ಪದ್ಯ (poem) · ಚಿದಾನಂದ ಸಾಲಿ
ಪಠ್ಯFull text
"ತಪ್ಪು ಮಾಡಿದ ನಾವೇ ಸರಿಪಡಿಸಬೇಕಲ್ಲ" — "We who made the mistake must fix it ourselves."
ಅಭ್ಯಾಸexercises from the textbook
Model answers — a guide, not the only correct wording. Check with your teacher.
I. ಪದಗಳ ಅರ್ಥ :
| | |
|---|---|
| ಆಗರ - ಕಣಜ | ಏರಿ - ಎತ್ತರವಾದ ಕಟ್ಟೆ |
| ಒಡಲು - ದೇಹ; ಶರೀರ; ಹೊಟ್ಟೆ. | ಒಮ್ಮತ - ಎಲ್ಲರ ಅಭಿಪ್ರಾಯ ಒಂದೇ ಆಗಿರುವುದು. |
| ಕಾವಲು - ಹುಲ್ಲುಗಾವಲು; ದನಕರುಗಳನ್ನು ಮೇಯಿಸಲು ಮೀಸಲಾಗಿರುವ ಸ್ಥಳ. | ಕೊಳೆ - ಹೊಲಸು |
| ಗಟಾರ - ಚರಂಡಿ | ಜಲನಿಧಿ - ಸಮುದ್ರ; ಸಾಗರ. |
| ತಂಬೆಲರು - ತಂಪಾದ ಗಾಳಿ | ದನಗಾಹಿ - ದನಗಳನ್ನು ಕಾಯುವವನು |
| ಪೈರು - ಬೆಳೆ | ಬತ್ತು - ಒಣಗು |
| ಬನ - ವನ | ವಿದಾಯ - ಬೀಳ್ಕೊಡುಗೆ |
| ಸೆಲೆ - ನೀರು ಒಸರುವ ಜಾಗ | |
ಉಪ್ಪು ತಿಂದವ ನೀರು ಕುಡಿಯಲೇಬೇಕು - ಇದೊಂದು ಗಾದೆ ಮಾತು. ಇದರ ಅರ್ಥ ತಪ್ಪು ಮಾಡಿದವ ಶಿಕ್ಷೆ ಅನುಭವಿಸಲೇಬೇಕು.
II. ಪ್ರಶ್ನೆಗಳು :
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಕೆರೆಯ ಏರಿಯ ಸುತ್ತ ಯಾವುದರ ಕಾವಲಿತ್ತು?
Answerಕೆರೆಯ ಏರಿಯ ಸುತ್ತ ಮರಸಾಲಿನ ಕಾವಲಿತ್ತು.
೨. ಕೆರೆಯ ನೀರು ಹಾಗೂ ಮೀನು ಯಾವ ರೀತಿ ಹೊಳೆಯುತ್ತಿದ್ದವು?
Answerಕೆರೆಯ ನೀರು ಬೆಳ್ಳಿ ತಟ್ಟೆಯಂತೆ ಮತ್ತು ಮೀನು ಮಿಂಚುಬಳ್ಳಿಯಂತೆ ಹೊಳೆಯುತ್ತಿದ್ದವು.
೩. ಭೂಮಿಯೊಳಗಿನ ನೀರಸೆಲೆ ಬತ್ತಿಹುದು ಏಕೆ?
Answerಭೂಮಾತೆಯ ಎದೆ ತುಂಬ ಕೊಳವೆಬಾವಿಯನ್ನು ಕೊರೆದುದರಿಂದ ನೀರಸೆಲೆ ಬತ್ತಿಹೋಯಿತು.
೪. ಕೆರೆಯ ಉಳಿವಿಗೆ ಊರಿನ ಜನ ಯಾವುದಕ್ಕೆ ವಿದಾಯ ಹೇಳಿದರು?
Answerಕೆರೆಯ ಉಳಿವಿಗೆ ಊರಿನ ಜನ ಪ್ಲಾಸ್ಟಿಕಿನ ಬಳಕೆಗೆ ವಿದಾಯ ಹೇಳಿದರು.
೫. ನಮ್ಮೂರ ಕೆರೆ ಈಗ ಯಾವುದರ ಆಗರವಾಗಿದೆ ಎಂದು ಕವಿ ಹೇಳುತ್ತಾರೆ?
