CRECT Education

Class 5 Kannada Lesson 8: Creation is Proclaiming | KTBS Second Language

Description

Learn the poem 'ಸಾರುತಿದೆ ಸೃಷ್ಟಿ' by Siddhayyapuranik, stanza by stanza. Vocabulary and comprehension practice for Class 5 Kannada Second Language students.

ಪದ್ಯ · ಸಿದ್ದಯ್ಯಪುರಾಣಿಕ

ಪಠ್ಯFull text

ಹಣ್ಣಿನಲಿ ಬೆಣ್ಣೆಯಲಿ ಕೆನೆಮೊಸರು ಹಾಲಿನಲಿ ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ ಎಳೆನೀರು ಹೊಳೆನೀರು ಹಾಲ್ತೆನೆಯ ಕಾಳಿನಲಿ ಸಾರುತಿದೆ ಸೃಷ್ಟಿಯಿದು ಸವಿಯಾಗಿ ನಿಂದು ಸವಿಯಾಗು ಸವಿಯಾಗು ಸವಿಯಾಗು! ಎಂದು. ॥ ೧ ॥ ತಾರೆಯಲಿ ಚಂದ್ರನಲಿ ಸೂರ್ಯನಲಿ ರನ್ನದಲಿ ಕಂಚಿನಲಿ ಮಿಂಚಿನಲಿ ಮುತ್ತಿನಲಿ ಚಿನ್ನದಲಿ ಜ್ಯೋತಿಯಲಿ ನಯನದಲಿ ಉಷೆಯ ಹೊಂಬಣ್ಣದಲಿ ಸಾರುತಿದೆ ಸೃಷ್ಟಿಯಿದು ಛವಿಯಾಗಿ ನಿಂದು ಛವಿಯಾಗು ಛವಿಯಾಗು, ಛವಿಯಾಗು! ಎಂದು ॥ ೨ ॥ ಶಬ್ದದಲಿ ಸವಿಯಾಗಿ ಅರ್ಥದಲಿ ಬೆಳಕಾಗಿ ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ ಬಾಳುವೆಯ ಸವಿ ಬೆಳಕ ಬರೆಯುವವ ಬೇಕಾಗಿ ಸಾರುತಿದೆ ಸೃಷ್ಟಿ ಸವಿ ಛವಿಯಾಗಿ ನಿಂದು- ಕವಿಯಾಗು ಕವಿಯಾಗು ಕವಿಯಾಗು! ಎಂದು ॥ ೩ ॥

ಪದಗಳ ಅರ್ಥword meanings

KannadaPronunciationMeaning
ಉಷೆಅರುಣೋದಯ ಕೆನೆಮೊಸರು - ಕೆನೆ ಸಹಿತವಾದ ಮೊಸರು
ಜ್ಯೋತಿಬೆಳಕು; ದೀಪ
ನಯನಕಣ್ಣು; ಅಕ್ಷಿ; ನೇತ್ರ
ರಸಗಬ್ಬುರಸಪೂರಿತವಾದ ಕಬ್ಬು
ಸವಿರುಚಿ; ಸಿಹಿ
ಸಾರುಘೋಷಿಸು; ಹೇಳು; ಪ್ರಕಟಪಡಿಸು
ಹೊಂಬಣ್ಣಬಂಗಾರದ ಬಣ್ಣ
ಕಂದಗೆಡ್ಡೆ ಛವಿ - ಹೊಳಪು; ಕಾಂತಿ; ಬಣ್ಣ
ತಾರೆನಕ್ಷತ್ರ ಭವ್ಯ - ಉನ್ನತವಾದ ರನ್ನ - ರತ್ನ ಸೃಷ್ಟಿ - ಪ್ರಕೃತಿ; ರಚನೆ
ಹಾಲ್ತೆನೆಎಳೆ ಕಾಳುಗಳಿರುವ ತೆನೆ

ಅಭ್ಯಾಸexercises from the textbook

Model answers — a guide, not the only correct wording. Check with your teacher.

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಕವಿಯು ಸೃಷ್ಟಿಯ ಯಾವ ಯಾವ ವಸ್ತುಗಳಲ್ಲಿ ಸವಿಯಿದೆ ಎನ್ನುತ್ತಾರೆ?

