CRECT Education

Class 4 Kannada Lesson 17: Look at the Crescent Moon | KTBS Second Language Poem

Description

Line-by-line poem walkthrough: Bidige Chandra, vocabulary, and comprehension from the KTBS Class 4 Second Language Kannada book.

ಪದ್ಯ (poem) · ದ.ರಾ.ಬೇಂದ್ರೆ (Da. Ra. Bendre)

ಪಠ್ಯFull text

ಬಿದಿಗೆ ಚಂದ್ರ ಬಂದ ನೋಡು ದೀಪ ಹಚ್ಚಿದಂತೆ ಜೋಡು ಯಾರ ಮನೆಯು ಅಲ್ಲಿ ಇಹುದೊ ಯಾರು ಬಲ್ಲರು? ನೋಡಲೇನು, ಒಬ್ಬರೇನು ಹೇಳಲೊಲ್ಲರು ಅಗೋ ಚವತಿ ಚಂದ್ರ ನೋಡು ಮೂಡಿದಂತೆ ಎರಡು ಕೋಡು ಮೃಗವು ಎಲ್ಲಿ ಇಹುದೊ ಏನೊ ನಾನು ಕಾಣೆನು ಇಂಥ ಚಿತ್ರ ಬರೆದನಲ್ಲಿ ಯಾವ ಜಾಣನು? ಅಷ್ಟಮಿ ಚಂದಿರನು ಬಂದ ಅರ್ಧಬಿಟ್ಟು ಅರ್ಧ ತಿಂದ ಉಂಡಿ ಚೆಲ್ಲಿ ಕೊಟ್ಟನಿಲ್ಲಿ ಹುಡುಗನಾವನು? ಕಾಣೆ ಅತ್ತ ಇತ್ತ ಎತ್ತು ಅವನ ಠಾವನು ಬಂದನು ಹುಣ್ಣಿವೆಯ ಚಂದ್ರ ಬೆಳದಿಂಗಳು ನಿಬಿಡ ಸಾಂದ್ರ ಅಲ್ಲ ಅಲ್ಲ ಮುಗಿಲು ತುಂಬ ಇಹುದು ಮಜ್ಜಿಗೆ ಬೆಣ್ಣೆಮುದ್ದೆ ಮೇಲೆಯೊಂದು ಹೇಳು ಅಜ್ಜಿಗೆ. -ದ.ರಾ.ಬೇಂದ್ರೆ

"ನಿಸರ್ಗ ಮನುಷ್ಯನಿಗೆ ಉದಾರತೆಯನ್ನು ಕಲಿಸುವ ಗುರು." — "Nature is the teacher who teaches generosity to man." A wonderful reflection on how observing nature (like the moon's phases) offers lessons for our own growth.

ಪದಗಳ ಅರ್ಥword meanings

KannadaPronunciationMeaning
ಜೋಡುjoo-dupair, two
ಇಹುದೋi-hu-doois there?
ಮೃಗmru-gadeer, antelope
ಉಂಡಿun-disweet ball, sweet treat
ಎತ್ತುet-tuwhich way, wherever
ಠಾವುthaa-vuplace, location
ನಿಬಿಡni-bi-dadense, crowded
ಸಾಂದ್ರsaan-dradense, thick
ಕಿಕ್ಕಿರಿದkik-ki-ri-dacrowded

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ) ಖಾಲಿ ಬಿಟ್ಟಿರುವ ಸ್ಥಳಗಳನ್ನು ಸರಿಯಾದ ಪದಗಳಿಂದ ತುಂಬಿರಿ.

  1. ೧. ದೀಪ .............................. ಜೋಡು.

    Answer

    ದೀಪ ಹಚ್ಚಿದಂತೆ ಜೋಡು.

  2. ೨. ಯಾರ .............................. ಅಲ್ಲಿ ಇಹುದೊ.

    Answer

    ಯಾರ ಮನೆಯು ಅಲ್ಲಿ ಇಹುದೊ.

  3. ೩. ಅಗೋ .............................. ಚಂದ್ರ ನೋಡು.

