ಗದ್ಯ (prose) · ಸಮಿತಿ ರಚನೆ
ಪಠ್ಯFull text
"ಎಲ್ಲರೊಳಗೊಂದಾಗುವ ಬಾಳು ಆದರ್ಶದ ಬಾಳು." — "A life that unites with everyone is an ideal life."
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಆಶೀರ್ವಾದ | — | ಹಾರೈಕೆ |
| ಕುಟುಂಬ | — | ಮನೆತನ, ಒಕ್ಕಲು |
| ಕೋರ್ಟ್ | — | ನ್ಯಾಯಕ್ಕಾಗಿ ವಿಚಾರಣೆ ನಡೆಸುವ ಸ್ಥಳ, ನ್ಯಾಯಾಲಯ |
| ಗೊತ್ತು | — | ಪರಿಚಯ, ತಿಳಿದಿರುವುದು |
| ಚಪ್ಪಡಿಕಲ್ಲು | — | ಚಪ್ಪಡಿ, ಹಾಸುಗಲ್ಲು |
| ಚಿರಪರಿಚಿತಳು | — | ದೀರ್ಘಕಾಲದ ಪರಿಚಯವುಳ್ಳವಳು, ಎಲ್ಲರಿಗೂ ಗೊತ್ತಿರುವಾಕೆ |
| ಜನಪ್ರಿಯ | — | ಜನರ ಮೆಚ್ಚುಗೆಗೆ ಪಾತ್ರವಾದ |
| ಜಾತಕ ಸಮೇತ | — | ಸವಿವರವಾದ ಮಾಹಿತಿಯಿಂದ ಕೂಡಿದ, ಜನ್ಮಕುಂಡಲಿ ವಿವರಗಳಿಂದ ಕೂಡಿದ |
| ಜಾದೂ ಲೋಕ | — | ಇಂದ್ರಜಾಲ ನಡೆಯುವ ಸ್ಥಳ, ಮಾಯಾವಿದ್ಯೆಯ ಪ್ರಪಂಚ |
| ತಂಗುದಾಣ | — | ತಾತ್ಕಾಲಿಕವಾಗಿ ಉಳಿದುಕೊಳ್ಳುವ ಜಾಗ |
| ತಲುಪು | — | ಮುಟ್ಟು, ಸೇರು |
| ತೀರ್ಪು | — | ನಿರ್ಣಯ, ತೀರ್ಮಾನ |
| ತುರ್ತು | — | ಜರೂರು, ಕೂಡಲೆ |
| ದರ್ಶನ | — | ಭೇಟಿ, ಕಾಣುವಿಕೆ |
| ದುಡ್ಡು | — | ರೊಕ್ಕ, ಹಣ |
| ಪತ್ರ | — | ಓಲೆ, ಕಾಗದ |
| ಪಡೆ | — | ಗಳಿಸು, ದೊರಕಿಸು |
| ಪತ್ರಿಕೆ | — | ನಿಯತಕಾಲಿಕೆ, ಬರೆದ ಕಾಗದ |
| ಪ್ರಕರಣ | — | ಸಂಗತಿ, ಪ್ರಸಂಗ |
| ಪ್ರಸಿದ್ಧ | — | ಹೆಸರಾದ, ಕೀರ್ತಿಪಡೆದ |
| ಬಗೆಹರಿ | — | ನೆರವೇರು, ಕೈಗೂಡು |
| ಮಾಲ್ | — | ಮಳಿಗೆ, ಅಂಗಡಿಗಳ ಸಂಕೀರ್ಣ ಯಥಾವತ್ತಾಗಿ - ಸರಿಯಾಗಿ, ಇದ್ದಹಾಗೆ ಶುಲ್ಕ - ಸುಂಕ, ದಂಡ |