    Answer

    ಹಣ್ಣು, ಬೆಣ್ಣೆ, ಕೆನೆಮೊಸರು, ಹಾಲು, ಕಂದ, ಜೇನು, ರಸಗಬ್ಬು, ಬಾಳೆ, ಎಳೆನೀರು, ಹೊಳೆನೀರು ಮತ್ತು ಹಾಲ್ತೆನೆಯ ಕಾಳುಗಳಲ್ಲಿ ಸವಿಯಿದೆ ಎಂದು ಕವಿ ಹೇಳುತ್ತಾರೆ.

  2. ೨. ಯಾವ ಯಾವ ವಸ್ತುಗಳಲ್ಲಿ ಪ್ರಕೃತಿ ಛವಿಯಾಗಿ ನಿಂತಿದೆ?

    Answer

    ತಾರೆ, ಚಂದ್ರ, ಸೂರ್ಯ, ರನ್ನ, ಕಂಚು, ಮಿಂಚು, ಮುತ್ತು, ಚಿನ್ನ, ಜ್ಯೋತಿ, ನಯನ ಮತ್ತು ಉಷೆಯ ಹೊಂಬಣ್ಣಗಳಲ್ಲಿ ಪ್ರಕೃತಿ ಛವಿಯಾಗಿ ನಿಂತಿದೆ.

  3. ೩. ಕಾವ್ಯದಲ್ಲಿ ಶಬ್ದ ಮತ್ತು ಅರ್ಥಗಳು ಹೇಗಿರಬೇಕೆಂದು ಕವಿ ಹೇಳುತ್ತಾರೆ?

    Answer

    ಕಾವ್ಯದಲ್ಲಿ ಶಬ್ದವು ಸವಿಯಾಗಿಯೂ ಅರ್ಥವು ಬೆಳಕಾಗಿಯೂ ಇರಬೇಕೆಂದು ಕವಿ ಹೇಳುತ್ತಾರೆ.

  4. ೪. ಬಾಳುವೆಯ ಸವಿಬೆಳಕನ್ನು ಎಲ್ಲಿ ಕಾಣಬೇಕು?

    Answer

    ಬಾಳುವೆಯ ಸವಿ ಮತ್ತು ಬೆಳಕನ್ನು ಬರೆಯುವವನಲ್ಲಿ ಕಾಣಬೇಕು.

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಕವಿ ನಮ್ಮ ಬದುಕು ಯಾವ ರೀತಿ ಸವಿಯಾಗಬೇಕೆಂದು ಬಯಸುತ್ತಾರೆ?

    Answer

    ಹಣ್ಣು, ಬೆಣ್ಣೆ, ಕೆನೆಮೊಸರು, ಹಾಲು, ಕಂದ, ಜೇನು, ರಸಗಬ್ಬು, ಬಾಳೆ, ಎಳೆನೀರು, ಹೊಳೆನೀರು ಮತ್ತು ಹಾಲ್ತೆನೆಯ ಕಾಳುಗಳಲ್ಲಿ ಸವಿ ಇದೆ. ಇವುಗಳಂತೆ ನಮ್ಮ ಬದುಕೂ ಸವಿಯಾಗಬೇಕು. ಸೃಷ್ಟಿಯು ಸವಿಯಾಗು ಎಂದು ಸಾರುತ್ತಿದೆ. ಹೀಗೆ ಕವಿ ನಮ್ಮ ಬದುಕು ಸವಿಯಾಗಬೇಕೆಂದು ಬಯಸುತ್ತಾರೆ.

  2. ೨. ಬದುಕು ಛವಿಯಾಗಬೇಕು ಎಂಬುದಕ್ಕೆ ಕವಿ ಕೊಡುವ ಉದಾಹರಣೆಗಳಾವುವು?

