ಗದ್ಯ (prose) · ಎಂ. ಗೋಪಾಲಕೃಷ್ಣ ಅಡಿಗ (ಮೂಲ: ಮನೋಜ್‌ದಾಸ್)
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
I. ಪದಗಳ ಅರ್ಥ :
| | |
|---|---|
| ಅಪೂರ್ವ - ಅಪರೂಪದ; ಶ್ರೇಷ್ಠವಾದ. | ಉದಾತ್ತ - ಶ್ರೇಷ್ಠ |
| ಊಳಿ - ಗಟ್ಟಿಯಾಗಿ ಕೂಗಿ | ಏಕಾಂತ - ಪ್ರಶಾಂತ ಸ್ಥಳ |
| ಕಂಗಾಲು - ದುರ್ಬಲವಾಗು | ಕಾಲಿಗೆ ಬುದ್ಧಿಹೇಳು - ಓಡಿಹೋಗು |
| ಕೊಂಚ - ಸ್ವಲ್ಪ | ಗುಹೆ - ಗವಿ; ಕಲ್ಲಿನ ದೊಡ್ಡಪೊಟರೆ. |
| ಛಾವಣಿ - ಮಾಳಿಗೆ; ಮನೆ ಮೇಲಿನ ಆವರಣ. | ನಿಶ್ಚಯಿಸು - ನಿರ್ಧರಿಸು; ಗೊತ್ತುಮಾಡು. |
| ನಿರ್ಜನ - ಜನ ವಸತಿ ಇಲ್ಲದ | ಪಟ್ಟ - ಅಧಿಕಾರ; ಸ್ಥಾನ. |
| ಪಲಾಯನ - ಓಟ; ಪರಾರಿ; ತಪ್ಪಿಸಿಕೊ. | ಮಂದಿ - ಜನ |
| ಮುಸ್ಸಂಜೆ - ಸೂರ್ಯ ಮುಳುಗುವ ಸಮಯ. | ಲಕ್ಷ್ಯ - ಗಮನ |
| ವ್ಯರ್ಥ - ನಿರುಪಯುಕ್ತ | ಸಂದೇಹ - ಸಂಶಯ; ಅನುಮಾನ. |
| ಪುರಾತನ - ಹಳೆಯ ಕಾಲದ | |
II. ಪ್ರಶ್ನೆಗಳು :
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ರಾಜನಿಗೆ ತನ್ನ ಮಕ್ಕಳ ಬಗ್ಗೆ ಏಕೆ ದುಃಖವಾಯಿತು?
Answerರಾಜಕುಮಾರರು ವಿದ್ಯಾಭ್ಯಾಸದ ಕಡೆಗೆ ಲಕ್ಷ್ಯ ಕೊಡದೆ ಸೋಮಾರಿಗಳಾಗಿ ಕಾಲ ಕಳೆಯುತ್ತಿದ್ದುದರಿಂದ ರಾಜನಿಗೆ ದುಃಖವಾಯಿತು.
೨. ರಾಜನು ವಿದ್ವಾಂಸರ ಸಭೆಯನ್ನು ಏಕೆ ಕರೆದನು?
Answerರಾಜನು ತನ್ನ ಮಕ್ಕಳ ವಿದ್ಯಾಭ್ಯಾಸದ ಸಮಸ್ಯೆಗೆ ಸಹಾಯ ಪಡೆಯಲು ವಿದ್ವಾಂಸರ ಸಭೆಯನ್ನು ಕರೆದನು.
೩. ವಿಷ್ಣುಶರ್ಮನು ರಾಜನಿಗೆ ಏನೆಂದು ಹೇಳಿದನು?
Answerವಿಷ್ಣುಶರ್ಮನು ರಾಜನಿಗೆ ತನ್ನ ಮಕ್ಕಳ ವಿದ್ಯಾಭ್ಯಾಸವನ್ನು ತನ್ನ ಕೈಗೆ ಒಪ್ಪಿಸಿದರೆ ಕೈಲಾದುದ್ದನ್ನು ಮಾಡುವುದಾಗಿ ಹೇಳಿದನು.
೪. ವಿಷ್ಣುಶರ್ಮ ಕಥೆಗಳನ್ನು ಹೇಗೆ ಆರಂಭಿಸುತ್ತಿದ್ದನು?
