CRECT Education

Class 7 Kannada Lesson 1: Grandmother Tell Me a Story | KTBS First Language – Practice & Play

Description

Quiz and language games based on Puttaajji's tale from KTBS Class 7 Kannada First Language, Lesson 1.

ಗದ್ಯ (prose) · ನಾ. ಡಿಸೋಜ

ಪಠ್ಯFull text

ಪುಟ್ಟದೊಂದು ಊರ ಹೊರಗೆ ಒಂದು ಹಳ್ಳ ಹರಿದಿದೆ ಹಳ್ಳ ಅಲ್ಲಿ ಹರಿದು ಹರಿದು ಊರ ಜನರ ಪೊರೆದಿದೆ ಹರಿವ ಹಳ್ಳ ಊರಿಗೊಂದು ಸೊಬಗ ತಂದು ಕೊಟ್ಟಿದೆ ಹಸಿರು ಕಾಡು ಮರಗಳಲ್ಲಿ ಹಕ್ಕಿ ಹಾಡು ಕೇಳಿದೆ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

  1. ೧. ಪುಟ್ಟಜ್ಜಿಯ ಬಳಿ ಹುಡುಗ ಯಾವ ಕತೆ ಹೇಳಬೇಕೆಂದು ಕೇಳಿದನು?

  2. ೨. ಯುವಕ ಮನೆಯ ಮುಂದೆ ಏನು ಮಾಡಿದನು?

  3. ೩. ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು?

  4. ೪. ಹುಲಿ ಸೋತು ಏನು ಮಾಡಿತು?

  5. ೫. ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗ ಚುಕ್ಕಿ ಏನು ಮಾಡಿತು?

  6. ೬. ಹಳ್ಳದ ದಂಡೆಯ ಮೇಲಿನ ಊರು ಏನಾಯಿತು?

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಹಳ್ಳ ಹರಿದು ಊರ ಜನರಿಗೆ ಏನು ಮಾಡಿದೆ?

  2. ೨. ಯುವಕ ಹಳ್ಳದ ಬಳಿಗೆ ಬಂದು ಏನು ಮಾಡಿದನು?

  3. ೩. ಹುಲಿ ಮತ್ತು ಯುವಕನ ನಡುವೆ ಸಂಭಾಷಣೆ ಏನು?

  4. ೪. ಜಿಂಕೆಯನ್ನು ನೋಡಿದ ಯುವತಿ ಏನು ಮಾಡಿದಳು?

  5. ೫. ಯುವಕ ಚುಕ್ಕಿಯ ಬಗೆಗೆ ಯುವತಿಗೆ ಏನು ಹೇಳಿದನು?

ಇ. ಈ ವಾಕ್ಯಗಳನ್ನು ಯಾರು-ಯಾರಿಗೆ? ಹೇಳಿದರು ಎಂಬುದನ್ನು ಬರೆಯಿರಿ.

  1. ೧. "ಯಾವುದಾದರೊಂದು ಹಾಡ್ಗತೆ ಹೇಳು."

  2. ೨. "ಏಯ್! ಯುವಕ, ಈ ಜಿಂಕೆ ನನ್ನ ಆಹಾರ."

  3. ೩. "ಇದು ನಾವು ಸಾಕಿಕೊಂಡ ಜಿಂಕೆ."

  4. ೪. "ನಾನು ಚುಕ್ಕಿಯನ್ನು ಬಿಟ್ಟು ಇರಲಾರೆ."

ಈ. ಕೆಳಗೆ ನೀಡಿರುವ ಸೂಚನೆಯಂತೆ ಉತ್ತರ ಬರೆಯಿರಿ.

  1. ೧. ಈ ಪಾಠದಲ್ಲಿ ಬಂದಿರುವ ಪ್ರಾಣಿಗಳ ಹೆಸರನ್ನು ಪಟ್ಟಿಮಾಡಿ.

  2. ೨. ಈ ಪಾಠದಲ್ಲಿ ಬಂದಿರುವ ವ್ಯಕ್ತಿಗಳ ಹೆಸರನ್ನು ಪಟ್ಟಿಮಾಡಿ.

