ಪದ್ಯ · ಚಿ. ಉದಯಶಂಕರ್
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಜೀವನದಲ್ಲಿ ಸೋತವರಿಗೆ ಗೊಂಬೆಯು ಕೊಡುವ ಧೈರ್ಯವೇನು?
Answerಗೊಂಬೆಯು ಸೋತವರಿಗೆ, ಯಾರಿಗೂ ಸೋತು ತಲೆಬಾಗಬಾರದೆಂಬ ಧೈರ್ಯವನ್ನು ನೀಡುತ್ತದೆ.
೨. ಗೊಂಬೆಯು ಹೇಗೆ ತೂಗುತ್ತಿರುತ್ತದೆ?
Answerಗೊಂಬೆಯು ಕಷ್ಟವೊ ಸುಖವೊ ಅಳುಕದೆ ಆಡಿ ತೂಗುತ್ತಿರುತ್ತದೆ.
೩. ತಾವು ಕಷ್ಟಪಟ್ಟರೂ ಲೋಕಕ್ಕೆ ಉಪಕಾರ ಮಾಡುವ ಮೂರು ಸಂಗತಿಗಳು ಯಾವುವು?
Answerತಾವು ಕಷ್ಟಪಟ್ಟರೂ ಲೋಕಕ್ಕೆ ಉಪಕಾರ ಮಾಡುವ ಮೂರು ಸಂಗತಿಗಳೆಂದರೆ ಕಬ್ಬು, ಗಂಧದ ಪರಿಮಳ ಮತ್ತು ದೀಪ.
೪. ಗೊಂಬೆಯು ನಿಶ್ಚಲವಾಗುವುದು ಯಾವಾಗ?
Answerಆಡಿಸುವಾತನ ಕೈ ಸೋತಾಗ ಗೊಂಬೆಯು ನಿಶ್ಚಲವಾಗುತ್ತದೆ.
೫. ಗೊಂಬೆಯು ಹೇಳುವ ನೀತಿಯ ಸಾರಾಂಶವೇನು?
Answerಗೊಂಬೆಯು ಕಲಿಸುವ ನೀತಿಯ ಸಾರಾಂಶವೆಂದರೆ, ಎಲ್ಲವೂ ಆಡಿಸುವಾತನ ಕೈಚಳಕದಲ್ಲಿದೆ; ಆದ್ದರಿಂದ ನಾವು ಯಾವುದೇ ಸಂದರ್ಭದಲ್ಲಿ ತಲೆಬಾಗದೆ, ಭೇದವಿಲ್ಲದೆ, ಸಂತಸದಿಂದ ಬದುಕಬೇಕು.