Answerವಿಷ್ಣುಶರ್ಮನು ಗೋದಾವರಿ ನದೀ ತೀರದಲ್ಲಿನ ದೊಡ್ಡ ಮರದ ಕಥೆ ಹೇಳುವ ಮೂಲಕ ಕಥೆಗಳನ್ನು ಆರಂಭಿಸುತ್ತಿದ್ದನು.
೫. ಸಿಂಹವು ನರಿಯನ್ನು ಹೇಗೆ ಸ್ವಾಗತಿಸಿತು?
Answerಸಿಂಹವು ಜೋರಾಗಿ ಗರ್ಜಿಸಿ “ನರಿರಾಯರೇ ಬರಬೇಕು, ಬರಬೇಕು” ಎಂದು ಹೇಳಿ ನರಿಯನ್ನು ಸ್ವಾಗತಿಸಿತು.
೬. ನರಿಯು ತನ್ನ ಗುಹೆಯನ್ನು ಏಕೆ ತ್ಯಜಿಸಿತು?
Answerಗುಹೆಯೊಳಗೆ ಸಿಂಹ ಇರುವುದನ್ನು ತಿಳಿದು ನರಿಯು ತನ್ನ ಜೀವ ಉಳಿಸಿಕೊಳ್ಳಲು ಗುಹೆಯನ್ನು ತ್ಯಜಿಸಿತು.
೭. 'ಮಾತನಾಡುವ ಗುಹೆ' ಕಥೆಯ ನೀತಿ ಏನು?
Answerಪ್ರತಿಯೊಬ್ಬನೂ ಯಾವಾಗಲೂ ತನ್ನ ಬಗ್ಗೆ ಎಚ್ಚರಿಕೆಯಿಂದಿದ್ದು, ಆತ್ಮರಕ್ಷಣೆಗೆ ಸಿದ್ಧನಾಗಿರಬೇಕು ಎಂಬುದು ಈ ಕಥೆಯ ನೀತಿ.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ವಿಷ್ಣುಶರ್ಮನು ಯಾರು? ಆತನ ಮಾತುಗಳಿಂದ ರಾಜನಿಗೆ ಏಕೆ ಸಂತೋಷವಾಯಿತು?
Answerವಿಷ್ಣುಶರ್ಮನು ತನ್ನ ಜ್ಞಾನದಿಂದ ಇಡೀ ದೇಶದಲ್ಲಿ ಸುಪ್ರಸಿದ್ಧನಾಗಿದ್ದ ವಿದ್ವಾಂಸ. ಅಂಥ ಪ್ರಸಿದ್ಧ ವಿದ್ವಾಂಸನು ತನ್ನ ಮಕ್ಕಳಿಗೆ ಪಾಠ ಹೇಳಲು ಮುಂದೆ ಬಂದಿದ್ದರಿಂದ ರಾಜನಿಗೆ ಸಂತೋಷವಾಯಿತು.
೨. ವಿಷ್ಣುಶರ್ಮನು ರಾಜಕುಮಾರರಿಗೆ ಪಾಠ ಹೇಳಿಕೊಡುತ್ತಿದ್ದ ಸ್ಥಳ ಯಾವ ರೀತಿ ಇತ್ತು?
Answerವಿಷ್ಣುಶರ್ಮನು ಅರಮನೆಯ ಛಾವಣಿಯ ಮೇಲಿನ ಒಂದು ಏಕಾಂತವಾದ ಮೂಲೆಯಲ್ಲಿ ರಾಜಕುಮಾರರಿಗೆ ಪಾಠ ಹೇಳಿಕೊಡುತ್ತಿದ್ದನು. ಅಲ್ಲಿ ಎತ್ತರವಾದ ಮರಗಳ ನೆರಳು ಚೆಲ್ಲುತ್ತಿತ್ತು.
೩. ಸಿಂಹವು ನರಿ ಗುಹೆಯಲ್ಲಿಯೇ ಏಕೆ ಉಳಿಯಿತು?
Answerಸಿಂಹವು ನರಿಯು ಹಿಂತಿರುಗಿ ಬಂದಾಗ ಅದನ್ನು ತಿನ್ನಬಹುದೆಂದು ಯೋಚಿಸಿ, ವಿಶ್ರಾಂತಿ ತೆಗೆದುಕೊಳ್ಳಲು ಗುಹೆಯಲ್ಲಿಯೇ ಉಳಿಯಿತು.
