CRECT Education

Class 5 Kannada Lesson 9: Rainbow | KTBS Savi Kannada First Language

Description

Learn the poem 'ಕಾಮನ ಬಿಲ್ಲು' (Rainbow) by Ninganna Kunti, line by line, with vocabulary and comprehension.

ಪದ್ಯ (poem) · ನಿಂಗಣ್ಣ ಕುಂಟಿ (Ninganna Kunti)

ಪಠ್ಯFull text

ರವಿಯದೊ ಹೊರಟನು ಪಡುವಣಕೆ ತಾಯಿಯ ಮನೆಯನು ಸೇರಲಿಕೆ ಸಂಜೆಯ ಹೊತ್ತಿನ ಹೂಬಿಸಿಲು ಕಣ್ಣಿಗೆ ಹಿಗ್ಗಿನ ಅಂದದ ಹೊನಲು ಬಿಳಿತೆರೆ ಮೋಡದ ಅಂಚಿನಲಿ ಹನಿಮಳೆ ಬೀಳುವ ಹೊತ್ತಿನಲಿ ತುಂತುರು ಹನಿಗಳು ಬೀಳುತ್ತಿವೆ. ಕಾಮನ ಬಿಲ್ಲನು ಮೂಡಿಸಿವೆ ಕಾಮನ ಬಿಲ್ಲನು ನೋಡಲ್ಲಿ ಮಣಿದಿಹ ಬಿಲ್ಲದು ಮುಗಿಲಲ್ಲಿ ಕಿತ್ತಳೆ ಕೇಸರಿ ಹಳದಿ ಕೆಂಪು ನೀಲಿ ಕಂದು ನೇರಳೆ ತಂಪು ನೆಲಕೂ ಮುಗಿಲಿಗೂ ಮುಟ್ಟಿಹುದು ಕಣ್ಣಿಗೆ ಹಬ್ಬವ ತಂದಿಹುದು ಸೂರ್ಯನು ಮುಳುಗಿದ ಕತ್ತಲು ಬಂದಿತು ಮೋಡವು ಚದುರಿತು ಮಳೆಯೂ ನಿಂತಿತು ಮರೆಯಲಿ ಓಡಿತು ಕಾಮನ ಬಿಲ್ಲು ಕಾಣದಾಯಿತು ಮಾಯದ ಬಿಲ್ಲು

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ರವಿಯು ಯಾವ ದಿಕ್ಕಿಗೆ ಹೊರಟನು?

    Answer

    ರವಿಯು ಪಡುವಣ ದಿಕ್ಕಿಗೆ ಹೊರಟನು.

  2. ೨. ಕಾಮನ ಬಿಲ್ಲು ಎಲ್ಲಿಂದ ಎಲ್ಲಿಯವರೆಗೆ ಆವರಿಸಿದೆ?

    Answer

    ಕಾಮನ ಬಿಲ್ಲು ನೆಲದಿಂದ ಮುಗಿಲಿನವರೆಗೆ ಆವರಿಸಿದೆ.

  3. ೩. ಕಾಮನ ಬಿಲ್ಲಿನಲ್ಲಿರುವ ಬಣ್ಣಗಳನ್ನು ಹೆಸರಿಸಿ.

    Answer

    ಕಾಮನ ಬಿಲ್ಲಿನಲ್ಲಿರುವ ಬಣ್ಣಗಳು: ಕಿತ್ತಳೆ, ಕೇಸರಿ, ಹಳದಿ, ಕೆಂಪು, ನೀಲಿ, ಕಂದು, ನೇರಳೆ.

  4. ೪. ಕಾಮನ ಬಿಲ್ಲು ಯಾವಾಗ ಮರೆಯಾಯಿತು?

    Answer

    ಸೂರ್ಯನು ಮುಳುಗಿ ಕತ್ತಲು ಬಂದಾಗ, ಮೋಡ ಚದುರಿ ಮಳೆ ನಿಂತಾಗ ಕಾಮನ ಬಿಲ್ಲು ಮರೆಯಾಯಿತು.

  5. ೫. ಕಾಮನ ಬಿಲ್ಲು ಯಾವಾಗ ಮೂಡುತ್ತದೆ?

    Answer

    ಸಂಜೆಯ ಹೊತ್ತಿನ ಹೂಬಿಸಿಲಿನಲ್ಲಿ ಬಿಳಿ ಮೋಡದ ಅಂಚಿನಲ್ಲಿ ತುಂತುರು ಹನಿಗಳು ಬೀಳುವಾಗ ಕಾಮನ ಬಿಲ್ಲು ಮೂಡುತ್ತದೆ.

Interactive Lab