CRECT Education

Class 5 Kannada Lesson 13: Brave Commander | KTBS First Language – Learn the Story

Description

Learn the story of General G. G. Bewoor, the 9th Chief of the Indian Army, from the Class 5 Kannada First Language textbook. Beat-by-beat narration, key vocabulary, and the motto 'Action speaks louder than words.'

ಗದ್ಯ (prose) · ಬಸವರಾಜ ಹದ್ದಿ

ಪಠ್ಯFull text

(Photo: A portrait of General G. G. Bewoor in his military uniform) ಭಾರತದಲ್ಲಿ ಅನೇಕ ಜನ ಮೇಧಾವಿಗಳು, ವೀರಯೋಧರು, ವಿಜ್ಞಾನಿಗಳು, ಸಾಧಕರು ಜನ್ಮ ತಾಳಿದ್ದಾರೆ. ಅಂತಹ ಸಾಧಕರ ಸಾಲಿನಲ್ಲಿ ಧೀರ ಸೇನಾನಿ ಮಹಾದಂಡನಾಯಕ ಜನರಲ್ ಜಿ.ಜಿ.ಬೇವೂರರು ಒಬ್ಬರು. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬೇವೂರ ಗ್ರಾಮದವರಾದ ಸರ್. ಗುರುನಾಥ ರಾವ್ ಹಾಗೂ ರುಕ್ಮಿಣಿಬಾಯಿಯವರ ಪುತ್ರನೇ ಗೋಪಾಲರಾವ್. ಇವರು ದಿನಾಂಕ ೧೧-೦೮-೧೯೧೬ ರಂದು ಜನಿಸಿದರು. ತಂದೆಯ ಮಾರ್ಗದರ್ಶನ ತಾಯಿಯ ದೇಶಾಭಿಮಾನಿ ಭಾವನೆಗಳೊಂದಿಗೆ ಗೋಪಾಲರಾಯರು ಬೆಳೆದರು. ರಾಯಲ್ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಸೈನಿಕ ಶಿಕ್ಷಣ ಪಡೆದರು. ಶಿಸ್ತು, ಶಿಕ್ಷಣ, ಕಠಿಣ ಶ್ರಮಗಳಿಂದ ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ 'ಗೌರವಖಡ್ಗ' ಮತ್ತು ಚಿನ್ನದ ಪದಕಗಳನ್ನು ಪಡೆದುಕೊಂಡ ಕೀರ್ತಿ ಅವರದು. ೧೯೩೭ರಲ್ಲಿ ಬೇವೂರರು ಭಾರತೀಯ ಸೇನಾಪಡೆ ಸೇರಿದರು. ಜನರಲ್ ಜಿ.ಜಿ.