CRECT Education

Class 5 Kannada Lesson 12: Mallajji's Shop – Practice & Quiz | KTBS First Language

Description

Practice and quiz on Lesson 12, Mallajji's Shop, from the KTBS Class 5 Kannada First Language textbook. Test what you remember about Mallajji's special shop.

ಗದ್ಯ (prose) · ಸಮಿತಿ ರಚನೆ

ಪಠ್ಯFull text

ಕನಕನಹಳ್ಳಿ ದಿ. ೦೪-೧೦-೨೦೨೪ ಪ್ರೀತಿಯ ಸಹೋದರಿ ಸೌಜನ್ಯಳಿಗೆ, ನಿನ್ನ ಅಣ್ಣನು ಮಾಡುವ ಆಶೀರ್ವಾದಗಳು. ನಾವು ಮನೆಯಲ್ಲಿ ಎಲ್ಲರೂ ಕ್ಷೇಮವಾಗಿದ್ದೇವೆ. ನೀನು, ಚಿಕ್ಕಮ್ಮ, ಚಿಕ್ಕಪ್ಪ ಎಲ್ಲರೂ ಕ್ಷೇಮವಾಗಿರುವಿರಿ ಎಂದು ಆಶಿಸುತ್ತೇನೆ. ನಿನ್ನ ಪತ್ರ ತಲುಪಿತು. ನೀನು ಬರೆದ ಮಾಲ್‌ಗಳ ವಿಷಯ ವಿಶೇಷವಾಗಿತ್ತು. ನಮ್ಮೂರಿನಲ್ಲೂ ಒಂದು ಮಳಿಗೆ ಇದೆ. ಅದು ನೀನು ತಿಳಿಸಿದ ಮಾಲ್‌ಗಿಂತ ವಿಶೇಷವಾಗಿದೆ. ಅದುವೆ 'ಮಲ್ಲಜ್ಜಿಯ ಮಳಿಗೆ'. ಏನು ಅದರ ವಿಶೇಷ ಅಂತಿಯಾ? ಮುಂದೆ ಓದು, ಗೊತ್ತಾಗುತ್ತದೆ. ಮಿಠಾಯಿ ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಮಕ್ಕಳಿಗಂತೂ ಬಲು ಇಷ್ಟ. ಹಾಗೆಯೇ ಮಲ್ಲಜ್ಜಿ. ಆಕೆ ನಮ್ಮೂರಿನ ಎಲ್ಲರಿಗೂ ಗೊತ್ತು. ಸುತ್ತ ಮುತ್ತಲಿನ ಊರಿನವರಿಗೂ ಚಿರಪರಿಚಿತಳು. ಮಲ್ಲಜ್ಜಿಯಿಂದ ಮಿಠಾಯಿ ಪ್ರಸಿದ್ಧವೋ, ಮಿಠಾಯಿಯಿಂದ ಮಲ್ಲಜ್ಜಿ ಪ್ರಸಿದ್ಧವೋ ಗೊತ್ತಿಲ್ಲ. ಮಲ್ಲಜ್ಜಿ ಮತ್ತು ಮಿಠಾಯಿ ಎರಡೂ ಇರುವ 'ಮಳಿಗೆ' ಎಲ್ಲರಿಗೂ ಒಂದು ರೀತಿಯ 'ತಂಗುದಾಣ'ವೇ ಸರಿ. ಮಲ್ಲಜ್ಜಿಯ ಮಳಿಗೆ ನೋಡಲು ಚಿಕ್ಕದಾದರೂ ಅಲ್ಲಿ ಎಲ್ಲವೂ ದೊರಕುತ್ತವೆ. ಕಡಲೆ, ಪುರಿ, ಕೊಬ್ಬರಿ ಮಿಠಾಯಿಗಳಿಂದ ಹಿಡಿದು ಇತ್ತೀಚಿನ ತಿನಿಸುಗಳೂ ಸಿಗುತ್ತವೆ. ಯಲ್ಲಜ್ಜಿಗೆ ಬೇಕಾದ ಎಲೆ-ಅಡಿಕೆ, ಸಿಂಗಾರಪ್ಪನಿಗೆ ಸಕ್ಕರೆ-ಚಹಾಪುಡಿ, ಪೂಜಾರಪ್ಪನಿಗೆ ಊದು-ಕರ್ಪೂರ, ಬೀಗರಿಗೆ ಬಿಸ್ಕೇಟು-ಖಾರ, ಹೆಣ್ಣುಮಕ್ಕಳಿಗೆ ಸ್ನೋ-ಪೌಡರ್, ಚಿಕ್ಕಮಕ್ಕಳಿಗೆ ಚಾಕಲೇಟು-ಪೆಪ್ಪರಮೆಂಟು ಹೀಗೆ ಎಲ್ಲರಿಗೂ ಬೇಕಾಗುವ ವಸ್ತುಗಳು ಇಲ್ಲಿ ಲಭ್ಯ. ಆದ್ದರಿಂದ ಜನರು ಪ್ರತಿದಿನ ಒಂದಿಲ್ಲೊಂದು ಬಾರಿ ಈ ತಂಗುದಾಣವನ್ನು ದರ್ಶನ ಮಾಡುತ್ತಾರೆ. ಮಕ್ಕಳ ಕೈಗೆ ದುಡ್ಡು ಸಿಕ್ಕಿದರೆ ಸಾಕು. ಮಲ್ಲಜ್ಜಿಯ ಅಂಗಡಿಗೆ ಓಟ. ಅಳುತ್ತ ಬಂದ ಪುಟಾಣಿ ಮಕ್ಕಳೂ ಅಲ್ಲಿ ಸುಮ್ಮನಾಗಿಬಿಡುತ್ತಾರೆ. ದುಡ್ಡಿಲ್ಲದೆ ಬಂದ ಪುಟ್ಟ ಮಕ್ಕಳಿಗೂ ಮಲ್ಲಜ್ಜಿ ನಗುತ್ತ ಪ್ರೀತಿಯಿಂದ ಮಿಠಾಯಿ ಕೊಡುತ್ತಾಳೆ. ನಾನು ಪುಟಾಣಿಯಾಗಿದ್ದಾಗ ಹೀಗೆಯೇ ಮಿಠಾಯಿ ಪಡೆದಿದ್ದೆನಂತೆ! 'ಈಗ ದುಡ್ಡಿಲ್ಲಜ್ಜಿ' ಎಂದು ದೊಡ್ಡವರೂ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಹಣವಿದ್ದಾಗ ತಪ್ಪದೇ ತಂದುಕೊಡುತ್ತಾರೆ. ತುರ್ತಾಗಿ ಬೇಕಾದಾಗ ಸಾಲವಾಗಿ ಹಣವನ್ನೂ ಪಡೆದುಕೊಂಡು ಹೋಗುತ್ತಾರೆ. ಹೀಗಾಗಿ ಮಲ್ಲಜ್ಜಿಯ ಮಳಿಗೆ ಒಂದು ಪ್ರೀತಿಯ 'ಸಹಕಾರಿ ಬ್ಯಾಂಕ್' ಇದ್ದಂತೆ! ನಮ್ಮೂರಿಗೆ ಯಾರು ಹೊಸಬರು ಬಂದರೂ ಮೊದಲು