Answerನಮ್ಮೂರ ಕೆರೆ ಈಗ ಜಲನಿಧಿಯ ಆಗರವಾಗಿದೆ ಎಂದು ಕವಿ ಹೇಳುತ್ತಾರೆ.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ‘ನಮ್ಮೂರ ಕೆರೆ’ ಪದ್ಯದಲ್ಲಿ ಕವಿ ಕೆರೆಯ ದಾರಿಯನ್ನು ಯಾವ ರೀತಿ ವರ್ಣಿಸಿದ್ದಾರೆ?
Answerಕೆರೆಯ ದಾರಿಯಲ್ಲಿ ತಂಪಾದ ತಂಬೆಲರು ಬೀಸುತ್ತಿತ್ತು. ಏರಿಯ ಸುತ್ತ ಕಾವಲಿನ ಮರಸಾಲು ಇತ್ತು. ಒಂದೊಂದು ಮರದಲ್ಲೂ ಹತ್ತು ಹತ್ತು ಟೊಂಗೆಗಳಿದ್ದು, ಅವುಗಳಲ್ಲಿ ನೂರಾರು ಹಕ್ಕಿಗಳು ವಾಸಿಸುತ್ತಿದ್ದವು.
೨. ಕೆರೆಯ ಒಡಲು ಬತ್ತಿ ಹೋಗಲು ಕಾರಣಗಳೇನು?
Answerಕಾರ್ಖಾನೆಗಳು ಬಂದು, ಜನಸಂಖ್ಯೆ ಬೆಳೆದು, ಗಟಾರದ ಕೊಳೆ ಕೆರೆಯೊಳಗೆ ಬೆರೆತಿತು. ಭೂಮಾತೆಯ ಎದೆ ತುಂಬ ಕೊಳವೆಬಾವಿಗಳನ್ನು ಕೊರೆದದ್ದರಿಂದ ನೀರಸೆಲೆ ಬತ್ತಿ, ಕೆರೆಯ ಒಡಲು ಬಿರಿದು ಬತ್ತಿಹೋಯಿತು.
೩. ಕೆರೆಯ ಉಳಿವಿಗೆ ಊರ ಜನರು ಕೈಗೊಂಡ ಕ್ರಮಗಳಾವುವು?
Answerಊರ ಜನರು ಸಭೆ ಸೇರಿ ಒಮ್ಮತದಿಂದ ನಿರ್ಧರಿಸಿದರು. ಹೊಗೆ ಬೆಂಕಿ ಕಾರ್ಖಾನೆಯನ್ನು ಊರಾಚೆ ಇಡಲಾಯಿತು. ಮನೆಗೆರಡು ಮರ ನೆಟ್ಟು, ಕೆರೆಯ ಸುತ್ತ ಬನವನ್ನು ಬೆಳೆಸಲಾಯಿತು. ಪ್ಲಾಸ್ಟಿಕಿನ ಬಳಕೆಗೆ ವಿದಾಯ ಹೇಳಲಾಯಿತು.
೪. ‘ನಮ್ಮೂರ ಕೆರೆ’ ಪದ್ಯದಲ್ಲಿ ಕವಿ ನೀಡುವ ಸಂದೇಶವೇನು?
Answerನಾವು ಮಾಡಿದ ತಪ್ಪನ್ನು ನಾವೇ ಸರಿಪಡಿಸಬೇಕು ಮತ್ತು ನೀರಿನ ಮೂಲಗಳನ್ನು ಉಳಿಸಬೇಕು ಎಂಬುದು ಈ ಪದ್ಯದಲ್ಲಿ ಕವಿ ನೀಡುವ ಸಂದೇಶವಾಗಿದೆ.
III. ಭಾಷಾಭ್ಯಾಸ :
ಅ) ಇಲ್ಲಿರುವ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ.
ಮಾದರಿ : ಹತ್ತಾರು = ಹತ್ತು + ಆರು
೧. ಕೇಳಿರೆಲ್ಲ = ........................................ + ........................................
Answerಕೇಳಿರೆಲ್ಲ = ಕೇಳಿರಿ + ಎಲ್ಲ
೨. ಒಂದೊಂದು = ........................................ + ........................................
Answerಒಂದೊಂದು = ಒಂದು + ಒಂದು
೩. ಹತ್ತೂರು = ........................................ + ........................................
Answerಹತ್ತೂರು = ಹತ್ತು + ಊರು
೪. ನೂರಾರು = ........................................ + ........................................
Answerನೂರಾರು = ನೂರು + ಆರು
೫. ಊರಾಚೆ = ........................................ + ........................................