ಬೇವೂರರೊಳಗಿನ ನಿಜವಾದ ಯೋಧನನ್ನು ದೇಶ ಗುರುತಿಸಿದ್ದು ಬಾಂಗ್ಲಾ ಯುದ್ಧದಲ್ಲಿ. ೧೯೭೧ರಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನಗಳ ನಡುವೆ ಯುದ್ಧ ನಡೆಯಿತು. ಆ ಯುದ್ಧದಲ್ಲಿ ಪಾಕ್ ಸೈನಿಕರು ಮಾನವ ಹಕ್ಕುಗಳನ್ನು ಉಲ್ಲಂಘಿಸಿದರು. ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಬಾಂಗ್ಲಾದೇಶಕ್ಕೆ ಭಾರತದ ಸೇನೆ ಸಹಕರಿಸಿತು. ಆಗ ಬೇವೂರರು (Illustration: General G. G. Bewoor and his wife Radhikabai traveling in a farmer's bullock cart, conversing with villagers and a policeman walking alongside) ಪಶ್ಚಿಮ ಪಾಕಿಸ್ತಾನದ ಕಡೆಗೆ ನುಗ್ಗಿದರು. ಸೇನಾ ತುಕಡಿಯ ಮುಖ್ಯಸ್ಥರಾಗಿ ರಾಜಸ್ಥಾನ ಮತ್ತು ಕಚ್ಛದ ದುರ್ಗಮ ಪ್ರದೇಶಗಳಲ್ಲಿ ಸಾವಿರಾರು ಚದರಮೈಲು ಪಾಕ್ ನೆಲವನ್ನು ಆಕ್ರಮಿಸಿಕೊಂಡರು. ಈ ಸಂದರ್ಭದಲ್ಲಿ ಸೇನಾ ಮಹಾದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರು ಬೇವೂರರನ್ನು ಅಭಿಮಾನದಿಂದ ಬಿಗಿದಪ್ಪಿ ಪ್ರಶಂಸಿಸಿದರು. ಬೇವೂರರ ಸಾಹಸ ದೇಶದಲ್ಲಿ ಮನೆಮಾತಾಯಿತು. ಅವರು ತೋರಿದ ಶೌರ್ಯ ಸಾಹಸಕ್ಕೆ ರಾಷ್ಟ್ರಮಟ್ಟದ ಗೌರವವು ದೊರೆಯಿತು. ಕಾಲೇಜು ವಿದ್ಯಾರ್ಥಿಗಳಿಗೆ ಎನ್.ಸಿ.ಸಿ.ಯು ಕಲಿಕೆಯ ಅಂಗವಾದಾಗ ಬೇವೂರರು ಅದರ ಪ್ರಥಮ ನಿರ್ದೇಶಕರಾದರು. "ಯುವಜನರು ನಾಳೆಯ ದೇಶ ರಕ್ಷಕರಾಗಬೇಕು" ಎಂಬುದು ಅವರ ಬಯಕೆಯಾಗಿತ್ತು. ಅದಕ್ಕಾಗಿ ಅವರು ಹಗಲಿರುಳೆನ್ನದೆ ಶ್ರಮಿಸಿದರು. ೧೯೭೩ ಜನವರಿ ೧೫ರಂದು ಗೋಪಾಲರಾವ್ ಗುರುನಾಥರಾವ್ ಬೇವೂರರು ಭಾರತದ ಭೂಸೇನೆಯ ಒಂಬತ್ತನೆಯ ಮಹಾದಂಡನಾಯಕರಾದರು. ಜನರಲ್ ಜಿ.ಜಿ.ಬೇವೂರರ ಕರ್ತವ್ಯನಿಷ್ಠೆ, ದಕ್ಷ ಆಡಳಿತ ಕಂಡು ಭಾರತ ಸರ್ಕಾರವು ಅವರಿಗೆ 'ಪದ್ಮಭೂಷಣ ಪ್ರಶಸ್ತಿ' ಹಾಗೂ ಪರಮ ವಿಶಿಷ್ಟ ಸೇವಾಪದಕವನ್ನು ಕೊಟ್ಟು ಗೌರವಿಸಿತು. ಮುಂದೆ ಡಾರ್ಜಿಲಿಂಗ್‌ನಲ್ಲಿ ಕಟ್ಟಿಸಿದ ಯುದ್ಧ ಸ್ಮಾರಕ ಭವನಕ್ಕೆ ಜನರಲ್ ಜಿ.