ಮಾತನಾಡಿಸುವುದು ಮಲ್ಲಜ್ಜಿಯನ್ನೇ. ಯಾರ ಮನೆ ಬೇಕು ತೋರಿಸುತ್ತಾಳೆ. ಯಾವ ವಿಷಯ ಬೇಕು-ತಿಳಿಸುತ್ತಾಳೆ. ಇಲ್ಲಿಯ ಎಲ್ಲ ಕುಟುಂಬಗಳು, ಜನರು, ಮಕ್ಕಳು ಮಲ್ಲಜ್ಜಿಗೆ ಗೊತ್ತು! ಮದುವೆಯಾಗುವ ಹುಡುಗ-ಹುಡುಗಿಯರ ಬಗ್ಗೆ ಕೇಳಿದರೆ ಸಾಕು, ಅವರ ಜಾತಕ ಸಮೇತ ವಿವರಿಸಿ ಬಿಡುತ್ತಾಳೆ. ಯಾರಾದರೂ ಯಾರಿಗಾದರೂ ಯಾವ ವಿಷಯವನ್ನಾದರೂ ತಿಳಿಸಲು ಹೇಳಿದ್ದರೆ, ಅವರಿಗೆ ಆ ವಿಷಯವನ್ನು ಯಥಾವತ್ತಾಗಿ ತಿಳಿಸಿಬಿಡುತ್ತಾಳೆ ಮಲ್ಲಜ್ಜಿ. ಪತ್ರಿಕೆ, ಪತ್ರಗಳನ್ನು ಸಂಬಂಧಿಸಿದವರಿಗೆ ತಪ್ಪದೇ ತಲುಪಿಸುತ್ತಾಳೆ. ಯಾರು ಎಲ್ಲಿಗೆ ಏಕೆ ಹೋಗಿದ್ದಾರೆ? ಯಾವಾಗ ಬರುತ್ತಾರೆ? ಎಲ್ಲವೂ ತಿಳಿದಿರುತ್ತದೆ ಮಲ್ಲಜ್ಜಿಗೆ! ಟೆಂಪೋ, ಜೀಪು, ಬಸ್ಸುಗಳು ಬಂದು ಹೋಗುವ ಸಮಯದ ವಿವರವೂ ಇಲ್ಲಿ ಲಭ್ಯ. ಹಾಗಾಗಿ ಮಲ್ಲಜ್ಜಿಯ ಮಳಿಗೆ ಒಂದು ಉಚಿತ 'ಸಂಪರ್ಕ ಕೇಂದ್ರ' ಇದ್ದಂತೆ. ಮಲ್ಲಜ್ಜಿ ಯಾರ ಮೇಲೂ ಸಿಟ್ಟು ಮಾಡಿಕೊಳ್ಳುವುದಿಲ್ಲ. ಎಲ್ಲರೊಂದಿಗೂ ನಗುನಗುತ್ತಾ ಮಾತನಾಡುತ್ತಾಳೆ. ಜನರ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಬಿಡುತ್ತಾಳೆ. ಮಕ್ಕಳಿಂದ ಹಿಡಿದು ಮುದುಕರವರೆಗಿನ ದೂರುಗಳನ್ನು ದೂರ ಮಾಡಿಬಿಡುತ್ತಾಳೆ. ಮಳಿಗೆಯ ಮುಂದಿರುವ ಚಪ್ಪಡಿಕಲ್ಲುಗಳೇ ಇಲ್ಲಿ ಕಟಕಟೆ. ಮಲ್ಲಜ್ಜಿಯ ಕೋರ್ಟಿನಲ್ಲಿ ಯಾವ ವಕೀಲರೂ ಸಾಕ್ಷಿಗಳೂ ಬೇಕಿಲ್ಲ. ಎಷ್ಟೋ ಬಾರಿ ದೂರು ನ್ಯಾಯಾಲಯದಲ್ಲಿಯೂ ಬಗೆಹರಿಯುವುದಿಲ್ಲ. ಕೋರ್ಟು ಶುಲ್ಕ, ವಕೀಲರ ಫೀಜು