CRECT Education

Class 6 Kannada Lesson 7: The Day You Left | KTBS Kannada First Language

Description

Line-by-line reading of the Dalit poem 'ನೀ ಹೋದ ಮರುದಿನ' by Chennanna Walikar, with vocabulary and quiz. For CBSE, ICSE, and State Board Class 6 Kannada First Language students.

ಪದ್ಯ (poem) · ಚೆನ್ನಣ್ಣ ವಾಲೀಕಾರ (Chennanna Walikar)

ಪಠ್ಯFull text

ನೀ ಹೋದ ಮರುದಿನ ಮೊದಲಂಗೆ ನಮ ಬದುಕು ಆಗ್ಯಾದೋ ಬಾಬಾ ಸಾಹೇಬ ನಿನ್ನಂಗ ದುಡಿದವರು ಕಳಕಳಿಯ ಪಡುವವರು ಇನ್ನುತನ ಬರಲಿಲ್ಲ ಒಬ್ಬ ಪ್ರತಿನಿತ್ಯ ಎದ್ದಾಗ ನಮಸುದ್ದಿ ಸಂಭ್ರಮವು ದೇಕುವುದು ತಪ್ಪಿಲ್ಲ ನಮಗ ಹೋದ ಹೋದಲ್ಲೆಲ್ಲ ಮೇಲವರ ಆಟಗಳು ಉರಿಹಚ್ಚಿ ಬಿಡುತಾರ ಒಳಗ ಎಲ್ಲಿ ಕೇಳಿದರಲ್ಲಿ ಬೂಟುಗಾಲಿನ ಸದ್ದು ತರತರದ ನೋವುಗಳು ನಮಗ ತಮ್ಮಂಗ ಇರದಿದ್ರೆ ತಲೆ ಕಡಿದು ಹಾಕುವರು ಹೆಸರೀಗೇ ಸ್ವಾತಂತ್ರ್ಯ ನಮಗ ಕೈಕಾಲು ಕಿವಿ ಮೂಗು ಮೈ ಮನಸು ತಲೆ ಕಣ್ಣು ಕಳಕೊಂಡ ಬರಡು ಗಿಡ ನಾವು ಮೈ ತುಂಬ ಮನತುಂಬ ಸಿಕ್ಕವರ ಮುಖಮುದ್ರೆ ಚೀರಾಟ ಹಾರಟ ಸಾವೋ ಹೋಗ್ತಾರೋ ದಾರಿಯಲಿ ಅಡುಗಲ್ಲುಗಳು ಸೇರಿ ಮುಳಕಲ್ಲು ಹಾಸ್ಯಾವೋ ಪೂರ ಹೆಚ್ಚಿಗೆ ಬೆಳೆದವರ ಉಳಿದವರ ಜೀವಗಳ ಹಗಲಾಗ ಹೊಡೆದಾರ ಟಾರಾ ಎಷ್ಟಂತ ಉರಿತಾರ ಎಷ್ಟಂತ ಹರಿತಾರ ತಾಳದಕ್ಕೂ ಮಿತಿಯುಂಟು ಇಲ್ಲಿ ತಾಳಿ ತಾಳಿಯೂ ಒಮ್ಮೆ ಚೇಳಾಗಿ ಕುಟುಕುವನು ಸಾಮಾನ್ಯನಲ್ಲೋ ಬಡಜೀವಿ ದುಡಿದುಡಿದು ಹುಟ್ಟಿರಲು ಕತ್ತಲಿರುವ ತನಕ ಕೊತ್ತಿಗಳು ಹೊತ್ಯಾವ ಜೋರಾ ರೋಡಿಗಿದ್ದವರೆಲ್ಲಾ ಗ್ವಾಡ್ನಾಗ ಕುಂತಾರ ಇನ್ನಿಲ್ಲ ನಮ ದಾರಿ ದೂರ ಬಾಬಾ ಸಾಹೇಬರೇನು ಹುಚ್ಚರಲ್ಲವೇ ಅಲ್ಲ ಗಾಂಧಿಜೊತೆ ಇರಲಿಲ್ಲ ಸುಮ್ಮ ಅಷ್ಟು ಒದ್ದಾಡಿದಕೆ ಇಂಗ್ಲೈತೆ ನಮ್ ಬದುಕು ತಿಳಿಯೀತೆ ಈಗಾದರೂ ತಮ್ಮ