ಜಿ.ಬೇವೂರರ ಹೆಸರಿಡಲಾಯಿತು. ಒಮ್ಮೆ ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘಕ್ಕೆ ಜನರಲ್ ಜಿ.ಜಿ.ಬೇವೂರರು ಅತಿಥಿಗಳಾಗಿ ಆಗಮಿಸಿದ್ದರು. ಜಿಲ್ಲಾಧಿಕಾರಿಯವರು ಅವರ ರಕ್ಷಣೆಯ ಜವಾಬ್ದಾರಿಯನ್ನು ಅತ್ಯುತ್ತಮ ರೀತಿಯಲ್ಲಿ ಮಾಡಿದ್ದರು. ಗ್ರಾಮದ ಬೀದಿಯಲ್ಲಿ ಮೆರವಣಿಗೆ ಮಾಡಲೆಂದು ಅಲಂಕೃತ ಜೀಪೊಂದನ್ನು ತರಿಸಿದ್ದರು. ಅದರ ಸುತ್ತ ಬಂದೂಕುಧಾರಿಗಳಾದ ಪೊಲೀಸರನ್ನು ಕಾವಲಿರಿಸಿದ್ದರು. ಅದನ್ನು ಕಂಡ ಜನರಲ್ ಜಿ.ಜಿ.ಬೇವೂರರು, "ನಾನೊಬ್ಬ ಸೈನಿಕ. ನನಗೇಕೆ ರಕ್ಷಣೆ? ಇದು ನನ್ನ ಊರು, ಇವರೆಲ್ಲ ನನ್ನ ಜನ" ಎಂದರು. ಜೀಪಿನಲ್ಲಿ ಕುಳಿತುಕೊಳ್ಳದೆ ತಮ್ಮ ಹೆಂಡತಿ ರಾಧಿಕಾಬಾಯಿಯವರೊಡನೆ ರೈತನ ಗಾಡಿಯೊಂದರಲ್ಲಿ ಹತ್ತಿ ಕುಳಿತರು. ಅನಂತರ ತಮ್ಮ ಊರಿನ ಜನರನ್ನು ಮಾತನಾಡಿಸುತ್ತ ಗ್ರಾಮದ ಓಣಿಗಳಲ್ಲಿ ನಡೆದುಕೊಂಡು ಹೋದರು. ಇದು ಅವರ ಸಜ್ಜನಿಕೆಯನ್ನು ತಿಳಿಸಿಕೊಡುತ್ತದೆ. 'ಮಾತಿಗಿಂತ ಕೃತಿ ಲೇಸು' ಎಂಬ ತತ್ತ್ವ ಜನರಲ್ ಬೇವೂರ ಅವರದು. ನಿವೃತ್ತಿಯ ಅನಂತರವೂ ಬೇವೂರರ ಸೇವೆಯು ಭಾರತ ಸರಕಾರಕ್ಕೆ ಅವಶ್ಯವಾಯಿತು. ಅವರ ಆಡಳಿತ ವೈಖರಿಯನ್ನು ಗುರುತಿಸಿ ಭಾರತ ಸರಕಾರವು ಡೆನ್ಮಾರ್ಕಿನ ರಾಯಭಾರಿಯನ್ನಾಗಿ ಎರಡು ವರ್ಷದ ಅವಧಿಗೆ ನೇಮಿಸಿತು. ಬೇವೂರಿನ ವರಪುತ್ರ ಭಾರತದ ಒಂಬತ್ತನೆಯ ಮಹಾದಂಡನಾಯಕರಾಗಿ ಸೇವೆ ಸಲ್ಲಿಸಿದ ಸಹೃದಯಿಯಾದ ಜಿ.ಜಿ.ಬೇವೂರರು ೧೯೮೯ ಅಕ್ಟೋಬರ್ ೨೪ರಂದು ಇಹಲೋಕ ತ್ಯಜಿಸಿದರು. ಅವರ ಸಾಹಸದ ಗಾಥೆಗಳು ಭಾರತದ ಮಹಾದಂಡನಾಯಕರ ಚರಿತ್ರೆಯಲ್ಲಿ ಅಮರವಾಗಿ ಉಳಿದಿವೆ. **ಕೌಶಲ :** ಬರೆಯುವುದು. **ಸಾಮರ್ಥ್ಯ :** ಸರಳ ಕ್ರಿಯಾತ್ಮಕ ಸಾಂದರ್ಭಿಕ ಭಾಷಾಂಶ ನಿಯಮಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಬರವಣಿಗೆಯಲ್ಲಿ ಬಳಸುವುದು.

