CRECT Education

Class 6 Kannada Lesson 5: Summer | KTBS First Language

Description

Poem 'Bēsige' by B.R. Lakshmana Rao — walk through stanza by stanza, key vocabulary, and comprehension practice.

ಪದ್ಯ (poem) · ಬಿ.ಆರ್. ಲಕ್ಷ್ಮಣರಾವ್

ಪಠ್ಯFull text

ಬಂದಿದೆ ಬೇಸಿಗೆ ರಜಾ ಇದ್ದರೂ ಬಿಸಿಲಿನ ಸಜಾ ಬನ್ನಿ ಆಡೋಣ, ಸೂರ್ಯನ ಮಹಿಮೆಯ ಹಾಡೋಣ. ಏಕೆ ರವಿಗಿಂತ ತಾಪ? ಯಾರ ಮೇಲವನ ಕೋಪ? ಎಂದು ಹಳಿಯಬೇಡಿ, ಸೂರ್ಯನ ತಪ್ಪು ತಿಳಿಯಬೇಡಿ, ಮೋಡ ಕೂಡಿಸಲು, ಇಳೆಗೆ ಮಳೆ ತರಲು ದುಡಿಯುತಿಹನು, ಪಾಪ! ಭೂಮಿಯ ಪೋಷಕ ಸೂರ್ಯ ಭೂಮಿಗವನು ಅನಿವಾರ್ಯ ಹೊಗಳಿಕೆ ಬೇಕಿಲ್ಲ, ತೆಗಳಿದರೆ ಅವ ಕುಗ್ಗುವುದಿಲ್ಲ, ಬೆಳಕ ನೀಡುವನು, ಬಿಸಿಯನೂಡುವನು ಮರೆಯದೆ ಕರ್ತವ್ಯ. ಇಂಥ ಬಿರು ಬಿಸಿಲಿನಲ್ಲಿ ಮರಾ ಗಿಡಾ ಪೊದೆ ಬಳ್ಳಿ ಕಂಗಾಲಾಗಿಲ್ಲ, ನೋಡಿ ರಂಗಾಗಿವೆ ಎಲ್ಲ ಚಿಗುರು ಹೊತೊಟ್ಟು, ಹಣ್ಣು ಮಿಡಿ ಬಿಟ್ಟು, ಇವೆ ಸಂಭ್ರಮದಲ್ಲಿ. ಸೂರ್ಯನಿಂದ ಕಲಿಯೋಣ. ಪ್ರಕೃತಿಯಂತೆ ನಲಿಯೋಣ. ಕಷ್ಟಗಳಿಗಂಜದೆ, ನಮ್ಮ ಕರ್ತವ್ಯ ಮರೆಯದೆ, ನಲಿಯುತ ಬಾಳಿ, ನಲಿವನು ಹಂಚಿ, ಧನ್ಯತೆ ಗಳಿಸೋಣ.

"ಕರ್ತವ್ಯಕ್ಕೆ ಮಿಗಿಲಾದುದು ಯಾವುದೂ ಇಲ್ಲ." — "There is nothing greater than duty." "ಕಾಯಕವೇ ಕೈಲಾಸ." — "Work is worship / Work is heaven." "ನಾವು ನಮ್ಮ ಕಾಲ ಮೇಲೆ ನಿಲ್ಲೋಣ." — "Let us stand on our own feet."

ಪದಗಳ ಅರ್ಥword meanings

KannadaPronunciationMeaning
ಸಜಾಶಿಕ್ಷೆ
ಮಹಿಮೆಹಿರಿಮೆ, ಮಹತ್ವ
ರವಿಭಾನು, ಸೂರ್ಯ, ನೇಸರು
ತಾಪಬಿಸಿ, ಶಾಖ
ಹಳಿದೂಷಿಸು, ನಿಂದಿಸು
ಇಳೆಭೂಮಿ, ಧರೆ
ಪೋಷಕಸಲಹುವಾತ, ಪಾಲಕ
ಅನಿವಾರ್ಯಅತ್ಯಗತ್ಯ
ಹೊಗಳುಕೊಂಡಾಡು, ಬಣ್ಣಿಸು
ತೆಗಳುಹೀಯಾಳಿಸು, ನಿಂದಿಸು
ಮಿಡಿಹೀಚು, ಕಸುಗಾಯಿ
ಊಡುಉಣಿಸು, ತಿನ್ನಿಸು
ಕರ್ತವ್ಯಕೆಲಸ, ಜವಾಬ್ದಾರಿ
ಬಿರುರಭಸ, ಬಿರುಸು
ಸಂಭ್ರಮಉತ್ಸಾಹ, ಸಡಗರ
ಧನ್ಯತೆಸಂತೃಪ್ತಿ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ :

  1. ೧. ಸೂರ್ಯ ಏಕೆ ದುಡಿಯುತ್ತಿದ್ದಾನೆ?

