CRECT Education

Class 5 Kannada Lesson 2: Sorrow of the River | KTBS - Learn the Story

Description

Beat-by-beat English narration, Kannada quotes, and vocabulary building for the play 'ನದಿಯ ಅಳಲು' (Sorrow of the River) from the Class 5 KTBS First Language textbook.

ಗದ್ಯ (prose/play) · ಸಮಿತಿ ರಚನೆ (Committee-authored)

ಪಠ್ಯFull text

[ಶಾಲಾ ಮಕ್ಕಳು ಗುಂಪುಗುಂಪಾಗಿ ಸೇರಿದ್ದಾರೆ. ಎಲ್ಲರ ಮುಖದಲ್ಲೂ ಆತಂಕ. ಆಸ್ಪತ್ರೆಯಲ್ಲಿ ದಾಖಲಾಗಿರುವ ಸಹಪಾಠಿಗಳ ಆರೋಗ್ಯವನ್ನು ತಿಳಿಯುವ ತವಕ. ಮಕ್ಕಳು ತಮ್ಮ ತಮ್ಮಲ್ಲಿಯೇ ಸಂಭಾಷಿಸುತ್ತಿದ್ದಾರೆ.] ಕಲಾವತಿ : ಎಂಥ ಅನಾಹುತ ನಡೆದುಹೋಯಿತು! ನಮ್ಮ ಗೆಳೆಯ ಗೆಳತಿಯರಿಗೆ ಹೀಗೆ ಆಗಬಾರದಿತ್ತು. ಸ್ನೇಹ : ಅವರಿಗೆ ಏನಾಯಿತು? ಮನು : ಅಯ್ಯೋ! ನಿನಗೆ ತಿಳಿದಿಲ್ಲವೆ? ಈಜಲು ಹೋದ ಅವರೆಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾಂತಲೆ : ಆಸ್ಪತ್ರೆಗೆ ದಾಖಲಾಗಲು ಅವರಿಗೆ ಏನಾಗಿತ್ತು? ಸಲೀಮುಲ್ಲಾ : ನಿನ್ನೆ ಭಾನುವಾರ ಶಾಲೆಗೆ ರಜೆ ಇತ್ತಲ್ಲವೇ? ಅವರೆಲ್ಲರೂ ಬೆಳಿಗ್ಗೆ ಆಟವಾಡಲು ಹೋಗಿದ್ದರು. ಮಧ್ಯಾಹ್ನದವರೆಗೂ ಆಟವಾಡಿ ಅನಂತರ ಸೆಕೆಯನ್ನು ತಾಳಲಾರದೆ ಊರಿನ ಪಕ್ಕದ ನದಿಯಲ್ಲಿ ಸ್ನಾನ ಮಾಡಿದರು. ಪರಿಣಾಮವಾಗಿ ಅವರ ಮೈಮೇಲೆಲ್ಲಾ ದಪ್ಪ ದಪ್ಪ ಗುಳ್ಳೆಗಳು ಎದ್ದು ವಿಪರೀತ ತುರಿಕೆ ಪ್ರಾರಂಭವಾಯಿತು. ನೋವು ತಾಳಲಾರದೆ ದಂಡೆಯಲ್ಲಿ ಬಿದ್ದು ಹೊರಳಾಡಿದರು. ಯಾರೋ ದಾರಿಹೋಕರು ನರಳಾಟ ಕಂಡು ಅವರನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದರು. ಅವರ ಆರೋಗ್ಯ ತೀರ ಹದಗೆಟ್ಟಿತ್ತು. (ಮಕ್ಕಳು ಆಸ್ಪತ್ರೆಗೆ ಬರುತ್ತಾರೆ. ವೈದ್ಯರು ಪರೀಕ್ಷಾ ಕೊಠಡಿಯಿಂದ ಹೊರಬರುತ್ತಾರೆ.) ದಿಲೀಪ್ : ನಮ್ಮ ಗೆಳೆಯರ ಸ್ಥಿತಿ ಹೇಗಿದೆ ಡಾಕ್ಟರ್? ವೈದ್ಯರು : ಇನ್ನೂ ಏನನ್ನು ಹೇಳುವಂತಿಲ್ಲ ಮಕ್ಕಳೇ! ಆದರೆ ಚಿಂತೆಗೆ ಕಾರಣವಿಲ್ಲ ಅಂತ ತೋರುತ್ತದೆ. ರಮ್ಯ : ಅವರಿಗೆ ಏನಾಗಿತ್ತು ಡಾಕ್ಟರ್? ವೈದ್ಯರು : ಅವರಿಗೆ ನದಿಯ ನೀರಿನ ಮಾಲಿನ್ಯದ ಸೋಂಕು ತಗುಲಿದೆ. ಪರಿಣಾಮವಾಗಿ ಇಡೀ ದೇಹದಲ್ಲಿ ಗುಳ್ಳೆಗಳೆದ್ದಿವೆ. ತುರಿಕೆ ತಡೆಯಲಾರದೆ ಮೂರ್ಛೆಹೋಗಿದ್ದಾರೆ. ದೀಪಕ್ : ಅವರ ಜೀವಕ್ಕೆ ಏನೂ ಅಪಾಯವಿಲ್ಲ ತಾನೆ? ವೈದ್ಯರು : ಚಿಂತಿಸಬೇಡಿ ಮಕ್ಕಳೇ, ಸಕಾಲದಲ್ಲಿ ಆಸ್ಪತ್ರೆಗೆ ಬಂದ ಕಾರಣ ಸೂಕ್ತ ಚಿಕಿತ್ಸೆ ನೀಡಿದ್ದೇನೆ. ರೀಟಾ : ನಾವು ಅವರನ್ನು ನೋಡಬಹುದೇ? ವೈದ್ಯರು : ಈಗ ಬೇಡ ಮಕ್ಕಳೇ, ಸಂಜೆ ಬನ್ನಿ. (ವೈದ್ಯರು ಹೇಳಿದ ಮಾತುಗಳನ್ನು ಕೇಳಿದ ಮಕ್ಕಳು ನದಿಯ ದಂಡೆಗೆ ಬರುತ್ತಾರೆ.) ಭವಾನಿ : ಈ ನದಿಯ ನೀರು ಎಷ್ಟೊಂದು ಕೊಳಕಾಗಿದೆ? ಮಮತ : ಅಬ್ಬಾ! ಈ ಕೆಟ್ಟ ನೀರಿಗೆ ಅವರೇಕೆ ಇಳಿದರು? ಸುಜಾತ : ಸೆಕೆ ತಡೆಯಲು ಆಗಲಿಲ್ಲವೋ ಏನೊ! ಅಮಿತ್ : ಇದು ಮಲಿನಗೊಂಡ ನದಿ. ಇಂತಹ ನದಿಗಳು ಜೀವಸಂಕುಲಕ್ಕೆ ಅಪಾಯಕಾರಿ. (ಮಕ್ಕಳೆಲ್ಲರು ನದಿಯ ಬಗ್ಗೆ ತಾತ್ಸಾರವಾಗಿ ಮಾತನಾಡುತ್ತ ಹೀಯಾಳಿಸತೊಡಗುತ್ತಾರೆ. ಇದ್ದಕ್ಕಿದ್ದಂತೆ ಕೊಳೆ, ಕೆಸರಿನಿಂದ ಕೂಡಿದ ಜಲದೇವತೆ ನೀರಿನ ಮಧ್ಯದಿಂದ ಧುತ್ತನೆ ಪ್ರತ್ಯಕ್ಷಳಾಗುತ್ತಾಳೆ. ಮಕ್ಕಳೆಲ್ಲ ಭಯಪಡುತ್ತಾರೆ.) ಮಕ್ಕಳು : ಯಾರಿವಳು? ಎಷ್ಟು ಅಸಹ್ಯವಾಗಿದ್ದಾಳೆ? ಜಲದೇವತೆ : ನಾನು ಜಲದೇವತೆ ಮಕ್ಕಳೇ. ಮಕ್ಕಳು : ಛೀ! ಛೀ! ಜಲದೇವತೆ ಹೀಗಿರುತ್ತಳೆಯೆ? ನಿನ್ನನ್ನು ನೋಡಿದರೆ ನಮಗೆ ಅಸಹ್ಯವಾಗುತ್ತದೆ. ಜಲದೇವತೆ : ಏಕೆ? ನಾನು ನಿಮಗೇನು ಮಾಡಿರುವೆ? ನೀವೇಕೆ ಅಸಹ್ಯ ಪಟ್ಟುಕೊಳ್ಳುತ್ತಿದ್ದೀರಿ? ನನ್ನಿಂದ ನೀವು ಹಲವು ಪ್ರಯೋಜನ ಪಡೆದಿಲ್ಲವೆ? ರೆಹಮಾನ್ : ಎಲ್ಲಾ ಸರಿ. ಆದರೆ ಈಗ ನೀನು ಕಲುಷಿತಗೊಂಡಿರುವೆ. ನಿನ್ನ ನೀರನ್ನು ಕುಡಿಯಬಾರದಂತೆ, ನಿನ್ನಲ್ಲಿ ಸ್ನಾನ ಮಾಡಬಾರದಂತೆ. ವೈದ್ಯರೇ ನಮಗೆ ಈ ವಿಚಾರ ತಿಳಿಸಿದ್ದಾರೆ. ಅಲ್ಲದೆ ನಮ್ಮ ಗೆಳೆಯ, ಗೆಳತಿಯರು ನಿನ್ನಲ್ಲಿ ಸ್ನಾನ ಮಾಡಿ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ. ಜಲದೇವತೆ : ಮಕ್ಕಳೇ, ಇದಕ್ಕೆಲ್ಲ ಕಾರಣ ನಾನಲ್ಲ ನೀವೇ! ರಘು : ನಾವೆ? ಜಲದೇವತೆ : ನೀವು ಅಂದ್ರೆ-ನಿಮ್ಮವರು. ಮನೋಹರ : ನಮ್ಮವರೇನು ಶುದ್ಧಳಾಗಿ ಹರಿಯಬಾರದೆಂದು ತಾಕೀತು ಮಾಡಿದ್ದಾರೆಯೇ? ನಿನ್ನ ನೀರಿನಿಂದ ನಮಗೀಗ ಉಳಿಗಾಲವಿಲ್ಲ. ಜಲದೇವತೆ : ಇಲ್ಲ ಮಕ್ಕಳೇ, ನೀವು ನನ್ನ ಬಗ್ಗೆ ತಪ್ಪು ತಿಳಿದಿದ್ದೀರಿ. ನನ್ನ ಮಾತುಗಳನ್ನು ಕೇಳಿ. ಪರಿಶುದ್ಧಳಾಗಿ ಹರಿಯುವ ನನ್ನನ್ನು ಕಲುಷಿತಗೊಳಿಸಿದವರು ಮನುಷ್ಯರೇ. ಬಹಳ ಹಿಂದಿನಿಂದ ಇತ್ತೀಚಿನವರೆಗೂ ಮಾಲಿನ್ಯರಹಿತಳಾಗಿ ಹರಿಯುತ್ತಿದ್ದೆ. ಆಗ ಈ ಮನುಷ್ಯರು ನನ್ನ ನೀರನ್ನು ಕುಡಿಯುತ್ತಿದ್ದರು. ಆಹಾರ ತಯಾರಿಕೆಗೆ ಬಳಸುತ್ತಿದ್ದರು, ಬೇಸಾಯಕ್ಕೆ ಉಪಯೋಗಿಸುತ್ತಿದ್ದರು. ನನ್ನಲ್ಲಿ ಲೆಕ್ಕವಿಲ್ಲದಷ್ಟು ಜಲಚರ ಜೀವಿಗಳಿದ್ದು ಎಲ್ಲವೂ ಸಂತೋಷದಿಂದ ಇದ್ದವು. ಆದರೆ ಈಗ ನಾನು ಪರಿಶುದ್ಧಳಾಗಿಲ್ಲ. ನನ್ನನ್ನು ಮನುಷ್ಯರು ಮನಬಂದಂತೆ ಬಳಸುತ್ತಿದ್ದಾರೆ. ಅನೇಕ ಕಾರ್ಖಾನೆಗಳನ್ನು ನನ್ನ ದಂಡೆಯಲ್ಲಿ ಸ್ಥಾಪಿಸಿ ಅದರಿಂದ ಹೊರಬರುವ ರಾಸಾಯನಿಕ ಪದಾರ್ಥಗಳನ್ನು ಮತ್ತು ಕಸದ ರಾಶಿಗಳನ್ನು ನನ್ನೊಳಕ್ಕೆ ಎಸೆಯುತ್ತಿದ್ದಾರೆ. ಊರಿನ ಸಮಗ್ರ ಕೊಳಚೆ ನೀರನ್ನು ನನ್ನೊಳಕ್ಕೆ ಹರಿಯಬಿಟ್ಟಿದ್ದಾರೆ. ಇಷ್ಟೆಲ್ಲಾ ಶೋಷಣೆಗೆ ಬಲಿಯಾದ ನಾನು ಹೇಗೆ ಪರಿಶುದ್ಧಳಾಗಿ ಹರಿಯಲು ಸಾಧ್ಯ? ನೀವೇ ಯೋಚಿಸಿ ಮಕ್ಕಳೇ. ಮಕ್ಕಳು : ನೀನು ಹೇಳುತ್ತಿರುವುದಾದರೂ ಏನು? ಜಲದೇವತೆ : ನಾನು ಹೇಳುವುದಿಷ್ಟೇ: ಮನುಷ್ಯರು ಹೀಗೆಯೇ ಮಾಲಿನ್ಯ ಮಾಡುವುದನ್ನು ಮುಂದುವರಿಸಿದ್ದಾದರೆ ನಾನು 'ವಿಷಕನ್ಯೆ' ಎಂಬ ಪಟ್ಟ ಧರಿಸುವ ಕಾಲ ದೂರವಿಲ್ಲ. ನಾನು ಯಾರ ಬಳಿ ನನ್ನ ನೋವನ್ನು ಹೇಳಿಕೊಳ್ಳಲಿ? ಮಕ್ಕಳು : (ಚಿಂತಾಕ್ರಾಂತರಾಗಿ) ದೇವತೆಯೇ, ನೀನು ಮತ್ತೆ ಮೊದಲಿನಂತಾಗಲು ಸಾಧ್ಯವಿಲ್ಲವೇ? ಜಲದೇವತೆ : ಇದೆ ಮಕ್ಕಳೇ, ನನ್ನ ಮೇಲಾಗುತ್ತಿರುವ ದೌರ್ಜನ್ಯ ಸಂಪೂರ್ಣವಾಗಿ ನಿಲ್ಲಬೇಕು. ಎಲ್ಲರೂ ನನ್ನನ್ನು ಶುದ್ಧಗೊಳಿಸಲು ಶ್ರಮಿಸಬೇಕು. ನನ್ನಲ್ಲಿ ಯಾವುದೇ ಬಗೆಯ ಮಲಿನ ವಸ್ತು ಸೇರದಂತೆ ನೋಡಿಕೊಂಡರೆ ಮೊದಲಿನಂತೆಯೇ ಪರಿಶುದ್ಧಳಾಗಿ ಹರಿಯಬಲ್ಲೆ. ಹಾಗಾದರೆ ಈಗ ಹೇಳಿ ಮಕ್ಕಳೇ, ನನಗಾಗಿ ನೀವೇನು ಮಾಡಬಲ್ಲಿರಿ? ಮಕ್ಕಳೆಲ್ಲ : ತಾಯಿ ನಾವೆಲ್ಲರೂ ನಿನ್ನ ಮಾಲಿನ್ಯ ತಡೆಯಲು ಶ್ರಮಿಸುತ್ತೇವೆ. ಇಂದಿನಿಂದಲೇ ಪಣತೊಟ್ಟು ನಿನ್ನನ್ನು ಪರಿಶುದ್ಧವಾಗಿಸಲು ಪ್ರಯತ್ನಿಸುತ್ತೇವೆ. ಜಲದೇವತೆ : ಧನ್ಯ ಮಕ್ಕಳೇ, ಧನ್ಯ. (ಅಂತರ್ಧಾನಳಾಗುವಳು.) (ಮಕ್ಕಳು ತಮ್ಮ ಹೆತ್ತವರ ಹಾಗೂ ಊರವರ ಸಹಕಾರದೊಂದಿಗೆ ನದಿಯನ್ನು ಶುಚಿಯಾಗಿಡುವ ಜವಾಬ್ದಾರಿಯನ್ನು ವಹಿಸಿಕೊಂಡರು.)

