CRECT Education

Class 6 Kannada Lesson 8: Child and Fruits | KTBS First Language – Poem

Description

A walkthrough of the poem 'ಮಗು ಮತ್ತು ಹಣ್ಣುಗಳು' (Child and Fruits) by H.S. Shivaprakash from the Class 6 KTBS First Language textbook, with vocabulary and quiz.

ಪದ್ಯ · ಎಚ್. ಎಸ್. ಶಿವಪ್ರಕಾಶ್

ಪಠ್ಯFull text

ಹಣ್ಣಿನಂಗಡಿ ಮುಂದೆ ಕಣ್ಣರಳಿಸುವ ಮಗು ಇಲ್ಲಿ ಈ ತಿರುವಲ್ಲಿ ಥಟ್ಟನವತರಿಸಿದ ಕಪ್ಪು ಲಾರಿಯ ಹಾಗೆ ಗಾಳಿ ಕೀಟಲೆ ಉಗುರೊ ತುಂಟರೆಸೆಯುವ ಕಲ್ಲೋ ||೧|| ಕಾಯಿಯಲ್ಲೇ ನಿನ್ನ ಕೆಡವದಿರಲಿ ಹಣ್ಣಿನಂಗಡಿಯಾಗು ನೀನೂನು ಗಿರವಿಯಂಗಡಿ ಗುಜರಿಗಳ ಧೂಳು ಹಬ್ಬಿದ ಊರ ಮಾರುಕಟ್ಟೆಯ ನಡುವೆ ||೨|| ಹಣ್ಣಾಗಬೇಕು ಮಗು ಮೈಯೆಲ್ಲ ಮಾಗಿಹಣ್ಣಿನ ಸುಕ್ಕು ಬರುವವರೆಗೆ ಪಕ್ವತನ ಬಿರಿದ ಬಾಳೆಹಣ್ಣಿದೆಯಲ್ಲ ಅದರ ಹಾಗೇ ಕೊಂಚ ಬಾಗಬೇಕು ||೩|| ಕೊಬ್ಬಿದರೆ ಚಕೋತನೆಯ ಹಾಗೆ ಕುಗ್ಗಿದರೆ ನಿಂಬೆ ಹಣ್ಣಿನ ಹಾಗೆ ಹುಳಿಗಟ್ಟುವುದು ನಿನ್ನೊಳಗೆ ಸರಿಗಾತ್ರವಾಗಿ ಸಮನಿಸಲಿ ನಿನ್ನತನ ||೪|| ಕಿತ್ತಳೆಯ ಹಾಗೆ, ಮೋಸಂಬಿ ಹಾಗೆ ರಸಪೂರಿ ಮಾವಿನ ಹಣ್ಣಿನಂತೆ ಅಂಜೂರದಂತೆ ಅಪರೂಪವಾಗು ಜನರ ಕಣ್ಣಿಗೆ; ಕಂದರೆ ಕಾಣು ಕಲ್ಲಂಗಡಿಯಾಗಿ ||೫|| ಬೇಸಿಗೆಯ ಕಮರಿರುವ ಕಣ್ಣುಗಳಿಗೆ ದಳದಳಕೊಯ್ದು ಅರಳಿಸಿದ ದಾಳಿಂಬೆಯೊಳಗೆ ಥಳಥಳ ಕೆಂಡ ಬಣ್ಣ ಮಣಿಮಣಿ ಹನಿಹನಿ ತನಿರಸದ ಖನಿಯಾಗು; ||೬|| ಹಬ್ಬಿಕೋ ದ್ರಾಕ್ಷೆ ಬಳ್ಳಿಯ ಹಾಗೆ ಆಯುಷ್ಯ ಚಪ್ಪರದ ಉದ್ದಗಲ; ತಬ್ಬಿಕೋ ಬಿಡಬೇಡ; ಹಣ್ಣು ತೊಡಿಸಲು ನಿನಗೆ ||೭|| ತಾನೆ ಮಣ್ಣಾಗುತ-ಬರಲು ತೋಟಗಾತಿ ಬೆಲೆಯ ರಾಕೆಟ್ಟು ಯಾನ ಹೊರಡದಿರು ಸೇಬು ಹಣ್ಣಿನ ಜೊತೆಗೆ ಎಲ್ಲರಿಗೂ ದಕ್ಕುವ ಎಲಚಿಯಾಗು ||೮||

ಪದಗಳ ಅರ್ಥword meanings

KannadaPronunciationMeaning
ಗಿರವಿಯಂಗಡಿವಸ್ತುಗಳನ್ನು ಅಡವಿಟ್ಟುಕೊಂಡು ಹಣ ನೀಡುವ ಅಂಗಡಿ; ಗುಜರಿ - ಹಳೆಯ ವಸ್ತುಗಳನ್ನು ಮಾರುವ ಸ್ಥಳ; ಪಕ್ವತನ - ಮಾಗಿದ; ಕೊಬ್ಬು - ದಪ್ಪನಾಗು; ಕಮರು - ಕಂದು; ಖನಿ - ಗಣಿ, ಆಕರ; ದಕ್ಕು - ದೊರಕು

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಕವಿಯ ಪ್ರಕಾರ ಮಗು ಏನಾಗಬೇಕು?