  3. ೩. ಅಜ್ಜಿ ಮತ್ತು ಕತೆ ಹೇಳುವ ಹುಡುಗನ ಸಂಭಾಷಣೆ ಬರೆಯಿರಿ.

  4. ೪. ಯುವಕ ಮತ್ತು ಯುವತಿಯ ನಡುವೆ ನಡೆದ ಸಂಭಾಷಣೆಯನ್ನು ಬರೆಯಿರಿ.

ಉ. ಕೆಳಗಿನ ಪದಗಳಿಗೆ ಅರ್ಥ ಬರೆಯಿರಿ.

  1. ಪೊರೆ, ಪ್ರಾಣಿಗಿಂಡಿ, ಭಯ, ತೊಗಟೆ, ಮದ್ದು, ಯಾವತ್ತಾರ.

ಊ. ಹೊಂದಿಸಿ ಬರೆಯಿರಿ.

  1. | ಅ | ಆ |

  2. |---|---|

  3. | ೧. ಪುಟ್ಟಜ್ಜಿ | ಹುಲಿಗೂ ಯುವಕನಿಗೂ |

  4. | ೨. ಕಾಡು | ಜಿಂಕೆ |

  5. | ೩. ಚುಕ್ಕಿ | ಸೊಪ್ಪುಸದೆ ಬೇರು ತೊಗಟೆ |

  6. | ೪. ಮದ್ದು | ಕತೆ |

  7. | ೫. ಹಳ್ಳದ ದಂಡೆ | ಹುಲಿ, ಚಿರತೆ, ಕಾಡುಕೋಣ |

  8. | ೬. ಜಗಳ | ಊರು ಬೆಳೆಯಿತು |

  9. ('ಅ' ಮತ್ತು 'ಆ' ಪಟ್ಟಿಯ ಪದಗಳನ್ನು ಹೊಂದಿಸಿ ಅನಂತರ ಅವುಗಳನ್ನು ಸೇರಿಸಿ ವಾಕ್ಯಗಳನ್ನು ರಚಿಸಿ.)

ಭಾಷಾಭ್ಯಾಸ

  1. **ಅ.** ಕೆಳಗೆ ಹಲವು ಜೀವಿಗಳ ಹೆಸರುಗಳನ್ನು ನೀಡಲಾಗಿದೆ. ಇವುಗಳನ್ನು ಸಾಕುಪ್ರಾಣಿಗಳು ಮತ್ತು ಕಾಡುಪ್ರಾಣಿಗಳು ಎಂದು ವಿಂಗಡಿಸಿ ಪ್ರತ್ಯೇಕ ಪಟ್ಟಿ ಮಾಡಿ.

    Answer

    ಸಾಕುಪ್ರಾಣಿಗಳು: ಕತ್ತೆ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು, ಎತ್ತು, ಕೋಳಿ ಕಾಡುಪ್ರಾಣಿಗಳು: ಹುಲಿ, ಕರಡಿ, ಜಿಂಕೆ, ಕಾಡುಕೋಣ, ಜಿರಾಫೆ, ಮಂಗ, ಸಿಂಹ, ಘೇಂಡಾಮೃಗ, ಚಿರತೆ, ಸಾರಂಗ, ಆನೆ

  2. ಹುಲಿ, ಕತ್ತೆ, ಎಮ್ಮೆ, ಕುರಿ, ಮೇಕೆ, ಹಂದಿ, ಕರಡಿ, ಜಿಂಕೆ, ನಾಯಿ, ಕಾಡುಕೋಣ, ಬೆಕ್ಕು, ಜಿರಾಫೆ, ಮಂಗ, ಸಿಂಹ, ಘೇಂಡಾಮೃಗ, ಚಿರತೆ, ಎತ್ತು, ಸಾರಂಗ, ಕೋಳಿ, ಆನೆ.

  3. **ಆ.** ಮೇಲಿನ ಎಲ್ಲ ಪ್ರಾಣಿಗಳ ಹೆಸರುಗಳನ್ನು ಅಕಾರಾದಿಯಾಗಿ ಬರೆಯಿರಿ.