| ಸಮಸ್ಯೆ | — | ತೊಡಕು, ತೊಂದರೆ |
| ಸಮೇತ | — | ಕೂಡಿದ, ಸಹಿತವಾದ |
| ಸಂಪರ್ಕ ಕೇಂದ್ರ | — | ಸಂಪರ್ಕ ಕಲ್ಪಿಸುವ ಸ್ಥಳ, ಸೇರುವ ಮುಖ್ಯಸ್ಥಳ |
| ಸಹಕಾರ | — | ಪರಸ್ಪರ ಸಹಾಯ, ಒಗ್ಗಟ್ಟಿನಿಂದ ಕೆಲಸ ಮಾಡುವಿಕೆ |
| ಸಹೋದರಿ | — | ಅಕ್ಕ ಅಥವಾ ತಂಗಿ, ಒಡಹುಟ್ಟಿದವಳು |
| ಸಾಕ್ಷಿ | — | ಕಣ್ಣಾರೆ ಕಂಡವ, ಪುರಾವೆ |
| ಸೋಜಿಗ | — | ಆಶ್ಚರ್ಯ, ಕುತೂಹಲ |
| ವಿಶೇಷ | — | ಹೆಚ್ಚಿನ ಗುಣ, ಹೆಚ್ಚುಗಾರಿಕೆ |
| ಹಂಗಿಸು | — | ಕೆಣಕು, ಮೂದಲಿಸು |
| ಹೊಸಬರು | — | ಅಪರಿಚಿತರು, ಗುರುತಿಲ್ಲದವರು |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
೧. ಸೃಜನ ಯಾರಿಗೆ ಪತ್ರವನ್ನು ಬರೆದನು?
Answerಸೃಜನ ತನ್ನ ಸಹೋದರಿ ಸೌಜನ್ಯಳಿಗೆ ಪತ್ರವನ್ನು ಬರೆದನು.
೨. ಯಾರಿಗೆ ಮಿಠಾಯಿ ಎಂದರೆ ಇಷ್ಟ?
Answerಮಿಠಾಯಿ ಎಲ್ಲರಿಗೂ ಇಷ್ಟ, ಅದರಲ್ಲೂ ಮಕ್ಕಳಿಗಂತೂ ಬಲು ಇಷ್ಟ.
೩. ಮಲ್ಲಜ್ಜಿ ಎಲ್ಲರೊಂದಿಗೆ ಹೇಗೆ ಮಾತನಾಡುತ್ತಾಳೆ?
Answerಮಲ್ಲಜ್ಜಿ ಎಲ್ಲರೊಂದಿಗೂ ನಗುನಗುತ್ತಾ ಮಾತನಾಡುತ್ತಾಳೆ.
೪. ಮಲ್ಲಜ್ಜಿಯ ಕೋರ್ಟಿನಲ್ಲಿ ವಕೀಲರ ಶುಲ್ಕ ಎಷ್ಟು?
Answerಮಲ್ಲಜ್ಜಿಯ ಕೋರ್ಟಿನಲ್ಲಿ ವಕೀಲರ ಶುಲ್ಕ ಮತ್ತು ಕೋರ್ಟು ಶುಲ್ಕ ಯಾವುದೂ ಇಲ್ಲ.
೫. ಸೃಜನನಿಗೆ ಮಲ್ಲಜ್ಜಿಯ ಮಳಿಗೆ ಯಾವ ಲೋಕದಂತೆ ತೋರಿದೆ?
Answerಸೃಜನನಿಗೆ ಮಲ್ಲಜ್ಜಿಯ ಮಳಿಗೆ ಜಾದೂ ಲೋಕದಂತೆ ತೋರಿದೆ.
ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಮಲ್ಲಜ್ಜಿಯ ಮಳಿಗೆಯಲ್ಲಿ ದೊರೆಯುವ ವಸ್ತುಗಳು ಯಾವುವು? ಪಟ್ಟಿಮಾಡಿರಿ.
