ಗದ್ಯ (prose/play) · ಸಮಿತಿ ರಚನೆ (Committee-authored)
ಪಠ್ಯFull text
"ನೀರಿನಿಂದ ಉಸಿರು ನೀರಿನಿಂದ ಹಸಿರು." — "From water comes breath, from water comes greenery (life)." A great line emphasizing that preserving nature preserves us.
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಅಂತರ್ಧಾನ | — | ಕಣ್ಮರೆಯಾಗು, ಮಾಯವಾಗು |
| ಅನಾಹುತ | — | ತೊಂದರೆ, ಅಪಾಯ |
| ಆತಂಕ | — | ಭಯ, ತಳಮಳ |
| ಕೊಳಕು | — | ಮಲಿನ, ಗಲೀಜು |
| ಗುಳ್ಳೆ | — | ಬೊಬ್ಬೆ, ಬೊಕ್ಕೆ |
| ಚಿಕಿತ್ಸೆ | — | ಆರೈಕೆ, ಶುಶ್ರೂಷೆ |
| ಚಿಂತೆ | — | ಯೋಚನೆ, ದುಃಖ |
| ಜಲಚರ | — | ನೀರಿನಲ್ಲಿ ವಾಸಿಸುವ ಜೀವಿಗಳು |
| ತವಕ | — | ಆತುರ, ತರಾತುರಿ |
| ತಾಕೀತು | — | ಕಟ್ಟಪ್ಪಣೆ, ಎಚ್ಚರಿಕೆ |
| ತುರಿಕೆ | — | ನವೆ, ಕೆರೆತ |
| ದೌರ್ಜನ್ಯ | — | ದಬ್ಬಾಳಿಕೆ, ಹಿಂಸೆ |
| ಧುತ್ತನೆ | — | ಏಕಾಏಕಿ, ಇದ್ದಕ್ಕಿದ್ದಂತೆ |
| ಪಣತೊಡು | — | ದೃಢನಿರ್ಧಾರ ಕೈಗೊಳ್ಳು, ಪ್ರತಿಜ್ಞೆ ಮಾಡು |
| ಮಾಲಿನ್ಯ ರಹಿತ | — | ಮಲಿನತೆಯಿಲ್ಲದ, ಕೊಳೆಯಿಲ್ಲದ |
| ಮೂರ್ಛೆ | — | ಪ್ರಜ್ಞೆತಪ್ಪು, ಎಚ್ಚರತಪ್ಪು |
| ವಿಷಕನ್ಯೆ | — | ಇಡೀ ದೇಹ ವಿಷದಿಂದ ಕೂಡಿದವಳು |
| ಸಂಕುಲ | — | ಸಮೂಹ, ಗುಂಪು |
| ಸೋಂಕು | — | ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗ |
| ಶೋಷಣೆ | — | ತುಳಿತ, ಹಿಂಸೆ |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
೧. ಯಾರಿಗೆ ಮಾಲಿನ್ಯದ ಸೋಂಕು ತಗುಲಿತು?
Answerನಮ್ಮ ಗೆಳೆಯ ಗೆಳತಿಯರಿಗೆ ಮಾಲಿನ್ಯದ ಸೋಂಕು ತಗುಲಿತು.
೨. ಗೆಳೆಯ ಗೆಳತಿಯರು ಎಲ್ಲಿ ಸ್ನಾನ ಮಾಡಿದರು?
Answerಗೆಳೆಯ ಗೆಳತಿಯರು ಊರಿನ ಪಕ್ಕದ ನದಿಯಲ್ಲಿ ಸ್ನಾನ ಮಾಡಿದರು.
೩. ಸ್ನಾನ ಮಾಡಿದವರನ್ನು ಆಸ್ಪತ್ರೆಗೆ ಸೇರಿಸಿದವರು ಯಾರು?
Answerಸ್ನಾನ ಮಾಡಿದವರನ್ನು ದಾರಿಹೋಕರು ಆಸ್ಪತ್ರೆಗೆ ಸೇರಿಸಿದರು.
೪. ನದಿ ಮಧ್ಯದಿಂದ ಯಾರು ಧುತ್ತನೆ ಪ್ರತ್ಯಕ್ಷಳಾದಳು?
Answerನದಿ ಮಧ್ಯದಿಂದ ಜಲದೇವತೆ ಧುತ್ತನೆ ಪ್ರತ್ಯಕ್ಷಳಾದಳು.
೫. ಮಕ್ಕಳು ಯಾರ ಸಹಕಾರದೊಂದಿಗೆ ನದಿ ಸ್ವಚ್ಛತೆಯ ಜವಾಬ್ದಾರಿಯನ್ನು ವಹಿಸಿಕೊಂಡರು?
Answerಮಕ್ಕಳು ತಮ್ಮ ಹೆತ್ತವರ ಹಾಗೂ ಊರವರ ಸಹಕಾರದೊಂದಿಗೆ ನದಿ ಸ್ವಚ್ಛತೆಯ ಜವಾಬ್ದಾರಿಯನ್ನು ವಹಿಸಿಕೊಂಡರು.
ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ
೧. ಮಕ್ಕಳು ಏಕೆ ನದಿಯಲ್ಲಿ ಸ್ನಾನ ಮಾಡಿದರು?
Answerಮಕ್ಕಳು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಆಟವಾಡಿದರು. ಅನಂತರ ಸೆಕೆಯನ್ನು ತಾಳಲಾರದೆ ಅವರು ನದಿಯಲ್ಲಿ ಸ್ನಾನ ಮಾಡಿದರು.
