ಗದ್ಯ (prose) · ಸಮಿತಿ ರಚನೆ (Committee-authored)
ಪಠ್ಯFull text
**ಶುಭನುಡಿ (Good words)** * ಚೆನ್ನಾಗಿ ಓದು, ಚೆನ್ನಾಗಿ ಬಾಳು. (Read well, live well.) * ಪ್ರಯತ್ನದಿಂದಲೇ ಕಾರ್ಯಸಿದ್ಧಿ. (Success comes from effort.) * ಉಪಾಯ ಬಲ್ಲವನಿಗೆ ಅಪಾಯವಿಲ್ಲ. (One who knows a trick/solution has no danger.)
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ತಡವರಿಸು | ta-da-va-ri-su | ಹುಡುಕು, ತಡಕಾಡು (fumble, search) |
| ಸಮಾಧಾನ | sa-maa-dhaa-na | ಮನಸ್ಸಿನ ಶಾಂತಿ, ನೆಮ್ಮದಿ (peace of mind, calmness) |
| ಒಡ್ಡೋಲಗ | od-do-la-ga | ದೊಡ್ಡ ದರ್ಬಾರು, ಸಭೆ (grand court, assembly) |
| ಸಂದೇಹ | san-day-ha | ಅನುಮಾನದಿಂದ ಕೂಡಿದ (doubtful) |
| ತಲೆತಿರುಗಿದಂತಾಗು | ta-le-ti-ru-gi-dan-taa-gu | ತಬ್ಬಿಬ್ಬಾಗು, ತಲೆಸುತ್ತು ಬರು, ಬವಳಿಬರು (to feel dizzy, confused) |
| ಔದಾರ್ಯ | ou-daar-ya | ಉದಾರತೆ (generosity) |
| ನಿಖರ | ni-kha-ra | ಕರಾರುವಾಕ್ಕು, ನಿರ್ದಿಷ್ಟ (exact, precise) |
| ಗಲಾಟೆ | ga-laa-te | ಗಲಭೆ (commotion, noise) |
| ಪರಸ್ಥಳ | pa-ras-tha-la | ಹೊರನಾಡು, ಪರದೇಶ (other place, foreign land) |
| ನೆಂಟರು | nen-ta-ru | ಬಂಧುಗಳು, ಸಂಬಂಧಿಕರು (relatives) |
| ಗೌರವ | gou-ra-va | ಮರ್ಯಾದೆ, ಶ್ರೇಷ್ಠತೆ (respect, honor) |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ) ಬಿಟ್ಟಿರುವ ಪದಗಳನ್ನು ಸರಿಯಾಗಿ ತುಂಬಿರಿ.
೧. ಅಕ್ಬರ್ ಬಾದಶಹನು ಮಂತ್ರಿಗಳ .......................... ಪರೀಕ್ಷಿಸುತ್ತಿದ್ದನು.
Answerಅಕ್ಬರ್ ಬಾದಶಹನು ಮಂತ್ರಿಗಳ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತಿದ್ದನು.
೨. ದೆಹಲಿಯಲ್ಲಿ ಈಗ .......................... ಕಾಗೆಗಳಿರಬಹುದು?
Answerದೆಹಲಿಯಲ್ಲಿ ಈಗ ಎಷ್ಟು ಕಾಗೆಗಳಿರಬಹುದು?
೩. ಬೀರಬಲ್ಲ 'ನನಗೆ ................. ದಿನಗಳ ಕಾಲಾವಕಾಶಬೇಕು' ಎಂದು ಹೇಳಿದ.
Answerಬೀರಬಲ್ಲ 'ನನಗೆ ಮೂರು ದಿನಗಳ ಕಾಲಾವಕಾಶ ಬೇಕು' ಎಂದು ಹೇಳಿದ.
೪. ಮಂತ್ರಿಗಳು ಬೀರಬಲ್ಲನ ಜಾಣ್ಮೆಯ ಉತ್ತರಕ್ಕೆ .......................... ಎಂದರು.
Answerಮಂತ್ರಿಗಳು ಬೀರಬಲ್ಲನ ಜಾಣ್ಮೆಯ ಉತ್ತರಕ್ಕೆ 'ಶಹಬ್ಬಾಸ್' ಎಂದರು.
ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಅಕ್ಬರನ ಒಡ್ಡೋಲಗ ನಡೆಯುವಾಗ ಒಳಗೆ ಹಾರಿ ಬಂದ ಪಕ್ಷಿಗಳು ಯಾವುವು?
Answerಅಕ್ಬರನ ಒಡ್ಡೋಲಗ ನಡೆಯುವಾಗ ಒಳಗೆ ಹಾರಿ ಬಂದ ಪಕ್ಷಿಗಳು ಎರಡು ಕಾಗೆಗಳು.
೨. ಕಾಗೆ ಎಣಿಸಲು ಬೀರಬಲ್ಲ ಎಷ್ಟು ದಿನಗಳ ಕಾಲಾವಕಾಶ ಕೇಳಿದ?
Answerಕಾಗೆ ಎಣಿಸಲು ಬೀರಬಲ್ಲ ಮೂರು ದಿನಗಳ ಕಾಲಾವಕಾಶ ಕೇಳಿದ.
೩. 'ಗಣತಿ' ಈ ಪದದ ಅರ್ಥವೇನು?
Answerಗಣತಿ ಎಂದರೆ ಎಣಿಕೆ.
೪. ಅಕ್ಬರನ 'ಕಾಗೆಗಳೆಷ್ಟು' ಎಂಬ ಪ್ರಶ್ನೆಗೆ ಬೀರಬಲ್ಲನ ಉತ್ತರವೇನು?
Answerಅಕ್ಬರನ 'ಕಾಗೆಗಳೆಷ್ಟು' ಎಂಬ ಪ್ರಶ್ನೆಗೆ ಬೀರಬಲ್ಲನು ನಮ್ಮ ನಗರದಲ್ಲಿ ಐವತ್ತೊಂದು ಸಾವಿರದ ಆರುನೂರ ಹದಿನೈದು ಕಾಗೆಗಳಿವೆ ಎಂದು ಉತ್ತರಿಸಿದ.
೫. ಮಂತ್ರಿಗಳು ಬೀರಬಲ್ಲನಿಗೆ ಏಕೆ ಶಹಬ್ಬಾಸ್ ಎಂದರು?
Answerಮಂತ್ರಿಗಳು ಬೀರಬಲ್ಲನ ಜಾಣ್ಮೆಯ ಉತ್ತರಕ್ಕೆ ಶಹಬ್ಬಾಸ್ ಎಂದರು.
ಇ) ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಅಕ್ಬರನು 'ಪುನಃ ಗಣತಿ ಮಾಡಿದಾಗ ಕಾಗೆಗಳು ಹೆಚ್ಚು ಕಡಿಮೆಯಾದರೆ' ಎಂದಾಗ ಬೀರಬಲ್ಲನು ನೀಡಿದ ಉತ್ತರವೇನು?
Answerಅಕ್ಬರನು ಪುನಃ ಗಣತಿ ಮಾಡಿದಾಗ ಕಾಗೆಗಳು ಕಡಿಮೆಯಾದರೆ ಕಡಿಮೆಯಾದಷ್ಟು ಕಾಗೆಗಳು ಅವುಗಳ ನೆಂಟರ ಊರಿಗೆ ಹೋಗಿದ್ದಾವೆ ಎಂದು ಬೀರಬಲ್ಲನು ಹೇಳಿದ. ಹೆಚ್ಚಾದರೆ ಪರಸ್ಥಳದಲ್ಲಿರುವ ಕಾಗೆಗಳು ಅವುಗಳ ನೆಂಟರ ಮನೆಗೆ ಬಂದಿದ್ದಾವೆ ಎಂದು ಅರ್ಥ ಎಂದನು.
೨. ನಿಮಗೆ ಈ ಪ್ರಶ್ನೆಯನ್ನು ಕೇಳಿದ್ದರೆ ನೀವೇನು ಮಾಡುತ್ತಿದ್ದಿರಿ ಮಕ್ಕಳೇ?
ಭಾಷಾಭ್ಯಾಸ (Language Exercise)
ಅ) ಕೆಳಗಿನ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ.
೧. ಕಾವಲುಗಾರ: ........................................................................................................
Model sentenceಕಾವಲುಗಾರ: ನಮ್ಮ ಶಾಲೆಯ ಗೇಟಿನ ಬಳಿ ಕಾವಲುಗಾರರು ನಿಲ್ಲುತ್ತಾರೆ. ವಿಶ್ರಾಂತಿ: ಆಟವಾಡಿದ ಮೇಲೆ ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ಜಾಣ: ನನ್ನ ಗೆಳೆಯ ರಮೇಶ ತುಂಬಾ ಜಾಣ.
೨. ವಿಶ್ರಾಂತಿ: ........................................................................................................
೩. ಜಾಣ: ........................................................................................................
ಆ) ಈ ವಾಕ್ಯಗಳನ್ನು ಹೇಳುತ್ತಾ ಬರೆಯಿರಿ.
೧. ಖಂಡಿತ ಜಹಾಪನಾ, ಉತ್ತರ ಹೇಳುತ್ತೇನೆ.
೨. ನಮ್ಮ ನಗರದಲ್ಲಿರುವ ಕಾಗೆಗಳೆಷ್ಟು?
ಭಾಷಾ ಚಟುವಟಿಕೆ (Language activity)
೧) ಲೇಖನ ಚಿಹ್ನೆಗಳನ್ನು ತಿಳಿಯಿರಿ. ಮತ್ತು ಅವುಗಳನ್ನು ವಾಕ್ಯಗಳಲ್ಲಿ ಬಳಸುವ ಅಭ್ಯಾಸ ಮಾಡಿರಿ.
