CRECT Education

Class 6 Kannada Second Language Lesson 2: This Soil is Ours | KTBS Poem

Description

Walk through the poem "ಈ ಮಣ್ಣು ನಮ್ಮದು" stanza by stanza, learn key vocabulary, and test comprehension with exercise questions.

ಪದ್ಯ (poem) · ಆರ್. ಎನ್. ಜಯಗೋಪಾಲ್

ಪಠ್ಯFull text

**ಪದ್ಯ ಪ್ರವೇಶ :** ನಾವೆಲ್ಲರೂ ಒಂದು ಕುಟುಂಬದಲ್ಲಿ ವಾಸಿಸುತ್ತೇವೆ. ಅವರನ್ನು ನನ್ನ ತಂದೆ, ನನ್ನ ತಾಯಿ, ನನ್ನ ಅಣ್ಣ, ನನ್ನ ಅಕ್ಕ ಎಂದು ಹೆಮ್ಮೆಯಿಂದ ಗುರುತಿಸುತ್ತೇವೆ. ಇದೇ ಬಗೆಯ ಅಭಿಮಾನ ನಾವು ಹುಟ್ಟಿದ ದೇಶದ ಬಗ್ಗೆ ಇರಬೇಕು. ನಾವೆಲ್ಲರೂ ಭಾರತೀಯರು. ಭಾರತ ಮಾತೆಯ ಮಕ್ಕಳು. ಭಾರತದಲ್ಲಿ ವಿವಿಧ ಧರ್ಮಗಳಿವೆ. ವಿವಿಧ ಭಾಷೆಗಳಿವೆ. ವಿವಿಧ ಸಂಸ್ಕೃತಿಗಳಿವೆ. ಇತಿಹಾಸವಿದೆ. ಆದಕಾರಣ, ಪ್ರತಿಯೊಬ್ಬರಿಗೂ ತನ್ನದೇಶದ ಬಗ್ಗೆ ಅಭಿಮಾನ ಇರಬೇಕು. “ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲು” ಎಂದು ಸಂಸ್ಕೃತ ಸುಭಾಷಿತ ಹೇಳುತ್ತದೆ. ಕುವೆಂಪುರವರು “ದೇಶ ನನ್ನದು, ನಾಡು ನನ್ನದು ಎನ್ನದ ಎದೆ ಸುಡುಗಾಡು” ಎನ್ನುತ್ತಾರೆ. ಇಲ್ಲಿ ಕವಿ ಆರ್.ಎನ್. ಜಯಗೋಪಾಲರು ಈ ದೇಶವನ್ನು ವರ್ಣಿಸಿ ದೇಶಭಕ್ತಿಯನ್ನು ಮೆರೆದಿದ್ದಾರೆ. ಈ ಮಣ್ಣು ನಮ್ಮದು ಈ ಗಾಳಿ ನಮ್ಮದು ಕಲಕಲನೆ ಹರಿಯುತಿಹ ನೀರು ನಮ್ಮದು ಕಣಕಣದಲು ಭಾರತೀಯ ರಕ್ತ ನಮ್ಮದು || ಪ || ನಮ್ಮ ಕಾಯ್ವ ಹಿಮಾಲಯವು ತಂದೆ ಸಮಾನ ಗಂಗೆ ತುಂಗೆ ಕಾವೇರಿಯು ತಾಯಿ ಸಮಾನ ಈ ದೇಶದ ಜನರೆಲ್ಲರೂ ಸೋದರ ಸಮಾನ ಈ ನಾಡಿನ ಹೃದಯವದು ದೈವ ಸನ್ನಿಧಾನ || ೧ || ಅಜಂತ ಎಲ್ಲೋರ ಹಳೇಬೀಡು ಬೇಲೂರು ಶಿಲೆಗಳಿವು ಕಲೆಯ ಆಗರ ಹಿಂದೂ, ಬುದ್ಧ, ಜೈನ, ಕ್ರೈಸ್ತ, ಮುಸಲ್ಮಾನ ಧರ್ಮಗಳ ಮಹಾಸಾಗರ || ೨ || ತಂಗಾಳಿಗೆ ತಲೆದೂಗುವ ಪೈರಿನ ಹಾಡು ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು ವಿಜ್ಞಾನವು ಅಜ್ಞಾನವ ಗೆಲ್ಲುವ ಹಾಡು ಹೊಸ ಭಾರತ ನಿರ್ಮಾಣವು ಸಾಗಿದೆ ನೋಡು || ೩ ||

