CRECT Education

Class 4 Kannada Lesson 6: Dental Checkup | KTBS Kannada Second Language

Description

Learn the poem 'ಹಲ್ಲು ತಪಾಸಣೆ' (Dental Checkup) from the Class 4 Kannada Second Language textbook. Walk through each stanza, discover new vocabulary, and practice with comprehension questions – perfect for CBSE, ICSE, and Karnataka State Board students.

ಪದ್ಯ (poem) · ಹೆಚ್.ಕೆ.ಆವಟಿ (H.K. Avati)

ಪಠ್ಯFull text

ವೈದ್ಯರು ಬಂದರು ಶಾಲೆಯ ಒಳಗೆ ಮಕ್ಕಳ ಹಲ್ಲು ತಪಾಸಣೆಗೆ॥ ಹಲ್ಲನು ನೋಡದೆ ಮಕ್ಕಳ ಜೇಬಲಿ ಏನುಂಟೆಂದು ಹುಡುಕಿದರು॥ ಒಬ್ಬನ ಜೇಬಲಿ ಚಾಕಲೇಟ್ ಸಿಕ್ಕರೆ ಪುಟಾಣಿ ಮಿಠಾಯಿ ಮತ್ತೊಬ್ಬನಲಿ॥ ಬೆಂಡು ಬತ್ತಾಸು ಒಬ್ಬನದಾದರೆ ಕಡಲೆ ಶೇಂಗಾ ಇನ್ನೊಬ್ಬನದು॥ ತಿನಿಸನು ತಿಂದ ಎಲ್ಲರ ಹಲ್ಲನು ವೈದ್ಯರು ತೆರೆದು ನೋಡಿದರು॥ ಹಲ್ಲಿಗೆ ಹುಳುಕು ಒಸಡಿಗೆ ರಕ್ತ ವಾಸನೆ ಇದ್ದವು ಅವುಗಳಲಿ॥ ಹುಳುಕೇ ಇಲ್ಲದ ವೈದ್ಯರ ಹಲ್ಲುಗಳು ಹೊಳೆಯುತಲಿದ್ದವು ಲಕಲಕನೆ॥ –ಹೆಚ್.ಕೆ.ಆವಟಿ

"ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸಿರುತ್ತದೆ." — "A healthy mind resides in a healthy body."

ಪದಗಳ ಅರ್ಥword meanings

KannadaPronunciationMeaning
ವೈದ್ಯvaid-yadoctor, one who gives medicine for diseases
ಪುಟಾಣಿpu-taa-nismall, tiny
ತಿನಿಸುti-ni-susnack, eatable item
ಹುಳುಕುhu-lu-kudecay, being destroyed by worms (cavity)
ಕಡಲೆka-da-leroasted gram
ಶೇಂಗಾshayng-gapeanut / groundnut

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಮಕ್ಕಳ ಹಲ್ಲು ತಪಾಸಣೆಗಾಗಿ ಶಾಲೆಗೆ ಬಂದಿದ್ದವರು ಯಾರು?

    Answer

    ಮಕ್ಕಳ ಹಲ್ಲು ತಪಾಸಣೆಗಾಗಿ ಶಾಲೆಗೆ ಬಂದಿದ್ದವರು ವೈದ್ಯರು.

  2. ೨. ಏನನ್ನು ತಿಂದ ಹಲ್ಲನ್ನು ವೈದ್ಯರು ತೆರೆದು ನೋಡಿದರು?

    Answer

    ತಿನಿಸನ್ನು ತಿಂದ ಹಲ್ಲನ್ನು ವೈದ್ಯರು ತೆರೆದು ನೋಡಿದರು.

  3. ೩. ವೈದ್ಯರು ಮಕ್ಕಳ ಒಸಡಿನಲ್ಲಿ ಏನನ್ನು ಕಂಡರು?

    Answer

    ವೈದ್ಯರು ಮಕ್ಕಳ ಒಸಡಿನಲ್ಲಿ ರಕ್ತವನ್ನು ಕಂಡರು.