೪. ನರಿಯು ಗುಹೆಯ ಒಳಗೆ ಸಿಂಹ ಇರುವುದನ್ನು ಹೇಗೆ ಪರೀಕ್ಷಿಸಿತು?
Answerನರಿಯು ಗುಹೆಯನ್ನು “ಎಲೈ ಮಾತಾಡುವ ಗುಹೆಯೇ, ನಿನಗೇನಾಗಿದೆ?” ಎಂದು ಕೂಗಿ ಕೇಳಿತು. ಆಗ ಸಿಂಹವು ಗರ್ಜಿಸಿ ಉತ್ತರಿಸಿದ್ದರಿಂದ ನರಿಗೆ ಒಳಗೆ ಸಿಂಹ ಇರುವುದು ಖಚಿತವಾಯಿತು.
ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಪಂಚತಂತ್ರದ ಕಥೆಗಳು ಹುಟ್ಟಿಕೊಂಡದ್ದು ಹೇಗೆ?
Answerಪುರಾತನ ಕಾಲದಲ್ಲಿ ಒಬ್ಬ ರಾಜನಿಗೆ ಮೂವರು ಸೋಮಾರಿ ಮಕ್ಕಳಿದ್ದರು. ಅವರು ವಿದ್ಯಾಭ್ಯಾಸದ ಕಡೆಗೆ ಲಕ್ಷ್ಯ ಕೊಡದೆ ಕಾಲ ಕಳೆಯುತ್ತಿದ್ದರು. ರಾಜನು ಅನೇಕ ಅಧ್ಯಾಪಕರನ್ನು ನೇಮಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ರಾಜನು ಎಲ್ಲ ವಿದ್ವಾಂಸರ ಸಭೆ ಕರೆದು ತನ್ನ ಸಮಸ್ಯೆ ಹೇಳಿದನು. ಆಗ ವಿಷ್ಣುಶರ್ಮ ಎಂಬ ಸುಪ್ರಸಿದ್ಧ ವಿದ್ವಾಂಸನು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಂಡನು. ವಿಷ್ಣುಶರ್ಮನು ರಾಜಕುಮಾರರನ್ನು ಅರಮನೆಯ ಛಾವಣಿಯ ಮೇಲಿನ ಏಕಾಂತ ಮೂಲೆಗೆ ಕರೆದೊಯ್ದನು. ಅಲ್ಲಿ ಅವನು ಮೃಗಪಕ್ಷಿಗಳ ಕಥೆಗಳ ಮೂಲಕ ಪಾಠ ಹೇಳಲು ಆರಂಭಿಸಿದನು. ಈ ಕಥೆಗಳು ಮನುಷ್ಯನ ಸಮಸ್ಯೆಗಳು ಮತ್ತು ಪರಿಹಾರಗಳನ್ನು ಕುರಿತವಾಗಿದ್ದವು. ಹೀಗೆ ವಿಷ್ಣುಶರ್ಮನು ಹೇಳಿದ ಕಥೆಗಳೇ ಪಂಚತಂತ್ರದ ಕಥೆಗಳಾಗಿ ಹುಟ್ಟಿಕೊಂಡವು.
೨. 'ಮಾತನಾಡುವ ಗುಹೆ' ಕಥೆಯನ್ನು ನಿಮ್ಮದೇ ಮಾತುಗಳಲ್ಲಿ ಬರೆಯಿರಿ.