ಪದಗಳ ಅರ್ಥword meanings

KannadaPronunciationMeaning
ಕಾಯ್ವಕಾಪಾಡುವ, ಕಾಯುವ; ದೈವ- ದೇವರು; ಸನ್ನಿಧಾನ- ಆಶ್ರಯ, ಸಮೀಪ; ಆಗರ- ನೆಲೆ, ಗಣಿ; ತಂಗಾಳಿ- ತಂಪಾದ ಗಾಳಿ; ಪೈರು- ಬೆಳೆ; ನಿರ್ಮಾಣ - ಕಟ್ಟು
**ಗಮನಿಸಿ ತಿಳಿ** ಕಲಕಲನೀರು ಹರಿಯುವಾಗ ಉಂಟಾಗುವ ಧ್ವನಿ; ಕಣಕಣ- ವಸ್ತುವಿನ ಅತ್ಯಂತ ಸಣ್ಣ ಮತ್ತು ಸೂಕ್ಷ್ಮ ಭಾಗ (ಅಂಶ); ತಲೆದೂಗು- ತಲೆಯಾಡಿಸು, ಮೆಚ್ಚು; ಅಜ್ಞಾನ- ಅರಿವಿಲ್ಲದಿರುವಿಕೆ, ತಪ್ಪು ತಿಳುವಳಿಕೆ

ಅಭ್ಯಾಸexercises from the textbook

Model answers — a guide, not the only correct wording. Check with your teacher.

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ನೀರು ಹರಿಯುವಾಗ ಉಂಟಾಗುವ ಧ್ವನಿ ಹೇಗಿರುತ್ತದೆ?

    Answer

    ನೀರು ಹರಿಯುವಾಗ ಉಂಟಾಗುವ ಧ್ವನಿ ಕಲಕಲ ಎಂದಿರುತ್ತದೆ.

  2. ೨. ಈ ನಾಡಿನ ಹೃದಯವು ಯಾರ ಸನ್ನಿಧಾನವಾಗಿದೆ?

    Answer

    ಈ ನಾಡಿನ ಹೃದಯವು ದೈವ ಸನ್ನಿಧಾನವಾಗಿದೆ.

  3. ೩. ಯಾವ ಸ್ಥಳಗಳು ಕಲೆಯ ಆಗರಗಳಾಗಿವೆ?

    Answer

    ಅಜಂತ, ಎಲ್ಲೋರ, ಹಳೇಬೀಡು ಮತ್ತು ಬೇಲೂರು ಸ್ಥಳಗಳು ಕಲೆಯ ಆಗರಗಳಾಗಿವೆ.

  4. ೪. ತಂಗಾಳಿಗೆ ಯಾವುದು ತಲೆದೂಗುತ್ತದೆ?

    Answer

    ತಂಗಾಳಿಗೆ ಪೈರಿನ ಹಾಡು ತಲೆದೂಗುತ್ತದೆ.

  5. ೫. ಪೈರಿನ ಹಾಡಿಗೆ ತಾಳ ಕೊಡುವುದು ಯಾವುದು?

    Answer

    ಪೈರಿನ ಹಾಡಿಗೆ ತಾಳ ಕೊಡುವುದು ಯಂತ್ರದ ಜಾಡು.

  6. ೬. ವಿಜ್ಞಾನವು ಯಾವುದನ್ನು ಗೆಲ್ಲುವ ಹಾಡಾಗಿದೆ?

    Answer

    ವಿಜ್ಞಾನವು ಅಜ್ಞಾನವನ್ನು ಗೆಲ್ಲುವ ಹಾಡಾಗಿದೆ.

ಆ) 'ಅ' ಪಟ್ಟಿಯ ಪದಗಳನ್ನು 'ಬ' ಪಟ್ಟಿಯ ಪದಗಳಿಗೆ ಹೊಂದಿಸಿ ಬರೆಯಿರಿ.