೧. ಪೂರ್ಣ ವಿರಾಮ – (.)
೨. ಅರ್ಧ ವಿರಾಮ – (;)
೩. ಅಲ್ಪ ವಿರಾಮ– (,)
೪. ಕೂಡು ಚಿಹ್ನೆ– (+)
೫. ಸಮಾನಾರ್ಥಕ ಚಿಹ್ನೆ– (=)
೬. ಪ್ರಶ್ನಾರ್ಥಕ ಚಿಹ್ನೆ– (?)
೭. ಭಾವಸೂಚಕ ಚಿಹ್ನೆ – (!)
೮. ವಿವರಣ ಚಿಹ್ನೆ– (:)
೯. ಉದ್ಧರಣ ಚಿಹ್ನೆ– ("..........")
೧೦.ವಾಕ್ಯವೇಷ್ಟನ ಚಿಹ್ನೆ– ('.........')
೨) ಕೆಳಗಿನ ವಾಕ್ಯಗಳಲ್ಲಿ ಲೇಖನ ಚಿಹ್ನೆಗಳನ್ನು ಬಳಸಿದೆ. ಗಮನಿಸಿರಿ.
೧. ಸುರಾನ ಶಾಲೆಗೆ ಬಂದಳು. (.)
೨. ಅಶೋಕನು ಹಲವು ರಾಜ್ಯಗಳನ್ನು ಗೆದ್ದ; ಕಳಿಂಗದ ಮೇಲೆ ದಾಳಿ ಮಾಡಿದ.(;)
೩. ಅಬ್ದುಲ್, ಅಂತೋಣಿ, ಚಂಗಪ್ಪ ಊರಿಗೆ ಹೊರಟರು. (,)
೪. ಅಬ್ಬಾ! ಈ ನವಿಲು ಎಷ್ಟು ಸುಂದರವಾಗಿದೆ! (!)
೫. ಕರ್ನಾಟಕ: ಇದು ನಮ್ಮ ದೇಶದ ಸುಂದರವಾದ ರಾಜ್ಯ. (:)
೬. ಏಕ+ಏಕ= ಏಕೈಕ (+)
೭. ಗರ್ವ= ಜಂಬ (=)
೮. ನಿನ್ನ ಹೆಸರೇನು? (?)
೯. "ನಾನು ಪೇಟೆಗೆ ಹೋಗುತ್ತೇನೆ" ಮಾಲಿನಿ ಹೇಳಿದಳು. ("....")
೧೦. 'ನನ್ನ ಬದುಕು ಇನ್ನು ಮುಂದೆ ಪಕ್ಷಿ ಅಧ್ಯಯನಕ್ಕೆ ಮೀಸಲು' ('.....')
೩) ಪಾಠದ ಯಾವುದಾದರೊಂದು ಭಾಗದ ಉಕ್ತಲೇಖನ ಬರೆಯಿಸಿ, ಅದಕ್ಕೆ ಸೂಕ್ತ ಲೇಖನ ಚಿಹ್ನೆಗಳನ್ನು ಅಳವಡಿಸುವಂತೆ ಹೇಳುವುದು.
೪) ಈ ಚಿತ್ರ ಸಹಿತ ಅಪೂರ್ಣ ಗಾದೆಗಳನ್ನು ಓದಿ, ಕೆಳಗೆ ನೀಡಲಾದ ಸಾಲುಗಳಲ್ಲಿ ಅವುಗಳ ಪೂರ್ಣ ರೂಪ ಬರೆಯಿರಿ.
(1. An image of a pot full of something with the word ಭಕ್ಷ್ಯ written on it, followed by "ಮೇಲೆ ಆಸೆ," then an image of a family, followed by "ಮೇಲೆ ಪ್ರೀತಿ")
(2. "ಅಂಬಲಿ ಕುಡಿಯುವವನಿಗೆ" followed by an image of a man with a large mustache twisting it, followed by "ತಿಕ್ಕುವವನೊಬ್ಬ")
(3. "ದೂರದ" followed by an image of a mountain, followed by "ನುಣ್ಣಗೆ")
೧) ...........................................................................................................................
Answerಭಕ್ಷ್ಯದ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.
೨) ...........................................................................................................................
೩) ...........................................................................................................................
ಓದಿಗೆ ಮನ್ನಣೆ (Value for reading)
* ಅಕ್ಬರ್ ಬೀರಬಲ್ಲರ ಕಥೆಗಳನ್ನು ಓದಿರಿ.
* ತೆನಾಲಿ ರಾಮಕೃಷ್ಣನ ಕಥೆಗಳನ್ನು ಓದಿರಿ.
* ಬುದ್ಧಿವಂತಿಕೆಗೆ ಸಂಬಂಧಿಸಿದ ಕಥೆಗಳನ್ನು, ಘಟನೆಗಳನ್ನು ಓದಿ/ಕೇಳಿ ತಿಳಿಯಿರಿ.