    Answer

    ಅಗೋ ಚವತಿ ಚಂದ್ರ ನೋಡು.

  4. ೪. ಮೂಡಿದಂತೆ .............................. ಕೋಡು.

    Answer

    ಮೂಡಿದಂತೆ ಎರಡು ಕೋಡು.

ಆ) ಆವರಣದಲ್ಲಿ ಕೊಟ್ಟಿರುವ ಉತ್ತರಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ ಬಿಟ್ಟ ಸ್ಥಳ ತುಂಬಿರಿ.

  1. ೧. ಮೃಗವು ಎಲ್ಲಿ .............................. ಏನೊ.

    Answer

    ಮೃಗವು ಎಲ್ಲಿ ಇಹುದೊ ಏನೊ.

  2. (ಇರುವುದೊ, ಇಹುದೊ, ಇಲ್ಲವೊ, ಇದೆಯೊ)

  3. ೨. ಬಂದನು .............................. ಯ ಚಂದ್ರ.

  4. (ಹಣ್ಣಿವೆ, ಹೆಣ್ಣವೆ, ಹುಣ್ಣಿವೆ, ಕಣ್ಣಿವೆ)

  5. ೩. ಬೆಳದಿಂಗಳು .............................. ಸಾಂದ್ರ.

  6. ( ನಿಬಿಡ, ನಿಗೂಢ, ನಡುವೆ, ನವಿರು)

ಇ) ಹೊಂದಿಸಿ ಬರೆಯಿರಿ.

  1. ೧. ದ.ರಾ. ಬೇಂದ್ರೆ — ೧. ಮಜ್ಜಿಗೆ ಮೇಲಿನ ಬೆಣ್ಣೆಮುದ್ದೆ

    Answer

    ದ.ರಾ. ಬೇಂದ್ರೆ — ೪. ಅಂಬಿಕಾತನಯದತ್ತ

  2. ೨. ನಾಕುತಂತಿ — ೨. ಅರ್ಧ ತಿಂದು ಅರ್ಧ ಬಿಟ್ಟ ಉಂಡಿ

    Answer

    ನಾಕುತಂತಿ — ೩. ಜ್ಞಾನಪೀಠ ಪ್ರಶಸ್ತಿ

  3. ೩. ಅಷ್ಟಮಿ ಚಂದ್ರ — ೩. ಜ್ಞಾನಪೀಠ ಪ್ರಶಸ್ತಿ

    Answer

    ಅಷ್ಟಮಿ ಚಂದ್ರ — ೨. ಅರ್ಧ ತಿಂದು ಅರ್ಧ ಬಿಟ್ಟ ಉಂಡಿ

  4. ೪. ಹುಣ್ಣಿವೆ ಚಂದ್ರ — ೪. ಅಂಬಿಕಾತನಯದತ್ತ

    Answer

    ಹುಣ್ಣಿವೆ ಚಂದ್ರ — ೧. ಮಜ್ಜಿಗೆ ಮೇಲಿನ ಬೆಣ್ಣೆಮುದ್ದೆ

  5. ೧. ........................................

    Answer

    ದ.ರಾ. ಬೇಂದ್ರೆ — ಅಂಬಿಕಾತನಯದತ್ತ

  6. ೨. ........................................

    Answer

    ನಾಕುತಂತಿ — ಜ್ಞಾನಪೀಠ ಪ್ರಶಸ್ತಿ

  7. ೩. ........................................

    Answer

    ಅಷ್ಟಮಿ ಚಂದ್ರ — ಅರ್ಧ ತಿಂದು ಅರ್ಧ ಬಿಟ್ಟ ಉಂಡಿ

  8. ೪. ........................................

    Answer

    ಹುಣ್ಣಿವೆ ಚಂದ್ರ — ಮಜ್ಜಿಗೆ ಮೇಲಿನ ಬೆಣ್ಣೆಮುದ್ದೆ

ಈ) ಕೆಳಗಿನ ವಾಕ್ಯಗಳಲ್ಲಿ ತಪ್ಪಾಗಿರುವ ಪದಗಳನ್ನು ಸರಿಪಡಿಸಿ ಅರ್ಥಪೂರ್ಣ ವಾಕ್ಯ ರಚಿಸಿರಿ.

