CRECT Education

Class 6 Kannada Lesson 22: Sky Basket (ಆಕಾಶ ಬುಟ್ಟಿ) | KTBS Second Language

Description

A line-by-line journey through the poem 'Sky Basket' — vocabulary, practice, and comprehension for Class 6 Kannada second language learners.

ಪದ್ಯ (poem) · ಮಹಾಂತಪ್ರಿಯ (ಬಿ.ಶೇಖರಪ್ಪ)

ಪಠ್ಯFull text

ಆಕಾಶ ಬುಟ್ಟಿ ಮುಗಿಲ ಮುಟ್ಟಿ ಹಬ್ಬದ ಹರುಷವ ಸಾರುತಿದೆ ದೀಪವನೆತ್ತಿ ಬೆಳಕನು ಬಿತ್ತಿ ಮುತ್ತಿದ ಕತ್ತಲೆ ಕಳೆಯುತಿದೆ. ಚಿಣ್ಣರು ಕಟ್ಟಿದ ಬಿದಿರಿನ ಪುಟ್ಟಿ 'ಆರ್ಯಭಟ'ವನು ಹೋಲುತಿದೆ ಮಿರಿಮಿರಿ ಮಿಂಚುವ ಪರಿಪರಿ ಬಣ್ಣದ ಕಾಗದ ಬಟ್ಟೆಯ ತೊಟ್ಟಿದೆ ತಾರೆಯ ಕೂಡ ಗೆಳೆತನ ಮಾಡಲು ಗಗನದ ಗೂಡಿಗೆ ಹಾರುತಿದೆ ಅಡಗಿದ ಚಂದ್ರನ ಹುಡುಕಲು ಮೋಡದ ಒಳಗೆ ಬೆಳಕನು ಬೀರುತಿದೆ * * * * *

Interactive Lab