    Answer

    ಆನೆ, ಎತ್ತು, ಎಮ್ಮೆ, ಕತ್ತೆ, ಕರಡಿ, ಕಾಡುಕೋಣ, ಕುರಿ, ಕೋಳಿ, ಘೇಂಡಾಮೃಗ, ಚಿರತೆ, ಜಿಂಕೆ, ಜಿರಾಫೆ, ನಾಯಿ, ಬೆಕ್ಕು, ಮಂಗ, ಮೇಕೆ, ಸಾರಂಗ, ಸಿಂಹ, ಹಂದಿ, ಹುಲಿ

  4. **ಇ.** ಪ್ರತ್ಯೇಕ ಗುಂಪುಗಳಲ್ಲಿ ಕೆಲವು ಶಬ್ದಗಳಿವೆ. ಪ್ರತಿ ಗುಂಪಿನಲ್ಲೂ ಆ ಗುಂಪಿಗೆ ಸೇರದ ಒಂದೊಂದು ಶಬ್ದವಿದೆ. ಈ ಶಬ್ದವನ್ನು ಗುರುತಿಸಿ ಮತ್ತು ಆ ಶಬ್ದ ಆ ಗುಂಪಿಗೆ ಏಕೆ ಸೇರುವುದಿಲ್ಲ ಎಂಬುದಕ್ಕೆ ಕಾರಣ ನೀಡಿ.

    Answer

    ಗುಂಪು ೧: ಕರಡಿ — ಉಳಿದವು ಸಾಕುಪ್ರಾಣಿಗಳು; ಕರಡಿ ಕಾಡುಪ್ರಾಣಿ. ಗುಂಪು ೨: ರಮ್ಯ — ಉಳಿದವು ಸರ್ವನಾಮಗಳು; ರಮ್ಯ ಗುಣವಾಚಕ. ಗುಂಪು ೩: ಯುವತಿ — ಉಳಿದವು ಪುಲ್ಲಿಂಗ ಶಬ್ದಗಳು; ಯುವತಿ ಸ್ತ್ರೀಲಿಂಗ ಶಬ್ದ. ಗುಂಪು ೪: ಪೆನ್ಸಿಲು — ಉಳಿದವು ಸಾಹಿತ್ಯ ಪ್ರಕಾರಗಳು; ಪೆನ್ಸಿಲು ವಸ್ತು.

  5. | ಗುಂಪು ೧ | | ಗುಂಪು ೨ | |

  6. |---|---|---|---|

  7. | ಹಸು | ಎಮ್ಮೆ | ನಾನು | ನೀನು |

  8. | ಕರಡಿ | ಹಂದಿ | ಅವನು | ರಮ್ಯ |

  9. | ಗುಂಪು ೩ | | ಗುಂಪು ೪ | |

  10. |---|---|---|---|

  11. | ಯುವಕ | ಯುವತಿ | ಕತೆ | ಕವನ |

  12. | ಮುದುಕ | ಹುಡುಗ | ಪೆನ್ಸಿಲು | ಕಾದಂಬರಿ |

  13. **ಈ.** ಕೆಳಗೆ ನೀಡಿರುವ ಕತೆಯಲ್ಲಿ ಕೆಲವು ಪದಗಳನ್ನು ಬಿಟ್ಟು ಆ ಜಾಗದಲ್ಲಿ ಸ್ಥಳವನ್ನು ಖಾಲಿ ಬಿಡಲಾಗಿದೆ. ಬಿಟ್ಟ ಸ್ಥಳದಲ್ಲಿ ಇರಬೇಕಾದ ಪದಗಳನ್ನು ಕತೆಯ ಕೆಳಗೆ ಆವರಣದಲ್ಲಿ ನೀಡಲಾಗಿದೆ. ಸೂಕ್ತ ಪದವನ್ನು ಆರಿಸಿ ಬಿಟ್ಟ ಸ್ಥಳದಲ್ಲಿ ತುಂಬಿರಿ.