Answerಊರಾಚೆ = ಊರು + ಆಚೆ
೬. ಮನೆಗೆರಡು = ........................................ + ........................................
Answerಮನೆಗೆರಡು = ಮನೆಗೆ + ಎರಡು
೭. ಮತ್ತೀಗ = ........................................ + ........................................
Answerಮತ್ತೀಗ = ಮತ್ತೆ + ಈಗ
೮. ನಮ್ಮೂರು = ........................................ + ........................................
Answerನಮ್ಮೂರು = ನಮ್ಮ + ಊರು
ಆ) ಇಲ್ಲಿರುವ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
೧. ಉಳಿವು x ........................................
Answerಉಳಿವು x ಅಳಿವು
೨. ತಪ್ಪು x ........................................
Answerತಪ್ಪು x ಸರಿ
೩. ಏರಿ x ........................................
Answerಏರಿ x ಇಳಿಜಾರು
೪. ತಂಪು x ........................................
Answerತಂಪು x ಬಿಸಿ
೫. ಬತ್ತು x ........................................
Answerಬತ್ತು x ತುಂಬು
೬. ನೆಡು x ........................................
Answerನೆಡು x ಕಿತ್ತು
ಇ) ಈ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಉಪಯೋಗಿಸಿರಿ.
೧. ತಂಬೆಲರು: ........................................................................................
Model sentenceತಂಬೆಲರು: ಸಂಜೆ ಹೊತ್ತು ತಂಬೆಲರು ಬೀಸುತ್ತಿತ್ತು.
೨. ಒಮ್ಮತ : ........................................................................................
Model sentenceಒಮ್ಮತ: ನಮ್ಮ ತರಗತಿಯಲ್ಲಿ ಒಮ್ಮತದಿಂದ ನಾಯಕನನ್ನು ಆಯ್ಕೆ ಮಾಡಿದೆವು.
೩. ಉಳಿವು : ........................................................................................
Model sentenceಉಳಿವು: ಗಿಡಗಳಿಗೆ ನೀರು ಹಾಕಿದರೆ ಅವುಗಳ ಉಳಿವು ಸಾಧ್ಯ.
೪. ಒಡಲು : ........................................................................................
Model sentenceಒಡಲು: ವ್ಯಾಯಾಮ ಮಾಡಿದರೆ ಒಡಲು ಗಟ್ಟಿಯಾಗುತ್ತದೆ.
೫. ಆಗರ : ........................................................................................
Model sentenceಆಗರ: ನಮ್ಮ ಶಾಲೆಯ ಗ್ರಂಥಾಲಯವು ಪುಸ್ತಕಗಳ ಆಗರವಾಗಿದೆ.
೬. ವಿದಾಯ : ........................................................................................
Model sentenceವಿದಾಯ: ಶಾಲೆಯಿಂದ ಮನೆಗೆ ಹೋಗುವಾಗ ನಾನು ಗೆಳೆಯರಿಗೆ ವಿದಾಯ ಹೇಳಿದೆ.
ಈ) ಥಳ ಥಳ, ಫಳ ಫಳ ಇಂತಹ ಐದು ಪದಗಳನ್ನು ನಿಮ್ಮ ನೆನಪಿನಿಂದ ಬರೆಯಿರಿ.
ಉ) ಈ ಕೆಳಗಿನ ಗಾದೆ/ ಹೇಳಿಕೆಗಳನ್ನು ಪೂರ್ಣಗೊಳಿಸಿರಿ.
೧. ಉಪ್ಪು ತಿಂದವ ....................................................................
Answerಉಪ್ಪು ತಿಂದವ ನೀರು ಕುಡಿಯಲೇ ಬೇಕು.
೨. ಮನೆಗೊಂದು ಮರ ಊರಿಗೊಂದು ....................................................................
Answerಮನೆಗೊಂದು ಮರ ಊರಿಗೊಂದು ಬನ.
೩. ಹಸಿರೇ ....................................................................
Answerಹಸಿರೇ ಉಸಿರು.
೪. ಮರದಿಂದ ಮಳೆ; ಮಳೆಯಿಂದ ....................................................................
Answerಮರದಿಂದ ಮಳೆ; ಮಳೆಯಿಂದ ಬೆಳೆ.
ಊ) ನಾಲ್ಕು ಸಾಲಿನ ಟಿಪ್ಪಣಿ ಬರೆಯಿರಿ.