Answerಒಂದು ಕಾಡಿನಲ್ಲಿ ಒಂದು ನರಿ ನಿರ್ಜನ ಪ್ರದೇಶದ ಗುಹೆಯಲ್ಲಿ ವಾಸಿಸುತ್ತಿತ್ತು. ಒಂದು ದಿನ ನರಿ ಹೊರಗೆ ಹೋದಾಗ ಹಸಿದ ಸಿಂಹವೊಂದು ಆ ಗುಹೆಗೆ ಬಂತು. ಸಿಂಹವು ಗುಹೆಯನ್ನು ಮೂಸಿ ನೋಡಿ ಅದು ನರಿಯ ವಾಸಸ್ಥಳವೆಂದು ತಿಳಿಯಿತು. ಅದು ನರಿಯು ಹಿಂತಿರುಗಿದಾಗ ತಿನ್ನಬಹುದೆಂದು ಯೋಚಿಸಿ ಅಲ್ಲಿಯೇ ಉಳಿಯಿತು. ಮುಸ್ಸಂಜೆಯ ಹೊತ್ತಿಗೆ ನರಿ ಮರಳಿ ಬಂದಾಗ ಸಿಂಹದ ಹೆಜ್ಜೆ ಗುರುತುಗಳನ್ನು ಕಂಡು ಹೆದರಿತು. ಆದರೆ ಧೈರ್ಯ ತಂದುಕೊಂಡು ನರಿಯು ಗುಹೆಯನ್ನು “ಎಲೈ ಮಾತಾಡುವ ಗುಹೆಯೇ, ನಿನಗೇನಾಗಿದೆ?” ಎಂದು ಕೂಗಿ ಕೇಳಿತು. ಸಿಂಹವು ತನ್ನ ಇರುವಿಕೆಯಿಂದ ಗುಹೆ ಮೌನವಾಗಿದೆ ಎಂದು ಭಾವಿಸಿ “ನರಿರಾಯರೇ ಬರಬೇಕು” ಎಂದು ಗರ್ಜಿಸಿತು. ಆಗ ನರಿಗೆ ಒಳಗೆ ಸಿಂಹ ಇರುವುದು ಖಚಿತವಾಗಿ, ತನ್ನ ಜೀವ ಉಳಿಸಿಕೊಳ್ಳಲು ಅದು ಪಲಾಯನ ಮಾಡಿತು. ಹೀಗೆ ನರಿಯು ತನ್ನ ಬುದ್ಧಿವಂತಿಕೆಯಿಂದ ಅಪಾಯದಿಂದ ಪಾರಾಯಿತು.
ಈ) ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.
೧. “ನಿಮ್ಮಲ್ಲಿ ಯಾರಾದರೂ ನನಗೆ ಸಹಾಯ ಮಾಡಬಲ್ಲಿರಾ?”
Answerರಾಜನು ವಿದ್ವಾಂಸರಿಗೆ ಹೇಳಿದನು.
೨. “ಎಲೈ ಮಾತಾಡುವ ಗುಹೆಯೇ, ನಿನಗೇನಾಗಿದೆ?”
Answerನರಿಯು ಗುಹೆಗೆ ಹೇಳಿತು.
೩. “ನರಿರಾಯರೇ, ಬರಬೇಕು, ಬರಬೇಕು.”
Answerಸಿಂಹವು ನರಿಗೆ ಹೇಳಿತು.
III. ಭಾಷಾಭ್ಯಾಸ :
ಅ) ಇಲ್ಲಿರುವ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
೧. ದುಃಖ x .....................................................
Answerದುಃಖ x ಸಂತೋಷ
೨. ಅರ್ಹ x .....................................................
Answerಅರ್ಹ x ಅನರ್ಹ
೩. ಜ್ಞಾನ x .....................................................
Answerಜ್ಞಾನ x ಅಜ್ಞಾನ
೪. ಅಸ್ಪಷ್ಟ x .....................................................
Answerಅಸ್ಪಷ್ಟ x ಸ್ಪಷ್ಟ
೫. ಲಕ್ಷ್ಯ x .....................................................
Answerಲಕ್ಷ್ಯ x ಅಲಕ್ಷ್ಯ
೬. ನಿರಾಶೆ x .....................................................
Answerನಿರಾಶೆ x ಆಶೆ
೭. ದ್ವೇಷ x .....................................................
Answerದ್ವೇಷ x ಪ್ರೀತಿ
೮. ಧೈರ್ಯ x .....................................................
Answerಧೈರ್ಯ x ಭಯ
ಆ) ಇಲ್ಲಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.
೧. ವಿದ್ಯಾಭ್ಯಾಸ : __________________________________________________________________
Model sentenceವಿದ್ಯಾಭ್ಯಾಸ: ನನ್ನ ಅಣ್ಣನ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನಡೆಯುತ್ತಿದೆ.
೨. ಅಪೂರ್ವ : __________________________________________________________________
Model sentenceಅಪೂರ್ವ: ನಿನ್ನೆ ನಮ್ಮ ಶಾಲೆಯಲ್ಲಿ ಅಪೂರ್ವವಾದ ಗಿಳಿಯೊಂದು ಕಾಣಿಸಿತು.
೩. ಪರಿಹಾರ : __________________________________________________________________
Model sentenceಪರಿಹಾರ: ನನ್ನ ಸಮಸ್ಯೆಗೆ ಶಿಕ್ಷಕರು ಪರಿಹಾರ ಸೂಚಿಸಿದರು.