  1. ೧. ದೀಪ ಹಚ್ಚಿದಂತೆ ಕೋಡು.

    Answer

    ದೀಪ ಹಚ್ಚಿದಂತೆ ಜೋಡು.

  2. ....................................................................................................

    Answer

    ದೀಪ ಹಚ್ಚಿದಂತೆ ಜೋಡು.

  3. ೨. ಅಗೋ ಚವತಿ ಸೂರ್ಯ ನೋಡು.

    Answer

    ಅಗೋ ಚವತಿ ಚಂದ್ರ ನೋಡು.

  4. ....................................................................................................

    Answer

    ಅಗೋ ಚವತಿ ಚಂದ್ರ ನೋಡು.

  5. ೩. ಇಂಥ ಚಿತ್ರ ಕೊರೆದನಲ್ಲಿ ಯಾವ ಜಾಣನು?

    Answer

    ಇಂಥ ಚಿತ್ರ ಬರೆದನಲ್ಲಿ ಯಾವ ಜಾಣನು?

  6. ....................................................................................................

    Answer

    ಇಂಥ ಚಿತ್ರ ಬರೆದನಲ್ಲಿ ಯಾವ ಜಾಣನು?

  7. ೪. ಅಲ್ಲ ಅಲ್ಲ ಮುಗಿಲ ತುಂಬ ಇಹುದು ಸಜ್ಜಿಗೆ.

    Answer

    ಅಲ್ಲ ಅಲ್ಲ ಮುಗಿಲು ತುಂಬ ಇಹುದು ಮಜ್ಜಿಗೆ.

  8. ....................................................................................................

    Answer

    ಅಲ್ಲ ಅಲ್ಲ ಮುಗಿಲು ತುಂಬ ಇಹುದು ಮಜ್ಜಿಗೆ.

  9. ೫. ರಾಗಿಮುದ್ದೆ ಮೇಲೆಯೊಂದು.

    Answer

    ಬೆಣ್ಣೆಮುದ್ದೆ ಮೇಲೆಯೊಂದು.

  10. ....................................................................................................

    Answer

    ಬೆಣ್ಣೆಮುದ್ದೆ ಮೇಲೆಯೊಂದು.

ಉ. ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

  1. ೧. ಬಿದಿಗೆ ಚಂದ್ರ ಹೇಗೆ ಕಾಣುತ್ತಿದ್ದಾನೆ?

    Answer

    ಬಿದಿಗೆ ಚಂದ್ರನು ದೀಪ ಹಚ್ಚಿದಂತೆ ಜೋಡಾಗಿ ಕಾಣುತ್ತಿದ್ದಾನೆ.

  2. ....................................................................................................

    Answer

    ಬಿದಿಗೆ ಚಂದ್ರನು ದೀಪ ಹಚ್ಚಿದಂತೆ ಜೋಡಾಗಿ ಕಾಣುತ್ತಿದ್ದಾನೆ.

  3. ೨. ಅಷ್ಟಮಿ ಚಂದಿರನು ಹೇಗೆ ಕಾಣುತ್ತಾನೆ?

    Answer

    ಅಷ್ಟಮಿ ಚಂದಿರನು ಅರ್ಧ ತಿಂದು ಅರ್ಧ ಬಿಟ್ಟ ಉಂಡಿಯಂತೆ ಕಾಣುತ್ತಾನೆ.

  4. ....................................................................................................

    Answer

    ಅಷ್ಟಮಿ ಚಂದಿರನು ಅರ್ಧ ತಿಂದು ಅರ್ಧ ಬಿಟ್ಟ ಉಂಡಿಯಂತೆ ಕಾಣುತ್ತಾನೆ.

  5. ೩. ಹುಣ್ಣಿವೆ ಚಂದಿರನ ಬೆಳದಿಂಗಳು ಹೇಗಿದೆ?

