CRECT Education

Class 4 Kannada Lesson 9: Patience (ಸಹನೆ) – Practice & Quiz | KTBS Second Language

Description

Practice comprehension and antonyms from the Kannada story 'Patience' (ಸಹನೆ). Class 4 Second Language.

ಗದ್ಯ (prose) · ಸಮಿತಿ ರಚನೆ (Committee-authored)

ಪಠ್ಯFull text

"ಒಂದು ಊರಿನಲ್ಲಿ ಒಬ್ಬ ಸಿರಿವಂತನಿದ್ದ. ಅವನು ತುಂಬಾ ಒಳ್ಳೆಯವನು, ಸದ್ಗುಣಶಾಲಿಯೂ ಆಗಿದ್ದನು. ಅವನ ಹೆಸರು ಸುಗುಣ ಪಾಟೀಲ. ಅವನ ಬಳಿ ಒಬ್ಬ ಪ್ರಾಮಾಣಿಕ ಹಾಗೂ ನಿಷ್ಠಾವಂತನಾದ ಸೇವಕನಿದ್ದ, ಹೆಸರು ಕೆಂಪರಾಜು. ಆತನನ್ನು ಕಂಡರೆ ಸುಗುಣ ಪಾಟೀಲರಿಗೆ ತುಂಬಾ ಪ್ರೀತಿ ಇತ್ತು. ಯಾವುದೇ ಕೆಲಸವನ್ನಾದರೂ ನಂಬಿಕೆಯಿಂದ ಕೆಂಪರಾಜುವಿಗೆ ವಹಿಸುತ್ತಿದ್ದರು. ಒಂದು ದಿನ ಕೆಂಪರಾಜು ಮನೆಯನ್ನು ಶುಚಿಗೊಳಿಸುತ್ತಿದ್ದ. ಮೇಜು ಒರೆಸುವಾಗ ಅಕಸ್ಮಾತ್ ಮೇಲಿದ್ದ ಹೂದಾನಿ ಕೆಳಗೆ ಬಿದ್ದು ಒಡೆದು ಚೂರಾಯಿತು. ಅದೇ ಹೊತ್ತಿಗೆ ಅಲ್ಲಿಗೆ ಬಂದಿದ್ದ ಸುಗುಣ ಪಾಟೀಲರು ಅದನ್ನು ಗಮನಿಸಿದರು. ಸುಗುಣ ಪಾಟೀಲ: ಏನಿದು? ಹೂದಾನಿ ಒಡೆದು ಹೋಗಿದೆ! ಕೆಂಪರಾಜು: ಹೌದು ಧಣಿ, ಮೇಜು ಒರೆಸುವಾಗ ಕೈ ತಗುಲಿ ಬಿದ್ದುಹೋಯಿತು. ಸುಗುಣ ಪಾಟೀಲ: ಕೆಲಸ ಮಾಡುವಾಗ ಜಾಗ್ರತೆ ವಹಿಸಬೇಕು. ನಿಧಾನವಾಗಿ, ಅಚ್ಚುಕಟ್ಟಾಗಿ ಮಾಡಬೇಕು. ನೀನು ಹಾಗೆ ಮಾಡಿದ್ದರೆ ಹೀಗಾಗುತ್ತಿರಲಿಲ್ಲ. ಕೆಂಪರಾಜು: ನೀವು ಹೇಳಿದ್ದು ಸರಿ ಧಣಿ. ನಾನು ಕೆಲಸದ ಮೇಲೆ ನಿಗಾ ವಹಿಸದೆ ಹೀಗಾಯಿತು. ನಿಮ್ಮ ಇಷ್ಟದ ಹೂದಾನಿ ಹಾಳಾಯಿತು. ನನ್ನದೇ ತಪ್ಪು ಇನ್ನೊಮ್ಮೆ ಇಂಥ ತಪ್ಪು ಮಾಡುವುದಿಲ್ಲ. ದಯವಿಟ್ಟು ಕ್ಷಮಿಸಿ. ಸುಗುಣ ಪಾಟೀಲ: ಕೆಂಪ, ನೀನು ಬೇಸರ ಮಾಡಿಕೊಳ್ಳಬೇಡ. ಅದು ನನ್ನ ಮೆಚ್ಚಿನ ಹೂದಾನಿಯೇ ಇರಬಹುದು. ಹಾಗಂತ ನಿನ್ನ ಮೇಲೆ ನನಗೆ ಕೋಪವೇನೂ ಇಲ್ಲ. ನೀನು ಬೇಕೂಂತ ಮಾಡಿಲ್ಲ. ಇದೇನು ಪ್ರಮಾದವೂ ಅಲ್ಲ. ನಿನ್ನ ತಪ್ಪು ನಿನಗೆ ಅರಿವಾಯಿತಲ್ಲ! ಅದೇ ಮುಖ್ಯ. ಇನ್ನು ಮುಂದೆ ಎಚ್ಚರವಹಿಸಿ ಕೆಲಸ ಮಾಡು. ಕೆಂಪರಾಜುವಿಗೆ ಯಜಮಾನರ ಮಾತುಗಳು ಮೆಚ್ಚುಗೆಯಾದವು. ತನ್ನ ತಪ್ಪನ್ನು ಎಷ್ಟೊಂದು ಸಹನೆಯಿಂದ ಅವರು ಮನ್ನಿಸಿದರು! ಲೋಕದಲ್ಲಿ ಎಲ್ಲಾ ಯಜಮಾನರು ಹೀಗೆಯೇ ಇರುತ್ತಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ಕೆಂಪರಾಜು ತನ್ನ ಮನದಲ್ಲಿ ಅಂದುಕೊಂಡನು. **ಕೌಶಲ :- ಮಾತನಾಡುವುದು.** **ಸಾಮರ್ಥ್ಯ:-** ಸಮವಯಸ್ಕರೊಡನೆ, ಹಿರಿಯರೊಡನೆ ಬಾಯ್ದೆರೆ ಗೌರವ ಅನುಸರಿಸಿ ಮಾತನಾಡುವುದು.