ಯಾವುದೂ ಇಲ್ಲಿಲ್ಲ. ಮಲ್ಲಜ್ಜಿ ನೀಡುವ ತೀರ್ಪು ಯಾವ ನ್ಯಾಯಾಧೀಶರ ತೀರ್ಪಿಗೂ ಕಡಿಮೆಯಿಲ್ಲ. ಆದ್ದರಿಂದ ಮಲ್ಲಜ್ಜಿಯ ಮಳಿಗೆ ಒಂದು ಜನಪ್ರಿಯ 'ಜನತಾ ನ್ಯಾಯಾಲಯ' ಇದ್ದಂತೆ. ನನಗಂತೂ ಈ ಮಳಿಗೆ ಆಶ್ಚರ್ಯದಾಯಕವಾಗಿದೆ. ಇದರ ಬಾಗಿಲು ಸದಾ ತೆರೆದೇ ಇರುತ್ತದೆ. ಮಲ್ಲಜ್ಜಿ ಅಂಗಡಿಯಲ್ಲೇ ಇರುತ್ತಾಳೆ. ಯಾವ ಹೊಸ ಬಗೆಯ ಮಿಠಾಯಿ ಚಾಕಲೇಟ್ ಕೇಳಿದರೂ ಕೊಟ್ಟುಬಿಡುತ್ತಾಳೆ. ಯಾವಾಗ ವ್ಯಾಪಾರ ಮಾಡುತ್ತಾಳೋ ವಸ್ತುಗಳನ್ನು ಯಾವಾಗ ತರುತ್ತಾಳೋ ನನಗೆ ಬಲು ಸೋಜಿಗವಾಗಿದೆ. ಹೀಗಾಗಿ ಮಲ್ಲಜ್ಜಿಯ ಮಳಿಗೆ ನನಗೆ ಒಂದು 'ಜಾದೂ ಲೋಕವಿದ್ದಂತೆ.' ಮಲ್ಲಜ್ಜಿಯ ಮಳಿಗೆ ಈಗ ಸ್ವಲ್ಪ ದೊಡ್ಡದಾಗಿದೆ. ಹೊಸ ಹೊಸದಾದ ಪುಸ್ತಕ, ಪೆನ್ನು ಇನ್ನೂ ತುಂಬಾ ವಸ್ತುಗಳು ಬಂದಿವೆ. ಮಲ್ಲಜ್ಜಿಯ ಮಳಿಗೆಯ ಬಗ್ಗೆ ಎಷ್ಟು ಹೇಳಿದರೂ ಸಾಲದೆನಿಸುತ್ತದೆ. ಈಗ ಇಷ್ಟಕ್ಕೆ ಸಾಕು ಮಾಡುತ್ತೇನೆ. ಮುಂದಿನ ಪತ್ರದಲ್ಲಿ ಮತ್ತಷ್ಟು ವಿವರ ಬರೆಯುತ್ತೇನೆ. ನನ್ನ ಊರಿಗೆ ಬಂದಾಗ ನಿನಗೆ ಈ ತಂಗುದಾಣದ ದರ್ಶನ ಮಾಡಿಸುತ್ತೇನೆ. ನಿನಗಿಷ್ಟವಾದ ಮಿಠಾಯಿಯನ್ನು ಕೊಡಿಸುತ್ತೇನೆ. ಅಣ್ಣನು ಮಾಡುವ ಆಶೀರ್ವಾದಗಳು- ನಿನ್ನ ಪ್ರೀತಿಯ ಸಹೋದರ, ಸೃಜನ ಇವರಿಗೆ ಕುಮಾರಿ ಸೌಜನ್ಯ, ೫ನೆಯ ತರಗತಿ, ಹಿರಿಯ ಪ್ರಾಥಮಿಕ ಶಾಲೆ, ನಂ.೧೦, ವಿದ್ಯಾನಗರ, ಉತ್ತರ ಕನ್ನಡ. **ಕೌಶಲ :** ಬರೆಯುವುದು. **ಸಾಮರ್ಥ್ಯ :** ಅನೌಪಚಾರಿಕ ಪತ್ರ ಮತ್ತು ಚಿಕ್ಕ ಪ್ರಬಂಧಗಳನ್ನು ಸ್ವತಂತ್ರವಾಗಿ ರಚಿಸುವುದು.