  4. ೪. ವೈದ್ಯರ ಹಲ್ಲುಗಳು ಹೇಗೆ ಹೊಳೆಯುತಲಿದ್ದವು?

    Answer

    ವೈದ್ಯರ ಹಲ್ಲುಗಳು ಲಕಲಕನೆ ಹೊಳೆಯುತಲಿದ್ದವು.

ಆ) ಕೆಳಗಿನ ಪ್ರಶ್ನೆಗಳನ್ನು ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ವೈದ್ಯರಿಗೆ ಮಕ್ಕಳ ಜೇಬಿನಿಂದ ಏನೆಲ್ಲ ಸಿಕ್ಕಿದವು?

    Answer

    ವೈದ್ಯರಿಗೆ ಮಕ್ಕಳ ಜೇಬಿನಿಂದ ಚಾಕಲೇಟ್, ಪುಟಾಣಿ ಮಿಠಾಯಿ, ಬೆಂಡು ಬತ್ತಾಸು, ಕಡಲೆ ಮತ್ತು ಶೇಂಗಾ ಸಿಕ್ಕಿದವು.

  2. ೨. ಮಕ್ಕಳ ಹಲ್ಲುಗಳು, ಒಸಡುಗಳು ಹೇಗಿದ್ದವು?

    Answer

    ಮಕ್ಕಳ ಹಲ್ಲುಗಳಿಗೆ ಹುಳುಕು ಬಿದ್ದಿತ್ತು, ಒಸಡುಗಳಿಗೆ ರಕ್ತ ಬಂದಿತ್ತು ಮತ್ತು ಅವುಗಳಿಂದ ವಾಸನೆ ಬರುತ್ತಿತ್ತು.

ಇ) ಪದ್ಯ ಪೂರ್ಣಗೊಳಿಸಿರಿ:

  1. ವೈದ್ಯರು .................................................................................

    Answer

    ವೈದ್ಯರು ಬಂದರು

  2. ................................................................................................

    Answer

    ಶಾಲೆಯ ಒಳಗೆ

  3. ......................................................................... ತಪಾಸಣೆಗೆ॥

    Answer

    ಮಕ್ಕಳ ಹಲ್ಲು

  4. ಹಲ್ಲಿಗೆ ......................................................................................

    Answer

    ಹಲ್ಲಿಗೆ ಹುಳುಕು

  5. ................................................................................................

    Answer

    ಒಸಡಿಗೆ ರಕ್ತ

  6. .............................................................................. ಅವುಗಳಲಿ

    Answer

    ವಾಸನೆ ಇದ್ದವು

ಭಾಷಾಭ್ಯಾಸ

ಅ) ಮಾದರಿಯಂತೆ ವಚನ ಬದಲಿಸಿರಿ:

  1. ಮಾದರಿ: ಶಾಲೆ-ಶಾಲೆಗಳು

  2. ತಿನಿಸು- .....................

    Answer

    ತಿನಿಸು-ತಿನಿಸುಗಳು

  3. ಹಲ್ಲು- .....................

    Answer

    ಹಲ್ಲು-ಹಲ್ಲುಗಳು

  4. ಜೇಬು- .....................

    Answer

    ಜೇಬು-ಜೇಬುಗಳು

  5. ಮಿಠಾಯಿ- .................

    Answer

    ಮಿಠಾಯಿ-ಮಿಠಾಯಿಗಳು

  6. ಒಸಡು- .....................

    Answer

    ಒಸಡು-ಒಸಡುಗಳು

  7. ಚೆಂಡು- .....................

    Answer

    ಚೆಂಡು-ಚೆಂಡುಗಳು

ಆ) ಮಾದರಿಯಂತೆ ಬದಲಾಯಿಸಿ ಬರೆಯಿರಿ.

  1. ಮಾದರಿ: ಬಂದರು- ಬರಲಿಲ್ಲ

  2. ನೋಡಿದರು- ...............

