ಪದ್ಯ · ಚೆನ್ನವೀರ ಕಣವಿ
ಪಠ್ಯFull text
"ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲು" — "Mother and motherland are greater than heaven." (A Sanskrit subhashita quoted in the introduction).
ಅಭ್ಯಾಸexercises from the textbook
Model answers — a guide, not the only correct wording. Check with your teacher.
I. ಪದಗಳ ಅರ್ಥ :
| | |
|---|---|
| ಉಕ್ಕೇರು - ಹೆಚ್ಚಾಗು | ಋಣ - ಸಾಲ; ಹಂಗು. |
| ಒಕ್ಕಲು - ಬೇಸಾಯ | ಕಳೆ - ಕಾಂತಿ |
| ಚಣ - ಕ್ಷಣ | ಘನ - ಶ್ರೇಷ್ಠ; ಮಹತ್ವದ್ದು. |
| ನೆಲೆ - ವಾಸಸ್ಥಳ; ಆಶ್ರಯ. | ಪ್ರಾಚೀನ - ಹಿಂದಿನ |
| ಪ್ರಾಣ - ಉಸಿರು | ಭವಿಷ್ಯ - ನಾಳಿನ; ಮುಂದಿನ. |
| ವರ್ತಮಾನ - ಇಂದಿನ; ಪ್ರಸ್ತುತ. | ಸ್ವಚ್ಛಂದ - ಸ್ವತಂತ್ರವಾಗಿರು |
II. ಪ್ರಶ್ನೆಗಳು :
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಕಣವಿಯವರು ತನ್ನ ದೇಶ ಮತ್ತು ಜನರನ್ನು ಏನೆಂದು ಭಾವಿಸಿದ್ದಾರೆ?
Answerಕಣವಿಯವರು ತನ್ನ ದೇಶ ಮತ್ತು ಜನರನ್ನು ತನ್ನ ಮಾನ, ಪ್ರಾಣ ಮತ್ತು ಘನ ಎಂದು ಭಾವಿಸಿದ್ದಾರೆ.
೨. ಕವಿ ಕಣವಿಯವರು 'ನನ್ನ ದೇಶ ನನ್ನ ಜನ' ಪದ್ಯದಲ್ಲಿ ಋಣದ ಬಗ್ಗೆ ಏನೆಂದು ಹೇಳಿದ್ದಾರೆ?
Answerಕವಿ ಕಣವಿಯವರು ದೇಶದ ಋಣವನ್ನು ಈ ಒಂದೇ ಜನ್ಮದಲ್ಲಿ ತೀರಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
೩. ಕಣವಿಯವರು ಈ ನೆಲದ ಮಣ್ಣು ಮತ್ತು ಬೆಳೆ ಯಾವ ಬಣ್ಣದಲ್ಲಿವೆ ಎಂದು ಹೇಳಿದ್ದಾರೆ?
Answerಕಣವಿಯವರು ಈ ನೆಲದ ಮಣ್ಣು ಕೆಂಪು ಬಣ್ಣದ್ದು ಮತ್ತು ಬೆಳೆ ಹಸಿರು ಬಣ್ಣದ್ದು ಎಂದು ಹೇಳಿದ್ದಾರೆ.
೪. ನಮ್ಮ ಹಿರಿಯ ಒಕ್ಕಲು ಯಾವುವೆಂದು ಕಣವಿಯವರು ಹೇಳಿದ್ದಾರೆ?
Answerಕಣವಿಯವರು ಸೂರ್ಯ, ಚಂದ್ರ ಮತ್ತು ಚುಕ್ಕಿಗಳನ್ನು ನಮ್ಮ ಹಿರಿಯ ಒಕ್ಕಲು ಎಂದು ಹೇಳಿದ್ದಾರೆ.
೫. ಕವಿ ಕಣವಿಯವರು 'ಸ್ವಚ್ಛಂದದ ಹಕ್ಕಿಗಳು' ಎಂದು ಯಾರನ್ನು ಕರೆದಿದ್ದಾರೆ?
