ಗದ್ಯ (prose) · ಸಮಿತಿ ರಚನೆ (Committee-authored)
ಪಠ್ಯFull text
"ದೇಶ ಸುತ್ತು; ಕೋಶ ಓದು." — "Travel the country; read the dictionary (books)." A great reminder that experience and knowledge go hand in hand.
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಗಮನಿಸು | ga-ma-ni-su | pay attention, notice |
| ತಾಣ | taa-na | place, base |
| ಹೆಬ್ಬಾಗಿಲು | heb-baa-gi-lu | main gate, great entrance |
| ರಕ್ಷಿಸು | rak-shi-su | protect, save, guard |
| ಸುರಕ್ಷಿತ | su-rak-shi-ta | safe, secure |
| ಸಂಗ್ರಹಿಸು | san-gra-hi-su | collect, gather, store |
| ನಿರ್ವಹಣೆ | nir-va-ha-ne | management, maintenance |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ) ಬಿಟ್ಟ ಸ್ಥಳಗಳಲ್ಲಿ ಸೂಕ್ತ ಪದಗಳನ್ನು ಆರಿಸಿ ಬರೆಯಿರಿ.
(ಶ್ರೀರಂಗಪಟ್ಟಣ, ಮಕ್ಕಳು, ದೇವಾಲಯ, ಸಮಯ, ಮಾಹಿತಿ)
೧. ನಾಲ್ಕನೇ ತರಗತಿಯ ......................... ಶಿಕ್ಷಕರೊಂದಿಗೆ ಪ್ರವಾಸಕ್ಕೆ ಹೊರಟರು.
Answerನಾಲ್ಕನೇ ತರಗತಿಯ ಮಕ್ಕಳು ಶಿಕ್ಷಕರೊಂದಿಗೆ ಪ್ರವಾಸಕ್ಕೆ ಹೊರಟರು.
೨. ಐತಿಹಾಸಿಕ ಪುರಾಣ ಪ್ರಸಿದ್ಧ ......................... ಕ್ಕೆ ಸುಸ್ವಾಗತ.
Answerಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣಕ್ಕೆ ಸುಸ್ವಾಗತ.
೩. ಟಿಪ್ಪುಸುಲ್ತಾನ್ ಮಡಿದ ಸ್ಥಳದ ಬಗ್ಗೆ ......................... ಇದೆ.
Answerಟಿಪ್ಪುಸುಲ್ತಾನ್ ಮಡಿದ ಸ್ಥಳದ ಬಗ್ಗೆ ಮಾಹಿತಿ ಇದೆ.
೪. ಇತಿಹಾಸ ಪ್ರಸಿದ್ಧವಾದ ಆದಿ ರಂಗನಾಥಸ್ವಾಮಿ ......................... ಕ್ಕೆ ಹೋಗೋಣ.
Answerಇತಿಹಾಸ ಪ್ರಸಿದ್ಧವಾದ ಆದಿ ರಂಗನಾಥಸ್ವಾಮಿ ದೇವಾಲಯಕ್ಕೆ ಹೋಗೋಣ.
ಆ) ಕೆಳಗೆ ವಾಕ್ಯದ ಪದಗಳನ್ನು ಅದಲು ಬದಲು ಮಾಡಿ ನೀಡಿದೆ. ಅದನ್ನು ಸರಿಪಡಿಸಿ ಬರೆಯಿರಿ.
೧. ಕಾಣುತ್ತಿರುವ ಓದು ಸೂಚನಾ ಫಲಕವನ್ನು ಅಲ್ಲಿ
.........................................................................................................
Answerಅಲ್ಲಿ ಕಾಣುತ್ತಿರುವ ಸೂಚನಾ ಫಲಕವನ್ನು ಓದು.
೨. ಕಟ್ಟಿದ್ದಾರೆ? ಕೋಟೆಯನ್ನು ಏಕೆ ಈ
.........................................................................................................
Answerಈ ಕೋಟೆಯನ್ನು ಏಕೆ ಕಟ್ಟಿದ್ದಾರೆ?
೩. ಮೈಸೂರು ಕೊನೆಯ ಇದು ಯುದ್ಧ
.........................................................................................................
Answerಇದು ಕೊನೆಯ ಮೈಸೂರು ಯುದ್ಧ.