೧. ನಮ್ಮೂರ ಕೆರೆ :
....................................................................................................................
....................................................................................................................
....................................................................................................................
....................................................................................................................
೨. ಊರ ಜನರ ಒಮ್ಮತದ ನಿರ್ಧಾರ :
....................................................................................................................
....................................................................................................................
....................................................................................................................
....................................................................................................................
IV. ಚಟುವಟಿಕೆ :
೧. ಕೆರೆಗಳಿಗೆ ಸಂಬಂಧಿಸಿದ ಕಥೆಗಳನ್ನು ನಿಮ್ಮ ಅಧ್ಯಾಪಕರಿಂದ ಅಥವಾ ಅಜ್ಜ ಅಜ್ಜಿಯರಿಂದ ಕೇಳಿ ತಿಳಿಯಿರಿ.
೨. ನಿಮ್ಮ ಸಮೀಪದ ಕೆರೆ ಹಿಂದೆ ಹೇಗಿತ್ತು? ಈಗ ಹೇಗಿದೆ? ಎಂಬುದನ್ನು ಕೇಳಿ ತಿಳಿಯಿರಿ.
೩. ಕೆರೆಗಳ ಉಪಯೋಗಗಳನ್ನು ನಿಮ್ಮ ಮಾತುಗಳಲ್ಲಿ ವಿವರಿಸಿ.
೪. ಕೆರೆಗಳ ಉಳಿವಿಗೆ ನಾವು ಮಾಡಬೇಕಾದ ಕಾರ್ಯಗಳೇನು? ತರಗತಿಯಲ್ಲಿ ಚರ್ಚೆ ನಡೆಸಿರಿ.
V. ಸೈದ್ಧಾಂತಿಕ ವ್ಯಾಕರಣ :
೧. ವಚನಗಳು :
‘ವಚನ’ ಎಂದರೆ ಸಂಖ್ಯೆ. ವಸ್ತು ಅಥವಾ ವ್ಯಕ್ತಿ ಒಂದು ಆಗಿದ್ದರೆ ಏಕವಚನ ಎನ್ನುತ್ತೇವೆ. ಎರಡು ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ಬಹುವಚನ ಎನ್ನುತ್ತೇವೆ.
ಕೆಳಗಿನ ವಾಕ್ಯಗಳನ್ನು ಗಮನಿಸಿರಿ.
೧. ನನ್ನ ಊರಿನಲ್ಲಿ ಕೆರೆ ಇದೆ.
೨. ನಮ್ಮ ಊರಿನಲ್ಲಿ ಕೆರೆಗಳು ಇವೆ.
ಇವುಗಳಲ್ಲಿ ಯಾವುದು ಏಕವಚನ ಹಾಗೂ ಬಹುವಚನ? ವಿಚಾರ ಮಾಡಿ ತಿಳಿಯಿರಿ.
ಇಲ್ಲಿ ಕೆಲವು ಏಕವಚನ ವಾಕ್ಯಗಳನ್ನು ಕೊಟ್ಟಿದೆ, ಅವುಗಳನ್ನು ಬಹುವಚನದಲ್ಲಿ ಪ್ರಯೋಗಿಸಿರಿ.
೧. ಶಿಲ್ಪಳ ಹತ್ತಿರ ಪುಸ್ತಕ ಇಲ್ಲ. ....................................................................
Answerಶಿಲ್ಪಳ ಹತ್ತಿರ ಪುಸ್ತಕಗಳು ಇಲ್ಲ.
೨. ನಮ್ಮೂರಲ್ಲಿ ಗಂಧದ ಗಿಡ ಇದೆ. ....................................................................
Answerನಮ್ಮೂರಲ್ಲಿ ಗಂಧದ ಗಿಡಗಳು ಇವೆ.
೩. ಅವನು ಬಹಳ ಜಾಣನು. ....................................................................
Answerಅವರು ಬಹಳ ಜಾಣರು.
೪. ಕೆರೆಯನ್ನು ಸಂರಕ್ಷಿಸಿ. ....................................................................
Answerಕೆರೆಗಳನ್ನು ಸಂರಕ್ಷಿಸಿ.
ಇಲ್ಲಿ ಕೆಲವು ಬಹುವಚನ ವಾಕ್ಯಗಳನ್ನು ಕೊಟ್ಟಿದೆ, ಅವುಗಳನ್ನು ಏಕವಚನದಲ್ಲಿ ಪ್ರಯೋಗಿಸಿರಿ.