    Answer

    ಬದುಕು ಛವಿಯಾಗಬೇಕೆಂಬುದಕ್ಕೆ ಕವಿ ತಾರೆ, ಚಂದ್ರ, ಸೂರ್ಯ, ರನ್ನ, ಕಂಚು, ಮಿಂಚು, ಮುತ್ತು, ಚಿನ್ನ, ಜ್ಯೋತಿ, ನಯನ ಮತ್ತು ಉಷೆಯ ಹೊಂಬಣ್ಣಗಳ ಉದಾಹರಣೆ ಕೊಡುತ್ತಾರೆ. ಇವುಗಳಲ್ಲಿ ಪ್ರಕೃತಿಯು ಛವಿಯಾಗಿ ನಿಂತಿದೆ. ಅದರಂತೆ ನಮ್ಮ ಬದುಕೂ ಹೊಳಪು, ಕಾಂತಿ, ಬಣ್ಣಗಳಿಂದ ಛವಿಯಾಗಬೇಕು. ಆದ್ದರಿಂದ ಸೃಷ್ಟಿಯು ಛವಿಯಾಗು ಎಂದು ಹೇಳುತ್ತದೆ.

  3. ೩. ಸಿದ್ದಯ್ಯಪುರಾಣಿಕರು ಯಾವ ರೀತಿಯ ಕವಿ ಆಗಬೇಕೆಂದು ಹೇಳುತ್ತಾರೆ?

    Answer

    ಸಿದ್ದಯ್ಯಪುರಾಣಿಕರು ಶಬ್ದದಲ್ಲಿ ಸವಿಯಾಗಿಯೂ ಅರ್ಥದಲ್ಲಿ ಬೆಳಕಾಗಿಯೂ ಇರುವ ಕವಿಯಾಗಬೇಕೆಂದು ಹೇಳುತ್ತಾರೆ. ಬಾಳುವೆಯ ಸವಿ ಮತ್ತು ಬೆಳಕನ್ನು ಬರೆಯುವವನಾಗಬೇಕು. ಅಂತಹ ಕವಿಯಾಗಬೇಕೆಂದು ಸೃಷ್ಟಿಯು ಕವಿಯಾಗು ಎಂದು ಸಾರುತ್ತದೆ.

ಇ) ಈ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.

  1. ಹಣ್ಣಿನಲಿ ................................................................

    Answer

    ಹಣ್ಣಿನಲಿ ಬೆಣ್ಣೆಯಲಿ ಕೆನೆಮೊಸರು ಹಾಲಿನಲಿ

  2. ...............................................................................

    Answer

    ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ

  3. ...............................................................................

    Answer

    ಎಳೆನೀರು ಹೊಳೆನೀರು ಹಾಲ್ತೆನೆಯ ಕಾಳಿನಲಿ

  4. ........................................ ಸವಿಯಾಗು ಎಂದು

    Answer

    ಸವಿಯಾಗು ಸವಿಯಾಗು ಸವಿಯಾಗು! ಎಂದು

ಈ) ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.

  1. ೧. ಸವಿಯಿರುವುದು ಇವುಗಳಲ್ಲಿ ............................

    Answer

    ಹಣ್ಣಿನಲಿ ಬೆಣ್ಣೆಯಲಿ

  2. ೧) ಹಣ್ಣಿನಲಿ ಬೆಣ್ಣೆಯಲಿ ೨) ತಾರೆಯಲಿ ಚಂದ್ರನಲಿ

  3. ೩) ಕಲ್ಲಿನಲಿ ಮುಳ್ಳಿನಲಿ ೪) ಮುತ್ತಿನಲಿ ಚಿನ್ನದಲಿ

  4. ೨. ಎಳೆನೀರು ಹೊಳೆನೀರು ಹಾಲ್ತೆನೆಯ ಕಾಳಿನಲಿ ಸಾರುತಿದೆ ಸೃಷ್ಟಿ ..................ನಿಂದು

    Answer

    ಸವಿಯಾಗಿ

  5. ೧) ಛವಿಯಾಗಿ ೨) ಸವಿಯಾಗಿ

  6. ೩) ಕವಿಯಾಗಿ ೪) ಬೆಳಕಾಗಿ

  7. ೩. ಛವಿ ಇರುವುದು ಇವುಗಳಲ್ಲಿ ............................

    Answer

    ತಾರೆಯಲಿ ಚಂದ್ರನಲಿ

  8. ೧) ಕಂದದಲಿ ಜೇನಿನಲಿ ೨) ತಾರೆಯಲಿ ಚಂದ್ರನಲಿ

  9. ೩) ಹಾಲ್ತೆನೆಯ ಕಾಳಿನಲಿ ೪) ಕಲ್ಲಿನಲಿ ಮುಳ್ಳಿನಲಿ

  10. ೪. ಕಾವ್ಯದಲ್ಲಿ ಶಬ್ದ ಸವಿಯಾಗಿ, ಅರ್ಥ .............. ಇರಬೇಕೆಂದು ಕವಿ ಹೇಳುವನು.