"ಮಾತಿಗಿಂತ ಕೃತಿ ಲೇಸು" — "Action is better than words" (or "Deeds speak louder than words"). A great motto for proactive living.

ಪದಗಳ ಅರ್ಥword meanings

KannadaPronunciationMeaning
ಅಲಂಕೃತಅಲಂಕಾರ ಮಾಡಿದ, ಸಿಂಗರಿಸಿದ
ಉತ್ತುಂಗಶ್ರೇಷ್ಠ ಕಾವಲಿರಿಸು - ರಕ್ಷಿಸು ಕೃತಿ - ಕೆಲಸ ಗಾಡಿ - ಚಕ್ಕಡಿ, ಬಂಡಿ
ಗಾಥೆಕತೆ, ಘಟನೆ
ಗ್ರಾಮದ ಓಣಿಹಳ್ಳಿಯ ಬೀದಿ
ಜನ್ಮತಾಳುಹುಟ್ಟು, ಜನಿಸು
ದುರ್ಗಮಹೋಗಲು ಅಸಾಧ್ಯವಾದ
ಫೀಲ್ಡ್ಭೂಭಾಗ
ಫೀಲ್ಡ್ ಮಾರ್ಷಲ್ಭೂಸೇನೆಯಲ್ಲಿ ವಿಶೇಷ ಪರಿಣತಿಯನ್ನು ಪಡೆದವರಿಗೆ ಕೊಡುವ ಅತ್ಯುನ್ನತ ಪದವಿ
ಮಹಾದಂಡನಾಯಕರುಸೇನಾ ವರಿಷ್ಠ, ಸೈನ್ಯದ ಅತಿ ಹಿರಿಯ ಅಧಿಕಾರಿ
ನೇತೃತ್ವಮುಂದಾಳತ್ವ, ಹಿರಿತನ
ಲೇಸುಒಪ್ಪಿತ, ಒಳ್ಳೆಯದು
ಸಜ್ಜನಿಕೆಒಳ್ಳೆಯತನ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಬೇವೂರರು ಯಾವಾಗ ಜನಿಸಿದರು?

    Answer

    ಬೇವೂರರು ೧೧-೦೮-೧೯೧೬ ರಂದು ಜನಿಸಿದರು.

  2. ೨. ಬೇವೂರರ ತಂದೆ ತಾಯಿಯರ ಹೆಸರೇನು?

    Answer

    ಬೇವೂರರ ತಂದೆಯ ಹೆಸರು ಸರ್. ಗುರುನಾಥ ರಾವ್ ಮತ್ತು ತಾಯಿಯ ಹೆಸರು ರುಕ್ಮಿಣಿಬಾಯಿ.

  3. ೩. ಗೋಪಾಲರಾಯರ ಸ್ವಂತ ಊರು ಯಾವುದು?

    Answer

    ಗೋಪಾಲರಾಯರ ಸ್ವಂತ ಊರು ಬಾಗಲಕೋಟೆ ಜಿಲ್ಲೆಯ ಬೇವೂರ ಗ್ರಾಮ.

  4. ೪. ಬೇವೂರರನ್ನು ಬಿಗಿದಪ್ಪಿ ಪ್ರಶಂಸಿಸಿದವರು ಯಾರು?

    Answer

    ಬೇವೂರರನ್ನು ಬಿಗಿದಪ್ಪಿ ಪ್ರಶಂಸಿಸಿದವರು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ.

  5. ೫. ಭಾರತ ಸರಕಾರವು ಬೇವೂರರನ್ನು ಎರಡು ವರ್ಷದ ಅವಧಿಗೆ ಯಾವ ಕಾರ್ಯಕ್ಕೆ ನೇಮಿಸಿತು?