"ಎಲ್ಲರೊಳಗೊಂದಾಗುವ ಬಾಳು ಆದರ್ಶದ ಬಾಳು." — "A life that unites with everyone is an ideal life."

ಪದಗಳ ಅರ್ಥword meanings

KannadaPronunciationMeaning
ಆಶೀರ್ವಾದಹಾರೈಕೆ
ಕುಟುಂಬಮನೆತನ, ಒಕ್ಕಲು
ಕೋರ್ಟ್ನ್ಯಾಯಕ್ಕಾಗಿ ವಿಚಾರಣೆ ನಡೆಸುವ ಸ್ಥಳ, ನ್ಯಾಯಾಲಯ
ಗೊತ್ತುಪರಿಚಯ, ತಿಳಿದಿರುವುದು
ಚಪ್ಪಡಿಕಲ್ಲುಚಪ್ಪಡಿ, ಹಾಸುಗಲ್ಲು
ಚಿರಪರಿಚಿತಳುದೀರ್ಘಕಾಲದ ಪರಿಚಯವುಳ್ಳವಳು, ಎಲ್ಲರಿಗೂ ಗೊತ್ತಿರುವಾಕೆ
ಜನಪ್ರಿಯಜನರ ಮೆಚ್ಚುಗೆಗೆ ಪಾತ್ರವಾದ
ಜಾತಕ ಸಮೇತಸವಿವರವಾದ ಮಾಹಿತಿಯಿಂದ ಕೂಡಿದ, ಜನ್ಮಕುಂಡಲಿ ವಿವರಗಳಿಂದ ಕೂಡಿದ
ಜಾದೂ ಲೋಕಇಂದ್ರಜಾಲ ನಡೆಯುವ ಸ್ಥಳ, ಮಾಯಾವಿದ್ಯೆಯ ಪ್ರಪಂಚ
ತಂಗುದಾಣತಾತ್ಕಾಲಿಕವಾಗಿ ಉಳಿದುಕೊಳ್ಳುವ ಜಾಗ
ತಲುಪುಮುಟ್ಟು, ಸೇರು
ತೀರ್ಪುನಿರ್ಣಯ, ತೀರ್ಮಾನ
ತುರ್ತುಜರೂರು, ಕೂಡಲೆ
ದರ್ಶನಭೇಟಿ, ಕಾಣುವಿಕೆ
ದುಡ್ಡುರೊಕ್ಕ, ಹಣ
ಪತ್ರಓಲೆ, ಕಾಗದ
ಪಡೆಗಳಿಸು, ದೊರಕಿಸು
ಪತ್ರಿಕೆನಿಯತಕಾಲಿಕೆ, ಬರೆದ ಕಾಗದ
ಪ್ರಕರಣಸಂಗತಿ, ಪ್ರಸಂಗ
ಪ್ರಸಿದ್ಧಹೆಸರಾದ, ಕೀರ್ತಿಪಡೆದ
ಬಗೆಹರಿನೆರವೇರು, ಕೈಗೂಡು
ಮಾಲ್ಮಳಿಗೆ, ಅಂಗಡಿಗಳ ಸಂಕೀರ್ಣ ಯಥಾವತ್ತಾಗಿ - ಸರಿಯಾಗಿ, ಇದ್ದಹಾಗೆ ಶುಲ್ಕ - ಸುಂಕ, ದಂಡ
ಸಮಸ್ಯೆತೊಡಕು, ತೊಂದರೆ
ಸಮೇತಕೂಡಿದ, ಸಹಿತವಾದ
ಸಂಪರ್ಕ ಕೇಂದ್ರಸಂಪರ್ಕ ಕಲ್ಪಿಸುವ ಸ್ಥಳ, ಸೇರುವ ಮುಖ್ಯಸ್ಥಳ
ಸಹಕಾರಪರಸ್ಪರ ಸಹಾಯ, ಒಗ್ಗಟ್ಟಿನಿಂದ ಕೆಲಸ ಮಾಡುವಿಕೆ
ಸಹೋದರಿಅಕ್ಕ ಅಥವಾ ತಂಗಿ, ಒಡಹುಟ್ಟಿದವಳು
ಸಾಕ್ಷಿಕಣ್ಣಾರೆ ಕಂಡವ, ಪುರಾವೆ
ಸೋಜಿಗಆಶ್ಚರ್ಯ, ಕುತೂಹಲ
ವಿಶೇಷಹೆಚ್ಚಿನ ಗುಣ, ಹೆಚ್ಚುಗಾರಿಕೆ
ಹಂಗಿಸುಕೆಣಕು, ಮೂದಲಿಸು
ಹೊಸಬರುಅಪರಿಚಿತರು, ಗುರುತಿಲ್ಲದವರು

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಸೃಜನ ಯಾರಿಗೆ ಪತ್ರವನ್ನು ಬರೆದನು?