    Answer

    ಬೆಳಕಾಗಿ

  11. ೧) ಸಿಹಿಯಾಗಿ ೨) ಸವಿಯಾಗಿ

  12. ೩) ಒಗರಾಗಿ ೪) ಬೆಳಕಾಗಿ

  13. ೫. ಬಾಳುವೆಯ ಸವಿ ಬೆಳಕ ................... ಬೇಕಾಗಿದೆ.

    Answer

    ಬರೆಯುವವ

  14. ೧) ಓದುವವ ೨) ನೋಡುವವ

  15. ೩) ಕೇಳುವವ ೪) ಬರೆಯುವವ

III. ಭಾಷಾಭ್ಯಾಸ :

ಅ) ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.

  1. ೧. ಸಾರು : ........................................................................................

    Model sentence

    ಸಾರು: ಶಿಕ್ಷಕರು ಬೆಳಿಗ್ಗೆ ಪರೀಕ್ಷೆಯ ದಿನಾಂಕವನ್ನು ಸಾರಿದರು.

  2. ೨. ಸೃಷ್ಟಿ : ........................................................................................

    Model sentence

    ಸೃಷ್ಟಿ: ಪ್ರಕೃತಿಯ ಸೃಷ್ಟಿ ತುಂಬಾ ಸುಂದರವಾಗಿದೆ.

  3. ೩. ಸವಿ : ........................................................................................

    Model sentence

    ಸವಿ: ಅಮ್ಮ ಮಾಡಿದ ಸಿಹಿತಿಂಡಿಯ ಸವಿ ನನಗೆ ತುಂಬಾ ಇಷ್ಟ.

  4. ೪. ಹೊಂಬಣ್ಣ : ........................................................................................

    Model sentence

    ಹೊಂಬಣ್ಣ: ನಮ್ಮ ಮನೆಯ ದೀಪದ ಹೊಂಬಣ್ಣದ ಬೆಳಕು ಸುಂದರವಾಗಿದೆ.

  5. ೫. ಛವಿ : ........................................................................................

    Model sentence

    ಛವಿ: ಮಳೆಯ ನಂತರದ ಆಕಾಶದ ಛವಿ ನನಗೆ ತುಂಬಾ ಇಷ್ಟ.

ಆ) 'ಸಾರುತಿದೆ ಸೃಷ್ಟಿ' ಕವಿತೆಯಲ್ಲಿ ಬಳಕೆಯಾಗಿರುವ ಪ್ರಾಸ ಪದಗಳನ್ನು ಹುಡುಕಿ ಬರೆಯಿರಿ.

  1. ಮಾದರಿ : ಹಣ್ಣಿನಲಿ - ಬೆಣ್ಣೆಯಲಿ

  2. ೧. ಎಳೆನೀರು - ........................ ೨. ಕಂಚು - ........................

    Answer

    ಎಳೆನೀರು - ಹೊಳೆನೀರು ಕಂಚು - ಮಿಂಚು

  3. ೩. ಸವಿ - ........................ ೪. ರನ್ನ - ........................

    Answer

    ಸವಿ - ಛವಿ ರನ್ನ - ಚಿನ್ನ

ಇ) ಈ ಪದಗಳನ್ನು ಬಿಡಿಸಿ ಬರೆದಿದೆ ಗಮನಿಸಿ, ಓದಿರಿ.

  1. ೧. ಹಾಲ್ತೆನೆ = ಹಾಲು + ತೆನೆ

  2. ೨. ರಸಗಬ್ಬು = ರಸ + ಕಬ್ಬು

  3. ೩. ಸೃಷ್ಟಿಯಿದು = ಸೃಷ್ಟಿ + ಇದು

  4. ೪. ಸವಿಯಾಗು = ಸವಿ + ಆಗು

  5. ೫. ಛವಿಯಾಗಿ = ಛವಿ + ಆಗಿ

ಪೂರಕ ಓದು :

  1. (ಈ ಕೆಳಗಿನ ಕಥೆ ಓದಿ, ಪ್ರಸ್ತುತ ಪದ್ಯದ ಭಾವಾರ್ಥದೊಂದಿಗೆ ಇರುವ ಸಂಬಂಧ ತಿಳಿಯಿರಿ.)