ಪದಗಳ ಅರ್ಥword meanings

KannadaPronunciationMeaning
ಸಿರಿವಂತsi-ri-van-tarich man, wealthy person
ಸದ್ಗುಣsad-gu-nagood character/virtue
ಪ್ರಾಮಾಣಿಕpraa-maa-ni-kahonest, straightforward
ಶುಚಿshu-chiclean, neat
ಅಕಸ್ಮಾತ್a-kas-maataccidentally, unexpectedly
ಜಾಗ್ರತೆjaa-gra-tecareful, cautious
ನಿಗಾni-gaaattention, watch
ಪ್ರಮಾದpra-maa-dabig mistake, blunder
ಕ್ಷಮೆksha-meforgiveness
ಸಹನೆsa-ha-nepatience, tolerance
ಲೋಕlo-kaworld, universe
ಮನma-namind

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ) ಖಾಲಿ ಸ್ಥಳವನ್ನು ಸರಿಯಾದ ಉತ್ತರದಿಂದ ತುಂಬಿರಿ.

  1. ೧. ಕೆಂಪರಾಜುವನ್ನು ಕಂಡರೆ ಸುಗುಣ ಪಾಟೀಲರಿಗೆ ತುಂಬಾ ..........................................

    Answer

    ಕೆಂಪರಾಜುವನ್ನು ಕಂಡರೆ ಸುಗುಣ ಪಾಟೀಲರಿಗೆ ತುಂಬಾ ಪ್ರೀತಿ ಇತ್ತು.

  2. ೨. .......................................... ಮಾಡುವಾಗ ಜಾಗ್ರತೆ ವಹಿಸಬೇಕು.

    Answer

    ಕೆಲಸ ಮಾಡುವಾಗ ಜಾಗ್ರತೆ ವಹಿಸಬೇಕು.

  3. ೩. ನಾನು ಕೆಲಸದ ಮೇಲೆ .......................................... ವಹಿಸದೆ ಹೀಗಾಯಿತು.

    Answer

    ನಾನು ಕೆಲಸದ ಮೇಲೆ ನಿಗಾ ವಹಿಸದೆ ಹೀಗಾಯಿತು.

  4. ೪. ಯಜಮಾನರ .......................................... ಮೆಚ್ಚುಗೆಯಾದವು.

    Answer

    ಯಜಮಾನರ ಮಾತುಗಳು ಮೆಚ್ಚುಗೆಯಾದವು.

ಆ) ವಾಕ್ಯ ಸರಿಪಡಿಸಿ ಬರೆಯಿರಿ.

  1. ೧. ಊರಿನಲ್ಲಿ ಒಬ್ಬ ಸಿರಿವಂತನಿದ್ದ. ಒಂದು

    Answer

    ಒಂದು ಊರಿನಲ್ಲಿ ಒಬ್ಬ ಸಿರಿವಂತನಿದ್ದ.