  14. ಒಂದು ಕಾಗೆ ________ ಬಂದು ಒಂದು ________ ಮೇಲೆ ಕುಳಿತುಕೊಂಡು ________ ತಿನ್ನ ತೊಡಗಿತು. ಮೋಸಗಾರ ನರಿ ________ ಯನ್ನು ಕಂಡು ________ ತಿನ್ನಬೇಕೆಂದು ________ ಕೆಳಗೆ ನಿಂತು ಕಾಗೆಯನ್ನು ಹೊಗಳಿತು. "ಎಲೈ ಕಾಗೆ ನೀನು ________ ಹಾಡುತ್ತೀಯೆ, ನಿನ್ನ ________ ತುಂಬಾ ಚಂದ. ನಿನ್ನ ಹಾಡನ್ನು ________ ಆಸೆ ನನಗೆ ಆಗಿದೆ" ಎಂದು ಹೊಗಳಿತು. ಕಾಗೆ ಅದರ ಹೊಗಳಿಕೆಗೆ ಮಾರುಹೋಗಿ ________ ಎಂದು ಹಾಡತೊಡಗಿತು. ಆಗ ಅದರ ________ ರೊಟ್ಟಿ ಕೆಳಗೆ ________. ಬಿದ್ದ ________ ಯನ್ನು ನರಿ ಕಚ್ಚಿ ________ ಹೋಯಿತು.

    Answer

    ಒಂದು ಕಾಗೆ ಹಾರಿ ಬಂದು ಒಂದು ಮರದ ಕೊಂಬೆ ಮೇಲೆ ಕುಳಿತುಕೊಂಡು ರೊಟ್ಟಿ ತಿನ್ನ ತೊಡಗಿತು. ಮೋಸಗಾರ ನರಿ ಕಾಗೆಯನ್ನು ಕಂಡು ರೊಟ್ಟಿ ತಿನ್ನಬೇಕೆಂದು ಕೆಳಗೆ ನಿಂತು ಕಾಗೆಯನ್ನು ಹೊಗಳಿತು. "ಎಲೈ ಕಾಗೆ ನೀನು ಚಂದ ಹಾಡುತ್ತೀಯೆ, ನಿನ್ನ ಹಾಡು ತುಂಬಾ ಚಂದ. ನಿನ್ನ ಹಾಡನ್ನು ಕೇಳುವ ಆಸೆ ನನಗೆ ಆಗಿದೆ" ಎಂದು ಹೊಗಳಿತು. ಕಾಗೆ ಅದರ ಹೊಗಳಿಕೆಗೆ ಮಾರುಹೋಗಿ ಕಾಕಾಕಾ ಎಂದು ಹಾಡತೊಡಗಿತು. ಆಗ ಅದರ ಬಾಯಿಂದ ರೊಟ್ಟಿ ಕೆಳಗೆ ಬಿದ್ದಿತು. ಬಿದ್ದ ರೊಟ್ಟಿಯನ್ನು ನರಿ ಕಚ್ಚಿ ಓಡಿ ಹೋಯಿತು.

  15. (ಹಾರಿ, ಮರದ, ಬಾಯಲ್ಲಿ, ರೊಟ್ಟಿ, ಚಂದ, ಹಾಡು, ಕೇಳುವ, ಕಾಕಾಕಾ, ಬಾಯಿಂದ, ಬಿದ್ದಿತು, ಓಡಿ, ಕಾಗೆ, ಕೊಂಬೆ)

ಚಟುವಟಿಕೆ

  1. ಅ. ನಿಮ್ಮ ಮನೆಯಲ್ಲಿರುವ ಹಿರಿಯರಿಂದ ಒಂದು ಕಥೆಯನ್ನು ಕೇಳಿ ಬರೆದುಕೊಂಡು ಬನ್ನಿ. ಅನಂತರ ಸ್ನೇಹಿತರೊಂದಿಗೆ ಚರ್ಚಿಸಿ ಎಲ್ಲಾ ಕಥೆಗಳನ್ನು ಒಟ್ಟು ಸೇರಿಸಿ ಒಂದು ಕೈಬರಹದ ಕಥಾಪುಸ್ತಕವನ್ನು ಸಿದ್ಧಪಡಿಸಿ.