ಇ) ಈ ಮಾತನ್ನು ಯಾರು, ಯಾರಿಗೆ ಹೇಳಿದರು?
೧. ಊರನ್ನು ಶತ್ರುಗಳಿಂದ ರಕ್ಷಿಸಲು ಕೋಟೆಯನ್ನು ಕಟ್ಟಿದ್ದಾರೆ.
ಯಾರು ಹೇಳಿದರು? .........................................................................
Answerಶಿಕ್ಷಕರು
ಯಾರಿಗೆ ಹೇಳಿದರು? .........................................................................
Answerಮೇರಿಗೆ
೨. ಟಿಪ್ಪುಸುಲ್ತಾನ್ ಮಡಿದ ಸ್ಥಳದ ಬಗ್ಗೆ ಮಾಹಿತಿ ಇದೆ.
ಯಾರು ಹೇಳಿದರು? .........................................................................
Answerಪೀಟರ್
ಯಾರಿಗೆ ಹೇಳಿದರು? .........................................................................
Answerಶಿಕ್ಷಕರಿಗೆ
೩. ಯಾವುದೋ ಹಳೆಯ ಅರಮನೆ ಸ್ಥಳ ಕಾಣುತ್ತಿದೆ.
ಯಾರು ಹೇಳಿದರು? .........................................................................
Answerಗೌರಿ
ಯಾರಿಗೆ ಹೇಳಿದರು? .........................................................................
Answerಎಲ್ಲರಿಗೆ
ಈ) ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಮಕ್ಕಳು ಯಾವ ಊರಿಗೆ ಪ್ರವಾಸ ಹೊರಟರು?
.........................................................................................................
Answerಮಕ್ಕಳು ಶ್ರೀರಂಗಪಟ್ಟಣಕ್ಕೆ ಪ್ರವಾಸ ಹೊರಟರು.
೨. ಶ್ರೀರಂಗಪಟ್ಟಣ ಯಾವ ಜಿಲ್ಲೆಗೆ ಸೇರಿದೆ?
.........................................................................................................
Answerಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಗೆ ಸೇರಿದೆ.
೩. ಜಾಮಿಯಾ ಮಸೀದಿ ಯಾರ ಅವಧಿಯಲ್ಲಿ ನಿರ್ಮಿಸಲಾಗಿದೆ?
.........................................................................................................
Answerಜಾಮಿಯಾ ಮಸೀದಿಯನ್ನು ಟಿಪ್ಪು ಸುಲ್ತಾನನ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಗಿದೆ.
೪. ಟಿಪ್ಪುಸುಲ್ತಾನ್ ವಾಸವಿದ್ದ ಅರಮನೆಯ ಹೆಸರೇನು?
.........................................................................................................
Answerಟಿಪ್ಪುಸುಲ್ತಾನ್ ವಾಸವಿದ್ದ ಅರಮನೆಯ ಹೆಸರು ಲಾಲ್‌ಮಹಲ್.
ಉ) ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಶ್ರೀರಂಗಪಟ್ಟಣದಲ್ಲಿ ಕೋಟೆಯನ್ನು ಏಕೆ ಕಟ್ಟಿದ್ದಾರೆ?
.........................................................................................................
Answerಹಿಂದೆ ಹಲವಾರು ರಾಜರು ಈ ಊರನ್ನು ಆಳುತ್ತಿದ್ದರು.
.........................................................................................................
Answerಊರನ್ನು ಶತ್ರುಗಳಿಂದ ರಕ್ಷಿಸಲು ಕೋಟೆಯನ್ನು ಕಟ್ಟಿದ್ದಾರೆ.
೨. ಮದ್ದಿನ ಮನೆಯನ್ನು ಏಕೆ ನಿರ್ಮಿಸಿದ್ದಾರೆ?
.........................................................................................................
Answerಶ್ರೀರಂಗಪಟ್ಟಣದಲ್ಲಿ ಮದ್ದಿನ ಮನೆ ಇದೆ.
.........................................................................................................
Answerಯುದ್ಧದ ಸಮಯದಲ್ಲಿ ಮದ್ದುಗುಂಡುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಇದನ್ನು ನಿರ್ಮಿಸಿದ್ದಾರೆ.