  1. | ಅ | ಬ |

  2. |---|---|

  3. | 1) ಈ ನಾಡಿನ ಹೃದಯ | ತಂದೆ ಸಮಾನ |

    Answer

    1) ಈ ನಾಡಿನ ಹೃದಯ - ದೈವ ಸನ್ನಿಧಾನ

  4. | 2) ಬೇಲೂರು ಹಳೇಬೀಡು | ತಾಯಿ ಸಮಾನ |

    Answer

    2) ಬೇಲೂರು ಹಳೇಬೀಡು - ಕಲೆಯ ಆಗರ

  5. | 3) ಈ ದೇಶದ ಜನರೆಲ್ಲರೂ | ಸೋದರ ಸಮಾನ |

    Answer

    3) ಈ ದೇಶದ ಜನರೆಲ್ಲರೂ - ಸೋದರ ಸಮಾನ

  6. | 4) ಹಿಮಾಲಯ | ದೈವ ಸನ್ನಿಧಾನ |

    Answer

    4) ಹಿಮಾಲಯ - ತಂದೆ ಸಮಾನ

  7. | 5) ಗಂಗೆ, ತುಂಗೆ | ಕಲೆಯ ಆಗರ |

    Answer

    5) ಗಂಗೆ, ತುಂಗೆ - ತಾಯಿ ಸಮಾನ

ಇ) ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ.

  1. ೧. ನೀರು ಹರಿಯುವ ಧ್ವನಿಯು ........................................................

    Answer

    ನೀರು ಹರಿಯುವ ಧ್ವನಿಯು ಕಲಕಲ.

  2. ಅ) ಜಲಜಲ ಆ) ಕಲಕಲ ಇ) ಪಳಪಳ ಈ) ಗಲಗಲ

    Answer

    ನೀರು ಹರಿಯುವ ಧ್ವನಿಯು ಕಲಕಲ.

  3. ೨. ಈ ನಾಡಿನ ಹೃದಯವಾಗಿದೆ ........................................................

    Answer

    ಈ ನಾಡಿನ ಹೃದಯವಾಗಿದೆ ದೈವ ಸನ್ನಿಧಾನ.

  4. ಅ) ದೈವ ಸನ್ನಿಧಾನ ಆ) ವಿಷ್ಣು ಸನ್ನಿಧಾನ ಇ) ಅಲ್ಲಾನ ಸನ್ನಿಧಾನ

    Answer

    ಈ ನಾಡಿನ ಹೃದಯವಾಗಿದೆ ದೈವ ಸನ್ನಿಧಾನ.

  5. ಈ) ಕ್ರಿಸ್ತನ ಸನ್ನಿಧಾನ

    Answer

    ಈ ನಾಡಿನ ಹೃದಯವಾಗಿದೆ ದೈವ ಸನ್ನಿಧಾನ.

  6. ೩. ಅಜಂತ, ಎಲ್ಲೋರ, ಹಳೇಬೀಡು, ಬೇಲೂರು ಯಾವುದರ ಆಗರವಾಗಿವೆ?

    Answer

    ಅಜಂತ, ಎಲ್ಲೋರ, ಹಳೇಬೀಡು, ಬೇಲೂರು ಕಲೆಗಳ ಆಗರವಾಗಿವೆ.

  7. ಅ) ಕಲ್ಲುಗಳ ಆಗರ ಆ) ಗುಡಿಗಳ ಆಗರ

    Answer

    ಅಜಂತ, ಎಲ್ಲೋರ, ಹಳೇಬೀಡು, ಬೇಲೂರು ಕಲೆಗಳ ಆಗರವಾಗಿವೆ.

  8. ಇ) ನುಡಿಗಳ ಆಗರ ಈ) ಕಲೆಗಳ ಆಗರ

    Answer

    ಅಜಂತ, ಎಲ್ಲೋರ, ಹಳೇಬೀಡು, ಬೇಲೂರು ಕಲೆಗಳ ಆಗರವಾಗಿವೆ.

  9. ೪. ತಂಗಾಳಿಗೆ ತಲೆದೂಗುವ ಪೈರಿನ ಹಾಡು ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು, ಈ ಸಾಲುಗಳ ಅರ್ಥವು ಈ ರೀತಿಯಾಗಿದೆ : ........................................................

    Answer

    ತಂಗಾಳಿಗೆ ತಲೆದೂಗುವ ಪೈರಿನ ಹಾಡು ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು, ಈ ಸಾಲುಗಳ ಅರ್ಥವು ಹೊಸ ಹೊಸ ಯಂತ್ರಗಳು ಬಳಕೆಯಲ್ಲಿ ಬಂದು ರೈತರ ಅಭಿವೃದ್ಧಿಗೆ ಕಾರಣವಾಗಿವೆ ಎಂಬುದಾಗಿದೆ.