"ನೀರಿನಿಂದ ಉಸಿರು ನೀರಿನಿಂದ ಹಸಿರು." — "From water comes breath, from water comes greenery (life)." A great line emphasizing that preserving nature preserves us.

ಪದಗಳ ಅರ್ಥword meanings

KannadaPronunciationMeaning
ಅಂತರ್ಧಾನಕಣ್ಮರೆಯಾಗು, ಮಾಯವಾಗು
ಅನಾಹುತತೊಂದರೆ, ಅಪಾಯ
ಆತಂಕಭಯ, ತಳಮಳ
ಕೊಳಕುಮಲಿನ, ಗಲೀಜು
ಗುಳ್ಳೆಬೊಬ್ಬೆ, ಬೊಕ್ಕೆ
ಚಿಕಿತ್ಸೆಆರೈಕೆ, ಶುಶ್ರೂಷೆ
ಚಿಂತೆಯೋಚನೆ, ದುಃಖ
ಜಲಚರನೀರಿನಲ್ಲಿ ವಾಸಿಸುವ ಜೀವಿಗಳು
ತವಕಆತುರ, ತರಾತುರಿ
ತಾಕೀತುಕಟ್ಟಪ್ಪಣೆ, ಎಚ್ಚರಿಕೆ
ತುರಿಕೆನವೆ, ಕೆರೆತ
ದೌರ್ಜನ್ಯದಬ್ಬಾಳಿಕೆ, ಹಿಂಸೆ
ಧುತ್ತನೆಏಕಾಏಕಿ, ಇದ್ದಕ್ಕಿದ್ದಂತೆ
ಪಣತೊಡುದೃಢನಿರ್ಧಾರ ಕೈಗೊಳ್ಳು, ಪ್ರತಿಜ್ಞೆ ಮಾಡು
ಮಾಲಿನ್ಯ ರಹಿತಮಲಿನತೆಯಿಲ್ಲದ, ಕೊಳೆಯಿಲ್ಲದ
ಮೂರ್ಛೆಪ್ರಜ್ಞೆತಪ್ಪು, ಎಚ್ಚರತಪ್ಪು
ವಿಷಕನ್ಯೆಇಡೀ ದೇಹ ವಿಷದಿಂದ ಕೂಡಿದವಳು
ಸಂಕುಲಸಮೂಹ, ಗುಂಪು
ಸೋಂಕುಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗ
ಶೋಷಣೆತುಳಿತ, ಹಿಂಸೆ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

  1. ೧. ಯಾರಿಗೆ ಮಾಲಿನ್ಯದ ಸೋಂಕು ತಗುಲಿತು?

    Answer

    ನಮ್ಮ ಗೆಳೆಯ ಗೆಳತಿಯರಿಗೆ ಮಾಲಿನ್ಯದ ಸೋಂಕು ತಗುಲಿತು.

  2. ೨. ಗೆಳೆಯ ಗೆಳತಿಯರು ಎಲ್ಲಿ ಸ್ನಾನ ಮಾಡಿದರು?

    Answer

    ಗೆಳೆಯ ಗೆಳತಿಯರು ಊರಿನ ಪಕ್ಕದ ನದಿಯಲ್ಲಿ ಸ್ನಾನ ಮಾಡಿದರು.

  3. ೩. ಸ್ನಾನ ಮಾಡಿದವರನ್ನು ಆಸ್ಪತ್ರೆಗೆ ಸೇರಿಸಿದವರು ಯಾರು?

    Answer

    ಸ್ನಾನ ಮಾಡಿದವರನ್ನು ದಾರಿಹೋಕರು ಆಸ್ಪತ್ರೆಗೆ ಸೇರಿಸಿದರು.

  4. ೪. ನದಿ ಮಧ್ಯದಿಂದ ಯಾರು ಧುತ್ತನೆ ಪ್ರತ್ಯಕ್ಷಳಾದಳು?

    Answer

    ನದಿ ಮಧ್ಯದಿಂದ ಜಲದೇವತೆ ಧುತ್ತನೆ ಪ್ರತ್ಯಕ್ಷಳಾದಳು.

  5. ೫. ಮಕ್ಕಳು ಯಾರ ಸಹಕಾರದೊಂದಿಗೆ ನದಿ ಸ್ವಚ್ಛತೆಯ ಜವಾಬ್ದಾರಿಯನ್ನು ವಹಿಸಿಕೊಂಡರು?

