CRECT Education

Class 6 Kannada Lesson 1: The Boy Who Cried Wolf – Practice & Quiz

Description

Practice comprehension and vocabulary from the Class 6 Second Language Kannada story 'ತೋಳ ಬಂತು ತೋಳ'. We'll test your memory with fun quiz questions and language games.

ಗದ್ಯ (prose) · ಸಂಪಾದಿತ

ಪಠ್ಯFull text

ಒಂದು ಊರಿನಲ್ಲಿ ಒಬ್ಬ ಹುಡುಗನಿದ್ದನು. ಅವನು ಪ್ರತಿದಿನ ಕುರಿಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದನು. ಅವನು ಕುರಿಗಳನ್ನು ಮೇಯಲು ಬಿಟ್ಟು ಬಯಲಲ್ಲಿ ಆಟವಾಡುತ್ತಿದ್ದನು. ಸ್ವಲ್ಪ ದೂರದಲ್ಲಿ ಜನರು ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ಹುಡುಗನಿಗೆ ತಮಾಷೆ ಮಾಡಬೇಕು ಅನಿಸಿತು. ಆಗ ಅವನು ಜನರಿಗೆ ಕೇಳುವಂತೆ ಜೋರಾಗಿ ‘ತೋಳ ಬಂತು.... ತೋಳ ಬಂತು... ಕಾಪಾಡಿ, ಬೇಗಬನ್ನಿ.... ಯಾರಾದರೂ ಬನ್ನಿ....’ ಎಂದು ಕೂಗಿಕೊಂಡನು. ಇದನ್ನು ಕೇಳಿದ ಜನರು ಹುಡುಗನ ಸಹಾಯಕ್ಕೆ ಧಾವಿಸಿ ಬಂದರು. ಆದರೆ ಅಲ್ಲಿ ತೋಳ ಇರಲಿಲ್ಲ. ಹುಡುಗ ಜನರನ್ನು ನೋಡಿ ಒಳಗೆ ನಸುನಕ್ಕನು. ಜನರು ಹುಡುಗನಿಗೆ ಧೈರ್ಯ ಹೇಳಿ ಹಿಂತಿರುಗಿದರು. ಮಾರನೆಯ ದಿನವೂ ಕುರಿ ಕಾಯುವ ಹುಡುಗ ಜನರಿಗೆ ಕೇಳುವಂತೆ ‘ಅಯ್ಯೋ ಬನ್ನಿ ಕಾಪಾಡಿ, ತೋಳ ಬಂದಿದೆ... ತೋಳ’ ಎಂದು ಕೂಗಿದನು. ಜನರು ಹುಡುಗನ ಅಳು ಕೇಳಿ ಓಡೋಡಿ ಬಂದರು. ತೋಳ ಇದ್ದರಲ್ಲವೇ ಕಾಣುವುದು ? ಹುಡುಗನಿಗೆ ಒಳಗೊಳಗೆ ನಗು ಬಂತು. ಜನರು ಹುಡುಗನ ಬಗ್ಗೆ ಗೊಣಗುತ್ತ ತಮ್ಮ ಕೆಲಸಗಳಿಗೆ ಹಿಂತಿರುಗಿದರು. ಹುಡುಗನಿಗೆ ಇದೊಂದು ರೀತಿ ಮೋಜು ಅನಿಸಿತು. ಸ್ವಲ್ಪ ಸಮಯದ ನಂತರ ನಿಜವಾದ ತೋಳ ಬಂತು. ಅದು ಕುರಿಗಳನ್ನು ಹಿಡಿದು ತಿನ್ನಲಾರಂಭಿಸಿತು. ಹುಡುಗನು ಜನರಿಗೆ ‘ಅಯ್ಯೋ... ಬೇಗ ಬನ್ನಿ... ನಿಜವಾಗಲೂ ತೋಳ ಬಂದಿದೆ... ನನ್ನ ಕುರಿಗಳನ್ನು ತಿನ್ನುತ್ತಿದೆ... ಬೇಗ ಬನ್ನಿ... ಕಾಪಾಡಿ’ ಎಂದು ಜೋರಾಗಿ ಹೆದರುತ್ತ, ಅಳುತ್ತ ಹಲವು ಬಾರಿ ಕೂಗಿದನು. ಇದನ್ನು ಕೇಳಿಸಿಕೊಂಡ ಜನರು ಹುಡುಗ ಸುಳ್ಳು ಹೇಳುತ್ತಿದ್ದಾನೆ. ನಮ್ಮನ್ನು ಗುಗ್ಗು ಮಾಡಲು ಅರಚುತ್ತಿದ್ದಾನೆ ಅಂದುಕೊಂಡರು. ಹೀಗಾಗಿ ಹುಡುಗನ ಸಹಾಯಕ್ಕೆ ಯಾರೂ ಬರಲಿಲ್ಲ. ತೋಳ ಕುರಿಗಳನ್ನು ತಿಂದು ಹೊಟ್ಟೆ ತುಂಬಿಸಿಕೊಂಡಿತು. ಕುರಿಯನ್ನು ಕಳೆದುಕೊಂಡ ಹುಡುಗ ಅಳುತ್ತ ಮನೆಗೆ ಹಿಂತಿರುಗಿದನು. ನೀತಿ : ಮಿತಿ ಮೀರಿದ ಹುಡುಗಾಟ, ತರುವುದು ಸಂಕಟ