  2. .....................................................................................................................................

    Answer

    ಒಂದು ಊರಿನಲ್ಲಿ ಒಬ್ಬ ಸಿರಿವಂತನಿದ್ದ.

  3. ೨. ಒಂದು ಕೆಂಪರಾಜು ಮನೆಯನ್ನು ದಿನ ಶುಚಿಗೊಳಿಸುತ್ತಿದ್ದ

    Answer

    ಒಂದು ದಿನ ಕೆಂಪರಾಜು ಮನೆಯನ್ನು ಶುಚಿಗೊಳಿಸುತ್ತಿದ್ದ.

  4. .....................................................................................................................................

    Answer

    ಒಂದು ದಿನ ಕೆಂಪರಾಜು ಮನೆಯನ್ನು ಶುಚಿಗೊಳಿಸುತ್ತಿದ್ದ.

  5. ೩. ಏನಿದು! ಒಡೆದು ಹೋಗಿದೆ ಹೂದಾನಿ

    Answer

    ಏನಿದು! ಹೂದಾನಿ ಒಡೆದು ಹೋಗಿದೆ!

  6. .....................................................................................................................................

    Answer

    ಏನಿದು! ಹೂದಾನಿ ಒಡೆದು ಹೋಗಿದೆ!

  7. ೪. ಬೇಕೂಂತ ನೀನು ಮಾಡಿಲ್ಲ

    Answer

    ನೀನು ಬೇಕೂಂತ ಮಾಡಿಲ್ಲ.

  8. .....................................................................................................................................

    Answer

    ನೀನು ಬೇಕೂಂತ ಮಾಡಿಲ್ಲ.

ಇ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

  1. ೧. ಸಿರಿವಂತನ ಹೆಸರೇನು?

    Answer

    ಸಿರಿವಂತನ ಹೆಸರು ಸುಗುಣ ಪಾಟೀಲ.

  2. .....................................................................................................................................

    Answer

    ಸಿರಿವಂತನ ಹೆಸರು ಸುಗುಣ ಪಾಟೀಲ.

  3. ೨. ಹೂದಾನಿ ಏಕೆ ಒಡೆಯಿತು?

    Answer

    ಹೂದಾನಿ ಮೇಜು ಒರೆಸುವಾಗ ಕೈ ತಗುಲಿ ಒಡೆಯಿತು.

  4. .....................................................................................................................................

    Answer

    ಹೂದಾನಿ ಮೇಜು ಒರೆಸುವಾಗ ಕೈ ತಗುಲಿ ಒಡೆಯಿತು.

  5. ೩. ನಿಷ್ಠಾವಂತ ಸೇವಕನ ಹೆಸರೇನು?

    Answer

    ನಿಷ್ಠಾವಂತ ಸೇವಕನ ಹೆಸರು ಕೆಂಪರಾಜು.

  6. .....................................................................................................................................

    Answer

    ನಿಷ್ಠಾವಂತ ಸೇವಕನ ಹೆಸರು ಕೆಂಪರಾಜು.

  7. ೪. ಕೆಂಪರಾಜುವಿಗೆ ಸುಗುಣ ಪಾಟೀಲರು ಯಾವುದು ಮುಖ್ಯ ಎಂದು ಹೇಳಿದರು?

    Answer

    ಕೆಂಪರಾಜುವಿಗೆ ತನ್ನ ತಪ್ಪಿನ ಅರಿವು ಮುಖ್ಯ ಎಂದು ಸುಗುಣ ಪಾಟೀಲರು ಹೇಳಿದರು.

  8. .....................................................................................................................................

    Answer

    ಕೆಂಪರಾಜುವಿಗೆ ತನ್ನ ತಪ್ಪಿನ ಅರಿವು ಮುಖ್ಯ ಎಂದು ಸುಗುಣ ಪಾಟೀಲರು ಹೇಳಿದರು.

ಈ) ಕೆಳಗಿನ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯದ ಉತ್ತರ ಬರೆಯಿರಿ.

  1. ೧. ಕೆಂಪರಾಜು ಸುಗುಣ ಪಾಟೀಲರ ಬಳಿ ಏನೆಂದು ಕ್ಷಮೆ ಯಾಚಿಸಿದ?