    Answer

    ಸೃಜನ ತನ್ನ ಸಹೋದರಿ ಸೌಜನ್ಯಳಿಗೆ ಪತ್ರವನ್ನು ಬರೆದನು.

  2. ೨. ಯಾರಿಗೆ ಮಿಠಾಯಿ ಎಂದರೆ ಇಷ್ಟ?

    Answer

    ಮಿಠಾಯಿ ಎಲ್ಲರಿಗೂ ಇಷ್ಟ, ಅದರಲ್ಲೂ ಮಕ್ಕಳಿಗಂತೂ ಬಲು ಇಷ್ಟ.

  3. ೩. ಮಲ್ಲಜ್ಜಿ ಎಲ್ಲರೊಂದಿಗೆ ಹೇಗೆ ಮಾತನಾಡುತ್ತಾಳೆ?

    Answer

    ಮಲ್ಲಜ್ಜಿ ಎಲ್ಲರೊಂದಿಗೂ ನಗುನಗುತ್ತಾ ಮಾತನಾಡುತ್ತಾಳೆ.

  4. ೪. ಮಲ್ಲಜ್ಜಿಯ ಕೋರ್ಟಿನಲ್ಲಿ ವಕೀಲರ ಶುಲ್ಕ ಎಷ್ಟು?

    Answer

    ಮಲ್ಲಜ್ಜಿಯ ಕೋರ್ಟಿನಲ್ಲಿ ವಕೀಲರ ಶುಲ್ಕ ಮತ್ತು ಕೋರ್ಟು ಶುಲ್ಕ ಯಾವುದೂ ಇಲ್ಲ.

  5. ೫. ಸೃಜನನಿಗೆ ಮಲ್ಲಜ್ಜಿಯ ಮಳಿಗೆ ಯಾವ ಲೋಕದಂತೆ ತೋರಿದೆ?

    Answer

    ಸೃಜನನಿಗೆ ಮಲ್ಲಜ್ಜಿಯ ಮಳಿಗೆ ಜಾದೂ ಲೋಕದಂತೆ ತೋರಿದೆ.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಮಲ್ಲಜ್ಜಿಯ ಮಳಿಗೆಯಲ್ಲಿ ದೊರೆಯುವ ವಸ್ತುಗಳು ಯಾವುವು? ಪಟ್ಟಿಮಾಡಿರಿ.

    Answer

    ಮಲ್ಲಜ್ಜಿಯ ಮಳಿಗೆಯಲ್ಲಿ ಕಡಲೆ, ಪುರಿ, ಕೊಬ್ಬರಿ ಮಿಠಾಯಿಗಳಂತಹ ತಿನಿಸುಗಳು, ಹಿರಿಯರಿಗೆ ಎಲೆ-ಅಡಿಕೆ, ಸಕ್ಕರೆ-ಚಹಾಪುಡಿ, ಊದು-ಕರ್ಪೂರ, ಬೀಗರಿಗೆ ಬಿಸ್ಕೇಟು-ಖಾರ, ಹೆಣ್ಣುಮಕ್ಕಳಿಗೆ ಸ್ನೋ-ಪೌಡರ್, ಮಕ್ಕಳಿಗೆ ಚಾಕಲೇಟು-ಪೆಪ್ಪರಮೆಂಟು ದೊರೆಯುತ್ತವೆ. ಇವುಗಳ ಜೊತೆಗೆ ಪುಸ್ತಕ, ಪೆನ್ನು ಮುಂತಾದ ವಸ್ತುಗಳೂ ಸಿಗುತ್ತವೆ.