ವ್ಯಾಕರಣ ಮಾಹಿತಿ

  1. ### ನಾಮಪದ

  2. ಒಂದು ವಸ್ತು, ಒಬ್ಬ ವ್ಯಕ್ತಿ, ಒಂದು ಸ್ಥಳದ ಹೆಸರಾಗಿರಬಹುದು ಅಥವಾ ಒಂದು ಗುಂಪನ್ನು ಸೂಚಿಸುವ ಪದವಾಗಿರಬಹುದು ಅಥವಾ ಗುಣ, ಸ್ವಭಾವ, ಸಂಖ್ಯೆ, ಸ್ಥಾನ, ಅಳತೆ, ತೂಕ ಇತ್ಯಾದಿಗಳನ್ನು ಸೂಚಿಸುವ ಪದಗಳಾಗಿರಬಹುದು. ಅವುಗಳನ್ನು ನಾಮಪದಗಳೆಂದು ಕರೆಯುತ್ತೇವೆ.

ನಾಮಪದದ ವಿಧಗಳು :

  1. ೧. **ವಸ್ತುವಾಚಕ ಅಥವಾ ನಾಮವಾಚಕ :** ಯಾವುದೇ ವಸ್ತು, ವ್ಯಕ್ತಿ, ಪ್ರಾಣಿ ಹಾಗೂ ಸ್ಥಳಗಳಿಗೆ ಇರುವ ಹೆಸರುಗಳನ್ನು ವಸ್ತುವಾಚಕಗಳೆನ್ನುವರು. ಇವುಗಳಲ್ಲಿ ಮೂರು ವಿಧ. ಅವುಗಳೆಂದರೆ...

  2. ಅ) **ರೂಢನಾಮ :** ಅನಾದಿಕಾಲದಿಂದ ರೂಢಿಯಾಗಿ ಬಂದಿರುವ ಸಾಮಾನ್ಯ ಹೆಸರುಗಳನ್ನು 'ರೂಢನಾಮ' ಎಂದು ಕರೆಯುತ್ತಾರೆ.

  3. ಉದಾ : ಹೆಂಗಸು, ಗಂಡಸು, ಮಕ್ಕಳು, ಜನರು, ನದಿ, ಬೆಟ್ಟ ಇತ್ಯಾದಿ.

  4. ಆ) **ಅಂಕಿತನಾಮ :** ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡಿರುವ ಹೆಸರುಗಳನ್ನು 'ಅಂಕಿತನಾಮ' ಎಂದು ಕರೆಯುತ್ತಾರೆ.

  5. ಉದಾ : ಗಣೇಶ, ಗಂಗಾ, ರಾಮ, ರಹೀಮ, ಧಾರವಾಡ ಇತ್ಯಾದಿ.

  6. ಇ) **ಅನ್ವರ್ಥನಾಮ :** ವಸ್ತುವಿನ ರೂಪ ಹಾಗೂ ವ್ಯಕ್ತಿಯ ಗುಣಲಕ್ಷಣಗಳನ್ನಾಧರಿಸಿ ಅರ್ಥಕ್ಕೆ ಅನುಸಾರ ನೀಡುವ ಹೆಸರುಗಳಿಗೆ 'ಅನ್ವರ್ಥನಾಮ' ಎಂದು ಕರೆಯುತ್ತಾರೆ.

  7. ಉದಾ : ಜಾಣ, ಪಂಡಿತ, ವೈದ್ಯೆ, ವಕೀಲ, ಶಿಕ್ಷಕಿ, ವಿಜ್ಞಾನಿ ಇತ್ಯಾದಿ.

  8. ೨. **ಗುಣವಾಚಕ :** ವಸ್ತು ಅಥವಾ ವ್ಯಕ್ತಿಗಳ ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳಿಗೆ 'ಗುಣವಾಚಕ' ಎನ್ನುವರು. ಗುಣವಾಚಕಗಳು ಯಾವುದಕ್ಕೆ ವಿಶೇಷಣವಾಗುತ್ತದೆಯೋ ಅಂಥ ಶಬ್ದಗಳ ಮುಂದೆ ಬರುತ್ತವೆ. ಆ ಶಬ್ದಗಳನ್ನು ವಿಶೇಷ್ಯಗಳು ಎನ್ನುತ್ತಾರೆ.