  2. ಮಾವಿನ ತೋಪು. ಇಡೀ ತೋಪು ಮಾವಿನಕಾಯಿ, ಹಣ್ಣುಗಳಿಂದ ತುಂಬಿತ್ತು. ಅದು ನೋಡುಗರ ಕಣ್ಣನ ಸೆಳೆಯುತ್ತಿತ್ತು. ಮಕ್ಕಳು ಹಣ್ಣನ್ನು ಪಡೆಯಲು ಕಲ್ಲು ಬೀಸುತ್ತಿದ್ದರು. ಒಬ್ಬ ಹುಡುಗಿ ಮಾವಿನ ಹಣ್ಣಿಗಾಗಿ ಕಲ್ಲು ಬೀಸಿದಳು. ಆ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ರಾಜನಿಗೆ ಕಲ್ಲು ಬಡಿಯಿತು. ರಾಜನು ಕಲ್ಲು ಬಂದ ದಿಕ್ಕಿಗೆ ನೋಡಿದನು. ಅವನ ಸೈನಿಕರು ಈ ದೃಶ್ಯ ನೋಡಿ ಗಾಬರಿಯಾದರು. ಓಡಿ ಹೋಗಿ ಕಲ್ಲು ಬೀರಿದ ಹುಡುಗಿಯನ್ನು ಹಿಡಿದು ತಂದರು.

  3. ಆ ಹುಡುಗಿಗೆ ಸೈನಿಕರು "ರಾಜನಿಗೆ ಏಕೆ ಕಲ್ಲು ಬೀಸಿದೆ?" ಎಂದು ಕೇಳಿದರು. ಹುಡುಗಿಯು "ನಾನು ರಾಜನಿಗೆ ಕಲ್ಲು ಬೀಸಲಿಲ್ಲ. ಮಾವಿನ ಮರಕ್ಕೆ ಬೀಸಿದೆ. ಅದು ಆಕಸ್ಮಿಕವಾಗಿ ರಾಜನಿಗೆ ಬಡಿದಿದೆ. ಕ್ಷಮಿಸಿ ನನ್ನ ತಪ್ಪಿಲ್ಲ" ಎಂದಳು.

  4. ಸೈನಿಕರು "ರಾಜನಿಗೆ ಕಲ್ಲು ಬೀಸಿದ್ದಕ್ಕೆ ಶಿಕ್ಷೆ ಏನು ಗೊತ್ತೇ? ಛಡಿ ಏಟು!" ಎಂದು ಭಯ ಹುಟ್ಟಿಸಿದರು. ಆಗ ಅವಳು ರಾಜನ ಹತ್ತಿರ ಹೋಗಿ "ಸ್ವಾಮಿ ಮರಕ್ಕೆ ಕಲ್ಲು ಬೀಸಿದರೆ ಅದು ಹಣ್ಣು ಕೊಡುತ್ತದೆ. ಆದರೆ ಆಕಸ್ಮಿಕವಾಗಿ ನಿಮಗೆ ಕಲ್ಲು ಬಿದ್ದುದಕ್ಕೆ ನನಗೆ ಛಡಿ ಏಟು ಕೊಡುವುದಾದರೆ ಛಡಿ ಏಟು ಕೊಡಿ" ಎಂದಳು.

  5. ರಾಜನು ಅವಳ ಜಾಣತನಕ್ಕೆ ಮೆಚ್ಚಿದನು. "ನೀನು ಜಾಣ ಹುಡುಗಿ. ಮರ ಕಲ್ಲು ಬೀರಿದವರಿಗೆ ಹಣ್ಣು ಕೊಡುತ್ತದೆ. ಆಕಸ್ಮಿಕವಾಗಿ ಕಲ್ಲು ತಗಲಿದ್ದಕ್ಕೆ ಛಡಿ ಏಟು ಕೊಡುವಷ್ಟು ಕಟುಕನಲ್ಲ ನಾನು. ಈ ತೋಟವನ್ನೆ ನಿನಗೆ ಬಹುಮಾನ ಕೊಡುತ್ತೇನೆ" ಎಂದು ಅವಳನ್ನು ಸಂತಹಿಸಿದನು.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

  1. ೧. ಮಾವಿನ ತೋಪು ನೋಡುಗರ ಕಣ್ಣನ ಸೆಳೆಯುತ್ತಿತ್ತು ಏಕೆ?