    Answer

    ನೋಡಿದರು- ನೋಡಲಿಲ್ಲ

  3. ತಿಂದರು - .................

    Answer

    ತಿಂದರು - ತಿನ್ನಲಿಲ್ಲ

  4. ಹುಡುಕಿದರು- .................

    Answer

    ಹುಡುಕಿದರು- ಹುಡುಕಲಿಲ್ಲ

ಇ) ಕೆಳಗಿನ ಪದಗಳನ್ನು ಕೂಡಿಸಿ ಬರೆಯಿರಿ:

  1. ೧. ಏನು+ಉಂಟು= ........................

    Answer

    ಏನು+ಉಂಟು= ಏನುಂಟು

  2. ೨. ಉಂಟು+ಎಂದು= ........................

    Answer

    ಉಂಟು+ಎಂದು= ಉಂಟೆಂದು

  3. ೩. ಮತ್ತೆ+ಒಬ್ಬ= ........................

    Answer

    ಮತ್ತೆ+ಒಬ್ಬ= ಮತ್ತೊಬ್ಬ

  4. ೪. ಇನ್ನು+ಒಬ್ಬ=........................

    Answer

    ಇನ್ನು+ಒಬ್ಬ= ಇನ್ನೊಬ್ಬ

ಈ) ಕೆಳಗಿನ ಪದಗಳನ್ನು ಓದಿ ಅವುಗಳಿಗಿರುವ ನಾನಾರ್ಥಕ ಪದಗಳನ್ನು ಬರೆಯಿರಿ.

  1. ಮಾದರಿ: ಆಡು-ಮೇಕೆ, ಕ್ರೀಡೆಯಲ್ಲಿ ತೊಡಗು.

  2. ೧. ಹೊಳೆ- .........................................................................................................

    Answer

    ಹೊಳೆ- ನದಿ, ಪ್ರಕಾಶಿಸು.

  3. ೨. ತೆರೆ- ...........................................................................................................

    Answer

    ತೆರೆ- ಪರದೆ, ಅಲೆ.

ಉ) ಕೆಳಗಿನ ಪದಗಳ ಸರಿಯಾದ ರೂಪ ಬರೆಯಿರಿ.

  1. ೧. ಅಲ್ಲು ........................

    Answer

    ಅಲ್ಲು - ಹಲ್ಲು

  2. ೨. ಹೊಸದು ........................

    Answer

    ಹೊಸದು - ಒಸಡು

  3. ೩. ಹೊಬ್ಬನು ........................

    Answer

    ಹೊಬ್ಬನು - ಒಬ್ಬನ

  4. ೪. ಒಲಗೆ ........................

    Answer

    ಒಲಗೆ - ಒಳಗೆ

ಭಾಷಾ ಚಟುವಟಿಕೆ

ಅ) ಕೆಳಗಿನ ಚಿತ್ರಗಳನ್ನು ನೋಡಿ ಅದರ ಹೆಸರು ಅಥವಾ ವಿವರ ಬರೆಯಿರಿ.

  1. (Images shown:

  2. 1. A box of assorted sweets.

    Answer

    ಮಿಠಾಯಿ

  3. 2. A desktop computer setup (monitor, CPU, keyboard, mouse).

    Answer

    ಗಣಕಯಂತ್ರ

  4. 3. A farmer plowing a field with two oxen.

    Answer

    ರೈತನು ಎತ್ತುಗಳಿಂದ ಉಳುಮೆ ಮಾಡುತ್ತಿದ್ದಾನೆ.

  5. 4. A dog barking.)

    Answer

    ನಾಯಿ ಬೊಗಳುತ್ತಿದೆ.