Answerಮಲ್ಲಜ್ಜಿಯ ಮಳಿಗೆಯಲ್ಲಿ ಕಡಲೆ, ಪುರಿ, ಕೊಬ್ಬರಿ ಮಿಠಾಯಿಗಳಂತಹ ತಿನಿಸುಗಳು, ಹಿರಿಯರಿಗೆ ಎಲೆ-ಅಡಿಕೆ, ಸಕ್ಕರೆ-ಚಹಾಪುಡಿ, ಊದು-ಕರ್ಪೂರ, ಬೀಗರಿಗೆ ಬಿಸ್ಕೇಟು-ಖಾರ, ಹೆಣ್ಣುಮಕ್ಕಳಿಗೆ ಸ್ನೋ-ಪೌಡರ್, ಮಕ್ಕಳಿಗೆ ಚಾಕಲೇಟು-ಪೆಪ್ಪರಮೆಂಟು ದೊರೆಯುತ್ತವೆ. ಇವುಗಳ ಜೊತೆಗೆ ಪುಸ್ತಕ, ಪೆನ್ನು ಮುಂತಾದ ವಸ್ತುಗಳೂ ಸಿಗುತ್ತವೆ.
೨. ಮಲ್ಲಜ್ಜಿಯ ನ್ಯಾಯಾಲಯದ ಕುರಿತು ವಿವರಿಸಿರಿ.
Answerಮಲ್ಲಜ್ಜಿಯ ಮಳಿಗೆಯ ಮುಂದಿನ ಚಪ್ಪಡಿಕಲ್ಲುಗಳೇ ಈ ನ್ಯಾಯಾಲಯದ ಕಟಕಟೆ. ಇಲ್ಲಿ ವಕೀಲರು, ಸಾಕ್ಷಿಗಳು ಬೇಕಿಲ್ಲ ಮತ್ತು ಯಾವ ಶುಲ್ಕವೂ ಇಲ್ಲ. ಮಲ್ಲಜ್ಜಿಯ ತೀರ್ಪು ನ್ಯಾಯಾಧೀಶರ ತೀರ್ಪಿಗೆ ಸಮನಾಗಿರುತ್ತದೆ.
೩. ಸೃಜನನಿಗೆ ಮಲ್ಲಜ್ಜಿಯ ಮಳಿಗೆ ಜಾದೂಲೋಕವೆನಿಸಿದ್ದು ಏಕೆ?
Answerಮಲ್ಲಜ್ಜಿಯ ಅಂಗಡಿಯ ಬಾಗಿಲು ಸದಾ ತೆರೆದೇ ಇರುತ್ತದೆ, ಆಕೆ ಯಾವ ಹೊಸ ಮಿಠಾಯಿ ಕೇಳಿದರೂ ಕೊಟ್ಟುಬಿಡುತ್ತಾಳೆ. ವಸ್ತುಗಳನ್ನು ಯಾವಾಗ ವ್ಯಾಪಾರ ಮಾಡುತ್ತಾಳೆ ಮತ್ತು ತರುತ್ತಾಳೆ ಎಂದು ತಿಳಿಯದೆ ಸೋಜಿಗವಾಗಿ, ಅದು ಸೃಜನನಿಗೆ ಜಾದೂ ಲೋಕದಂತೆ ಕಂಡಿತು.
ಇ. ಬಿಟ್ಟ ಸ್ಥಳಗಳನ್ನು ಸರಿಯಾದ ಪದಗಳಿಂದ ತುಂಬಿರಿ.
೧. ಮಲ್ಲಜ್ಜಿ ನಗುತ್ತಾ ಪ್ರೀತಿಯಿಂದ _________ ಕೊಡುತ್ತಾಳೆ.
Answerಮಿಠಾಯಿ
೨. ಅವರ _________ ಸಮೇತ ವಿವರಿಸಿ ಬಿಡುತ್ತಾಳೆ.
Answerಜಾತಕ
೩. ಮಕ್ಕಳಿಂದ ಹಿಡಿದು ಮುದುಕರವರೆಗಿನ _________ ದೂರಮಾಡಿ ಬಿಡುತ್ತಾಳೆ.
Answerದೂರುಗಳನ್ನು
೪. ಇದರ ಬಾಗಿಲು ಸದಾ _________ ಇರುತ್ತದೆ.
Answerತೆರೆದೇ
೫. 'ಮಲ್ಲಜ್ಜಿಯ ಮಳಿಗೆ' ನನಗೆ ಒಂದು _________ ಇದ್ದಂತೆ.
Answerಜಾದೂ ಲೋಕ