    Answer

    ಕವಿಯ ಪ್ರಕಾರ ಮಗು ಹಣ್ಣಾಗಬೇಕು.

  2. ೨. ಮಗು ಯಾವ ಹಣ್ಣಿನ ಹಾಗೆ ಬಾಗಬೇಕು?

    Answer

    ಮಗು ಪಕ್ವತನ ಬಿರಿದ ಬಾಳೆಹಣ್ಣಿನ ಹಾಗೆ ಬಾಗಬೇಕು.

  3. ೩. ಯಾವ ಹಣ್ಣಿನಂತೆ ಕುಗ್ಗಬೇಕು ಎಂದು ಕವಿಗಳು ಹೇಳುತ್ತಾರೆ?

    Answer

    ನಿಂಬೆ ಹಣ್ಣಿನಂತೆ ಕುಗ್ಗಬೇಕು ಎಂದು ಕವಿಗಳು ಹೇಳುತ್ತಾರೆ.

  4. ೪. ಅಪರೂಪವಾದ ಹಣ್ಣು ಯಾವುದು?

    Answer

    ಅಪರೂಪವಾದ ಹಣ್ಣು ಅಂಜೂರ.

  5. ೫. ಕಮರಿರುವ ಕಣ್ಣುಗಳಿಗೆ ಹೇಗೆ ಕಾಣಬೇಕು?

    Answer

    ಕಮರಿರುವ ಕಣ್ಣುಗಳಿಗೆ ದಳದಳಕೊಯ್ದು ಅರಳಿಸಿದ ದಾಳಿಂಬೆಯೊಳಗಿನ ಥಳಥಳ ಕೆಂಡ ಬಣ್ಣದ ಮಣಿಮಣಿ ಹನಿಹನಿ ತನಿರಸದ ಖನಿಯಾಗಿ ಕಾಣಬೇಕು.

ಆ. ಬಿಟ್ಟಸ್ಥಳ ತುಂಬಿರಿ.

  1. ೧. ಥಳ ಥಳ ಕೆಂಡ _________ ಮಣಿ ಮಣಿ.

    Answer

    ಥಳ ಥಳ ಕೆಂಡ ಬಣ್ಣ ಮಣಿ ಮಣಿ.

  2. ೨. ಹಬ್ಬಿಕೋ _________ ಬಳ್ಳಿಯ ಹಾಗೆ.

    Answer

    ಹಬ್ಬಿಕೋ ದ್ರಾಕ್ಷೆ ಬಳ್ಳಿಯ ಹಾಗೆ.

  3. ೩. ಎಲ್ಲರಿಗೂ _________ ಎಲಚಿಯಾಗು.

    Answer

    ಎಲ್ಲರಿಗೂ ದಕ್ಕುವ ಎಲಚಿಯಾಗು.

  4. ೪. ಬೆಲೆಯ _________ ಯಾನ ಹೊರದದಿರು.

    Answer

    ಬೆಲೆಯ ರಾಕೆಟ್ಟು ಯಾನ ಹೊರದದಿರು.

  5. ೫. ಸರಿಗಾತ್ರವಾಗಿ ಸಮನಿಸಲಿ _________

    Answer

    ಸರಿಗಾತ್ರವಾಗಿ ಸಮನಿಸಲಿ ನಿನ್ನತನ

ಇ. ಈ ಪದಗಳನ್ನು ಬಿಡಿಸಿ ಬರೆಯಿರಿ.

  1. ೧. ಹಣ್ಣಿನಂಗಡಿ

    Answer

    ಹಣ್ಣಿನ + ಅಂಗಡಿ

  2. ೨. ಕಣ್ಣರಳಿಸು

    Answer

    ಕಣ್ಣು + ಅರಳಿಸು

  3. ೩. ತುಂಟರೆಸೆಯುವ

    Answer

    ತುಂಟ + ಎಸೆಯುವ

  4. ೪. ಹುಳಿಗಟ್ಟುವುದು

    Answer

    ಹುಳಿ + ಕಟ್ಟುವುದು

  5. ೫. ನಿನ್ನೊಳಗೆ

    Answer

    ನಿನ್ನ + ಒಳಗೆ

  6. ೬. ಅಪರೂಪವಾಗು

    Answer

    ಅಪರೂಪ + ಆಗು

ಈ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ.

  1. ಕೊಬ್ಬಿದರೆ ___________________________

    Answer

    ಕೊಬ್ಬಿದರೆ ಚಕೋತನೆಯ ಹಾಗೆ

  2. __________________________________

    Answer

    ಕುಗ್ಗಿದರೆ ನಿಂಬೆ ಹಣ್ಣಿನ ಹಾಗೆ

  3. __________________________________

    Answer

    ಹುಳಿಗಟ್ಟುವುದು ನಿನ್ನೊಳಗೆ

  4. _________________________ನಿನ್ನತನ

    Answer

    ಸರಿಗಾತ್ರವಾಗಿ ಸಮನಿಸಲಿ ನಿನ್ನತನ

ವ್ಯಾಕರಣ ಮಾಹಿತಿ

  1. ನಾವು ಹಿಂದಿನ ಪಾಠದಲ್ಲಿ ಕೆಲವು ಲೇಖನ ಚಿಹ್ನೆಗಳನ್ನು ಪರಿಚಯ ಮಾಡಿಕೊಂಡಿದ್ದೇವೆ. ಈಗ ಇನ್ನೂ ಕೆಲವು ಲೇಖನ ಚಿಹ್ನೆಗಳನ್ನು ತಿಳಿಯೋಣ.