"ಮಿತಿ ಮೀರಿದ ಹುಡುಗಾಟ, ತರುವುದು ಸಂಕಟ" — "Pranks that cross the limit will bring trouble." (The moral printed at the end of the story).

ಪದಗಳ ಅರ್ಥword meanings

KannadaPronunciationMeaning
| ಧಾವಿಸು—ಓಡಿ ಬರುವುದು; ಅವಸರದಿಂದ ಬರುವುದು
| | ನಸುನಗು—ಸ್ವಲ್ಪನಗು; ಹುಸಿನಗೆ
| ಮೋಜು—ಆಟ; ತಮಾಷೆ; ವಿನೋದ
| | ಗೊಣಗು—ಆಕ್ಷೇಪ; ವಟಗುಡು; ಅಸ್ಪಷ್ಟವಾಗಿ ಮಾತನಾಡು

ಅಭ್ಯಾಸexercises from the textbook

Model answers — a guide, not the only correct wording. Check with your teacher.

II. ಪ್ರಶ್ನೆಗಳು :

ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಹುಡುಗನು ಕುರಿಗಳನ್ನು ಮೇಯಿಸಲು ಎಲ್ಲಿಗೆ ಹೋಗುತ್ತಿದ್ದನು?

    Answer

    ಹುಡುಗನು ಕುರಿಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದನು.

  2. ೨. ಹುಡುಗನು ಕುರಿಗಳನ್ನು ಮೇಯಲು ಬಿಟ್ಟು ಏನು ಮಾಡುತ್ತಿದ್ದನು?

    Answer

    ಹುಡುಗನು ಕುರಿಗಳನ್ನು ಮೇಯಲು ಬಿಟ್ಟು ಬಯಲಲ್ಲಿ ಆಟವಾಡುತ್ತಿದ್ದನು.

  3. ೩. ಕುರಿ ಕಾಯುವ ಹುಡುಗ ತಮಾಷೆಗಾಗಿ ಜನರಿಗೆ ಕೇಳುವಂತೆ ಏನೆಂದು ಕೂಗಿದನು?

    Answer

    ಕುರಿ ಕಾಯುವ ಹುಡುಗ ತಮಾಷೆಗಾಗಿ ‘ತೋಳ ಬಂತು, ತೋಳ ಬಂತು, ಕಾಪಾಡಿ, ಬೇಗಬನ್ನಿ’ ಎಂದು ಕೂಗಿದನು.

  4. ೪. ಜನರು ಕುರಿ ಕಾಯುವ ಹುಡುಗನ ಬಳಿ ಏಕೆ ಓಡಿ ಬಂದರು?

    Answer

    ಹುಡುಗನು ತೋಳ ಬಂತು ಎಂದು ಕೂಗಿದ್ದರಿಂದ ಜನರು ಅವನ ಸಹಾಯಕ್ಕೆ ಓಡಿ ಬಂದರು.

  5. ೫. ನಿಜವಾದ ತೋಳ ಬಂದರೂ ಜನರು ಹುಡುಗನ ಸಹಾಯಕ್ಕೆ ಏಕೆ ಬರಲಿಲ್ಲ?

    Answer

    ಜನರು ಹುಡುಗನು ಸುಳ್ಳು ಹೇಳುತ್ತಿದ್ದಾನೆ ಎಂದು ಭಾವಿಸಿದ್ದರಿಂದ ಅವರು ಸಹಾಯಕ್ಕೆ ಬರಲಿಲ್ಲ.