    Answer

    ಭಾರತ ಸರಕಾರವು ಬೇವೂರರನ್ನು ಡೆನ್ಮಾರ್ಕಿನ ರಾಯಭಾರಿಯನ್ನಾಗಿ ಎರಡು ವರ್ಷದ ಅವಧಿಗೆ ನೇಮಿಸಿತು.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಗೋಪಾಲರಾಯರು ಎಲ್ಲಿ ಸೈನಿಕ ಶಿಕ್ಷಣ ಪಡೆದರು?

    Answer

    ಗೋಪಾಲರಾಯರು ರಾಯಲ್ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಸೈನಿಕ ಶಿಕ್ಷಣ ಪಡೆದರು.

  2. ೨. ಬೇವೂರರ ನೇತೃತ್ವದ ಸೈನಿಕ ತುಕಡಿಯ ಸಾಹಸವನ್ನು ವಿವರಿಸಿರಿ?

    Answer

    ಬೇವೂರರ ನೇತೃತ್ವದ ಸೈನಿಕ ತುಕಡಿ ಪಶ್ಚಿಮ ಪಾಕಿಸ್ತಾನದ ಕಡೆಗೆ ನುಗ್ಗಿತು. ರಾಜಸ್ಥಾನ ಮತ್ತು ಕಚ್ಛದ ದುರ್ಗಮ ಪ್ರದೇಶಗಳಲ್ಲಿ ಸಾವಿರಾರು ಚದರಮೈಲು ಪಾಕ್ ನೆಲವನ್ನು ಆಕ್ರಮಿಸಿಕೊಂಡಿತು.

  3. ೩. ಬೇವೂರರ ಸಜ್ಜನಿಕೆಯನ್ನು ಉದಾಹರಣೆಯೊಂದಿಗೆ ತಿಳಿಸಿರಿ.

    Answer

    ಒಮ್ಮೆ ಬೇವೂರಿಗೆ ಭೇಟಿ ನೀಡಿದಾಗ, ಜಿಲ್ಲಾಧಿಕಾರಿಯವರು ಅವರಿಗೆ ರಕ್ಷಣೆ ನೀಡಲು ಜೀಪ್ ತಂದಿದ್ದರು. ಆದರೆ ಬೇವೂರರು 'ನಾನು ಸೈನಿಕ, ನನಗೇಕೆ ರಕ್ಷಣೆ?' ಎಂದು ಹೇಳಿ, ರೈತನ ಗಾಡಿಯಲ್ಲಿ ಸಂಚರಿಸಿ ಜನರೊಡನೆ ಬೆರೆತರು. ಇದು ಅವರ ಸಜ್ಜನಿಕೆಯನ್ನು ತೋರಿಸುತ್ತದೆ.

  4. ೪. ನಿವೃತ್ತಿ ನಂತರವೂ ಬೇವೂರರ ಸೇವೆ ಭಾರತ ಸರಕಾರಕ್ಕೆ ಅವಶ್ಯಕವೆನಿಸಿದ ಸಂದರ್ಭ ಯಾವುದು?

    Answer

    ನಿವೃತ್ತಿ ನಂತರ, ಅವರ ಆಡಳಿತ ವೈಖರಿಯನ್ನು ಗುರುತಿಸಿ ಭಾರತ ಸರಕಾರವು ಅವರನ್ನು ಡೆನ್ಮಾರ್ಕಿನ ರಾಯಭಾರಿಯನ್ನಾಗಿ ನೇಮಿಸಿದ ಸಂದರ್ಭ ಅವರ ಸೇವೆ ಅವಶ್ಯಕವೆನಿಸಿತು.

ಇ. ಬಿಟ್ಟ ಸ್ಥಳಗಳನ್ನು ತುಂಬಿರಿ.

  1. ೧. ಗೋಪಾಲರಾಯರ ತಂದೆ ___________ ತಾಯಿ ___________

    Answer

    ಗೋಪಾಲರಾಯರ ತಂದೆ ಸರ್. ಗುರುನಾಥ ರಾವ್ ತಾಯಿ ರುಕ್ಮಿಣಿಬಾಯಿ.