    Answer

    ಸೂರ್ಯನು ಮೋಡ ಕೂಡಿಸಲು ಮತ್ತು ಭೂಮಿಗೆ ಮಳೆ ತರಲು ದುಡಿಯುತ್ತಿದ್ದಾನೆ.

  2. ೨. ಭೂಮಿಯ ಪೋಷಕ ಯಾರು?

    Answer

    ಭೂಮಿಯ ಪೋಷಕ ಸೂರ್ಯ.

  3. ೩. ಸೂರ್ಯ ಮರೆಯದೆ ಯಾವ ಕರ್ತವ್ಯ ಮಾಡುವನು?

    Answer

    ಸೂರ್ಯನು ಬೆಳಕನ್ನು ನೀಡುವುದು ಮತ್ತು ಬಿಸಿಯನ್ನು ಊಡುವುದು ಮರೆಯದೆ ಕರ್ತವ್ಯ ಮಾಡುವನು.

  4. ೪. ಬಿರು ಬಿಸಿಲಿಗೆ ಯಾವುವು ಕಂಗಾಲಾಗಿಲ್ಲ?

    Answer

    ಬಿರು ಬಿಸಿಲಿಗೆ ಮರ, ಗಿಡ, ಪೊದೆ, ಬಳ್ಳಿಗಳು ಕಂಗಾಲಾಗಿಲ್ಲ.

  5. ೫. ಸೂರ್ಯನಿಂದ ಮಕ್ಕಳು ಕಲಿಯಬೇಕಾದ್ದೇನು?

    Answer

    ಮಕ್ಕಳು ಸೂರ್ಯನಿಂದ ಕಷ್ಟಗಳಿಗೆ ಅಂಜದೆ, ಕರ್ತವ್ಯ ಮರೆಯದೆ, ನಲಿಯುತ ಬಾಳಿ ನಲಿವನ್ನು ಹಂಚುವುದನ್ನು ಕಲಿಯಬೇಕು.

ಆ. ಕೆಳಗಿನ ಪದಗಳಿಗೆ ತಲಾ ಎರಡು ಸಮಾನಾರ್ಥಕ ಪದಗಳನ್ನು ಬರೆಯಿರಿ.

  1. ೧. ಸೂರ್ಯ ೨. ಇಳೆ ೩. ಪ್ರಕೃತಿ ೪. ಸಂಭ್ರಮ

    Answer

    ಸೂರ್ಯ: ಭಾನು, ನೇಸರು ಇಳೆ: ಭೂಮಿ, ಧರೆ ಪ್ರಕೃತಿ: __NOT_IN_TEXT__ ಸಂಭ್ರಮ: ಉತ್ಸಾಹ, ಸಡಗರ

ಇ. ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ಬರೆಯಿರಿ.

  1. ೧) ಪೋಷಕರು ೨) ಕರ್ತವ್ಯ ೩) ಸಂಭ್ರಮ ೪) ಧನ್ಯತೆ

    Model sentence

    ಪೋಷಕರು: ನನ್ನ ಪೋಷಕರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಕರ್ತವ್ಯ: ಪ್ರತಿದಿನ ಮನೆಪಾಠ ಮಾಡುವುದು ನನ್ನ ಕರ್ತವ್ಯ. ಸಂಭ್ರಮ: ಹಬ್ಬದ ದಿನ ನಮ್ಮ ಮನೆಯಲ್ಲಿ ತುಂಬಾ ಸಂಭ್ರಮವಿರುತ್ತದೆ. ಧನ್ಯತೆ: ಒಳ್ಳೆಯ ಕೆಲಸ ಮಾಡಿದಾಗ ನನಗೆ ಧನ್ಯತೆಯ ಭಾವನೆ ಬರುತ್ತದೆ.

ಈ. ಬೇಸಿಗೆ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

Interactive Lab

ಸಜಾಶಿಕ್ಷೆ
ಮಹಿಮೆಹಿರಿಮೆ, ಮಹತ್ವ
ರವಿಭಾನು, ಸೂರ್ಯ, ನೇಸರು
ತಾಪಬಿಸಿ, ಶಾಖ
ಹಳಿದೂಷಿಸು, ನಿಂದಿಸು
ಇಳೆಭೂಮಿ, ಧರೆ
ಪೋಷಕಸಲಹುವಾತ, ಪಾಲಕ
ಅನಿವಾರ್ಯಅತ್ಯಗತ್ಯ
ಹೊಗಳುಕೊಂಡಾಡು, ಬಣ್ಣಿಸು
ತೆಗಳುಹೀಯಾಳಿಸು, ನಿಂದಿಸು
ಮಿಡಿಹೀಚು, ಕಸುಗಾಯಿ
ಊಡುಉಣಿಸು, ತಿನ್ನಿಸು
ಕರ್ತವ್ಯಕೆಲಸ, ಜವಾಬ್ದಾರಿ
ಬಿರುರಭಸ, ಬಿರುಸು
ಸಂಭ್ರಮಉತ್ಸಾಹ, ಸಡಗರ
ಧನ್ಯತೆಸಂತೃಪ್ತಿ