  6. ೬. ತೋಳ ಬಂತು ತೋಳ - ಕಥೆಯ ನೀತಿ ಏನು?

    Answer

    ಈ ಕಥೆಯ ನೀತಿ ‘ಮಿತಿ ಮೀರಿದ ಹುಡುಗಾಟ, ತರುವುದು ಸಂಕಟ’ ಎಂಬುದಾಗಿದೆ.

III. ಭಾಷಾಭ್ಯಾಸ :

ಈ ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.

  1. ೧. ತಮಾಷೆ : ........................................................................................

    Model sentence

    ತಮಾಷೆ: ನನ್ನ ತಮ್ಮ ಯಾವಾಗಲೂ ತಮಾಷೆ ಮಾಡುತ್ತಾನೆ.

  2. ೨. ಧಾವಿಸು : ........................................................................................

    Model sentence

    ಧಾವಿಸು: ಮಳೆ ಬಂದಾಗ ನಾನು ಮನೆಗೆ ಧಾವಿಸಿದೆ.

  3. ೩. ಗೊಣಗು : ........................................................................................

    Model sentence

    ಗೊಣಗು: ಅಣ್ಣ ನನಗೆ ಚಾಕಲೇಟ್ ಕೊಡದಿದ್ದಾಗ ನಾನು ಗೊಣಗಿದೆ.

IV. ಚಟುವಟಿಕೆ :

  1. ‘ತೋಳ ಬಂತು ತೋಳ’ ಕಥೆಯನ್ನು ನಿಮ್ಮದೇ ಧಾಟಿಯಲ್ಲಿ ಹಾವ ಭಾವಗಳೊಂದಿಗೆ ಎಲ್ಲರಿಗೂ ಕೇಳುವಂತೆ ತರಗತಿಯಲ್ಲಿ ಹೇಳಿರಿ.

    Answer

    ಒಂದು ಊರಿನಲ್ಲಿ ಒಬ್ಬ ಹುಡುಗನಿದ್ದ. ಅವನು ಪ್ರತಿದಿನ ಕುರಿ ಮೇಯಿಸಲು ಕಾಡಿಗೆ ಹೋಗುತ್ತಿದ್ದ. ಒಂದು ದಿನ ಅವನಿಗೆ ತಮಾಷೆ ಮಾಡಬೇಕೆನಿಸಿತು. ‘ಅಯ್ಯೋ! ತೋಳ ಬಂತು! ತೋಳ ಬಂತು! ಕಾಪಾಡಿ!’ ಎಂದು ಜೋರಾಗಿ ಕೂಗಿದ. ಜನರು ಓಡೋಡಿ ಬಂದರು, ಆದರೆ ತೋಳ ಇರಲಿಲ್ಲ. ಹುಡುಗ ನಸುನಕ್ಕ. ಮರುದಿನವೂ ಅದೇ ತಮಾಷೆ ಮಾಡಿದ. ಜನರು ಗೊಣಗುತ್ತಾ ಹಿಂತಿರುಗಿದರು. ಸ್ವಲ್ಪ ಸಮಯದ ನಂತರ ನಿಜವಾಗಿಯೂ ತೋಳ ಬಂತು! ಅದು ಕುರಿಗಳನ್ನು ಹಿಡಿದು ತಿನ್ನಲಾರಂಭಿಸಿತು. ಹುಡುಗ ಅಳುತ್ತಾ ‘ತೋಳ ಬಂದಿದೆ! ಕಾಪಾಡಿ!’ ಎಂದು ಕೂಗಿದ. ಆದರೆ ಜನರು ‘ಈ ಸುಳ್ಳುಗಾರನಿಗೆ ಮತ್ತೆ ಸಹಾಯ ಮಾಡುವುದಿಲ್ಲ’ ಎಂದುಕೊಂಡರು. ಯಾರೂ ಬರಲಿಲ್ಲ. ತೋಳ ಕುರಿಗಳನ್ನೆಲ್ಲ ತಿಂದು ಹೊಟ್ಟೆ ತುಂಬಿಸಿಕೊಂಡಿತು. ಹುಡುಗ ಅಳುತ್ತಾ ಮನೆಗೆ ಹಿಂತಿರುಗಿದ. ಆದ್ದರಿಂದ ಮಕ್ಕಳೇ, ಮಿತಿ ಮೀರಿದ ಹುಡುಗಾಟ ಸಂಕಟ ತರುತ್ತದೆ ಎಂಬುದನ್ನು ನೆನಪಿಡಿ.