  2. ೨. ಮಲ್ಲಜ್ಜಿಯ ನ್ಯಾಯಾಲಯದ ಕುರಿತು ವಿವರಿಸಿರಿ.

    Answer

    ಮಲ್ಲಜ್ಜಿಯ ಮಳಿಗೆಯ ಮುಂದಿನ ಚಪ್ಪಡಿಕಲ್ಲುಗಳೇ ಈ ನ್ಯಾಯಾಲಯದ ಕಟಕಟೆ. ಇಲ್ಲಿ ವಕೀಲರು, ಸಾಕ್ಷಿಗಳು ಬೇಕಿಲ್ಲ ಮತ್ತು ಯಾವ ಶುಲ್ಕವೂ ಇಲ್ಲ. ಮಲ್ಲಜ್ಜಿಯ ತೀರ್ಪು ನ್ಯಾಯಾಧೀಶರ ತೀರ್ಪಿಗೆ ಸಮನಾಗಿರುತ್ತದೆ.

  3. ೩. ಸೃಜನನಿಗೆ ಮಲ್ಲಜ್ಜಿಯ ಮಳಿಗೆ ಜಾದೂಲೋಕವೆನಿಸಿದ್ದು ಏಕೆ?

    Answer

    ಮಲ್ಲಜ್ಜಿಯ ಅಂಗಡಿಯ ಬಾಗಿಲು ಸದಾ ತೆರೆದೇ ಇರುತ್ತದೆ, ಆಕೆ ಯಾವ ಹೊಸ ಮಿಠಾಯಿ ಕೇಳಿದರೂ ಕೊಟ್ಟುಬಿಡುತ್ತಾಳೆ. ವಸ್ತುಗಳನ್ನು ಯಾವಾಗ ವ್ಯಾಪಾರ ಮಾಡುತ್ತಾಳೆ ಮತ್ತು ತರುತ್ತಾಳೆ ಎಂದು ತಿಳಿಯದೆ ಸೋಜಿಗವಾಗಿ, ಅದು ಸೃಜನನಿಗೆ ಜಾದೂ ಲೋಕದಂತೆ ಕಂಡಿತು.

ಇ. ಬಿಟ್ಟ ಸ್ಥಳಗಳನ್ನು ಸರಿಯಾದ ಪದಗಳಿಂದ ತುಂಬಿರಿ.

  1. ೧. ಮಲ್ಲಜ್ಜಿ ನಗುತ್ತಾ ಪ್ರೀತಿಯಿಂದ _________ ಕೊಡುತ್ತಾಳೆ.

    Answer

    ಮಿಠಾಯಿ

  2. ೨. ಅವರ _________ ಸಮೇತ ವಿವರಿಸಿ ಬಿಡುತ್ತಾಳೆ.

    Answer

    ಜಾತಕ

  3. ೩. ಮಕ್ಕಳಿಂದ ಹಿಡಿದು ಮುದುಕರವರೆಗಿನ _________ ದೂರಮಾಡಿ ಬಿಡುತ್ತಾಳೆ.

    Answer

    ದೂರುಗಳನ್ನು

  4. ೪. ಇದರ ಬಾಗಿಲು ಸದಾ _________ ಇರುತ್ತದೆ.

    Answer

    ತೆರೆದೇ

  5. ೫. 'ಮಲ್ಲಜ್ಜಿಯ ಮಳಿಗೆ' ನನಗೆ ಒಂದು _________ ಇದ್ದಂತೆ.