೧. ನಾವು ಚಿಕ್ಕಮಗಳೂರಿಗೆ ಹೋಗುತ್ತೇವೆ. ....................................................................
Answerನಾನು ಚಿಕ್ಕಮಗಳೂರಿಗೆ ಹೋಗುತ್ತೇನೆ.
೨. ಬುಟ್ಟಿಯಲ್ಲಿ ಹಣ್ಣುಗಳು ಇವೆ. ....................................................................
Answerಬುಟ್ಟಿಯಲ್ಲಿ ಹಣ್ಣು ಇದೆ.
೩. ಸ್ಪರ್ಧೆಯಲ್ಲಿ ಶಾಲೆಗೆ ಬಹುಮಾನಗಳು ದೊರೆತವು. ....................................................................
Answerಸ್ಪರ್ಧೆಯಲ್ಲಿ ಶಾಲೆಗೆ ಬಹುಮಾನ ದೊರೆಯಿತು.
೪. ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟೆವು. ....................................................................
Answerಶಾಲೆಯ ಆವರಣದಲ್ಲಿ ಗಿಡವನ್ನು ನೆಟ್ಟೆ.
೨. ಲಿಂಗಗಳು :
ಕನ್ನಡದಲ್ಲಿ ಮೂರು ಲಿಂಗಗಳಿವೆ ಎಂಬುದನ್ನು ನೆನಪಿಡಿ. ಅವುಗಳೆಂದರೆ....
೧. ಪುಲ್ಲಿಂಗ
೨. ಸ್ತ್ರೀಲಿಂಗ
೩. ನಪುಂಸಕಲಿಂಗ
ಯಾವ ಶಬ್ದ ‘ಗಂಡು’ ಎನ್ನುವ ಅರ್ಥ ನೀಡುತ್ತದೋ ಅದು ‘ಪುಲ್ಲಿಂಗ’ ಎಂದು ತಿಳಿಯಿರಿ.
ಯಾವ ಶಬ್ದ ‘ಹೆಣ್ಣು’ ಎನ್ನುವ ಅರ್ಥ ನೀಡುತ್ತದೋ ಅದು ‘ಸ್ತ್ರೀಲಿಂಗ’ ಎಂದು ತಿಳಿಯಿರಿ.
ಯಾವ ಶಬ್ದ ‘ಗಂಡೂ ಅಲ್ಲ, ಹೆಣ್ಣೂ ಅಲ್ಲ’ ಎನ್ನುವ ಅರ್ಥ ನೀಡಿದರೆ ಅದು ‘ನಪುಂಸಕಲಿಂಗ’ ಎಂದು ತಿಳಿಯಿರಿ.
ಈ ವಾಕ್ಯಗಳನ್ನು ಓದಿ, ವ್ಯತ್ಯಾಸ ತಿಳಿದು ಲಿಂಗವನ್ನು ಗುರುತಿಸಿರಿ.
೧. ಅವನು ಮನೆಗೆ ಹೋಗುತ್ತಾನೆ.
೨. ಅವಳು ಮನೆಗೆ ಹೋಗುತ್ತಾಳೆ.
೩. ಅದು ಮನೆಗೆ ಹೋಗುತ್ತದೆ.
ಇಲ್ಲಿರುವ ಪದಗಳು ಯಾವ ಲಿಂಗದಲ್ಲಿವೆ ಎಂದು ಗುರುತಿಸಿರಿ.
೧. ಅವನು ........................................
Answerಪುಲ್ಲಿಂಗ
೨. ಗಣೇಶ ........................................
Answerಪುಲ್ಲಿಂಗ
೩. ಶಿಕ್ಷಕಿ ........................................
Answerಸ್ತ್ರೀಲಿಂಗ
೪. ಪುಸ್ತಕ ........................................
Answerನಪುಂಸಕಲಿಂಗ
೫. ಇವಳು ........................................
Answerಸ್ತ್ರೀಲಿಂಗ
೬. ಹುಡುಗ ........................................
Answerಪುಲ್ಲಿಂಗ
೭. ರಾಜ ........................................
Answerಪುಲ್ಲಿಂಗ
೮. ಕಲ್ಲು ........................................
Answerನಪುಂಸಕಲಿಂಗ
೯. ಶಾಲೆ ........................................
Answerನಪುಂಸಕಲಿಂಗ
೧೦. ನಾಯಿ ........................................
Answerನಪುಂಸಕಲಿಂಗ