೨. ಸ್ನಾನದ ಬಳಿಕ ಮಕ್ಕಳು ಸ್ಥಿತಿ ಏನಾಗಿತ್ತು ?
Answerಸ್ನಾನದ ನಂತರ ಅವರ ಮೈಮೇಲೆಲ್ಲಾ ದಪ್ಪ ಗುಳ್ಳೆಗಳು ಎದ್ದು ವಿಪರೀತ ತುರಿಕೆ ಮತ್ತು ನೋವು ಉಂಟಾಯಿತು. ಅವರು ನೋವು ತಾಳಲಾರದೆ ದಂಡೆಯಲ್ಲಿ ಬಿದ್ದು ಹೊರಳಾಡಿದರು.
೩. ರೆಹಮಾನ್ ಜಲದೇವತೆಗೆ ಏನೆಂದು ಹೇಳಿದ?
Answerರೆಹಮಾನ್ ಜಲದೇವತೆಗೆ, 'ನೀನು ಕಲುಷಿತಗೊಂಡಿರುವೆ. ನಿನ್ನ ನೀರನ್ನು ಕುಡಿಯಬಾರದು ಮತ್ತು ಸ್ನಾನ ಮಾಡಬಾರದು ಎಂದು ವೈದ್ಯರು ಹೇಳಿದ್ದಾರೆ. ನಮ್ಮ ಗೆಳೆಯರು ನಿನ್ನಲ್ಲಿ ಸ್ನಾನ ಮಾಡಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ' ಎಂದು ಹೇಳಿದ.
೪. ನದಿ ಶುದ್ಧವಾಗಿ ಹರಿಯುವಂತಾಗಲು ಏನು ಮಾಡಬಹುದು?
Answerನದಿಯ ಮೇಲಿನ ದೌರ್ಜನ್ಯ ಸಂಪೂರ್ಣವಾಗಿ ನಿಲ್ಲಬೇಕು. ಎಲ್ಲರೂ ಸೇರಿ ನದಿಯನ್ನು ಶುದ್ಧಗೊಳಿಸಲು ಶ್ರಮಿಸಬೇಕು. ಮಲಿನ ವಸ್ತುಗಳು ನದಿಗೆ ಸೇರದಂತೆ ತಡೆಯಬೇಕು.
೫. ಜಲದೇವತೆ, 'ನನಗಾಗಿ ನೀವೇನು ಮಾಡಬಲ್ಲಿರಿ?' ಎಂದು ನಿಮ್ಮ ಬಳಿ ಕೇಳಿದರೆ ನಿಮ್ಮ ಉತ್ತರವೇನು?
Answerನಾನು ನದಿಯನ್ನು ಮಾಲಿನ್ಯದಿಂದ ರಕ್ಷಿಸಲು ಶ್ರಮಿಸುತ್ತೇನೆ. ಯಾವುದೇ ಕಸವನ್ನು, ಕೊಳಚೆ ನೀರನ್ನು ನದಿಗೆ ಬಿಡದಂತೆ ಎಚ್ಚರ ವಹಿಸುತ್ತೇನೆ. ಇತರರಿಗೂ ಈ ಬಗ್ಗೆ ತಿಳಿಸುತ್ತೇನೆ.
ಇ. ಕೊಟ್ಟಿರುವ ಪದಗಳಲ್ಲಿ ಸರಿಯಾದ ಉತ್ತರ ಆಯ್ಕೆ ಮಾಡಿ ಬರೆಯಿರಿ.
೧. ಮಕ್ಕಳ ಮೈಮೇಲೆಲ್ಲಾ ದಪ್ಪದಪ್ಪ ಗುಳ್ಳೆಗಳು ಎದ್ದು \_\_\_\_\_\_\_ ಪ್ರಾರಂಭವಾಯಿತು.
Answerತುರಿಕೆ
(೧. ನೋವು ೨. ತುರಿಕೆ ೩. ಸಂತೋಷ ೪. ಆಸಕ್ತಿ)
೨. ಮಕ್ಕಳು ಬೆಳಗ್ಗೆ \_\_\_\_\_\_\_ ಹೋಗಿದ್ದರು.
Answerಸಂತೋಷ
(೧. ಸ್ನಾನಮಾಡಲು ೨. ಕೆಲಸಮಾಡಲು ೩. ಆಟವಾಡಲು ೪. ಚಿತ್ರಬರೆಯಲು)
೩. ಮಲಿನ ನದಿಯು ಮನುಷ್ಯರ ಜೀವಕ್ಕೆ \_\_\_\_\_\_\_
Answerನೋವು
(೧. ಉಪಕಾರಿ ೨. ಸಹಕಾರಿ ೩. ಅಪಾಯಕಾರಿ ೪. ಆರೋಗ್ಯಕಾರಿ)
೪. ನನ್ನ ಮೇಲಾಗುತ್ತಿರುವ ಮನುಷ್ಯರ \_\_\_\_\_\_\_ ಸಂಪೂರ್ಣವಾಗಿ ನಿಲ್ಲಬೇಕು.
Answerಆಸಕ್ತಿ
(೧. ಸೌಜನ್ಯ ೨. ಕಾರುಣ್ಯ ೩. ಪ್ರೀತಿ ೪. ದೌರ್ಜನ್ಯ)