ಆ) ಸುಳಿವು ಅನುಸರಿಸಿ ಘಟನೆಗಳನ್ನು ಪೂರ್ಣಗೊಳಿಸಿರಿ:

  1. (ಧನ್ಯವಾದ, ಮನೆಗೆ, ಅಪಘಾತ, ಕಾರಿನಲ್ಲಿ, ತರಕಾರಿ, ಸ್ನೇಹಿತರು)

  2. ಶಾಲೆಯಿಂದ ........................... ಬರುವಾಗ ರಸ್ತೆಯಲ್ಲಿ ಒಂದು ........................... ಆಗಿದ್ದನ್ನು ನೋಡಿದೆ. ತರಕಾರಿಯವನ ತಳ್ಳುಗಾಡಿಗೆ ........................... ಹೋಗುತ್ತಿದ್ದವನು ಡಿಕ್ಕಿ ಹೊಡೆದ. ಆಗ ಗಾಡಿಯಲ್ಲಿದ್ದ ........................... ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿತ್ತು. ನಾನು ಮತ್ತು ನನ್ನ ........................... ಸೇರಿ ಎಲ್ಲಾ ಆರಿಸಿಕೊಟ್ಟೆವು. ಆಗ ತರಕಾರಿಯವ ನಮಗೆ ........................... ಹೇಳಿದ.

    Answer

    ಶಾಲೆಯಿಂದ ಮನೆಗೆ ಬರುವಾಗ ರಸ್ತೆಯಲ್ಲಿ ಒಂದು ಅಪಘಾತ ಆಗಿದ್ದನ್ನು ನೋಡಿದೆ. ತರಕಾರಿಯವನ ತಳ್ಳುಗಾಡಿಗೆ ಕಾರಿನಲ್ಲಿ ಹೋಗುತ್ತಿದ್ದವನು ಡಿಕ್ಕಿ ಹೊಡೆದ. ಆಗ ಗಾಡಿಯಲ್ಲಿದ್ದ ತರಕಾರಿ ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿತ್ತು. ನಾನು ಮತ್ತು ನನ್ನ ಸ್ನೇಹಿತರು ಸೇರಿ ಎಲ್ಲಾ ಆರಿಸಿಕೊಟ್ಟೆವು. ಆಗ ತರಕಾರಿಯವ ನಮಗೆ ಧನ್ಯವಾದ ಹೇಳಿದ.

ಇ) ಪ್ರತಿದಿನ ಶಾಲೆಯಲ್ಲಿ ನಡೆದ ಘಟನೆಯನ್ನು ಮನೆಯಲ್ಲಿ ಪೋಷಕರೊಂದಿಗೆ ಹಂಚಿಕೊಳ್ಳಿರಿ.

ಈ) ಆರೋಗ್ಯವನ್ನು ಕಾಪಾಡಲು ಏನೇನು ಮಾಡಬೇಕು? ಪಟ್ಟಿಮಾಡಿರಿ.

  1. ಉದಾ: ನಿತ್ಯವೂ ಸ್ನಾನ ಮಾಡಬೇಕು.

    Answer

    ನಿತ್ಯವೂ ಸ್ನಾನ ಮಾಡಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾಕಷ್ಟು ನೀರು ಕುಡಿಯಬೇಕು.

ಓದಿಗೆ ಮನ್ನಣೆ

  1. * ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿರಿ.

  2. * ಯೋಗಾಸನ ಮತ್ತು ವ್ಯಾಯಾಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿರಿ.

ಶುಭನುಡಿ

  1. * ಇಲ್ಲ ಸಲ್ಲದ ಮಾತನಾಡಿ ಹಲ್ಲು ಮುರಿಸಿಕೊಳ್ಳದಿರಿ.

  2. * ಆರೋಗ್ಯವೇ ಭಾಗ್ಯ.

  3. * ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸಿರುತ್ತದೆ.

Interactive Lab

ವೈದ್ಯvaid-yadoctor, one who gives medicine for diseases
ಪುಟಾಣಿpu-taa-nismall, tiny
ತಿನಿಸುti-ni-susnack, eatable item
ಹುಳುಕುhu-lu-kudecay, being destroyed by worms (cavity)
ಕಡಲೆka-da-leroasted gram
ಶೇಂಗಾshayng-gapeanut / groundnut