ಗದ್ಯ (prose) · ವಿ. ಗಾಯತ್ರಿ
ಪಠ್ಯFull text
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ತೀವ್ರ | — | ಹೆಚ್ಚು; ಲಪ್ಪಟೆ-ತಲೆಗೆ ಸುತ್ತಿದಬಟ್ಟೆ; ಪಕ್ಕಾಗು-ಒಳಗಾಗು; ಎಂತಾ ವಗ-ಏನು ವಗು; ಚಂದ-ಚೆನ್ನಾಗಿ; ಪಡಪೋಶಿ-ಕೆಲಸಕ್ಕೆ ಬಾರದ; ಕರ್ಸಿದಾರೆ-ಕರೆಸಿದ್ದಾರೆ; ತಳಹದಿ-ಬುನಾದಿ; ಸಂವಾದಿಸು-ಮಾತನಾಡು, ಚರ್ಚೆಮಾಡು; ಕಂಬಳಿಗೊಪ್ಪೆ-ಮಳೆಯಿಂದ ರಕ್ಷಿಸಿಕೊಳ್ಳಲು ಕಂಬಳಿಯಿಂದ ಮಾಡಿದ ಮುಸುಕು; ಗೊರಬು, ತೆರವು-ಖಾಲಿ; ನಾಟಿ-ಪೈರಿನ ಸಸಿಗಳನ್ನು ನೆಡುವುದು; ನೀರಾವು-ನೀರಿನಲ್ಲಿ ಬದುಕುವ ಹಾವು; ಹೋತು-ಹೋಯಿತು; ಕದ-ಬಾಗಿಲು; ಹೊಡೆ-ಕಾಳು ತುಂಬುವ ಮುನ್ನ ಕಾಣುವ ಪೈರಿನ ತುದಿ; ತೆನೆ- ಕಾಳು ತುಂಬಿದ ಪೈರಿನ ತುದಿ |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಮಾಂಡವಿ ಟೀಚರ್ ಯಾರನ್ನು ಪರಿಚಯಿಸಿದರು?
Answerಮಾಂಡವಿ ಟೀಚರ್ ಹೊಸ ಟೀಚರಾದ ಸೀನಸೆಟ್ಟರನ್ನು ಮಕ್ಕಳಿಗೆ ಪರಿಚಯಿಸಿದರು.
೨. ಸೀನಸೆಟ್ಟರು ಜಮೀನಿನಲ್ಲಿ ಏನನ್ನು ಬೆಳೆಯುತ್ತಿದ್ದರು?
Answerಸೀನಸೆಟ್ಟರು ತಮ್ಮ ಮೂರೆಕರೆ ಜಮೀನಿನಲ್ಲಿ ತಪ್ಪದೆ ಸಾಸಿವೆ ಬೆಳೆಯುತ್ತಿದ್ದರು.
೩. ಮಕ್ಕಳು ಏನು ಹಾಕಿಕೊಂಡು ಗದ್ದೆಗೆ ಇಳಿದರು?
Answerಮಕ್ಕಳು ಕಂಬಳಿಗೊಪ್ಪೆ ಹಾಕಿಕೊಂಡು ಗದ್ದೆಗೆ ಇಳಿದರು.
೪. ಹಾಲಪ್ಪನ ಕಾಲನ್ನು ಏನು ಕಚ್ಚಿತು?
Answerಹಾಲಪ್ಪನ ಕಾಲನ್ನು ಒಂದು ಸಣ್ಣ ಹಾವು ಕಚ್ಚಿತು.
೫. ಮನೆಯ ಅಟ್ಟ ಮಕ್ಕಳಿಗೆ ಯಾವ ಟವರ್ ಆಗಿ ಪರಿವರ್ತಿತಗೊಂಡಿತ್ತು?
Answerಮನೆಯ ಅಟ್ಟ ಮಕ್ಕಳಿಗೆ ಗದ್ದೆ ವೀಕ್ಷಣೆಯ ಟವರ್ ಆಗಿ ಪರಿವರ್ತಿತಗೊಂಡಿತ್ತು.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ.
೧. ಸೀನಸೆಟ್ಟರ ವೇಷ ಹೇಗಿತ್ತು?