ಪದಗಳ ಅರ್ಥword meanings

KannadaPronunciationMeaning
ಬರಡುಸತ್ವಹೀನ; ಕೊತ್ತಿಗಳು - ಬೆಕ್ಕುಗಳು; ಟಾರಾ - ಡಾಂಬರು

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಯಾರು ಹೋದ ಮೇಲೆ ನಮ್ಮ ಬದುಕು ಮೊದಲಿನಂತೆ ಆಗಿದೆ ಎಂದು ಕವಿ ಹೇಳಿದ್ದಾರೆ?

    Answer

    ಬಾಬಾ ಸಾಹೇಬರು ಹೋದ ಮೇಲೆ ನಮ್ಮ ಬದುಕು ಮೊದಲಿನಂತೆ ಆಗಿದೆ ಎಂದು ಕವಿ ಹೇಳಿದ್ದಾರೆ.

  2. ೨. ಕವಿ ಯಾವುದು ಪ್ರತಿನಿತ್ಯ ತಪ್ಪಿಲ್ಲ ನಮಗೆ ಎಂದಿದ್ದಾರೆ?

    Answer

    ಪ್ರತಿನಿತ್ಯ ಎದ್ದಾಗ ನಮಸುದ್ದಿಯ ಸಂಭ್ರಮವು ದೇಕುವುದು ತಪ್ಪಿಲ್ಲ ನಮಗೆ ಎಂದು ಕವಿ ಹೇಳಿದ್ದಾರೆ.

  3. ೩. ಕವಿ ಏನನ್ನು ಕಳೆದುಕೊಂಡ ಬರಡು ಗಿಡ ನಾವು ಎಂದಿದ್ದಾರೆ?

    Answer

    ಕೈ, ಕಾಲು, ಕಿವಿ, ಮೂಗು, ಮೈ, ಮನಸು, ತಲೆ, ಕಣ್ಣುಗಳನ್ನು ಕಳೆದುಕೊಂಡ ಬರಡು ಗಿಡ ನಾವು ಎಂದು ಕವಿ ಹೇಳಿದ್ದಾರೆ.

  4. ೪. ತಾಳಿ ತಾಳಿ ಒಮ್ಮೆ ಏನಾಗಿ ಕುಟುಕುವನು?

    Answer

    ತಾಳಿ ತಾಳಿ ಒಮ್ಮೆ ಚೇಳಾಗಿ ಕುಟುಕುವನು.

  5. ೫. ‘ನೀ ಹೋದ ಮರುದಿನ’ ಪದ್ಯವನ್ನು ಬರೆದವರು ಯಾರು?

ಆ. ಸ್ವಂತ ವಾಕ್ಯದಲ್ಲಿ ಬಳಸಿರಿ.

  1. ೧. ಸ್ವಾತಂತ್ರ್ಯ

    Model sentence

    ಸ್ವಾತಂತ್ರ್ಯ: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನವನ್ನು ನಾವು ಸಂಭ್ರಮಿಸುತ್ತೇವೆ.

  2. ೨. ಬದುಕು

    Model sentence

    ಬದುಕು: ನಮ್ಮ ಶಾಲೆಯಲ್ಲಿ ಬದುಕು ತುಂಬಾ ಸಂತೋಷವಾಗಿದೆ.

  3. ೩. ಸಂಭ್ರಮ

    Model sentence

    ಸಂಭ್ರಮ: ಹಬ್ಬದ ದಿನ ಮನೆಯಲ್ಲಿ ತುಂಬಾ ಸಂಭ್ರಮವಿತ್ತು.

  4. ೪. ಕುಟುಕು

    Model sentence

    ಕುಟುಕು: ಜೇನುಹುಳು ಕುಟುಕಿದರೆ ನೋವಾಗುತ್ತದೆ.

ಇ. ಈ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

ಈ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿರಿ.