    Answer

    ಕೆಂಪರಾಜು ತನ್ನದೇ ತಪ್ಪು ಎಂದು ಒಪ್ಪಿಕೊಂಡನು. ಇನ್ನೊಮ್ಮೆ ಇಂಥ ತಪ್ಪು ಮಾಡುವುದಿಲ್ಲವೆಂದು ಹೇಳಿ ಕ್ಷಮೆ ಯಾಚಿಸಿದನು.

  2. .....................................................................................................................................

    Answer

    ಕೆಂಪರಾಜು ತನ್ನದೇ ತಪ್ಪು ಎಂದು ಒಪ್ಪಿಕೊಂಡನು. ಇನ್ನೊಮ್ಮೆ ಇಂಥ ತಪ್ಪು ಮಾಡುವುದಿಲ್ಲವೆಂದು ಹೇಳಿ ಕ್ಷಮೆ ಯಾಚಿಸಿದನು.

  3. .....................................................................................................................................

    Answer

    ಕೆಂಪರಾಜು ತನ್ನದೇ ತಪ್ಪು ಎಂದು ಒಪ್ಪಿಕೊಂಡನು. ಇನ್ನೊಮ್ಮೆ ಇಂಥ ತಪ್ಪು ಮಾಡುವುದಿಲ್ಲವೆಂದು ಹೇಳಿ ಕ್ಷಮೆ ಯಾಚಿಸಿದನು.

  4. .....................................................................................................................................

    Answer

    ಕೆಂಪರಾಜು ತನ್ನದೇ ತಪ್ಪು ಎಂದು ಒಪ್ಪಿಕೊಂಡನು. ಇನ್ನೊಮ್ಮೆ ಇಂಥ ತಪ್ಪು ಮಾಡುವುದಿಲ್ಲವೆಂದು ಹೇಳಿ ಕ್ಷಮೆ ಯಾಚಿಸಿದನು.

  5. ೨. ಸುಗುಣ ಪಾಟೀಲರು ಕೆಂಪರಾಜುವನ್ನು ಹೇಗೆ ಸಮಾಧಾನಪಡಿಸಿದರು?

    Answer

    ಸುಗುಣ ಪಾಟೀಲರು ಕೆಂಪರಾಜುವಿಗೆ ಬೇಸರ ಮಾಡಿಕೊಳ್ಳಬೇಡವೆಂದು ಹೇಳಿದರು. ಅದು ದೊಡ್ಡ ತಪ್ಪಲ್ಲ, ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಸಮಾಧಾನಪಡಿಸಿದರು.

  6. .....................................................................................................................................

    Answer

    ಸುಗುಣ ಪಾಟೀಲರು ಕೆಂಪರಾಜುವಿಗೆ ಬೇಸರ ಮಾಡಿಕೊಳ್ಳಬೇಡವೆಂದು ಹೇಳಿದರು. ಅದು ದೊಡ್ಡ ತಪ್ಪಲ್ಲ, ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಸಮಾಧಾನಪಡಿಸಿದರು.

  7. .....................................................................................................................................

    Answer

    ಸುಗುಣ ಪಾಟೀಲರು ಕೆಂಪರಾಜುವಿಗೆ ಬೇಸರ ಮಾಡಿಕೊಳ್ಳಬೇಡವೆಂದು ಹೇಳಿದರು. ಅದು ದೊಡ್ಡ ತಪ್ಪಲ್ಲ, ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಸಮಾಧಾನಪಡಿಸಿದರು.

  8. .....................................................................................................................................

    Answer

    ಸುಗುಣ ಪಾಟೀಲರು ಕೆಂಪರಾಜುವಿಗೆ ಬೇಸರ ಮಾಡಿಕೊಳ್ಳಬೇಡವೆಂದು ಹೇಳಿದರು. ಅದು ದೊಡ್ಡ ತಪ್ಪಲ್ಲ, ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಸಮಾಧಾನಪಡಿಸಿದರು.

  9. .....................................................................................................................................

    Answer

    ಸುಗುಣ ಪಾಟೀಲರು ಕೆಂಪರಾಜುವಿಗೆ ಬೇಸರ ಮಾಡಿಕೊಳ್ಳಬೇಡವೆಂದು ಹೇಳಿದರು. ಅದು ದೊಡ್ಡ ತಪ್ಪಲ್ಲ, ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಸಮಾಧಾನಪಡಿಸಿದರು.

Interactive Lab