Answerಸೀನಸೆಟ್ಟರ ವೇಷ ಟೀಚರರಂತೆ ಇರಲಿಲ್ಲ. ಅವರು ತುಂಬಾ ಹಳೆಯದಾದ ಒಗೆದ ಪಂಚೆಯನ್ನು ಸೊಂಟಕ್ಕೆ ಸುತ್ತಿ ಮೇಲಕ್ಕೆ ಎತ್ತಿ ಕಟ್ಟಿದ್ದರು. ಒಗೆದ ಚೌಕುಳಿಯ ಅಂಗಿ ಮತ್ತು ಅದಕ್ಕಿಂತ ಹಳೆಯ ಟವಲಿನಿಂದ ತಲೆಗೆ ಲಪ್ಪಟೆ ಸುತ್ತಿಕೊಂಡಿದ್ದರು.
೨. ಮಕ್ಕಳು ಸಸಿ ಕಿತ್ತ ಬಗೆ ಹೇಗಿತ್ತು?
Answerಮೊದಮೊದಲು ಮಕ್ಕಳಿಗೆ ಹಿಡಿ ತುಂಬಾ ಸಸಿಗಳನ್ನು ಬುಡಸಮೇತ ಕೀಳುವುದು ಸುಲಭವಾಗಲಿಲ್ಲ. ಅನೇಕ ಸಸಿಗಳನ್ನು ಅವರು ಹಾಳು ಮಾಡಿದರು. ಆದರೆ ಹತ್ತಾರು ಬಾರಿ ಪ್ರಯತ್ನಿಸಿದ ಅನಂತರ ಅವರಿಗೆ ಸಸಿ ಕೀಳುವುದು ಅಭ್ಯಾಸವಾಗಿ ವೇಗವೂ ಹಿಡಿಯಿತು.
೩. ಹಾಲಪ್ಪನಿಗೆ ಹಾವು ಕಚ್ಚಿದಾಗ ಸೀನಸೆಟ್ಟರು ಏನು ಹೇಳಿದರು?
Answerಸೀನಸೆಟ್ಟರು, “ಹೆದರಬೇಡ ಮಗಾ, ಏನೂ ಆಗಲ್ಲ; ಅದು ನೀರಾವು, ವಿಷದ ಹಾವಲ್ಲ. ಒಂದು ಮೀನು ಕಚ್ಚಿದರೆ ಹೇಗೋ ಅಷ್ಟೇ” ಎಂದು ತಿಳಿ ಹೇಳಿ ಸಮಾಧಾನಿಸಿದರು.
ಇ. ಕೆಳಗಿನ ಮಾತುಗಳನ್ನು ಯಾರು, ಯಾರಿಗೆ ಹೇಳಿದರು? ತಿಳಿಸಿ.
೧. ‘ಹಂಗಾರೆ ಸೀನಸೆಟ್ರು ನಮ್ಮ ಟೀಚರು’
Answerಈ ಮಾತನ್ನು ತುಂಗಾ ಇತರ ಮಕ್ಕಳಿಗೆ ಹೇಳಿದಳು.
೨. ‘ಮುಂಚೆ ಸಸಿಗಳನ್ನು ಕೀಳಾಣ’
Answerಈ ಮಾತನ್ನು ಸೀನಸೆಟ್ಟರು ಮಕ್ಕಳಿಗೆ ಹೇಳಿದರು.
೩. ‘ಇವತ್ತು ಪೂರಾ ಕಿತ್ತೇ ಹೋಗಾಣ’
Answerಈ ಮಾತನ್ನು ಮಕ್ಕಳು ಸೀನಸೆಟ್ಟರಿಗೆ ಹೇಳಿದರು.
೪. ‘ಕೈ ಎಲ್ಲಿಗ್ ಹೋತು’
Answerಈ ಮಾತನ್ನು ಆಟದಲ್ಲಿ ಒಬ್ಬ ಮಗು ಪಕ್ಕದ ಮಗುವಿಗೆ ಹೇಳುತ್ತಿತ್ತು.
ಚಟುವಟಿಕೆ
ಅ. ಶಾಲೆಯಿಂದ ಹೊರಗೆ ನೀವು ಕಲಿಯಬಹುದಾದ ವಿಷಯಗಳನ್ನು ಪಟ್ಟಿಮಾಡಿ.
Answerಮನೆ, ಇತರರ ಒಡನಾಟ, ಪರಿಸರ, ಮಾಧ್ಯಮಗಳು, ಬೇಸಾಯ, ಮಣ್ಣು-ಸಸಿ-ನಾಟಿ-ಗೊಬ್ಬರ ಮುಂತಾದ ವಿಷಯಗಳನ್ನು ಶಾಲೆಯಿಂದ ಹೊರಗೆ ಕಲಿಯಬಹುದು.
