿನಂತಿಸುತ್ತೇನೆ. ಇಂತಿ ನಿಮ್ಮ ವಿಧೇಯ, ................

  2. ಆ) ವಿವಿಧ ರೀತಿಯ ಪತ್ರಗಳು, ಆಹ್ವಾನ ಪತ್ರಿಕೆಗಳನ್ನು ಸಂಗ್ರಹಿಸಿ ತರಗತಿಯಲ್ಲಿ ಓದಿರಿ.

    Answer

    ವಿವಿಧ ರೀತಿಯ ಪತ್ರಗಳು ಮತ್ತು ಆಹ್ವಾನ ಪತ್ರಿಕೆಗಳನ್ನು ಸಂಗ್ರಹಿಸಿ ತರಗತಿಯಲ್ಲಿ ಓದಬೇಕು.

  3. ಇ) ತರಗತಿಯಲ್ಲಿ ಶಿಕ್ಷಕರ ಸಹಾಯದಿಂದ ಲಕೋಟೆ ತಯಾರಿಸಿರಿ. ಗೆಳೆಯನಿಗೆ ಪತ್ರ ಬರೆದು ಲಕೋಟೆಗೆ ಹಾಕಿ, ವಿಳಾಸ ಬರೆದು ಅಂಚೆ ಚೀಟಿ ಅಂಟಿಸಿ, ಅಂಚೆಪೆಟ್ಟಿಗೆಗೆ ಹಾಕಿರಿ.

    Answer

    ತರಗತಿಯಲ್ಲಿ ಶಿಕ್ಷಕರ ಸಹಾಯದಿಂದ ಲಕೋಟೆ ತಯಾರಿಸಿ, ಗೆಳೆಯನಿಗೆ ಪತ್ರ ಬರೆದು ಲಕೋಟೆಗೆ ಹಾಕಿ, ವಿಳಾಸ ಬರೆದು ಅಂಚೆ ಚೀಟಿ ಅಂಟಿಸಿ ಅಂಚೆಪೆಟ್ಟಿಗೆಗೆ ಹಾಕಬೇಕು.

ಓದಿಗೆ ಮನ್ನಣೆ

  1. * ಮದುವೆಯ ಆಹ್ವಾನ ಪತ್ರಿಕೆಗಳನ್ನು ಓದಿರಿ.

    Answer

    ಮದುವೆಯ ಆಹ್ವಾನ ಪತ್ರಿಕೆಗಳನ್ನು ಓದಬೇಕು.

  2. * ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿರಿ.

    Answer

    ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು.

  3. * ಕೈಬರೆಹದ ಪತ್ರಗಳನ್ನು ಸಂಗ್ರಹಿಸಿ ಓದಿರಿ.

    Answer

    ಕೈಬರೆಹದ ಪತ್ರಗಳನ್ನು ಸಂಗ್ರಹಿಸಿ ಓದಬೇಕು.

ಶುಭನುಡಿ

  1. * ಓದಿ ತಿಳಿ, ಬರೆದು ಕಲಿ.

  2. * ಹೊತ್ತು ಕಳೆದರೆ ಹೋಯಿತು, ಮುತ್ತು ಒಡೆದರೆ ಹೋಯಿತು.

  3. * ರಜಾ ಅರ್ಜಿ ಬರೆಯದಿರಬೇಕಾದರೆ ಗೈರುಹಾಜರಾಗದಿರಬೇಕು!

Interactive Lab

ಪತ್ರpat-raletter, paper sent to someone
ಕ್ರಮkra-mamethod, sequence
ಬಂಧುban-dhurelative
ಕಾಲಕ್ರಮೇಣkaa-la-kra-may-naover time, gradually
ಕಂಪ್ಯೂಟರ್kam-pyoo-tarcomputer
ಮೊಬೈಲ್mo-bailmobile
ಯಂತ್ರಮಯyan-tra-ma-yafull of machines, mechanized
ಗೈರುಹಾಜರಿgai-ru-haa-ja-riabsence
ಲಕ್ಷಣlak-sha-nacharacteristic, sign
ಸೂಕ್ತsook-tasuitable, proper
ಸಹಿsa-hisignature
ಮನ್ನಿಸುman-ni-suforgive, excuse
ವಿನಂತಿvi-nan-tirequest
ಮಾದರಿmaa-da-rimodel, format