  10. ಅ) ಹೊಸ ಹೊಸ ಯಂತ್ರಗಳು ಬಳಕೆಯಲ್ಲಿ ಬಂದು ರೈತರ ಅಭಿವೃದ್ಧಿಗೆ ಕಾರಣವಾಗಿವೆ.

    Answer

    ತಂಗಾಳಿಗೆ ತಲೆದೂಗುವ ಪೈರಿನ ಹಾಡು ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು, ಈ ಸಾಲುಗಳ ಅರ್ಥವು ಹೊಸ ಹೊಸ ಯಂತ್ರಗಳು ಬಳಕೆಯಲ್ಲಿ ಬಂದು ರೈತರ ಅಭಿವೃದ್ಧಿಗೆ ಕಾರಣವಾಗಿವೆ ಎಂಬುದಾಗಿದೆ.

  11. ಆ) ತಂಗಾಳಿಗೆ ಯಂತ್ರಗಳು ತಲೆದೂಗುತ್ತವೆ. ಪೈರುಗಳು ಹಾಡುತ್ತವೆ.

    Answer

    ತಂಗಾಳಿಗೆ ತಲೆದೂಗುವ ಪೈರಿನ ಹಾಡು ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು, ಈ ಸಾಲುಗಳ ಅರ್ಥವು ಹೊಸ ಹೊಸ ಯಂತ್ರಗಳು ಬಳಕೆಯಲ್ಲಿ ಬಂದು ರೈತರ ಅಭಿವೃದ್ಧಿಗೆ ಕಾರಣವಾಗಿವೆ ಎಂಬುದಾಗಿದೆ.

  12. ಇ) ಯಂತ್ರಗಳು ಹಾಡುತ್ತವೆ. ತಂಗಾಳಿ ತಲೆ ದೂಗುತ್ತದೆ.

    Answer

    ತಂಗಾಳಿಗೆ ತಲೆದೂಗುವ ಪೈರಿನ ಹಾಡು ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು, ಈ ಸಾಲುಗಳ ಅರ್ಥವು ಹೊಸ ಹೊಸ ಯಂತ್ರಗಳು ಬಳಕೆಯಲ್ಲಿ ಬಂದು ರೈತರ ಅಭಿವೃದ್ಧಿಗೆ ಕಾರಣವಾಗಿವೆ ಎಂಬುದಾಗಿದೆ.

  13. ಈ) ತಂಗಾಳಿ, ಯಂತ್ರಗಳು, ತಲೆದೂಗಿ ಹಾಡುತ್ತಿವೆ.

    Answer

    ತಂಗಾಳಿಗೆ ತಲೆದೂಗುವ ಪೈರಿನ ಹಾಡು ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು, ಈ ಸಾಲುಗಳ ಅರ್ಥವು ಹೊಸ ಹೊಸ ಯಂತ್ರಗಳು ಬಳಕೆಯಲ್ಲಿ ಬಂದು ರೈತರ ಅಭಿವೃದ್ಧಿಗೆ ಕಾರಣವಾಗಿವೆ ಎಂಬುದಾಗಿದೆ.

  14. ೫. ವಿಜ್ಞಾನವು ಅಜ್ಞಾನವನ್ನು ಗೆಲ್ಲುವ ಹಾಡು, ಹೊಸ ಭಾರತ ನಿರ್ಮಾಣ ಸಾಗಿದೆ ಈ ಸಾಲುಗಳ ಅರ್ಥ ........................................................

    Answer

    ವಿಜ್ಞಾನವು ಅಜ್ಞಾನವನ್ನು ಗೆಲ್ಲುವ ಹಾಡು, ಹೊಸ ಭಾರತ ನಿರ್ಮಾಣ ಸಾಗಿದೆ ಈ ಸಾಲುಗಳ ಅರ್ಥ ವಿಜ್ಞಾನವು ಅಜ್ಞಾನವನ್ನು ಗೆದ್ದು, ಹೊಸ ಭಾರತದ ನಿರ್ಮಾಣ ಕೈಗೊಂಡಿದೆ ಎಂಬುದಾಗಿದೆ.

  15. ಅ) ಅಜ್ಞಾನವು ವಿಜ್ಞಾನವನ್ನು ಗೆಲ್ಲುತ್ತದೆ. ಅದರಿಂದ ಹೊಸ ಭಾರತ ನಿರ್ಮಾಣವಾಗುತ್ತದೆ.