    Answer

    ಮಕ್ಕಳು ತಮ್ಮ ಹೆತ್ತವರ ಹಾಗೂ ಊರವರ ಸಹಕಾರದೊಂದಿಗೆ ನದಿ ಸ್ವಚ್ಛತೆಯ ಜವಾಬ್ದಾರಿಯನ್ನು ವಹಿಸಿಕೊಂಡರು.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ

  1. ೧. ಮಕ್ಕಳು ಏಕೆ ನದಿಯಲ್ಲಿ ಸ್ನಾನ ಮಾಡಿದರು?

    Answer

    ಮಕ್ಕಳು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಆಟವಾಡಿದರು. ಅನಂತರ ಸೆಕೆಯನ್ನು ತಾಳಲಾರದೆ ಅವರು ನದಿಯಲ್ಲಿ ಸ್ನಾನ ಮಾಡಿದರು.

  2. ೨. ಸ್ನಾನದ ಬಳಿಕ ಮಕ್ಕಳು ಸ್ಥಿತಿ ಏನಾಗಿತ್ತು ?

    Answer

    ಸ್ನಾನದ ನಂತರ ಅವರ ಮೈಮೇಲೆಲ್ಲಾ ದಪ್ಪ ಗುಳ್ಳೆಗಳು ಎದ್ದು ವಿಪರೀತ ತುರಿಕೆ ಮತ್ತು ನೋವು ಉಂಟಾಯಿತು. ಅವರು ನೋವು ತಾಳಲಾರದೆ ದಂಡೆಯಲ್ಲಿ ಬಿದ್ದು ಹೊರಳಾಡಿದರು.

  3. ೩. ರೆಹಮಾನ್ ಜಲದೇವತೆಗೆ ಏನೆಂದು ಹೇಳಿದ?

    Answer

    ರೆಹಮಾನ್ ಜಲದೇವತೆಗೆ, 'ನೀನು ಕಲುಷಿತಗೊಂಡಿರುವೆ. ನಿನ್ನ ನೀರನ್ನು ಕುಡಿಯಬಾರದು ಮತ್ತು ಸ್ನಾನ ಮಾಡಬಾರದು ಎಂದು ವೈದ್ಯರು ಹೇಳಿದ್ದಾರೆ. ನಮ್ಮ ಗೆಳೆಯರು ನಿನ್ನಲ್ಲಿ ಸ್ನಾನ ಮಾಡಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ' ಎಂದು ಹೇಳಿದ.

  4. ೪. ನದಿ ಶುದ್ಧವಾಗಿ ಹರಿಯುವಂತಾಗಲು ಏನು ಮಾಡಬಹುದು?

    Answer

    ನದಿಯ ಮೇಲಿನ ದೌರ್ಜನ್ಯ ಸಂಪೂರ್ಣವಾಗಿ ನಿಲ್ಲಬೇಕು. ಎಲ್ಲರೂ ಸೇರಿ ನದಿಯನ್ನು ಶುದ್ಧಗೊಳಿಸಲು ಶ್ರಮಿಸಬೇಕು. ಮಲಿನ ವಸ್ತುಗಳು ನದಿಗೆ ಸೇರದಂತೆ ತಡೆಯಬೇಕು.

  5. ೫. ಜಲದೇವತೆ, 'ನನಗಾಗಿ ನೀವೇನು ಮಾಡಬಲ್ಲಿರಿ?' ಎಂದು ನಿಮ್ಮ ಬಳಿ ಕೇಳಿದರೆ ನಿಮ್ಮ ಉತ್ತರವೇನು?

    Answer

    ನಾನು ನದಿಯನ್ನು ಮಾಲಿನ್ಯದಿಂದ ರಕ್ಷಿಸಲು ಶ್ರಮಿಸುತ್ತೇನೆ. ಯಾವುದೇ ಕಸವನ್ನು, ಕೊಳಚೆ ನೀರನ್ನು ನದಿಗೆ ಬಿಡದಂತೆ ಎಚ್ಚರ ವಹಿಸುತ್ತೇನೆ. ಇತರರಿಗೂ ಈ ಬಗ್ಗೆ ತಿಳಿಸುತ್ತೇನೆ.