Answerಕವಿ ಕಣವಿಯವರು 'ಸ್ವಚ್ಛಂದದ ಹಕ್ಕಿಗಳು' ಎಂದು ನಮ್ಮ ದೇಶದ ಜನರನ್ನು ಕರೆದಿದ್ದಾರೆ.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಭಾರತ ದೇಶದ ವೈವಿಧ್ಯತೆಯನ್ನು ಕವಿ ಕಣವಿ ಹೇಗೆ ಬಣ್ಣಿಸಿದ್ದಾರೆ?
Answerಕವಿ ಕಣವಿಯವರು ಭಾರತ ದೇಶದಲ್ಲಿ ನೂರಾರು ಭಾವಗಳು, ಭಾಷೆಗಳು, ಬಣ್ಣಗಳು, ವೇಷಗಳು ಮತ್ತು ಕಲೆಗಳು ನೆಲೆಸಿವೆ ಎಂದು ವೈವಿಧ್ಯತೆಯನ್ನು ಬಣ್ಣಿಸಿದ್ದಾರೆ. ಈ ವೈವಿಧ್ಯತೆಯನ್ನು ಅವರು ಸ್ವಚ್ಛಂದವಾಗಿ ಹಾರುವ ಹಕ್ಕಿಗಳಿಗೆ ಹೋಲಿಸಿದ್ದಾರೆ.
೨. ಕಣವಿಯವರು ಭವಿಷ್ಯದ ಒಡಲಿಗೆ ನೀಡುವ ಸಂದೇಶವೇನು?
Answerಕವಿಯವರು ಪ್ರಾಚೀನ ಕಾಲದ ಕೆಟ್ಟ ಅಂಶಗಳನ್ನು ತೊಡೆದುಹಾಕಿ, ವರ್ತಮಾನದ ಜೀವಂತಿಕೆಯನ್ನು ಸ್ವೀಕರಿಸಬೇಕು ಎನ್ನುತ್ತಾರೆ. ಹೀಗೆ ಮಾಡಿದರೆ ನಮ್ಮ ಬಾಳಿನ ನದಿಯು ಭವಿಷ್ಯದ ಉದರಕ್ಕೆ ಉಕ್ಕಿ ಹರಿಯುತ್ತದೆ ಎಂಬುದು ಅವರ ಸಂದೇಶ.
೩. ಕಣವಿಯವರು ಸಮೃದ್ಧ ಬಾಳು ಹೇಗೆ ಉಂಟಾಗಬೇಕು ಎಂದಿದ್ದಾರೆ?
Answerಮೂಕ ಜನರು ತಮ್ಮ ಮೌನವನ್ನು ಕೊಡವಿ ಎದ್ದು ನಿಲ್ಲಬೇಕು. ಅವರಿಗೆ ನಾವು ಕೈ ಹಿಡಿದು ಸಹಾಯ ಮಾಡಿದರೆ ಎಲ್ಲ ಸದ್ಗುಣಗಳು ಜಾಗೃತವಾಗಿ ಸಮೃದ್ಧ ಬಾಳು ಉಂಟಾಗುತ್ತದೆ ಎಂದು ಕಣವಿಯವರು ಹೇಳಿದ್ದಾರೆ.
ಇ) ಈ ಕೆಳಗಿನ ಪ್ರಶ್ನೆಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರಿಸಿರಿ.
೧. 'ನನ್ನ ದೇಶ ನನ್ನ ಜನ' ಪದ್ಯದ ಭಾವವನ್ನು ವಿವರಿಸಿ.