  1. ನೀ ಹೋದ ________________________________

    Answer

    ನೀ ಹೋದ ಮರುದಿನ ಮೊದಲಂಗೆ ನಮ ಬದುಕು

  2. _________________________________________

    Answer

    ಆಗ್ಯಾದೋ ಬಾಬಾ ಸಾಹೇಬ

  3. _________________________________________

    Answer

    ನಿನ್ನಂಗ ದುಡಿದವರು ಕಳಕಳಿಯ ಪಡುವವರು

  4. _________________________ ಬರಲಿಲ್ಲ ಒಬ್ಬ ||ನೀ ಹೋದ||

    Answer

    ಇನ್ನುತನ ಬರಲಿಲ್ಲ ಒಬ್ಬ

  5. ಕೈಕಾಲು __________________________________

    Answer

    ಕೈಕಾಲು ಕಿವಿ ಮೂಗು ಮೈ ಮನಸು ತಲೆ ಕಣ್ಣು

  6. _________________________________________

    Answer

    ಕಳಕೊಂಡ ಬರಡು ಗಿಡ ನಾವು

  7. _________________________________________

    Answer

    ಮೈ ತುಂಬ ಮನತುಂಬ ಸಿಕ್ಕವರ ಮುಖಮುದ್ರೆ

  8. _________________________ ಹಾರಟ ಸಾವೋ ||ನೀ ಹೋದ||

    Answer

    ಚೀರಾಟ ಹಾರಟ ಸಾವೋ

ವ್ಯಾಕರಣ ಮಾಹಿತಿ

ಲೇಖನ ಚಿಹ್ನೆಗಳು

  1. ನಾವು ಬರೆದ ವಿಚಾರಗಳು ಓದುಗರಿಗೆ ಸ್ಪಷ್ಟವಾಗಿ ಅರ್ಥವಾಗಲೆಂದು ಅಲ್ಲಲ್ಲಿ ಉಪಯೋಗಿಸುವ ಚಿಹ್ನೆಗಳಿಗೆ ಲೇಖನ ಚಿಹ್ನೆಗಳೆಂದು ಕರೆಯುವರು.

ಕೆಳಗಿನ ವಾಕ್ಯಗಳನ್ನು ಗಮನಿಸಿರಿ :

  1. ೧. ಒಂದಾನೊಂದು ಕಾಲದಲ್ಲಿ ಒಂದು ದಟ್ಟವಾದ ಅರಣ್ಯವಿತ್ತು.

  2. ೨. ಲಘುಪತನಕ ಮರದ ಮೇಲಕ್ಕೆ ಹಾರಿತು.

  3. ಇಲ್ಲಿ ವಾಕ್ಯದ ಕೊನೆಯಲ್ಲಿ **ಪೂರ್ಣವಿರಾಮ ಚಿಹ್ನೆ (.)** ಬಳಕೆಯಾಗಿದೆ. ಇದನ್ನು ‘ಬಿಂದು’ ಎಂದೂ ಕರೆಯುತ್ತಾರೆ. ಇದು ವಾಕ್ಯದ ಪೂರ್ಣಾರ್ಥ ಕ್ರಿಯೆಯನ್ನು ಸೂಚಿಸುತ್ತದೆ. ಇದು ವಾಕ್ಯದ ಕೊನೆಯಲ್ಲಿ ಬಳಕೆಯಾಗುತ್ತದೆ.

  4. ೩. ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ.

  5. ೪. ಅಷ್ಟು ಸಾಕು; ಮುಂದಿನದು ನನಗೆ ಬಿಡು.

  6. ಇಲ್ಲಿ ವಾಕ್ಯದ ನಡುವೆ **‘ಅರ್ಧವಿರಾಮ ಚಿಹ್ನೆ’ (;)** ಬಳಕೆಯಾಗಿದೆ. ಇದು ಪ್ರಧಾನ ವಾಕ್ಯಗಳಲ್ಲಿನ ಉಪವಾಕ್ಯಗಳ ಅಂತ್ಯದಲ್ಲಿ ಬಳಕೆಯಾಗುತ್ತದೆ.

