CRECT Education

Class 6 Kannada Lesson 20: Enthusiasm for Life | KTBS Second Language – Learn the Story

Description

Learn the story 'Enthusiasm for Life' from Class 6 Kannada Second Language - Bhagat Singh's inspiring courage, vocabulary, and more.

ಗದ್ಯ (prose) · ಸಂಪಾದಿತ

ಪಠ್ಯFull text

ಭಾಗ - ೩ ಪೂರಕ ಓದು ೨. ಜೀವನೋತ್ಸಾಹ ಜೀವನೋತ್ಸಾಹ ಎಂದರೆ ಎಲ್ಲಿಲ್ಲದ ಹುರುಪು. ಚೇತನ ಚಿಮ್ಮುವ, ಆಟವಾಡುವ ಸಮಯ. ಕೆಲವರು ಸಣ್ಣಪುಟ್ಟ ಕಾರಣಕ್ಕಾಗಿ, ಪರೀಕ್ಷೆ ಫೇಲಾಯಿತು ಎಂದು ಖಿನ್ನರಾಗುತ್ತಾರೆ. ನಿರಾಶರಾಗುತ್ತಾರೆ. ಇನ್ನೂ ಸಾವೇ ಗತಿ ಎನ್ನುತ್ತಾರೆ. ಅದು ತಪ್ಪು. ಹೊಸ ಹುರುಪಿನಿಂದ ಮುಂದುವರೆಯಬೇಕು. ಅದನ್ನು ಸಾಧಿಸುವ ಛಲ ಇರಬೇಕು. ಈ ಸಂದರ್ಭ ನೋಡಿ; ಸ್ವಾತಂತ್ರ್ಯ ಹೋರಾಟದ ಕಾಲ. ಭಗತ್‌ಸಿಂಗ್ ಸ್ವಾತಂತ್ರ್ಯಕ್ಕೆ ಅಡ್ಡಿಯಾದ ಇಂಗ್ಲಿಷ್ ಅಧಿಕಾರಿಯನ್ನು ಕೊಂದನು. ಅವನಿಗೆ ಬ್ರಿಟಿಷ್ ಸರ್ಕಾರ ಗಲ್ಲು ಶಿಕ್ಷೆ ವಿಧಿಸಿತು. ಇಂದೋ ನಾಳೆಯೋ ಗಲ್ಲಿಗೇರಿಸುವ ಸಮಯ. ಆಗ ಜೈಲಿನಲ್ಲಿಯೂ ಭಗತ್‌ಸಿಂಗ್ ವ್ಯಾಯಾಮ ಮಾಡುತ್ತಿದ್ದನು. ಇಂದು ಅಥವಾ ನಾಳೆ ಗಲ್ಲಿಗೆ ಏರುವ ನೀನು ಏಕೆ ವ್ಯಾಯಾಮ ಮಾಡುವೆ? ಏನನ್ನು ಸಾಧಿಸುವೆ? ಎಂದು ಇಂಗ್ಲಿಷ್ ಅಧಿಕಾರಿ ಪ್ರಶ್ನಿಸಿದಾಗ ನಾನು ಮರಣ ದೇವತೆಯನ್ನು ನಗುಮೊಗದಿಂದ ಸ್ವಾಗತಿಸಬೇಕಾಗಿದೆ. ನೀವು ನನ್ನ ದೇಹವನ್ನು ಕೊಲ್ಲಬಹುದು. ನನ್ನ ನಂಬಿಕೆಯ ಸ್ವಾತಂತ್ರ್ಯವನ್ನು ಕೊಲ್ಲಲಾರಿರಿ. ರಾಜ್ಯಗಳು ಉರುಳಿ ಹೋಗಬಹುದು. ನಮ್ಮ ನಂಬಿಕೆಗಳು, ಬದ್ಧತೆಗಳು ಅಮರವಾಗಿರಬೇಕು. ಮಕ್ಕಳೇ ಇದೇ ಜೀವನೋತ್ಸಾಹ. ಸಾವಿಗೂ ಹೆದರದ ನಂಬಿಕೆ, ಇಂತಹ ಬದ್ಧತೆ ನಮ್ಮದಾಗಬೇಕು. * * * *

"ಮಕ್ಕಳೇ ಇದೇ ಜೀವನೋತ್ಸಾಹ. ಸಾವಿಗೂ ಹೆದರದ ನಂಬಿಕೆ, ಇಂತಹ ಬದ್ಧತೆ ನಮ್ಮದಾಗಬೇಕು." — "Children, this is what enthusiasm for life means. A belief that fears not even death, such commitment should be ours." (The essay's own closing lines.)

Interactive Lab