೪. ಸಂದೇಹ : __________________________________________________________________
Model sentenceಸಂದೇಹ: ನನಗೆ ಈ ಲೆಕ್ಕದಲ್ಲಿ ಸಂದೇಹವಿದೆ.
೫. ನಿಶ್ಚಯಿಸು : __________________________________________________________________
Model sentenceನಿಶ್ಚಯಿಸು: ನಾನು ಮುಂದಿನ ವರ್ಷ ಚೆನ್ನಾಗಿ ಓದಲು ನಿಶ್ಚಯಿಸಿದ್ದೇನೆ.
ಇ) ಇಲ್ಲಿರುವ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ.
ಮಾದರಿ : ವಿದ್ಯಾಭ್ಯಾಸ = ವಿದ್ಯಾ + ಅಭ್ಯಾಸ
೧. ಅವರಲ್ಲೊಬ್ಬ = _________________ + _________________
Answerಅವರಲ್ಲೊಬ್ಬ = ಅವರಲ್ಲಿ + ಒಬ್ಬ
೨. ಮರಗಳಿದ್ದವು = _________________ + _________________
Answerಮರಗಳಿದ್ದವು = ಮರಗಳು + ಇದ್ದವು
೩. ಒಳಗೊಳಗೆ = _________________ + _________________
Answerಒಳಗೊಳಗೆ = ಒಳಗೆ + ಒಳಗೆ
೪. ದುಃಖವಾಯಿತು = _________________ + _________________
Answerದುಃಖವಾಯಿತು = ದುಃಖ + ಆಯಿತು
೫. ಗುಹೆಯನ್ನು = _________________ + _________________
Answerಗುಹೆಯನ್ನು = ಗುಹೆ + ಅನ್ನು
IV. ಚಟುವಟಿಕೆಗಳು :
ಅ) ಸಿಂಹ, ನಾಯಿ, ನರಿ, ಬೆಕ್ಕು, ಗಿಳಿ, ಕೋಗಿಲೆಗಳ ಧ್ವನಿಯನ್ನು ಅನುಕರಣೆ ಮಾಡಿ.
ಆ) 'ಮಾತನಾಡುವ ಗುಹೆ' ಕಥೆಯನ್ನು ಹಾವಭಾವಗಳೊಂದಿಗೆ ತರಗತಿಯಲ್ಲಿ ಹೇಳಿರಿ.
ಇ) ನಿಮಗೆ ಪ್ರಿಯವಾದ ಪ್ರಾಣಿಗಳ ಚಿತ್ರ ಅಂಟಿಸಿ, ಅವು ನಿಮಗೆ ಏಕೆ ಇಷ್ಟ? ಹೇಳಿರಿ.
(A diagram with three colored blank boxes for pasting animal pictures).
ಈ) ಕೆಳಗೆ ನೀಡಿರುವ ಚಿತ್ರಗಳನ್ನು ಗಮನಿಸಿ, ಕಥೆ ಹೇಳಿರಿ. ಅದರ ನೀತಿ ತಿಳಿಯಿರಿ.
(Two illustrations showing the classic story of the tortoise and the hare race. The first shows the hare sleeping under a tree while the tortoise slowly walks past. The second shows the tortoise crossing the finish line while the hare desperately runs toward it).
ಉ) ಕೆಳಗೆ ನೀಡಿರುವ ಸುಳಿವು ಬಳಸಿಕೊಂಡು 'ಹೊಗಳಿಕೆಗೆ ಉಬ್ಬಬೇಡ' ಎಂಬ ನಾಣ್ಣುಡಿಗೆ ಸೂಕ್ತ ಕಥೆ ಹೇಳುತ್ತಾ ಅಭಿನಯಿಸಿರಿ.
ಸುಳಿವು : ಕಾಗೆಯೊಂದು ಮಾಂಸದ ತುಂಡು ಕಚ್ಚಿಕೊಂಡು ಮರದ ಮೇಲೆ ಇತ್ತು. ನರಿ ಅದರ ಹಾಡನ್ನು ವರ್ಣಿಸಿ ಹಾಡಲು ಹೇಳುವುದು. ಕಾಗೆ ಹಾಡಲು ಬಾಯಿ ತೆರೆದಾಗ ಮಾಂಸದ ತುಂಡು ನೆಲಕ್ಕೆ ಬಿತ್ತು.