  9. ಉದಾ :

  10. | ವಿಶೇಷಣ | ವಿಶೇಷ್ಯ |

  11. |---|---|

  12. | ಸಿಹಿ | ಹಣ್ಣು |

  13. | ದೊಡ್ಡ | ನದಿ |

  14. | ಒಳ್ಳೆಯ | ಹುಡುಗಿ |

  15. ೩. **ಸಂಖ್ಯಾವಾಚಕ :** ಸಂಖ್ಯೆಯನ್ನು ಹೇಳುವ ಶಬ್ದಗಳೆಲ್ಲಾ ಸಂಖ್ಯಾವಾಚಕಗಳು.

  16. ಉದಾ : ಒಂದು, ಎರಡು, ಮೂರು, ಹತ್ತು, ಸಾವಿರ, ಲಕ್ಷ, ಕೋಟಿ ಇತ್ಯಾದಿ.

  17. ೪. **ಸಂಖ್ಯೇಯ ವಾಚಕ :** ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಹೇಳುವ ಶಬ್ದಗಳೆಲ್ಲಾ ಸಂಖ್ಯೇಯ ವಾಚಕಗಳು. ಕೆಳಗಿನ ಉದಾಹರಣೆಯಲ್ಲಿ ಸಂಖ್ಯಾವಾಚಕ ಮತ್ತು ಸಂಖ್ಯೇಯ ವಾಚಕಗಳಿಗಿರುವ ವ್ಯತ್ಯಾಸವನ್ನು ತಿಳಿಯಿರಿ.

  18. | ಸಂಖ್ಯಾವಾಚಕ | ಸಂಖ್ಯೇಯ ವಾಚಕ |

  19. |---|---|

  20. | ಎರಡು | ಇಬ್ಬರು, ಎರಡನೆಯ |

  21. | ಮೂರು | ಮೂವರು, ಮೂರನೆಯ, ಮೂರರಿಂದ |

  22. | ಐದು | ಐವರು, ಐದನೆಯ |

  23. ೫. **ಭಾವನಾಮ :** ವಸ್ತುಗಳ ಮತ್ತು ಕ್ರಿಯೆಯ ಭಾವವನ್ನು ತಿಳಿಸುವ ಶಬ್ದಗಳನ್ನು 'ಭಾವನಾಮ' ಎನ್ನುತ್ತಾರೆ. ಭಾವ ಎಂದರೆ ಇರುವಿಕೆ, ಸ್ಥಿತಿ ಎಂದು ಅರ್ಥೈಸಬಹುದು.

  24. ಉದಾ : ಬಿಳಿಯದರ ಭಾವ – ಬಿಳುಪು; ಆಡುವುದರ ಭಾವ – ಆಟ.

  25. ೬. **ಪರಿಮಾಣ ವಾಚಕ :** ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಹೇಳುವ ಶಬ್ದಗಳನ್ನು 'ಪರಿಮಾಣ ವಾಚಕ' ಎನ್ನುತ್ತಾರೆ.

  26. ಉದಾ : ಪರಿಮಾಣ – ಹಲವು, ಕೆಲವು (ಹಲವು ನದಿಗಳು, ಕೆಲವು ಹಣ್ಣುಗಳು); ಗಾತ್ರ – ಅಷ್ಟು, ಇಷ್ಟು (ಗುಡ್ಡದಷ್ಟು, ಆನೆಯಷ್ಟು); ಅಳತೆ – ಅಷ್ಟು, ಇಷ್ಟು (ಅಷ್ಟು ದೂರ, ಇಷ್ಟು ಪುಸ್ತಕಗಳು) ಇತ್ಯಾದಿ.

  27. ೭. **ಪ್ರಕಾರ ವಾಚಕ :** ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳನ್ನು 'ಪ್ರಕಾರ ವಾಚಕ' ಎನ್ನುವರು. ಇವು ಒಂದು ಬಗೆಯ ಗುಣವಾಚಕಗಳೇ ಆಗಿವೆ.