ಆ. ಕೆಳಗೆ ನೀಡಿರುವ ಪದಗಳಲ್ಲಿ ಬೇಸಾಯಕ್ಕೆ ಸಂಬಂಧಿಸಿದ ಪದಗಳನ್ನು ಮತ್ತು ಶಾಲೆಗೆ ಸಂಬಂಧಿಸಿದ ಪದಗಳನ್ನು ಪ್ರತ್ಯೇಕ ಪಟ್ಟಿಮಾಡಿ ಬರೆಯಿರಿ.
ಗದ್ದೆ, ಬೆಂಚು, ಸಸಿ, ಕಪ್ಪುಹಲಗೆ, ನಾಟಿ, ಪೈರು, ಪುಸ್ತಕ, ಪೆನ್ನು, ಜಮೀನು, ಮೇಷ್ಟ್ರು, ರೈತ, ಕೆಸರು, ಗಂಟೆ, ತೆನೆ, ಗೊಬ್ಬರ, ಸೀಮೆಸುಣ್ಣ.
Answerಬೇಸಾಯಕ್ಕೆ ಸಂಬಂಧಿಸಿದವು: ಗದ್ದೆ, ಸಸಿ, ನಾಟಿ, ಪೈರು, ಜಮೀನು, ರೈತ, ಕೆಸರು, ತೆನೆ, ಗೊಬ್ಬರ ಶಾಲೆಗೆ ಸಂಬಂಧಿಸಿದವು: ಬೆಂಚು, ಕಪ್ಪುಹಲಗೆ, ಪುಸ್ತಕ, ಪೆನ್ನು, ಮೇಷ್ಟ್ರು, ಗಂಟೆ, ಸೀಮೆಸುಣ್ಣ
ಪೂರಕ ಮಾಹಿತಿ
೧. ಶಿಶುಪ್ರಾಸಗಳು
ಈ ಪಾಠದಲ್ಲಿ ಮಕ್ಕಳ ಹಾಡೊಂದಿದೆ. ಇದನ್ನು ಶಿಶುಪ್ರಾಸ ಎನ್ನಬಹುದು. ಮಕ್ಕಳಿಗಾಗಿ ರಚಿತವಾದ ಹಾಡುವ ಪ್ರಾಸಯುಕ್ತ ಪದಗಳೇ ಶಿಶುಪ್ರಾಸಗಳು. ಮಾನವನ ಬದುಕಿನಲ್ಲಿ ಶೈಶವ ಎಷ್ಟು ಸಾಮಾನ್ಯವಾದುದೋ ಶಿಶುಗೀತೆಗಳೂ ಅಷ್ಟೇ ಸಾಮಾನ್ಯವಾದವು. ಮಾತು ಕಲಿಯುವ ಹಂತದಲ್ಲಿ ಮಕ್ಕಳಲ್ಲಿ ಮುಗ್ಧತೆ ಕುತೂಹಲ ತುಂಬಿರುತ್ತದೆ. ದೊಡ್ಡವರು ಕಟ್ಟುವ ಪ್ರಾಸಗಳಿಗಿಂತ ತಮ್ಮ ಒರಗೆಯವರ ಬಾಯಲ್ಲಿ ಬರುವ ಪ್ರಾಸಗಳೇ ಮಕ್ಕಳಿಗೆ ಅಚ್ಚುಮೆಚ್ಚು. ತಮ್ಮ ತಮ್ಮ ಮನೋಧರ್ಮಕ್ಕನುಗುಣವಾದ ಪ್ರಾಸಗಳನ್ನು ಅವರು ಸ್ವೀಕರಿಸುತ್ತಾರೆ. ಹಿಡಿಸದವುಗಳನ್ನು ನಿರಾಕರಿಸುತ್ತಾರೆ. ಮಕ್ಕಳ ಬಹುತೇಕ ಹಾಡುಗಳು ಆಟದ ಅಂಗವಾಗಿ ಬರುತ್ತವೆ. ಆದ್ದರಿಂದ ಇಂಥ ಆಟದ ಹಾಡುಗಳಲ್ಲಿ ಎರಡು ಗುಂಪು ಇರುವುದು ಸಾಮಾನ್ಯ. ಒಬ್ಬ ಒಂದು ಗುಂಪಾಗಿ ಹಾಡಿದರೆ, ಉಳಿದವರು ಮತ್ತೊಂದು ಗುಂಪಾಗಿ ಹಾಡುತ್ತಾರೆ. ಈ ಬಗೆಯ ಕ್ರೀಡಾ ಪ್ರಾಸಗಳಲ್ಲದೆ ಹೆಸರಿನ ಪ್ರಾಸಗಳು, ಸಂಖ್ಯಾಪ್ರಾಸಗಳು, ಒಗಟು ಪ್ರಾಸಗಳು, ಪ್ರಕೃತಿಪ್ರಾಸಗಳು, ದೈನಂದಿನ ವ್ಯವಹಾರಕ್ಕೆ ಸಂಬಂಧಿಸಿದ ಪ್ರಾಸಗಳು, ಕೊಂಡಿಪ್ರಾಸಗಳು ಇತ್ಯಾದಿಯಾಗಿ ವಿಂಗಡಿಸಲು ಸಾಧ್ಯವಿದೆ. ಒಂದೆರಡು ಉದಾಹರಣೆ ಗಮನಿಸಿ.
