ಪದ್ಯ (poem) · ದ. ರಾ. ಬೇಂದ್ರೆ
ಪಠ್ಯFull text
"ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ." — "Animal protection is the responsibility of us all."
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಕುಣಿಕೋಲು | — | ಕುಣಿಸುವವನು ಹಿಡಿದುಕೊಳ್ಳುವ ಕೋಲು |
| ಕೈಕಡಗ | — | ಕೈಗೆ ಹಾಕಿಕೊಳ್ಳುವ ಬಳೆ ಜಾಂಬವಂತ - ಕರಡಿ |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
೧. ಕರಡಿಯನ್ನು ಕುಣಿಸುವವನ ವೇಷಭೂಷಣ ಹೇಗಿತ್ತು?
Answerಕರಡಿಯನ್ನು ಕುಣಿಸುವವನು ಕಬ್ಬಿಣದ ಕೈಕಡಗ, ಕುಣಿಕೋಲು ಮತ್ತು ಕೂದಲು ಕಂಬಳಿ ಹೊದ್ದು ಬಂದಿದ್ದನು.
೨. ಕರಡಿಯು ಕಾಡಿನಲ್ಲಿ ಏನುಂಡು ಬೆಳೆದಿದೆ?
Answerಕರಡಿಯು ಕಾಡಿನಲ್ಲಿ ಜೇನು ಉಂಡು ಬೆಳೆದಿದೆ.
೩. ಕರಡಿಯು ಏನು ಮಾಡಿದರೆ ಧಣಿಯು ದಾನವನ್ನು ಕೊಡುತ್ತಾನೆ?
Answerಕರಡಿಯು ಧಣಿಯರ ಮನೆಯ ಮುಂದೆ ಕಾವಲು ಮಾಡಿದರೆ ಧಣಿಯು ದಾನವನ್ನು ಕೊಡುತ್ತಾನೆ.
೪. ಕರಡಿಯು ಕೈಮುಗಿದು ಏನೆಂದು ಹಾರೈಸುತ್ತದೆ?
Answerಕುಣಿಸುವವರ ಹೊಟ್ಟಿ ತಣ್ಣಗಾಗಲಿ ಎಂದು ಕರಡಿಯು ಕೈಮುಗಿದು ಹಾರೈಸುತ್ತದೆ.
೫. ಕರಡಿಯ ಕುಣಿತಕ್ಕಿಂತ ಯಾರ ಬುದ್ಧಿಯ ಕುಣಿತ ಮಿಗಿಲಾದುದು?
Answerಕರಡಿಯ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ ಮಿಗಿಲಾದುದು.
ಆ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.
೧. ಕಬ್ಬಿಣ ________________________________________
Answerಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
________________________________________
Answerಕಂಬಳಿ ಹೊದ್ದಾಂವ ಬಂದಾನ!
________________________________________
Answerಗುಣುಗುಣುಗುಟ್ಟುತ ಕಡಗವ ಕುಟ್ಟುತ
________________________________________ ನಿಂದಾನ!
Answerಕರಡಿಯನಾಡಿಸುತ ನಿಂದಾನ!
೨. ಈ ಮನಷಾ ________________________________________
Answerಈ ಮನಷಾ ಎಂದಿಂದೊ ಕವಲೆತ್ತು ಕೋಡಗ
________________________________________
Answerತನಗಾಗಿ ಕುಣಿಸುತ್ತ ನಡದಾನ.
________________________________________
Answerಕರಡೀ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
________________________________________ ನುಡಿದಾನ.
Answerಮಿಗಿಲಹುದು ಕವಿ ಕಂಡು ನುಡಿದಾನ.