  28. ಉದಾ : ಅಂಥ, ಅಂಥದು, ಅಂತಹುದು, ಇಂಥ, ಇಂಥದು, ಇಂತಹುದು, ಎಂತಹ ಇತ್ಯಾದಿ.

  29. ೮. **ದಿಗ್ವಾಚಕಗಳು :** ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳನ್ನು 'ದಿಗ್ವಾಚಕ' ಎನ್ನುವರು.

  30. ಉದಾ : ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ಆಗ್ನೇಯ, ವಾಯವ್ಯ, ನೈರುತ್ಯ, ಮೂಡಣ, ಪಡುವಣ, ಬಡಗಣ, ತೆಂಕಣ ಇತ್ಯಾದಿ.

  31. ೯. **ಸರ್ವನಾಮ :** ನಾಮಪದಗಳ ಬದಲಾಗಿ ಬಳಸುವ ಪದಗಳಿಗೆ ಸರ್ವನಾಮಗಳು ಎನ್ನುವರು.

  32. ಉದಾ : ಅವನು, ಅವಳು, ಅದು, ಇದು, ಅವರು, ಇವರು ಇತ್ಯಾದಿ.

ಅಭ್ಯಾಸ

  1. ೧. ಕಥೆಯಲ್ಲಿ ಇರುವ ಯುವಕ, ಯುವತಿ, ಕಥೆಗಾರ, ಹಳ್ಳಿ, ನದಿ ಇವುಗಳಿಗೆ ಅಂಕಿತ ನಾಮವನ್ನು ಬರೆಯಿರಿ.

  2. ೨. ಅಂಕಣದಲ್ಲಿರುವ ಪದಗಳಲ್ಲಿ ರೂಢನಾಮ ಮತ್ತು ಅಂಕಿತನಾಮಗಳನ್ನು ಗುರುತಿಸಿ ಪ್ರತ್ಯೇಕವಾಗಿ ಪಟ್ಟಿಮಾಡಿ.

    Answer

    ರೂಢನಾಮ: ಅಟ್ಟ, ಅತ್ತೆ, ಅಕ್ಕಿ, ಅಜ್ಜಿ, ಆಟ, ಆಡು, ಆರತಿ, ಆಕಾರ, ಊಟ, ಉಪ್ಪು, ಕಮಲ, ಕೋತಿ, ಗಂಟೆ, ಸಂತೆ, ಬೆಂಚು, ಶಾಂತಿ, ವಿಜಯ, ಪುಸ್ತಕ, ಕಾವ್ಯ, ಕವಿ ಅಂಕಿತನಾಮ: ಅಮರ್, ಅರುಣ್, ಊರ್ವಶಿ, ಒಟಿಕೇತ, ಕಪಿಲ್, ಗಣೇಶ, ಸಮೀರ್, ಸ್ವರೂಪ್, ಫಾತಿಮಾ, ಇಕ್ಬಾಲ್

  3. (A table of words to sort into ರೂಢನಾಮ and ಅಂಕಿತನಾಮ, including: ಅಟ್ಟ, ಅಮರ್, ಅತ್ತೆ, ಅಕ್ಕಿ, ಅರುಣ್, ಅಜ್ಜಿ, ಆಟ, ಆಡು, ಆರತಿ, ಆಕಾರ, ಊಟ, ಊರ್ವಶಿ, ಉಪ್ಪು, ಒಟಿಕೇತ, ಕಮಲ, ಕಪಿಲ್, ಕೋತಿ, ಗಂಟೆ, ಗಣೇಶ, ಸಮೀರ್, ಸ್ವರೂಪ್, ಸಂತೆ, ಫಾತಿಮಾ, ಇಕ್ಬಾಲ್, ಬೆಂಚು, ಶಾಂತಿ, ವಿಜಯ, ಪುಸ್ತಕ, ಕಾವ್ಯ, ಕವಿ)

  4. ೩. ಕೆಳಗಿನ ಪದಗಳಲ್ಲಿ ರೂಢನಾಮ ಮತ್ತು ಸರ್ವನಾಮಗಳನ್ನು ಗುರುತಿಸಿ ಪಟ್ಟಿಮಾಡಿ.