Answerಈ ಪದ್ಯದಲ್ಲಿ ಕವಿ ಕಣವಿಯವರು ತಮ್ಮ ದೇಶ ಮತ್ತು ಜನರ ಮೇಲಿನ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ದೇಶವನ್ನು ತಮ್ಮ ಮಾನ, ಪ್ರಾಣ ಮತ್ತು ಘನ ಎಂದು ಭಾವಿಸಿ, ಅದರ ಋಣವನ್ನು ಒಂದೇ ಜನ್ಮದಲ್ಲಿ ತೀರಿಸಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ. ಕೆಂಪು ನೆಲ, ಹಸಿರು ಬೆಳೆ, ಸೂರ್ಯ ಚಂದ್ರರನ್ನು ಹಿರಿಯ ಒಕ್ಕಲು ಎಂದು ಬಣ್ಣಿಸುತ್ತಾರೆ. ಭಾರತದ ನೂರಾರು ಭಾಷೆ, ಭಾವ, ವೇಷ, ಕಲೆಗಳ ವೈವಿಧ್ಯವನ್ನು ಸ್ವಚ್ಛಂದ ಹಕ್ಕಿಗಳಿಗೆ ಹೋಲಿಸುತ್ತಾರೆ. ಪ್ರಾಚೀನ ಕಾಲದ ಕೊಳೆಯನ್ನು ತೊಳೆದು, ವರ್ತಮಾನದ ಜೀವಕಳೆಯನ್ನು ತುಂಬಿಕೊಂಡು ಭವಿಷ್ಯದೆಡೆಗೆ ಸಾಗಬೇಕೆಂಬ ಸಂದೇಶ ನೀಡುತ್ತಾರೆ. ಕೊನೆಯಲ್ಲಿ, ಮೂಕ ಜನರ ಕೈ ಹಿಡಿದು ಎಬ್ಬಿಸಿದರೆ ಎಲ್ಲ ಗುಣಗಳೂ ಎಚ್ಚರಗೊಂಡು ಸಮೃದ್ಧ ಬಾಳು ಬರುತ್ತದೆ ಎಂದು ಆಶಿಸುತ್ತಾರೆ.
III. ಭಾಷಾಭ್ಯಾಸ :
ಅ) ಇಲ್ಲಿರುವ ಪದಗಳನ್ನು ನಕಲು ಮಾಡಿರಿ.
(A table with 5 blank rows under each of these headings for the student to copy the words: ಸ್ವಚ್ಛಂದ, ಪ್ರಾಚೀನ, ವರ್ತಮಾನ, ಉಕ್ಕೇರು, ಭವಿಷ್ಯ, ಸಮೃದ್ಧ, ಮೈಕೊಡವಿ, ಎದ್ದೇಳು)
ಆ) ಈ ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
ಮಾನ X ......................................... ಹಿರಿಯ X .........................................
Answerಮಾನ X ಅವಮಾನ ಹಿರಿಯ X ಕಿರಿಯ
ಪ್ರಾಚೀನ X ......................................... ಏರು X .........................................
Answerಪ್ರಾಚೀನ X ನವೀನ ಏರು X ಇಳಿ
ಇ) ಪದ್ಯದಲ್ಲಿ ಬಳಕೆ ಆಗಿರುವ ಈ ಪ್ರಾಸ ಪದಗಳನ್ನು ಓದಿ ತಿಳಿಯಿರಿ.
ಜನ-ಘನ
ಬೆಳೆ-ಕಳೆ
ನೆಲೆ-ಕಲೆ
ತೊಳೆ-ಹೊಳೆ
ಚಣ-ಗುಣ
ಒಡಲಿಗೆ-ಬಾಳಿಗೆ
ಈ) ಈ ಕೆಳಗಿನ ಪದಗಳು ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಆಗಿರುವ ಬದಲಾವಣೆಗಳನ್ನು ಗಮನಿಸಿ. ಇವುಗಳನ್ನು ತತ್ಸಮ ತದ್ಭವಗಳು ಎಂದು ಕರೆಯುತ್ತಾರೆ.
ಋಣ > ರಿಣ
ಮುಖ > ಮೊಗ
ವರ್ಣ > ಬಣ್ಣ
ನಾಲ್ಕು > ನಾಕು
ಜನ್ಮ > ಜನುಮ
ಚಂದ್ರ > ಚಂದಿರ
ಮೂಕ > ಮೂಗ
ಕ್ಷಣ > ಚಣ
ಉ) ಈ ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
ಉಕ್ಕೇರಲಿ = ___________________ + ___________________
Answerಉಕ್ಕೇರಲಿ = ಉಕ್ಕಿ + ಏರಲಿ
ಭವಿಷ್ಯದೊಡಲಿಗೆ = ___________________ + ___________________
Answerಭವಿಷ್ಯದೊಡಲಿಗೆ = ಭವಿಷ್ಯದ + ಒಡಲಿಗೆ
ಎದ್ದೇಳಿ = ___________________ + ___________________
Answerಎದ್ದೇಳಿ = ಎದ್ದು + ಏಳಿ
ಊ) ಇಲ್ಲಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.