    Answer

    ಮಾವಿನ ತೋಪು ಮಾವಿನಕಾಯಿ ಮತ್ತು ಹಣ್ಣುಗಳಿಂದ ತುಂಬಿದ್ದುದರಿಂದ ನೋಡುಗರ ಕಣ್ಣನ್ನು ಸೆಳೆಯುತ್ತಿತ್ತು.

  2. ೨. ಹುಡುಗಿ ಮಾವಿನಮರಕ್ಕೆ ಏಕೆ ಕಲ್ಲು ಎಸೆದಳು?

    Answer

    ಹುಡುಗಿ ಮಾವಿನ ಹಣ್ಣನ್ನು ಪಡೆಯಲು ಮರಕ್ಕೆ ಕಲ್ಲು ಎಸೆದಳು.

  3. ೩. ಸೈನಿಕರು ಹುಡುಗಿಯನ್ನು ರಾಜನ ಬಳಿ ಏಕೆ ಹಿಡಿದು ತಂದರು?

    Answer

    ಹುಡುಗಿ ಎಸೆದ ಕಲ್ಲು ರಾಜನಿಗೆ ಬಡಿದಿದ್ದರಿಂದ ಸೈನಿಕರು ಅವಳನ್ನು ಹಿಡಿದು ರಾಜನ ಬಳಿಗೆ ತಂದರು.

  4. ೪. ಸೈನಿಕರು ಕಲ್ಲು ಹೊಡೆದ ಹುಡುಗಿಗೆ ಯಾವ ಶಿಕ್ಷೆ ಸಿಗುತ್ತದೆಯೆಂದು ಹೇಳಿದರು?

    Answer

    ಸೈನಿಕರು ಅವಳಿಗೆ ಛಡಿ ಏಟು ಶಿಕ್ಷೆ ಸಿಗುತ್ತದೆ ಎಂದು ಹೇಳಿದರು.

  5. ೫. ರಾಜನು ಹುಡುಗಿಗೆ ತೋಟವನ್ನು ಬಹುಮಾನವಾಗಿ ಏಕೆ ಕೊಟ್ಟನು?

    Answer

    ರಾಜನು ಅವಳ ಜಾಣತನವನ್ನು ಮೆಚ್ಚಿ ತೋಟವನ್ನು ಬಹುಮಾನವಾಗಿ ಕೊಟ್ಟನು.

ಈ ಮೂರು ಕೋತಿಗಳು ಬದುಕು ಸವಿಯಾಗುವ ಸಂದೇಶವನ್ನು ನೀಡುತ್ತಿವೆ. ನೀವು ಗುರುತಿಸಿ ಬರೆಯಿರಿ.

  1. (Image of the three wise monkeys covering mouth, ears, and eyes, with blank lines below for students to write the message: See no evil, hear no evil, speak no evil.)

Interactive Lab

ಉಷೆಅರುಣೋದಯ ಕೆನೆಮೊಸರು - ಕೆನೆ ಸಹಿತವಾದ ಮೊಸರು
ಜ್ಯೋತಿಬೆಳಕು; ದೀಪ
ನಯನಕಣ್ಣು; ಅಕ್ಷಿ; ನೇತ್ರ
ರಸಗಬ್ಬುರಸಪೂರಿತವಾದ ಕಬ್ಬು
ಸವಿರುಚಿ; ಸಿಹಿ
ಸಾರುಘೋಷಿಸು; ಹೇಳು; ಪ್ರಕಟಪಡಿಸು
ಹೊಂಬಣ್ಣಬಂಗಾರದ ಬಣ್ಣ
ಕಂದಗೆಡ್ಡೆ ಛವಿ - ಹೊಳಪು; ಕಾಂತಿ; ಬಣ್ಣ
ತಾರೆನಕ್ಷತ್ರ ಭವ್ಯ - ಉನ್ನತವಾದ ರನ್ನ - ರತ್ನ ಸೃಷ್ಟಿ - ಪ್ರಕೃತಿ; ರಚನೆ
ಹಾಲ್ತೆನೆಎಳೆ ಕಾಳುಗಳಿರುವ ತೆನೆ