೧
ಕಣ್ಣಾ ಮುಚ್ಚೆ
ಕಾಡೇಗೂಡೆ
ಉದ್ದಿನ ಮೂಟೆ
ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಹಿಡ್ಕೊಳ್ಳಿ
೨
ಗಣೇಶ ಬಂದ
ಕಾಯಿಕಡಬು ತಿಂದ
ದೊಡ್ಡೆರೇಲಿ ಬಿದ್ದ
ಚಿಕ್ಕೇರೇಲಿ ಎದ್ದ
೨. ಕೆಳಗೆ ನೀಡಿರುವ ಬಂಡಿ ಆಟದಲ್ಲಿ ಬಿಟ್ಟ ಪದಗಳನ್ನು ತುಂಬಿ.
ಅಚ್ಚಚ್ಚು, ಬೆಲ್ಲದಚ್ಚು
ಅಲ್ಲಿನೋಡು, ಇಲ್ಲಿನೋಡು
ಸಂಪಂಗಿ ಮರದಲಿ ಗುಂಪುನೋಡು
ಯಾವ ಗುಂಪು? ___________
ಯಾವ ಕಾಗೆ? ___________
ಯಾವ ಕಪ್ಪು?___________
ಯಾವ ಇದ್ದಿಲು? ___________
ಯಾವ ಮರ?___________
ಯಾವ ಮಾವು? ___________
ಯಾವ ಸಿಹಿ? ___________
ಯಾವ ಸಕ್ಕರೆ? ___________
ಯಾವ ಮಂಡ್ಯ? ___________
ಯಾವ ಕರ್ನಾಟಕ? ___________ .
ವ್ಯಾಕರಣ ಮಾಹಿತಿ
ಸರ್ವನಾಮಗಳನ್ನು ‘ಪುರುಷಾರ್ಥಕ ಸರ್ವನಾಮ’, ‘ಆತ್ಮಾರ್ಥಕ ಸರ್ವನಾಮ’, ‘ಪ್ರಶ್ನಾರ್ಥಕ ಸರ್ವನಾಮ’ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು.
೧. **ಪುರುಷಾರ್ಥಕ ಸರ್ವನಾಮ :** ಪುರುಷಾರ್ಥಕ ಸರ್ವನಾಮಗಳಲ್ಲಿ ಮೂರು ವಿಧ.
ಅ. ಉತ್ತಮ ಪುರುಷ : ಮಾತನಾಡುವ ವ್ಯಕ್ತಿ ತನ್ನನ್ನು ನಿರ್ದೇಶಿಸಿಕೊಳ್ಳುವ ಸರ್ವನಾಮಗಳನ್ನು ‘ಉತ್ತಮ ಪುರುಷ’ ಎನ್ನಲಾಗುತ್ತದೆ. ಉದಾ : ನಾನು, ನಾವು.
ಆ. ಮಧ್ಯಮ ಪುರುಷ : ಮಾತನಾಡುವವನು ತನ್ನ ಮುಂದಿರುವ ವ್ಯಕ್ತಿಯನ್ನು ನಿರ್ದೇಶಿಸುವ ಸರ್ವನಾಮಗಳನ್ನು ‘ಮಧ್ಯಮ ಪುರುಷ’ ಎನ್ನಲಾಗುತ್ತದೆ. ಉದಾ : ನೀನು, ನೀವು.
ಇ. ಪ್ರಥಮ ಪುರುಷ : ಮಾತನಾಡುವವನಿಂದ ಹತ್ತಿರ ಅಥವಾ ದೂರವಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ನಿರ್ದೇಶಿಸುವ ಸರ್ವನಾಮಗಳನ್ನು ‘ಪ್ರಥಮ ಪುರುಷ’ ಎನ್ನಲಾಗುತ್ತದೆ.
ಉದಾ : ಅವರು, ಅವನು, ಅವಳು, ಅದು, ಅವು, ಇವನು, ಇವಳು, ಇವರು, ಇದು.