    Answer

    ಹುಣ್ಣಿವೆ ಚಂದಿರನ ಬೆಳದಿಂಗಳು ನಿಬಿಡ ಹಾಗೂ ಸಾಂದ್ರವಾಗಿದೆ.

  6. ....................................................................................................

    Answer

    ಹುಣ್ಣಿವೆ ಚಂದಿರನ ಬೆಳದಿಂಗಳು ನಿಬಿಡ ಹಾಗೂ ಸಾಂದ್ರವಾಗಿದೆ.

  7. ೪. ಮಜ್ಜಿಗೆಯ ಮೇಲಿನ ಬೆಣ್ಣೆಮುದ್ದೆ ಯಾರು?

    Answer

    ಮಜ್ಜಿಗೆಯ ಮೇಲಿನ ಬೆಣ್ಣೆಮುದ್ದೆಯು ಹುಣ್ಣಿವೆಯ ಚಂದ್ರ.

  8. ....................................................................................................

    Answer

    ಮಜ್ಜಿಗೆಯ ಮೇಲಿನ ಬೆಣ್ಣೆಮುದ್ದೆಯು ಹುಣ್ಣಿವೆಯ ಚಂದ್ರ.

  9. ೫. ದ.ರಾ. ಬೇಂದ್ರೆಯವರ ಕಾವ್ಯನಾಮ ಯಾವುದು?

    Answer

    ದ.ರಾ. ಬೇಂದ್ರೆಯವರ ಕಾವ್ಯನಾಮ 'ಅಂಬಿಕಾತನಯದತ್ತ'.

  10. ....................................................................................................

    Answer

    ದ.ರಾ. ಬೇಂದ್ರೆಯವರ ಕಾವ್ಯನಾಮ 'ಅಂಬಿಕಾತನಯದತ್ತ'.

ಊ. ಪದ್ಯಭಾಗ ಪೂರ್ಣಗೊಳಿಸಿರಿ.

  1. ಅಷ್ಟಮಿ ............................................................

    Answer

    ಅಷ್ಟಮಿ ಚಂದಿರನು ಬಂದ

  2. ...........................................................................

    Answer

    ಅರ್ಧಬಿಟ್ಟು ಅರ್ಧ ತಿಂದ

  3. ...........................................................................

    Answer

    ಉಂಡಿ ಚೆಲ್ಲಿ ಕೊಟ್ಟನಿಲ್ಲಿ

  4. ...........................................................................

    Answer

    ಹುಡುಗನಾವನು?

  5. ...........................................................................

    Answer

    ಕಾಣೆ ಅತ್ತ ಇತ್ತ ಎತ್ತು ಅವನ

  6. ಠಾವನು

ಋ. ಈ ಪದ್ಯದಲ್ಲಿ ಬಂದಿರುವ ಪ್ರಾಸಪದಗಳನ್ನು ಗಮನಿಸಿರಿ.

  1. ೧. ನೋಡು-ಜೋಡು

  2. ೨. ನೋಡು-ಕೋಡು

  3. ೩. ಕಾಣೆನು-ಜಾಣನು

  4. ೪. ಬಂದ-ತಿಂದ

  5. ೫. ಹುಡುಗನಾವನು-ಠಾವನು

  6. ೬. ಚಂದ್ರ-ಸಾಂದ್ರ

  7. ೭. ಅಜ್ಜಿಗೆ- ಮಜ್ಜಿಗೆ.

Interactive Lab

ಜೋಡುjoo-dupair, two
ಇಹುದೋi-hu-doois there?
ಮೃಗmru-gadeer, antelope
ಉಂಡಿun-disweet ball, sweet treat
ಎತ್ತುet-tuwhich way, wherever
ಠಾವುthaa-vuplace, location
ನಿಬಿಡni-bi-dadense, crowded
ಸಾಂದ್ರsaan-dradense, thick
ಕಿಕ್ಕಿರಿದkik-ki-ri-dacrowded