ಗದ್ಯ (prose) · ಬೀಚಿ
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
೧. ಮೊದಲನೆಯ ಪತ್ರದಲ್ಲಿ ಭಾಷಣಕಾರರು ಯಾವ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ?
Answerಮೊದಲನೆಯ ಪತ್ರದಲ್ಲಿ ಭಾಷಣಕಾರರು ರೈಲ್ವೆ ಪ್ರವಾಸದ ತೊಂದರೆಯನ್ನು ಹೇಳಿ, ಮೊದಲನೆಯ ವರ್ಗದ ಪ್ರಯಾಣದ ಖರ್ಚನ್ನು ಭರಿಸಬೇಕೆಂದು ಕೇಳಿಕೊಳ್ಳುತ್ತಾರೆ.
೨. ಭಾಷಣಕಾರರ ಭಾಷಣದ ವಿಷಯವೇನು?
Answerಭಾಷಣಕಾರರ ಭಾಷಣದ ವಿಷಯ 'ನಮ್ಮ ಆರ್ಥಿಕ ದುಃಸ್ಥಿತಿ' ಆಗಿದೆ.
೩. ಭಾಷಣಕಾರರಿಗೆ ಪತ್ರ ಬರೆದವರು ಯಾರು?
Answerಭಾಷಣಕಾರರಿಗೆ ಪತ್ರ ಬರೆದವರು ನಾಡಹಬ್ಬ ಸಮಿತಿಯ ಕಾರ್ಯದರ್ಶಿಗಳು.
೪. ಭಾಷಣಕಾರರ ಭಾಷಣ ರದ್ದು ಪಡಿಸಲು ಕಾರಣವೇನು?
Answerಭಾಷಣಕಾರರ ಭಾಷಣ ರದ್ದು ಪಡಿಸಲು ಕಾರಣ ಅವರ ಭಾಷಣದ ವಿಷಯ 'ನಮ್ಮ ಆರ್ಥಿಕ ದುಃಸ್ಥಿತಿ' ಆಗಿತ್ತು.
೫. ಭಾಷಣಕಾರರ ಸಮಸ್ಯೆಗೆ ಕಾರ್ಯದರ್ಶಿಗಳ ಕೊನೆಯ ಉತ್ತರವೇನು?
Answerಕಾರ್ಯದರ್ಶಿಗಳ ಕೊನೆಯ ಉತ್ತರದಲ್ಲಿ, ಭಾಷಣಕಾರರು ಹೊರಡಬೇಡಿ ಎಂದು ಹೇಳಿ, ಅವರ ಭಾಷಣದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.