೨. **ಆತ್ಮಾರ್ಥಕ ಸರ್ವನಾಮ :** ಮಾತನಾಡುವವನು ತನ್ನನ್ನು ಹಾಗೂ ಇತರರನ್ನು ಗೌರವ ಸೂಚಕವಾಗಿ ಆತ್ಮಪ್ರಶಂಸೆಯಿಂದ ಬಳಸುವ ಸರ್ವನಾಮಗಳನ್ನು ‘ಆತ್ಮಾರ್ಥಕ ಸರ್ವನಾಮ’ ಎನ್ನುತ್ತಾರೆ. ಉದಾ : ತಾನು, ತಾವು, ತನ್ನ, ತಮ್ಮ.
೩. **ಪ್ರಶ್ನಾರ್ಥಕ ಸರ್ವನಾಮ :** ಪ್ರಶ್ನೆಯಿಂದ ಕೂಡಿದ ಎಲ್ಲ ಸರ್ವನಾಮಗಳನ್ನು ಪ್ರಶ್ನಾರ್ಥಕ ಸರ್ವನಾಮ ಎನ್ನಲಾಗುತ್ತದೆ.
ಉದಾ : ಯಾವುವು? ಯಾವುದು? ಯಾರು? ಏತರದು? ಆವುದು?
ಅಭ್ಯಾಸ
ಉದಾಹರಣೆಯಲ್ಲಿ ನೀಡಿರುವಂತೆ ಕೆಳಗಿನ ವಾಕ್ಯಗಳಲ್ಲಿ ಸರ್ವನಾಮಗಳನ್ನು ಗುರುತಿಸಿ, ಅವು ಯಾವ ರೀತಿಯ ಸರ್ವನಾಮಗಳೆಂದು ತಿಳಿಸಿ.
(A table with columns for ಕ್ರಮ ಸಂಖ್ಯೆ, ವಾಕ್ಯಗಳು, ಸರ್ವನಾಮ ಪದಗಳು, and ಸರ್ವನಾಮದ ವಿಧ)
ಉದಾ: ಕಷ್ಟ ಬಂದಾಗ ನಾವು ಯಾರಿಗೂ ಸಹಾಯ ಮಾಡದಿದ್ದರೆ ನಮಗೆ ಯಾರೂ ಸಹಾಯ ಮಾಡಲಾರರು. | ನಾವು, ನಮಗೆ | ಉತ್ತಮ ಪುರುಷ ಸರ್ವನಾಮ
೧. ನೀನು ಸುಳ್ಳುಗಾರನೆಂದು ಗೊತ್ತಾದ ಮೇಲೆ ನೀನು ನಿಜ ಹೇಳಿದರೂ ನಿನ್ನನ್ನು ಯಾರೂ ನಂಬುವುದಿಲ್ಲ. | |
Answerನೀನು, ನಿನ್ನನ್ನು - ಮಧ್ಯಮ ಪುರುಷ ಸರ್ವನಾಮ
೨. ಅವನಿಗೆ ಅವನ ಅಕ್ಕ ಒಂದು ಪುಸ್ತಕ ಕೊಟ್ಟಳು. | |
Answerಅವನಿಗೆ, ಅವನ - ಪ್ರಥಮ ಪುರುಷ ಸರ್ವನಾಮ
೩. ಅವನು ತನ್ನ ಪುಸ್ತಕವನ್ನು ಬಹಳ ಮೆಚ್ಚಿಕೊಂಡನು. | |
Answerಅವನು - ಪ್ರಥಮ ಪುರುಷ ಸರ್ವನಾಮ ತನ್ನ - ಆತ್ಮಾರ್ಥಕ ಸರ್ವನಾಮ
೪. ನಮ್ಮ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು. | |
Answerನಮ್ಮ, ನಾವೇ - ಉತ್ತಮ ಪುರುಷ ಸರ್ವನಾಮ
೫. ನಾವು ಊರಿಗೆ ಹೋಗಿ ನಿಮ್ಮ ಸಾಮಾನುಗಳನ್ನೂ ಅವುಗಳನ್ನಿಟ್ಟಿರುವ ಪೆಟ್ಟಿಗೆಗಳನ್ನೂ ತರುತ್ತೇವೆ. | |
Answerನಾವು - ಉತ್ತಮ ಪುರುಷ ಸರ್ವನಾಮ ನಿಮ್ಮ - ಮಧ್ಯಮ ಪುರುಷ ಸರ್ವನಾಮ ಅವುಗಳನ್ನು - ಪ್ರಥಮ ಪುರುಷ ಸರ್ವನಾಮ