  2. ೨. ಗೋಪಾಲರಾಯರು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ___________ ಖಡ್ಗ ಮತ್ತು ___________ ಪದಕ ಪಡೆದಿದ್ದರು.

    Answer

    ಗೋಪಾಲರಾಯರು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಗೌರವ ಖಡ್ಗ ಮತ್ತು ಚಿನ್ನದ ಪದಕ ಪಡೆದಿದ್ದರು.

  3. ೩. "ಯುವಜನರು ನಾಳೆಯ ___________ ರಾಗಬೇಕು" ಎಂಬುದು ಅವರ ಬಯಕೆಯಾಗಿತ್ತು.

    Answer

    "ಯುವಜನರು ನಾಳೆಯ ದೇಶ ರಕ್ಷಕರಾಗಬೇಕು" ಎಂಬುದು ಅವರ ಬಯಕೆಯಾಗಿತ್ತು.

  4. ೪. ಡಾರ್ಜಿಲಿಂಗ್‌ನಲ್ಲಿ ಕಟ್ಟಿಸಿದ ___________ ಭವನಕ್ಕೆ ಜಿ.ಜಿ. ಬೇವೂರರ ಹೆಸರಿಟ್ಟಿದ್ದಾರೆ.

    Answer

    ಡಾರ್ಜಿಲಿಂಗ್‌ನಲ್ಲಿ ಕಟ್ಟಿಸಿದ ಯುದ್ಧ ಸ್ಮಾರಕ ಭವನಕ್ಕೆ ಜಿ.ಜಿ. ಬೇವೂರರ ಹೆಸರಿಟ್ಟಿದ್ದಾರೆ.

  5. ೫. "ನಾನೊಬ್ಬ ___________ ನನಗೇಕೆ ರಕ್ಷಣೆ? ಇದು ನನ್ನ ಊರು. ಇವರೆಲ್ಲ ನನ್ನ ___________ " ಎಂದರು.

    Answer

    "ನಾನೊಬ್ಬ ಸೈನಿಕ ನನಗೇಕೆ ರಕ್ಷಣೆ? ಇದು ನನ್ನ ಊರು. ಇವರೆಲ್ಲ ನನ್ನ ಜನ" ಎಂದರು.

Interactive Lab

ಅಲಂಕೃತಅಲಂಕಾರ ಮಾಡಿದ, ಸಿಂಗರಿಸಿದ
ಉತ್ತುಂಗಶ್ರೇಷ್ಠ ಕಾವಲಿರಿಸು - ರಕ್ಷಿಸು ಕೃತಿ - ಕೆಲಸ ಗಾಡಿ - ಚಕ್ಕಡಿ, ಬಂಡಿ
ಗಾಥೆಕತೆ, ಘಟನೆ
ಗ್ರಾಮದ ಓಣಿಹಳ್ಳಿಯ ಬೀದಿ
ಜನ್ಮತಾಳುಹುಟ್ಟು, ಜನಿಸು
ದುರ್ಗಮಹೋಗಲು ಅಸಾಧ್ಯವಾದ
ಫೀಲ್ಡ್ಭೂಭಾಗ
ಫೀಲ್ಡ್ ಮಾರ್ಷಲ್ಭೂಸೇನೆಯಲ್ಲಿ ವಿಶೇಷ ಪರಿಣತಿಯನ್ನು ಪಡೆದವರಿಗೆ ಕೊಡುವ ಅತ್ಯುನ್ನತ ಪದವಿ
ಮಹಾದಂಡನಾಯಕರುಸೇನಾ ವರಿಷ್ಠ, ಸೈನ್ಯದ ಅತಿ ಹಿರಿಯ ಅಧಿಕಾರಿ
ನೇತೃತ್ವಮುಂದಾಳತ್ವ, ಹಿರಿತನ
ಲೇಸುಒಪ್ಪಿತ, ಒಳ್ಳೆಯದು
ಸಜ್ಜನಿಕೆಒಳ್ಳೆಯತನ