೧. ಋಣ : _________________________________________________________
Model sentenceಋಣ: ನನ್ನ ಅಮ್ಮನ ಋಣ ತೀರಿಸಲು ನನಗೆ ಸಾಧ್ಯವಿಲ್ಲ.
೨. ಸ್ವಚ್ಛಂದ : _________________________________________________________
Model sentenceಸ್ವಚ್ಛಂದ: ನಮ್ಮ ತೋಟದಲ್ಲಿ ಪಕ್ಷಿಗಳು ಸ್ವಚ್ಛಂದವಾಗಿ ಹಾರುತ್ತವೆ.
೩. ಜೀವಕಳೆ : _________________________________________________________
Model sentenceಜೀವಕಳೆ: ನಮ್ಮ ಶಾಲೆಯ ವಾರ್ಷಿಕೋತ್ಸವದಲ್ಲಿ ತುಂಬಾ ಜೀವಕಳೆ ಇತ್ತು.
೪. ಸಮೃದ್ಧಿ : _________________________________________________________
Model sentenceಸಮೃದ್ಧಿ: ನಮ್ಮ ಹಳ್ಳಿಯಲ್ಲಿ ಮಳೆಯಿಂದ ಬೆಳೆ ಸಮೃದ್ಧಿಯಾಗಿ ಬೆಳೆಯಿತು.
೫. ವರ್ತಮಾನ : _________________________________________________________
Model sentenceವರ್ತಮಾನ: ನಾವು ವರ್ತಮಾನದಲ್ಲಿ ಜಾಗರೂಕರಾಗಿರಬೇಕು.
ಋ) ಇಲ್ಲಿರುವ ಒಗಟುಗಳನ್ನು ಬಿಡಿಸಿರಿ.
ಕಟ್ಟೆಯ ಮೇಲೆ ಕಟ್ಟೆ
ಅದರ ಮೇಲೊಂದು ಕಂಬ
ಕಂಬದ ಮೇಲೆ ಎರಡು ದೀಪ
ದೀಪದ ಮೇಲೊಂದು ಕಟ್ಟೆ
ಕಟ್ಟೆಯ ಮೇಲೆ ಹುಲ್ಲು
ಅದೇನೆಂದು ಹೇಳುವಿರಾ?
Answerಮುಖ
ಜುಳು ಜುಳು ಹರಿಯುತ
ಬಳುಕುತ ಬಾಗುತ
ಬೀಳುತ ಏಳುತ
ನೆಲವನು ತೊಯ್ಯುವ
ತಂಪನು ತರುವ
ಹೊನಲಾಗಿರುವ ನಾನು ಯಾರು?
Answerನದಿ
ಕಾಡನು ಸುತ್ತುತ
ಹುಲ್ಲನು ಮೇಯುತ
ಹಾಲನು ನೀಡುತ
ರೈತನ ಹರಸುತ
ನಿಂತವರಾರು?
Answerಆಕಳು
ಸುಳಿವು : ಮುಖ, ನದಿ, ಆಕಳು
IV. ಚಟುವಟಿಕೆಗಳು :
೧. 'ನನ್ನ ದೇಶ ನನ್ನ ಜನ' ಪದ್ಯವನ್ನು ಕಂಠಪಾಠ ಮಾಡಿ, ಎಲ್ಲರೂ ಕೂಡಿ ಹಾಡಿರಿ.
೨. ಈ ಪದ್ಯವನ್ನು ನೃತ್ಯದ ಮೂಲಕ ಶಾಲಾ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಿ.
೩. ದೇಶಭಕ್ತಿ ಗೀತೆಗಳನ್ನು ಆಲಿಸಿರಿ.