ಪದ್ಯ (poem) · ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
೧. ಇರುವೆ ಯಾವ ಯಾವ ಊರುಗಳನ್ನು ನೋಡಿ ಬಂದಿದೆ?
Answerಇರುವೆ ಬಾಗಿಲ ಸಂದು, ಗೋಡೆ ಬಿರುಕು, ಬೆಲ್ಲದ ಡಬ್ಬ, ಹಿತ್ತಿಲು, ತಿಂಡಿ ಇರುವ ಹುಡುಗನ ಜೇಬು, ಹಾಲಿನ ಪಾತ್ರೆ, ಸಕ್ಕರೆ ಬಂಡೆ, ಬೆಲ್ಲದ ಬೆಟ್ಟ ಮತ್ತು ಹಾಲಿನ ಲೋಟದ ಬಾವಿ ಇವುಗಳನ್ನು ನೋಡಿ ಬಂದಿದೆ.
೨. ಬಸ್ಸೇ ಇಲ್ಲದ ಊರಿಗೆ ಇರುವೆ ಹೋಗಿ ಬಂದದ್ದು ಹೇಗೆ?
Answerಬಸ್ಸೇ ಇಲ್ಲದ ಊರಿಗೆ ಇರುವೆ ಚಪ್ಪಲಿ ಇಲ್ಲದೆ ಕಾಲಿನಿಂದ ನಡೆದುಕೊಂಡೇ ಹೋಗಿ ಬಂದಿದೆ.
೩. ಹುಡುಗನ ಜೇಬಿನತ್ತ ಇರುವೆ ಹೋಗಿದ್ದೇಕೆ?
Answerಹುಡುಗನ ಜೇಬಿನಲ್ಲಿ ತಿಂಡಿ ಇರುವುದರಿಂದ ಇರುವೆ ಅದರತ್ತ ಹೋಗಿದೆ.
೪. ಹಾಲಿನ ಲೋಟವು ಇರುವೆಗೆ ಹೇಗೆ ಕಾಣಿಸುತ್ತದೆ?
Answerಹಾಲಿನ ಲೋಟವು ಇರುವೆಗೆ ಬಾವಿಯಂತೆ ಕಾಣಿಸುತ್ತದೆ.
೫. ಇರುವೆ ಯಾವುದನ್ನು ಬಂಡೆ, ಬೆಟ್ಟ ಎಂದು ಹೇಳುತ್ತಿದೆ?
Answerಇರುವೆ ಸಕ್ಕರೆಯನ್ನು ಬಂಡೆ ಎಂದೂ, ಬೆಲ್ಲವನ್ನು ಬೆಟ್ಟ ಎಂದೂ ಹೇಳುತ್ತಿದೆ.
೬. ಇರುವೆಯ ಕಣ್ಣಲ್ಲಿ ಸಣ್ಣ ಸಂಗತಿಗಳೂ ಹೇಗೆ ಬೃಹತ್ತಾಗಿ ಕಾಣುತ್ತವೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿ.
Answerಇರುವೆಯ ಕಣ್ಣಿಗೆ ಸಣ್ಣ ಸಂಗತಿಗಳು ದೊಡ್ಡದಾಗಿ ಕಾಣುತ್ತವೆ. ಉದಾಹರಣೆಗೆ, ಸಕ್ಕರೆಯ ಹರಳು ಅದಕ್ಕೆ ಬಂಡೆಯಂತೆ, ಬೆಲ್ಲದ ಚೂರು ಬೆಟ್ಟದಂತೆ, ಹಾಲಿನ ಲೋಟವು ಬಾವಿಯಂತೆ ಕಾಣುತ್ತದೆ.
* * * * * * *