    Answer

    ವಿಜ್ಞಾನವು ಅಜ್ಞಾನವನ್ನು ಗೆಲ್ಲುವ ಹಾಡು, ಹೊಸ ಭಾರತ ನಿರ್ಮಾಣ ಸಾಗಿದೆ ಈ ಸಾಲುಗಳ ಅರ್ಥ ವಿಜ್ಞಾನವು ಅಜ್ಞಾನವನ್ನು ಗೆದ್ದು, ಹೊಸ ಭಾರತದ ನಿರ್ಮಾಣ ಕೈಗೊಂಡಿದೆ ಎಂಬುದಾಗಿದೆ.

  16. ಆ) ವಿಜ್ಞಾನವು ಅಜ್ಞಾನವನ್ನು ಗೆದ್ದು, ಹೊಸ ಭಾರತದ ನಿರ್ಮಾಣ ಕೈಗೊಂಡಿದೆ.

    Answer

    ವಿಜ್ಞಾನವು ಅಜ್ಞಾನವನ್ನು ಗೆಲ್ಲುವ ಹಾಡು, ಹೊಸ ಭಾರತ ನಿರ್ಮಾಣ ಸಾಗಿದೆ ಈ ಸಾಲುಗಳ ಅರ್ಥ ವಿಜ್ಞಾನವು ಅಜ್ಞಾನವನ್ನು ಗೆದ್ದು, ಹೊಸ ಭಾರತದ ನಿರ್ಮಾಣ ಕೈಗೊಂಡಿದೆ ಎಂಬುದಾಗಿದೆ.

  17. ಇ) ಹೊಸ ಭಾರತ ನಿರ್ಮಾಣವು ಅಜ್ಞಾನವನ್ನು ಗೆಲ್ಲುತ್ತದೆ.

    Answer

    ವಿಜ್ಞಾನವು ಅಜ್ಞಾನವನ್ನು ಗೆಲ್ಲುವ ಹಾಡು, ಹೊಸ ಭಾರತ ನಿರ್ಮಾಣ ಸಾಗಿದೆ ಈ ಸಾಲುಗಳ ಅರ್ಥ ವಿಜ್ಞಾನವು ಅಜ್ಞಾನವನ್ನು ಗೆದ್ದು, ಹೊಸ ಭಾರತದ ನಿರ್ಮಾಣ ಕೈಗೊಂಡಿದೆ ಎಂಬುದಾಗಿದೆ.

  18. ಈ) ಹೊಸ ಭಾರತ ನಿರ್ಮಾಣವು ವಿಜ್ಞಾನವನ್ನು ಗೆಲ್ಲುತ್ತದೆ.

    Answer

    ವಿಜ್ಞಾನವು ಅಜ್ಞಾನವನ್ನು ಗೆಲ್ಲುವ ಹಾಡು, ಹೊಸ ಭಾರತ ನಿರ್ಮಾಣ ಸಾಗಿದೆ ಈ ಸಾಲುಗಳ ಅರ್ಥ ವಿಜ್ಞಾನವು ಅಜ್ಞಾನವನ್ನು ಗೆದ್ದು, ಹೊಸ ಭಾರತದ ನಿರ್ಮಾಣ ಕೈಗೊಂಡಿದೆ ಎಂಬುದಾಗಿದೆ.

III. ಭಾಷಾಭ್ಯಾಸ :

ಅ) ಈ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬರೆಯಿರಿ.

  1. ೧. ಭಾರತ : ........................................................................................

    Model sentence

    ಭಾರತ: ನಮ್ಮ ದೇಶ ಭಾರತ.

  2. ೨. ಸನ್ನಿಧಾನ : ........................................................................................

    Model sentence

    ಸನ್ನಿಧಾನ: ನಮ್ಮ ಮನೆಯಲ್ಲಿ ದೇವರ ಸನ್ನಿಧಾನವಿದೆ.

  3. ೩. ಆಗರ : ........................................................................................

    Model sentence

    ಆಗರ: ನಮ್ಮ ಊರು ಹಣ್ಣುಗಳ ಆಗರವಾಗಿದೆ.

  4. ೪. ತಲೆದೂಗು : ........................................................................................

    Model sentence

    ತಲೆದೂಗು: ಅಮ್ಮನ ಮಾತಿಗೆ ನಾನು ತಲೆದೂಗಿದೆ.

  5. ೫. ನಿರ್ಮಾಣ : ........................................................................................