ಕೆಳಗಿನ ವಾಕ್ಯಗಳನ್ನು ಗಮನಿಸಿರಿ :

  1. ೧. ನೌಕಾಸೇನೆ :- ಭಾರತೀಯ ನೌಕಾಸೇನೆ ಭೂಸೇನೆಯಷ್ಟೇ ಹಳೆಯದು. ಜಲಮಾರ್ಗದಲ್ಲಿ ವೈರಿಗಳನ್ನು ತಡೆಯಲು ನೌಕಾಸೇನೆ ಬಳಕೆಯಾಗುತ್ತದೆ.

  2. ಇಲ್ಲಿ ವಾಕ್ಯದ ಶಿರೋನಾಮೆಯ ಅನಂತರ ವಿವರಣಾತ್ಮಕ ಚಿಹ್ನೆ (:-) ಬಳಕೆಯಾಗಿದೆ. ಅಭಿಪ್ರಾಯದ ವಿವರಣೆ ಇಂತಿದೆ ಎನ್ನುವುದನ್ನು ತಿಳಿಸುವ ಸಂದರ್ಭದಲ್ಲಿ ಈ ಚಿಹ್ನೆ ಬಳಕೆಯಾಗುತ್ತದೆ.

  3. ೨. ಒಂದು ಬಿಲದೊಳಗೆ 'ಹಿರಣ್ಯರೋಮ' ಎಂಬ ಮೂಷಿಕವು ಮನೆಮಾಡಿಕೊಂಡಿತ್ತು. ಮೇಲಿನ ವಾಕ್ಯದಲ್ಲಿ 'ಹಿರಣ್ಯರೋಮ' ಈ ಪದಕ್ಕೆ ವಾಕ್ಯವೇಷ್ಟನ ಚಿಹ್ನೆ (' ') ಬಳಕೆಯಾಗಿದೆ. ಇದು ಪಾರಿಭಾಷಿಕ/ಪ್ರಧಾನ/ವಿಶಿಷ್ಟ ಪದಗಳನ್ನು ಬರೆಯುವಾಗ ಬಳಕೆಯಾಗುತ್ತದೆ.

  4. ೩. “ಸ್ವಾಮಿ, ನನಗೆ ಅದೃಷ್ಟವಿಲ್ಲ. ಈಗಲೂ ನನ್ನ ಹೃದಯ ಅವನಿಗಾಗಿ ಮಿಡಿಯುತ್ತಿದೆ. ಗಂಧರ್ವಸೇನ ನನ್ನ ಪ್ರೀತಿಯ ಕತ್ತೆ” ಎಂದು ಮಡಿವಾಳ್ತಿ ಬೊಬ್ಬಿಟ್ಟು ಅತ್ತಳು.

  5. ಮೇಲಿನ ವಾಕ್ಯದಲ್ಲಿ ಉದ್ಧರಣ ಚಿಹ್ನೆ (“ ”) ಬಳಕೆಯಾಗಿದೆ. ಇದು ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಹೇಳುವಾಗ ಬಳಕೆ- ಯಾಗುತ್ತದೆ.

  6. ೪. ನರಿಯು ಕೊಕ್ಕರೆ(ನೀರುಹಕ್ಕಿ)ಯನ್ನು ಹಿಡಿಯಲು ಹೊಂಚು ಹಾಕಿತು.

  7. ಮೇಲಿನ ವಾಕ್ಯದಲ್ಲಿ ಆವರಣ ಚಿಹ್ನೆ ( ) ಬಳಕೆಯಾಗಿದೆ. ಇದು ಹೆಚ್ಚಿನ ವಿವರಣೆಗಳನ್ನು, ಅರ್ಥಗಳನ್ನು ನೀಡುವ ಸಂದರ್ಭದಲ್ಲಿ ಬಳಕೆಯಾಗುತ್ತದೆ.

Interactive Lab

ಗಿರವಿಯಂಗಡಿವಸ್ತುಗಳನ್ನು ಅಡವಿಟ್ಟುಕೊಂಡು ಹಣ ನೀಡುವ ಅಂಗಡಿ; ಗುಜರಿ - ಹಳೆಯ ವಸ್ತುಗಳನ್ನು ಮಾರುವ ಸ್ಥಳ; ಪಕ್ವತನ - ಮಾಗಿದ; ಕೊಬ್ಬು - ದಪ್ಪನಾಗು; ಕಮರು - ಕಂದು; ಖನಿ - ಗಣಿ, ಆಕರ; ದಕ್ಕು - ದೊರಕು