CRECT Education

Class 6 Kannada Lesson 21: Memories of Mother | KTBS Second Language – Poem

Description

A beautiful Kannada poem by Dr. S. P. Padmini Nagaraju about a child's earliest memories of mother, taught with line-by-line reading, key vocabulary, and comprehension practice.

ಪದ್ಯ (poem) · ಡಾ. ಎಸ್. ಪಿ. ಪದ್ಮಿನಿ ನಾಗರಾಜು

ಪಠ್ಯFull text

ಅಮ್ಮನ ಬೆಚ್ಚಗಿನ ಮಡಿಲಲ್ಲಿ ಮಲಗಿದ್ದು ಎದೆ ಹಾಲು ಕುಡಿದು ತೊಡೆಯೇರಿ ಕುಣಿದಿದ್ದು ಅಮ್ಮನ ಕೈ ಹಿಡಿದು ಮೇಲೆದ್ದು ನಿಂತದ್ದು ಮೊದಲ ಸಲ ಹೊಸ್ತಿಲುದಾಟಿ ಹೊರಹೋದದ್ದು. ಅನ್ನಪ್ರಾಶನದಂದು ಅಪ್ಪ ಕಣ್ತುಂಬಿ ಹರಸಿದ್ದು ಸುತ್ತಲ ಮನೆಯವರಿಗೆ ಅಮ್ಮ ಸಿಹಿ ಹಂಚಿದ್ದು ಕೈ ಹಿಡಿದು ಅಕ್ಷಿಯಲಿ ಓಂಕಾರ ಬರೆಸಿದ್ದು ಜನಕೆ ನನ್ನನು ತೋರಿ ಹಿಗ್ಗಿ ಮೈ ಮರೆತಿದ್ದು ಬದುಕಿನಲಿ ಬಂಗಾರವೆಂದರೆ ಬಾಲ್ಯವೇ ನೋಡಮ್ಮ ಹೇಗೆ ಮರೆಯಲಿ ಬಾಲ್ಯಕಿಂತ ಸಿಹಿ ನಿನ್ನ ನೆನಪಮ್ಮ

Interactive Lab