    Model sentence

    ನಿರ್ಮಾಣ: ನಮ್ಮ ಶಾಲೆಯಲ್ಲಿ ಹೊಸ ಕಟ್ಟಡದ ನಿರ್ಮಾಣ ನಡೆಯುತ್ತಿದೆ.

ಆ) “ಈ ಮಣ್ಣು ನಮ್ಮದು” ಕವಿತೆಯಲ್ಲಿರುವ ಪ್ರಾಸ ಪದಗಳನ್ನು ಗಮನಿಸಿ ಓದಿರಿ.

  1. ಆಗರ - ಸಾಗರ

  2. ಹಾಡು - ಜಾಡು

ಇ) ಈ ವಾಕ್ಯಗಳನ್ನು ಗಮನಿಸಿ ಓದಿರಿ.

  1. ೧. ಕಲಕಲ, ಸರಸರ, ಕಣಕಣ, ಬೌ ಬೌ, ಕಾ ಕಾ ಇವು ಎರಡೆರಡು ಸಲ ಪ್ರಯೋಗವಾಗಿ ವಿಶೇಷ ಅರ್ಥ ನೀಡುತ್ತವೆ.

  2. ೨. ಯಾವುದೇ ವಸ್ತುವಿನ ಅತಿ ಸಣ್ಣ ಹಾಗೂ ಸೂಕ್ಷ್ಮ ಭಾಗಕ್ಕೆ ಕಣವೆನ್ನುತ್ತಾರೆ. ಅದು ಮಣ್ಣಿನ ಕಣವಾಗಿರಬಹುದು. ರಕ್ತದ ಕಣವೂ ಆಗಿರಬಹುದು. ನಮ್ಮ ರಕ್ತದ ಕಣಕಣದಲ್ಲೂ ಭಾರತೀಯತೆ ತುಂಬಿದೆ.

  3. ೩. ಹಾವು ಸರಸರನೆ ಹರಿಯುತ್ತದೆ.

  4. ೪. ಕಾಗೆ ಕಾ..ಕಾ.. ಎಂದು ಕೂಗಿತು.

  5. ೫. ನಾಯಿ ಬೌ ಬೌ ಎಂದು ಬೊಗಳಿತು.

ಮಾದರಿಯಂತೆ ಯಾವುದರ ಧ್ವನಿ ತಿಳಿಸಿ ಬರೆಯಿರಿ.

  1. | ಧ್ವನಿ | ಯಾವುದರ ಧ್ವನಿ |

  2. |---|---|

  3. | ಮಾದರಿ : ಕಲ ಕಲ | ನದಿ ಹರಿಯುವಾಗ ಉಂಟಾಗುವ ಸಪ್ಪಳ |

  4. | ಸರ ಸರ | ........................................................................................ |

    Answer

    ಸರ ಸರ | ಹಾವು ಹರಿಯುವಾಗ ಉಂಟಾಗುವ ಸಪ್ಪಳ

  5. | ಪಟ ಪಟ | ........................................................................................ |

    Answer

    ಪಟ ಪಟ | __NOT_IN_TEXT__

  6. | ಲಟ ಲಟ | ........................................................................................ |

    Answer

    ಲಟ ಲಟ | __NOT_IN_TEXT__

  7. | ಮ್ಯಾಂವ್ ಮ್ಯಾಂವ್ | ........................................................................................ |

    Answer

    ಮ್ಯಾಂವ್ ಮ್ಯಾಂವ್ | __NOT_IN_TEXT__

  8. | ಪರ ಪರ | ........................................................................................ |

    Answer

    ಪರ ಪರ | __NOT_IN_TEXT__

IV. ಚಟುವಟಿಕೆಗಳು :

ದೇಶಭಕ್ತಿ ಗೀತೆಗಳನ್ನು ಸಂಗ್ರಹ ಮಾಡಿರಿ.

  1. ೧. ಸಾರೆ ಜಹಾಂಸೆ ಅಚ್ಚಾ

  2. ೨. ವಂದೇ ಮಾತರಂ ಗೀತೆ

  3. ೩. ಶಂ ಗು ಬಿರಾದಾರ ಅವರ 'ನಾವು ಎಳೆಯರು ನಾವು ಗೆಳೆಯರು'

  4. ೪. ಕುವೆಂಪು ರವರ 'ಜಯ ಭಾರತ ಜನನಿಯ ತನುಜಾತೆ'

Interactive Lab