  5. (A table of words to sort into ರೂಢನಾಮ and ಸರ್ವನಾಮ, including: ನಾನು, ಅಮರ್, ತಾವು, ಅವಳು, ಅರುಣ್, ಅಜ್ಜಿ, ನಾವು, ಆಡು, ಆರಿಫ್, ಅದು, ಅವನು, ಡೇವಿಡ್, ನೀನು, ಮಮ್ತಾಜ್, ಕಾರ್ತಿಕ್, ಕಪಿಲ್, ಅವರು, ಬೆಳಗು, ಗಣೇಶ, ಸಮೀರ್, ಸ್ವರೂಪ್, ಅವಳು, ಫಾತಿಮಾ, ಇಕ್ಬಾಲ್, ನೀವು, ಶಾಂತಿ, ರಾಜೇಶ್, ಅವನು, ಕಾವ್ಯ, ಅವು)

  6. ೪. ಕೆಳಗಿನ ವಾಕ್ಯಗಳಲ್ಲಿ ಕಾಣುವ ಸರ್ವನಾಮಗಳ ಬದಲಿಗೆ ನಿಮಗಿಷ್ಟವಾದ ಹೆಸರಿಟ್ಟು ವಾಕ್ಯವನ್ನು ರಚಿಸಿ.

    Answer

    ನಾನು: ರಾಜು ಏಳನೆಯ ತರಗತಿಯ ವಿದ್ಯಾರ್ಥಿ. ನೀನು: ಗೀತಾ ಎಂಟನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ನಾವು: ರಾಜು ಮತ್ತು ರಮೇಶ್ ಸಂಜೆಯ ವೇಳೆ ಆಡುತ್ತಾರೆ. ಅವನು: ಅಮರ್ ರಾಜನ ಸ್ನೇಹಿತ. ಅವಳು: ಸೀತಾ ರಾಜನ ತಂಗಿ. ಅವರು: ರಾಮಪ್ಪ ರಾಜನ ತಂದೆ. ಅದು: ಮಂಗ ಹಣ್ಣನ್ನು ತಿನ್ನುತ್ತಿದೆ. ಅವು: ಹಕ್ಕಿಗಳು ಕಾಳನ್ನು ತಿನ್ನುತ್ತಿವೆ.

  7. ನಾನು ಏಳನೆಯ ತರಗತಿಯ ವಿದ್ಯಾರ್ಥಿ.

    Answer

    ರಾಜು ಏಳನೆಯ ತರಗತಿಯ ವಿದ್ಯಾರ್ಥಿ.

  8. ನೀನು ಎಂಟನೆಯ ತರಗತಿಯಲ್ಲಿ ಓದುತ್ತಿರುವೆ.

    Answer

    ಗೀತಾ ಎಂಟನೆಯ ತರಗತಿಯಲ್ಲಿ ಓದುತ್ತಿದ್ದಾಳೆ.

  9. ನಾವು ಸಂಜೆಯ ವೇಳೆ ಆಡುತ್ತೇವೆ.

    Answer

    ರಾಜು ಮತ್ತು ರಮೇಶ್ ಸಂಜೆಯ ವೇಳೆ ಆಡುತ್ತಾರೆ.

  10. ಅವನು ನನ್ನ ಸ್ನೇಹಿತ.

    Answer

    ಅಮರ್ ರಾಜನ ಸ್ನೇಹಿತ.

  11. ಅವಳು ನನ್ನ ತಂಗಿ.

    Answer

    ಸೀತಾ ರಾಜನ ತಂಗಿ.

  12. ಅವರು ನನ್ನ ತಂದೆ.

    Answer

    ರಾಮಪ್ಪ ರಾಜನ ತಂದೆ.

  13. ಅದು ಹಣ್ಣನ್ನು ತಿನ್ನುತ್ತಿದೆ.

    Answer

    ಮಂಗ ಹಣ್ಣನ್ನು ತಿನ್ನುತ್ತಿದೆ.

  14. ಅವು ಕಾಳನ್ನು ತಿನ್ನುತ್ತಿದೆ.

    Answer

    ಹಕ್ಕಿಗಳು ಕಾಳನ್ನು ತಿನ್ನುತ್ತಿವೆ.