    Answer

    ಜಾದೂ ಲೋಕ

Interactive Lab

ಆಶೀರ್ವಾದಹಾರೈಕೆ
ಕುಟುಂಬಮನೆತನ, ಒಕ್ಕಲು
ಕೋರ್ಟ್ನ್ಯಾಯಕ್ಕಾಗಿ ವಿಚಾರಣೆ ನಡೆಸುವ ಸ್ಥಳ, ನ್ಯಾಯಾಲಯ
ಗೊತ್ತುಪರಿಚಯ, ತಿಳಿದಿರುವುದು
ಚಪ್ಪಡಿಕಲ್ಲುಚಪ್ಪಡಿ, ಹಾಸುಗಲ್ಲು
ಚಿರಪರಿಚಿತಳುದೀರ್ಘಕಾಲದ ಪರಿಚಯವುಳ್ಳವಳು, ಎಲ್ಲರಿಗೂ ಗೊತ್ತಿರುವಾಕೆ
ಜನಪ್ರಿಯಜನರ ಮೆಚ್ಚುಗೆಗೆ ಪಾತ್ರವಾದ
ಜಾತಕ ಸಮೇತಸವಿವರವಾದ ಮಾಹಿತಿಯಿಂದ ಕೂಡಿದ, ಜನ್ಮಕುಂಡಲಿ ವಿವರಗಳಿಂದ ಕೂಡಿದ
ಜಾದೂ ಲೋಕಇಂದ್ರಜಾಲ ನಡೆಯುವ ಸ್ಥಳ, ಮಾಯಾವಿದ್ಯೆಯ ಪ್ರಪಂಚ
ತಂಗುದಾಣತಾತ್ಕಾಲಿಕವಾಗಿ ಉಳಿದುಕೊಳ್ಳುವ ಜಾಗ
ತಲುಪುಮುಟ್ಟು, ಸೇರು
ತೀರ್ಪುನಿರ್ಣಯ, ತೀರ್ಮಾನ
ತುರ್ತುಜರೂರು, ಕೂಡಲೆ
ದರ್ಶನಭೇಟಿ, ಕಾಣುವಿಕೆ
ದುಡ್ಡುರೊಕ್ಕ, ಹಣ
ಪತ್ರಓಲೆ, ಕಾಗದ
ಪಡೆಗಳಿಸು, ದೊರಕಿಸು
ಪತ್ರಿಕೆನಿಯತಕಾಲಿಕೆ, ಬರೆದ ಕಾಗದ
ಪ್ರಕರಣಸಂಗತಿ, ಪ್ರಸಂಗ
ಪ್ರಸಿದ್ಧಹೆಸರಾದ, ಕೀರ್ತಿಪಡೆದ
ಬಗೆಹರಿನೆರವೇರು, ಕೈಗೂಡು
ಮಾಲ್ಮಳಿಗೆ, ಅಂಗಡಿಗಳ ಸಂಕೀರ್ಣ ಯಥಾವತ್ತಾಗಿ - ಸರಿಯಾಗಿ, ಇದ್ದಹಾಗೆ ಶುಲ್ಕ - ಸುಂಕ, ದಂಡ
ಸಮಸ್ಯೆತೊಡಕು, ತೊಂದರೆ
ಸಮೇತಕೂಡಿದ, ಸಹಿತವಾದ
ಸಂಪರ್ಕ ಕೇಂದ್ರಸಂಪರ್ಕ ಕಲ್ಪಿಸುವ ಸ್ಥಳ, ಸೇರುವ ಮುಖ್ಯಸ್ಥಳ
ಸಹಕಾರಪರಸ್ಪರ ಸಹಾಯ, ಒಗ್ಗಟ್ಟಿನಿಂದ ಕೆಲಸ ಮಾಡುವಿಕೆ
ಸಹೋದರಿಅಕ್ಕ ಅಥವಾ ತಂಗಿ, ಒಡಹುಟ್ಟಿದವಳು
ಸಾಕ್ಷಿಕಣ್ಣಾರೆ ಕಂಡವ, ಪುರಾವೆ
ಸೋಜಿಗಆಶ್ಚರ್ಯ, ಕುತೂಹಲ
ವಿಶೇಷಹೆಚ್ಚಿನ ಗುಣ, ಹೆಚ್ಚುಗಾರಿಕೆ
ಹಂಗಿಸುಕೆಣಕು, ಮೂದಲಿಸು
ಹೊಸಬರುಅಪರಿಚಿತರು, ಗುರುತಿಲ್ಲದವರು