CRECT Education

Class 5 Kannada Lesson 1: Practice & Quiz | KTBS Second Language

Description

Comprehension and language games for the story 'Pigeons Escaped from Danger' from the Class 5 Second Language Kannada textbook (KTBS).

ಗದ್ಯ (prose) · ಸಂಪಾದಿತ (Edited)

ಪಠ್ಯFull text

ಬೇಡನೊಬ್ಬ ಪಕ್ಷಿಗಳನ್ನು ಹಿಡಿಯಲು ಕಾಳು ಹಾಕಿ ಬಲೆ ಹರಡಿದ್ದನು. ಕಾಳಿನ ಆಸೆಗಾಗಿ ಪಾರಿವಾಳಗಳು ಹಾರಿ ಬಂದವು. ಅವು ಕಾಳು ತಿನ್ನುತ್ತ ತಿನ್ನುತ್ತ ಬಲೆಯಲ್ಲಿ ಸಿಕ್ಕಿಕೊಂಡವು. ಪಾರಿವಾಳಗಳು ಬಲೆಯಿಂದ ಬಿಡಿಸಿಕೊಳ್ಳಲು ಹೆಣಗಾಡಿದವು. ಆದರೆ ಸಾಧ್ಯವಾಗಲಿಲ್ಲ. ಅದೇ ಸಮಯಕ್ಕೆ ಕಾಗೆಯೊಂದು ಅದೇ ದಾರಿಯಲ್ಲಿ ಹಾರಿಹೋಗುತ್ತಿತ್ತು. ಅದು ಬಲೆಗೆ ಸಿಕ್ಕಿಬಿದ್ದಿದ್ದ ಪಾರಿವಾಳಗಳನ್ನು ನೋಡಿ ಮರುಗಿತು. ಪಾರಿವಾಳಗಳು ಕಾಗೆಯ ಸಹಾಯ ಬೇಡಿದವು. ಕಾಗೆ ಅವುಗಳಿಗೆ 'ಒಗ್ಗಟ್ಟಿನಲ್ಲಿ ಬಲವಿದೆ, ಎಲ್ಲರೂ ಕೂಡಿ ಒಮ್ಮೆಲೆ ಹಾರಿಬಿಡಿ' ಎಂದು ಹುರಿದುಂಬಿಸಿತು. ಪಾರಿವಾಳಗಳು ಪ್ರಯತ್ನ ಮಾಡಿ ಒಮ್ಮೆಲೆ ಬಲೆಸಹಿತ ಮೇಲೆ ಹಾರಿದವು. ಪಾರಿವಾಳಗಳು ಬಲೆಸಹಿತ ಬೆಟ್ಟದ ಸಮೀಪ ಇಳಿದವು. ಇಲಿಗಳ ಸಹಾಯ ಬೇಡಿದವು. ಇಲಿಗಳು ತಮ್ಮ ಹಲ್ಲುಗಳಿಂದ ಬಲೆಯನ್ನು ಕತ್ತರಿಸಿದವು. ಹೀಗೆ ಪಾರಿವಾಳಗಳು ಅಪಾಯದಿಂದ ಪಾರಾದವು. ಅವುಗಳು ಕಾಗೆ ಮತ್ತು ಇಲಿಗಳಿಗೆ ಧನ್ಯವಾದ ಹೇಳಿ ಪುರ್ರನೆ ಹಾರಿಹೋದವು. ನೀತಿ : ಒಗ್ಗಟ್ಟಿನಲ್ಲಿ ಬಲವಿದೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡು.

"ಒಗ್ಗಟ್ಟಿನಲ್ಲಿ ಬಲವಿದೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡು." — "There is strength in unity, and help those in trouble." (The moral printed at the end of the story).

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

  1. ೧. ಬೇಡನು ಬಲೆಯನ್ನು ಏಕೆ ಬೀಸಿದನು?

    Answer

    ಬೇಡನು ಪಕ್ಷಿಗಳನ್ನು ಹಿಡಿಯಲು ಬಲೆಯನ್ನು ಬೀಸಿದನು.

  2. ೨. ಕಾಗೆಯು ಪಾರಿವಾಳಗಳಿಗೆ ಏನೆಂದು ಹುರಿದುಂಬಿಸಿತು?

    Answer

    ಕಾಗೆಯು ಪಾರಿವಾಳಗಳಿಗೆ “ಒಗ್ಗಟ್ಟಿನಲ್ಲಿ ಬಲವಿದೆ, ಎಲ್ಲರೂ ಕೂಡಿ ಒಮ್ಮೆಲೆ ಹಾರಿಬಿಡಿ” ಎಂದು ಹುರಿದುಂಬಿಸಿತು.

  3. ೩. ಪಾರಿವಾಳಗಳು ಯಾರ ಸಹಾಯದಿಂದ ಬಲೆಯಿಂದ ಬಿಡಿಸಿಕೊಂಡವು?

    Answer

    ಪಾರಿವಾಳಗಳು ಇಲಿಗಳ ಸಹಾಯದಿಂದ ಬಲೆಯಿಂದ ಬಿಡಿಸಿಕೊಂಡವು.

  4. ೪. ಪಾರಿವಾಳಗಳು ಕಾಗೆ ಮತ್ತು ಇಲಿಗಳಿಗೆ ಏಕೆ ಧನ್ಯವಾದ ಹೇಳಿದವು?

    Answer

    ಕಾಗೆ ಮತ್ತು ಇಲಿಗಳು ತಮಗೆ ಅಪಾಯದಿಂದ ಪಾರಾಗಲು ಸಹಾಯ ಮಾಡಿದ್ದರಿಂದ ಪಾರಿವಾಳಗಳು ಅವುಗಳಿಗೆ ಧನ್ಯವಾದ ಹೇಳಿದವು.

  5. ೫. 'ಅಪಾಯದಿಂದ ಪಾರಾದ ಪಾರಿವಾಳಗಳು' ಕಥೆಯ ನೀತಿ ಏನು?

    Answer

    ಈ ಕಥೆಯ ನೀತಿ “ಒಗ್ಗಟ್ಟಿನಲ್ಲಿ ಬಲವಿದೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡು” ಎಂಬುದು.