  7. ೫. ಮಂಥರಕ, ಹಿರಣ್ಯರೋಮ, ಲಘುಪತನಕ ಮತ್ತು ಚಿತ್ರಾಂಗ ನಾಲ್ವರು ಗೆಳೆಯರು.

  8. ೬. ಬೇಡನು ಕೂಡಲೆ ಮಂಥರಕನನ್ನು ಬಲೆಯನ್ನು ನೆಲಕ್ಕಿಳಿಸಿ ಹೊರಟನು.

  9. ಇಲ್ಲಿ ವಾಕ್ಯದ ನಡುನಡುವೆ **ಅಲ್ಪವಿರಾಮ ಚಿಹ್ನೆ (,)** ಬಳಕೆಯಾಗಿದೆ. ಇದು ಸಂಬೋಧನೆಯ ಮುಂದೆ, ಕರ್ತೃ, ಕರ್ಮ, ಕ್ರಿಯಾಪದಗಳಿಗೆ ವಿಶೇಷಣಗಳು ಬಂದಾಗ ಬಳಕೆಯಾಗುತ್ತದೆ. ಹಾಗೂ ಕೊನೆಯ ಪದವನ್ನು ಬಿಟ್ಟು ಉಳಿದ ಪದಗಳ ಮುಂದೆ ಅಗತ್ಯಕ್ಕೆ ಹೊಂದಿಕೊಂಡು ಬಳಕೆಯಾಗುತ್ತದೆ.

  10. ೭. ನೀನು ಏಕೆ ಓಡೋಡಿ ಬಂದೆ?

  11. ೮. ಯಾರಿವರು? ಎಲ್ಲಿಂದ ಬಂದರು?

  12. ಇಲ್ಲಿ ವಾಕ್ಯದ ಕೊನೆಯಲ್ಲಿ **‘ಪ್ರಶ್ನಾರ್ಥಕ ಚಿಹ್ನೆ’ (?)** ಬಳಕೆಯಾಗಿದೆ. ಇದು ಪ್ರಶ್ನೆ ಕೇಳುವ ಸಂದರ್ಭದಲ್ಲಿ ಪದ ಅಥವಾ ವಾಕ್ಯದ ಅಂತ್ಯದಲ್ಲಿ ಬಳಕೆಯಾಗುತ್ತದೆ.

  13. ೯. ಅಬ್ಬಾ! ಎಂಥ ಸೊಗಸಾದ ಹಾಡು.

  14. ೧೦. ಆಹಾ! ಎಂಥ ಸುಂದರ ದೃಶ್ಯ.

  15. ಇಲ್ಲಿರುವ ವಾಕ್ಯದಲ್ಲಿ **‘ಭಾವಸೂಚಕ ಚಿಹ್ನೆ’ (!)** ಬಳಕೆಯಾಗಿದೆ. ಇದನ್ನು ‘ಆಶ್ಚರ್ಯಸೂಚಕ ಚಿಹ್ನೆ’ ಎಂದೂ ಹೇಳುತ್ತಾರೆ. ಇದು ಭಾವನೆಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಬಳಕೆ-ಯಾಗುತ್ತದೆ.

  16. ಸಂದರ್ಭಕ್ಕೆ ತಕ್ಕಂತೆ ಬರವಣಿಗೆಯಲ್ಲಿ ಲೇಖನ ಚಿಹ್ನೆಗಳನ್ನು ಬಳಸಬೇಕು. ಇದರಿಂದ ಸ್ಪಷ್ಟವಾಗಿ ಓದಲು, ಅರ್ಥ ತಿಳಿಯಲು ಸಾಧ್ಯವಾಗುತ್ತದೆ. ಇನ್ನೂ ಕೆಲವು ಲೇಖನ ಚಿಹ್ನೆಗಳಿವೆ. ಅವುಗಳ ವಿವರಣೆಯನ್ನು ಮುಂದೆ ತಿಳಿಯೋಣ.

  17. * * * * *

Interactive Lab

ಬರಡುಸತ್ವಹೀನ; ಕೊತ್ತಿಗಳು - ಬೆಕ್ಕುಗಳು; ಟಾರಾ - ಡಾಂಬರು