ಇ. ಕೊಟ್ಟಿರುವ ಪದಗಳಲ್ಲಿ ಸರಿಯಾದ ಉತ್ತರ ಆಯ್ಕೆ ಮಾಡಿ ಬರೆಯಿರಿ.

  1. ೧. ಮಕ್ಕಳ ಮೈಮೇಲೆಲ್ಲಾ ದಪ್ಪದಪ್ಪ ಗುಳ್ಳೆಗಳು ಎದ್ದು \_\_\_\_\_\_\_ ಪ್ರಾರಂಭವಾಯಿತು.

    Answer

    ತುರಿಕೆ

  2. (೧. ನೋವು ೨. ತುರಿಕೆ ೩. ಸಂತೋಷ ೪. ಆಸಕ್ತಿ)

  3. ೨. ಮಕ್ಕಳು ಬೆಳಗ್ಗೆ \_\_\_\_\_\_\_ ಹೋಗಿದ್ದರು.

    Answer

    ಸಂತೋಷ

  4. (೧. ಸ್ನಾನಮಾಡಲು ೨. ಕೆಲಸಮಾಡಲು ೩. ಆಟವಾಡಲು ೪. ಚಿತ್ರಬರೆಯಲು)

  5. ೩. ಮಲಿನ ನದಿಯು ಮನುಷ್ಯರ ಜೀವಕ್ಕೆ \_\_\_\_\_\_\_

    Answer

    ನೋವು

  6. (೧. ಉಪಕಾರಿ ೨. ಸಹಕಾರಿ ೩. ಅಪಾಯಕಾರಿ ೪. ಆರೋಗ್ಯಕಾರಿ)

  7. ೪. ನನ್ನ ಮೇಲಾಗುತ್ತಿರುವ ಮನುಷ್ಯರ \_\_\_\_\_\_\_ ಸಂಪೂರ್ಣವಾಗಿ ನಿಲ್ಲಬೇಕು.

    Answer

    ಆಸಕ್ತಿ

  8. (೧. ಸೌಜನ್ಯ ೨. ಕಾರುಣ್ಯ ೩. ಪ್ರೀತಿ ೪. ದೌರ್ಜನ್ಯ)

Interactive Lab

ಅಂತರ್ಧಾನಕಣ್ಮರೆಯಾಗು, ಮಾಯವಾಗು
ಅನಾಹುತತೊಂದರೆ, ಅಪಾಯ
ಆತಂಕಭಯ, ತಳಮಳ
ಕೊಳಕುಮಲಿನ, ಗಲೀಜು
ಗುಳ್ಳೆಬೊಬ್ಬೆ, ಬೊಕ್ಕೆ
ಚಿಕಿತ್ಸೆಆರೈಕೆ, ಶುಶ್ರೂಷೆ
ಚಿಂತೆಯೋಚನೆ, ದುಃಖ
ಜಲಚರನೀರಿನಲ್ಲಿ ವಾಸಿಸುವ ಜೀವಿಗಳು
ತವಕಆತುರ, ತರಾತುರಿ
ತಾಕೀತುಕಟ್ಟಪ್ಪಣೆ, ಎಚ್ಚರಿಕೆ
ತುರಿಕೆನವೆ, ಕೆರೆತ
ದೌರ್ಜನ್ಯದಬ್ಬಾಳಿಕೆ, ಹಿಂಸೆ
ಧುತ್ತನೆಏಕಾಏಕಿ, ಇದ್ದಕ್ಕಿದ್ದಂತೆ
ಪಣತೊಡುದೃಢನಿರ್ಧಾರ ಕೈಗೊಳ್ಳು, ಪ್ರತಿಜ್ಞೆ ಮಾಡು
ಮಾಲಿನ್ಯ ರಹಿತಮಲಿನತೆಯಿಲ್ಲದ, ಕೊಳೆಯಿಲ್ಲದ
ಮೂರ್ಛೆಪ್ರಜ್ಞೆತಪ್ಪು, ಎಚ್ಚರತಪ್ಪು
ವಿಷಕನ್ಯೆಇಡೀ ದೇಹ ವಿಷದಿಂದ ಕೂಡಿದವಳು
ಸಂಕುಲಸಮೂಹ, ಗುಂಪು
ಸೋಂಕುಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗ
ಶೋಷಣೆತುಳಿತ, ಹಿಂಸೆ